ಡೋಹರ ಕಕ್ಕಯ್ಯನವರ ವಚನ – ನಿರ್ವಚನ | ಶ್ರೀಮತಿ. ಸಂಗೀತಾ ಕೊಡ್ಲಿ, ಕಲಬುರಗಿ.
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದುಮುಟ್ಟಿ ಪಾವನವ ಮಾಡಿಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!ಆ ಲಿಂಗ ಬಂದು ಸೋಂಕಲೊಡನೆಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದಸಂಗನ ಬಸವಣ್ಣನ ಕರುಣದಿಂದಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!ಅಭಿನವ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-336/ವಚನ ಸಂಖ್ಯೆ-987) ಡೋಹರ ಕಕ್ಕಯ್ಯ ಶರಣರು ಅನುಭವಮಂಟಪದ ಅನುಭಾವಿಗಳು. ಅಮರಗಣಂಗಳಲ್ಲಿ ಹಿರಿಯರಾಗಿರುವ ಇವರು ಮೂಲತಃ ಮಧ್ಯಪ್ರದೇಶದ ಮಾಳವ್ಯ ಪ್ರದೇಶದಿಂದ ಕಲ್ಯಾಣಕ್ಕೆ ಬಂದವರು. ಕಲ್ಯಾಣದಲ್ಲಿ ತೊಗಲು ಹದ ಮಾಡುವ ಕಾಯಕ…





Total views : 71571