ಡಾ. ಎಂ. ಎಂ. ಕಲಬುರ್ಗಿಯವರ ಸಂಶೋಧನಾ ಕ್ರಮಕ್ಕೊಂದು ಮಾದರಿ | ಡಾ. ಬಸವರಾಜ ಸಾದರ, ಬೆಂಗಳೂರು.
‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬುದು ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಹೇಳುತ್ತಿದ್ದ ಅರ್ಥಪೂರ್ಣ ಮಾತು. ಇಂಥ ಸಂಶೋಧನೆಯ ‘ಮಾರ್ಗ’ ಕ್ಕೆ ಅವರು ಬಳಸಿಕೊಳ್ಳುತ್ತಿದ್ದ ಆಕರ, ಪರಿಕರ, ಸಾಕ್ಷಿ, ಆಧಾರ ಮತ್ತು ಪೂರಕ ಮಾಹಿತಿಗಳು ಒಂದೇ ಎರಡೇ! ಇಂಥದ್ದೆಲ್ಲ ಎಷ್ಟೇ ಇದ್ದರೂ ಮೊದಲು ಅದನ್ನೆಲ್ಲ ಗುಂಪುಗೂಡಿಸಿ, ಹಾಗೆ ಗುಂಪುಗೂಡಿಸಿದ್ದನ್ನೆಲ್ಲ ತೂರಿ, ಕೇರಿ, ಜರಡಿ ಹಿಡಿದು ಪರೀಕ್ಷಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿ, ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳೊಂದಿಗೆ ತಾಳೆ ಹಾಕಿ, ಒಟ್ಟಾರೆ ಅದರಲ್ಲಿರಬಹುದಾದ ವಾಸ್ತವವನ್ನು ಹೆಕ್ಕಿ ತೆಗೆದು ಒಂದು ಪೂರ್ಣವಿರಾಮದ…