ಜಾನಪದ ಲೋಕದಲ್ಲಿ ಬಸವನೆಂಬ ದೇವರು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಜನಪದರ ಶರಣ ಧರ್ಮದ ಹರಹು ವಿಶಾಲವಾದದ್ದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ ಕಟ್ಟಿ ಹಾಕಲಾಗುವುದಿಲ್ಲ. ಹೀಗಾಗಿ ಮೌಖಿಕ ಜನಪದ ಸಾಹಿತ್ಯ ಮುಗ್ಧಶರಣರ ಸತ್ಯದ ಅನೇಕ ಮುಖಗಳನ್ನು ಅನಾವರಣಗೊಳಿಸುತ್ತದೆ. ಅನಕ್ಷರಸ್ಥರ ಆಡುಮಾತಿನ ಸರಳತೆ ಖಚಿತತೆಯನ್ನು ಶರಣಧರ್ಮದ ಪವಿತ್ರತೆಯನ್ನು ಸ್ಪಷ್ಟಪಡಿಸುತ್ತದೆ. ತಾವು ಕಂಡ ಜೀವನದ ಚಿಕ್ಕ ಚಿಕ್ಕ ಘಟನೆಯ ಅನುಭವಗಳನ್ನು ಜೀವದುಂಬಿ ದಾಖಲಿಸುವ ಅವರ ಜ್ಞಾನದ ತೀಕ್ಷ್ಣಣತೆಯೂ ಅನವರತ. ತಮ್ಮ ಎದೆಯಾಳದಲ್ಲಿ ನೈತಿಕ ಪ್ರೀತಿ ಬಿಂಬಿಸುತ್ತಾ ತಾಯಿ ಭಾವ ವ್ಯಕ್ತಪಡಿಸುವುದೂ ಒಂದು ರೋಮಾಂಚನ. ಪ್ರಕೃತಿಯ ಸತ್ಯವನ್ನೇ ದೇವರೆಂದು ತಿಳಿದ ಜನಪದರು ನಿಸರ್ಗದ ಮೂಲಕವೇ ಸಂಭಾಷಣೆಗೆ ತೊಡಗುತ್ತಾರೆ. ಏಕೆಂದರೆ ಅವರ ಒಡಲೊಳಗೆ ಶರಣಧರ್ಮದ…




Total views : 63747