🌷ಅಕ್ಕಮಹಾದೇವಿ ಜಯಂತಿ🌷/ಪ್ರೊ. ಜಿ ಎ. ತಿಗಡಿ.,ಧಾರವಾಡ
ಇಂದು ವೈರಾಗನಿಧಿ, ವೀರ ವಿರಾಗಿನಿ, ಶರಣ ಸಂಕುಲದ ಧ್ರುವತಾರೆ, ಮಹಾನ್ ಶರಣೆ ಅಕ್ಕಮಹಾದೇವಿಯ ಜಯಂತಿ. ಆ ಮಹಾತಾಯಿಯ ಜೀವನ ಗಾಥೆಯನ್ನು ಒತ್ತಟ್ಟಿಗೆ ಇರಿಸಿ, ತನ್ನ ಜೀವನಾನುಭವದಿಂದ ಪಡೆದ ಉನ್ನತ ಮೌಲ್ಯಗಳನ್ನು ವಚನಗಳ ಮೂಲಕ ಹಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದೆರಡನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡುಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಒಂದೆರಡು ಅಕ್ಕನ ವಚನಗಳನ್ನು ನೋಡೋಣ. ಅರ್ಥಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆ ಇರಬೇಕು.ಇಂತೀ ಚತುರ್ವಿಧದಹೊಲಬರಿಯದೆ ವೃಥಾ ಕೆಟ್ಟರುಕಾಣಾ ಚೆನ್ನಮಲ್ಲಿಕಾರ್ಜನ.ಸಂಪತ್ತನ್ನು ನಿರಾಕರಿಸಿ ಧನ ಕನಕಗಳ ವಿಷಯದಲ್ಲಿ ಸನ್ಯಾಸಿಯಾದರೆ ಸಾಲದು. ತನಗೆ ಯಾವುದೇ ರೂಪದಿಂದ ಬಂದರೂ ಧನವನ್ನು…