ಬಸವಾದಿ ಶಿವಶರಣ-ಶರಣೆಯರ ವಚನಗಳಲ್ಲಿ ಸಖ್ಯಭಾವ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಹಲವಾರು ಚಿಂತನೆಗಳಿಗೆ ತೆರೆದುಕೊಳ್ಳುವ ವಚನ ಸಾಹಿತ್ಯ ಬಹು ಮೌಲ್ವಿಕವಾದ ವಿಷಯಗಳನ್ನು ತನ್ನೊಳಗೆ ಬಚ್ಚಿಟುಕೊಂಡಿದೆ. ಇಂತಹ ಅಮೂಲ್ಯವಾದ ವಚನ ಸಾಹಿತ್ಯದ ಗಂಟನ್ನು ಬಿಚ್ಚುತ್ತಾ ಹೋದಂತೆ ಒಂದೊಂದು ವಚನವೂ ಕೂಡಾ ಚಿಂತಕರ, ವಿಮರ್ಶಕರ, ಓದುಗರ ಬುದ್ಧಿಗೆ ಸವಾಲಾಗಿ ನಿಲ್ಲುತ್ತದೆ. “ವಚನ ಸಾಹಿತ್ಯದಲ್ಲಿ ಏನಿದೆ?” ಎಂಬ ಬಾಲಿಷ ಪ್ರಶ್ನೆಗಳಿಗೆ “ವಚನ ಸಾಹಿತ್ಯದಲ್ಲಿ ಏನಿಲ್ಲ?” ಎಂಬ ಪ್ರಶ್ನೆಯೇ ಉತ್ತರವಾಗಿದೆ. ಇಂತಹ ತಾರ್ಕಿಕವಾದ ಪ್ರಶ್ನೋತ್ತರಗಳ ಹಿನ್ನಲೆಯಲ್ಲಿ ಮತ್ತೊಮ್ಮೆ ಪ್ರಶ್ನಾತೀತವಾಗಿ ಕಾಡುವ ವಿಷಯ “ವಚನ ಸಾಹಿತ್ಯದಲ್ಲಿ ಸಖ್ಯಭಾವ” ಎಂಬುದು ಕೂಡ ಒಂದಾಗಿದೆ. ಭೂಮಿಯ ಮೇಲೆ ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದ ಮೇಲೆ ಈ ಬದುಕನ್ನು ಸಮರ್ಥವಾಗಿ…