Your blog category

ಡಾ. ಎಂ. ಎಂ. ಕಲಬುರ್ಗಿಯವರ ಸಂಶೋಧನಾ ಕ್ರಮಕ್ಕೊಂದು ಮಾದರಿ | ಡಾ. ಬಸವರಾಜ ಸಾದರ, ಬೆಂಗಳೂರು.

‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬುದು ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಹೇಳುತ್ತಿದ್ದ ಅರ್ಥಪೂರ್ಣ ಮಾತು. ಇಂಥ ಸಂಶೋಧನೆಯ ‘ಮಾರ್ಗ’ ಕ್ಕೆ ಅವರು ಬಳಸಿಕೊಳ್ಳುತ್ತಿದ್ದ ಆಕರ, ಪರಿಕರ, ಸಾಕ್ಷಿ, ಆಧಾರ ಮತ್ತು ಪೂರಕ ಮಾಹಿತಿಗಳು ಒಂದೇ ಎರಡೇ! ಇಂಥದ್ದೆಲ್ಲ ಎಷ್ಟೇ ಇದ್ದರೂ ಮೊದಲು ಅದನ್ನೆಲ್ಲ ಗುಂಪುಗೂಡಿಸಿ, ಹಾಗೆ ಗುಂಪುಗೂಡಿಸಿದ್ದನ್ನೆಲ್ಲ ತೂರಿ, ಕೇರಿ, ಜರಡಿ ಹಿಡಿದು ಪರೀಕ್ಷಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿ, ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳೊಂದಿಗೆ ತಾಳೆ ಹಾಕಿ, ಒಟ್ಟಾರೆ ಅದರಲ್ಲಿರಬಹುದಾದ ವಾಸ್ತವವನ್ನು ಹೆಕ್ಕಿ ತೆಗೆದು ಒಂದು ಪೂರ್ಣವಿರಾಮದ…

0 Comments

ವೀಣಾ ಬನ್ನಂಜೆಯವರೆ ಶರಣರು ವೇದ, ಶಾಸ್ತ್ರಗಳನ್ನು ತಿರಸ್ಕರಿಸಲಿಲ್ಲವೆ? / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ-ಟ್ಯೂಬ್ ಚಾನಲ್‌ವೊಂದರಲ್ಲಿ “ಶ್ರೀಮದ್ಬಗವದ್ಗೀತೆ ಮತ್ತು ವಚನ” ಎಂಬ ವಿಷಯ ಕುರಿತು ವೀಣಾ ಬನ್ನಂಜೆ ಅವರು ಮಾತನಾಡುವಾಗ ಅಲ್ಲಮಪ್ರಭುದೇವರ ವಚನವೊಂದನ್ನು ವಿಶ್ಲೇಷಿಸಿದ ರೀತಿ ವ್ಯತಿರಿಕ್ತವಾಗಿದೆ. ಅಲ್ಲಮರ ವಚನ: ವೇದವೆಂಬುದು ಓದಿನ ಮಾತು;ಶಾಸ್ತ್ರವೆಂಬುದು ಸಂತೆಯ ಸುದ್ದಿ.ಪುರಾಣವೆಂಬುದು ಪುಂಡರ ಗೋಷ್ಠಿ.ಆಗಮವೆಂಬುದು ಅನೃತದ ನುಡಿ.ತರ್ಕವೆಂಬುದು ತಗರ ಹೋರಟೆ.ಭಕ್ತಿಯೆಂಬುದು ತೋರಿ ಉಂಬ ಲಾಭ.ಗುಹೇಶ್ವರನೆಂಬುದು ಮೀರಿದ ಘನವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465) ಈ ವಚನ ಕುರಿತು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು (ಅಲ್ಲಮಪ್ರಭುದೇವರ ವಚನ ನಿರ್ವಚನ ಸಂಪುಟ-2 ವಚನ ಸಂಖ್ಯೆ 464) ವಿಶ್ಲೇಷಿಸಿದ ರೀತಿ ಈ…

0 Comments

ವಚನ ದರ್ಶನ: ದುರುದ್ದೇಶ ಬಿಂಬಿಸುವ ಪುಸ್ತಕ | ಡಾ. ಶಿವಾನಂದ ಜಾಮದಾರ, ಬೆಂಗಳೂರು.

“ವಚನ ದರ್ಶನ” ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಟಾಲಂನಿಂದ ಕಳೆದ ವರ್ಷದ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದೆಹಲಿಯಲ್ಲಿ ಅಪಾರ ಖರ್ಚಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಆ ಎಲ್ಲ ಸ್ಥಳಗಳಲ್ಲಿ ಸಂಘ ಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಈ ಪುಸ್ತಕವು ಸಂಘ ಪರಿವಾರದ ದುರುದ್ದೇಶ ಮತ್ತು ದುರುಳತನವನ್ನು ಬಿಂಬಿಸುತ್ತದೆ. ಈ ಕೃತಿಯ ಕುರಿತಾಗಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಿದೆ. ಮೊದಲನೆಯದು, “ವಚನ ದರ್ಶನ” ದ ಗೌರವ ಸಂಪಾದಕರಾಗಿರುವ ಸದಾಶಿವಾನಂದ ಸ್ವಾಮಿಗಳ ಯಾವುದೇ ಲೇಖನ, ಪ್ರಸ್ತಾವನೆ ಅಥವಾ ಮುನ್ನುಡಿ ಕೃತಿಯಲ್ಲಿ…

0 Comments

ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…

0 Comments

ಲಿಂಗಾಯತರ ಶಿವ ಅಂದರೆ ಯಾರು?  | ಡಾ. ವಿಜಯಕುಮಾರ ಕಮ್ಮಾರ, ತುಮಕೂರು

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.ಕೂಡಲಸಂಗಮದೇವಯ್ಯಾ,ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744) ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ. ಇಷ್ಟಲಿಂಗ ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397) ಬಸವಾದಿ ಶಿವಶರಣರ  ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ…

0 Comments

ಊಳಿಡುತ್ತಿರುವ ವಿಷಭಟ್ಟನ ಶ್ವಾನಗಳು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅನುಭವ ಮಂಟಪ ಕುರಿತು ಡಾ. ಶಿವಾನಂದ ಜಾಮದಾರ ಅವರು, ಡಾ. ಬೆಲ್ದಾಳ ಶರಣರು, ಶ್ರೀ ರಂಜಾನ್ ದರ್ಗಾ ಅವರು, ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದ ಅನೇಕ ವಚನ ಸಾಹಿತ್ಯದ ವಿದ್ವಾಂಸರುಗಳು ಸಾಕ್ಷೀ ಸಮೇತ ನಿರೂಪಿಸಿದ ಬಳಿಕವೂ ಈ ಥರಾ ಬರೆಯುವ ಅವಶ್ಯಕತೆ ಮತ್ತು ಇವರ ಉದ್ದೇಶವೇನು ಅಂತಾ ಅರ್ಥಾ ಆಗತಾ ಇಲ್ಲಾ. ಪ್ರಧಾನಿಗಳು ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರೀ ಅಂತ ಹೇಳಿದ್ದಕ್ಕೆ ಹೊಟ್ಟೆ ಉರೀನಾ ??? ಬಸವಣ್ಣ ಸಾಂಸ್ಕೃತಿಕ ನಾಯಕ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಹೊಟ್ಟೆ ಉರೀನಾ ??? ಯಾಕೆ ಹೀಗೆ…

0 Comments

ವಚನಸಾಹಿತ್ಯ ಮಂದಾರ ಫೌಂಡೇಶನ್‌ “ಗ್ರಂಥಾಲಯ” ಕ್ಕೆ ಬಂದ ಪುಸ್ತಕಗಳ ದಾಸೋಹ.

"ವಚನಸಾಹಿತ್ಯ ಮಂದಾರ ಫೌಂಡೇಶನ್" ದ ಗ್ರಂಥಾಲಯ ಸ್ಥಾಪನೆ ಪ್ರಯುಕ್ತ ನಾಡಿನ ಹಲವಾರು ವಚನ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ತಮ್ಮಲ್ಲಿರುವ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಅತ್ಯಮೂಲ್ಯ ಗ್ರಂಥಗಳನ್ನು ದಾಸೋಹ ರೂಪದಲ್ಲಿ ಕಳುಹಿಸಿದ್ದಾರೆ. ಪ್ರಪ್ರಥಮವಾಗಿ ತಮ್ಮಲ್ಲಿರುವ ಅತ್ಯಮೂಲ್ಯ ಮತ್ತು ಅಪರೂಪದ ಪುಸ್ತಕಗಳನ್ನು ದಾಸೋಹ ಮಾಡಿದ ಧಾರವಾಡದ ಶ್ರೀ ನಟರಾಜ ಮೂರಶಿಳ್ಳಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮೂರಶಿಳ್ಳಿಯವರಿಗೆ ಕೃತಜ್ಞತೆಗಳು. ಇಂದಿನವರೆಗೆ ಸುಮಾರು 2,000 ಪುಸ್ತಕಗಳು ಬಂದಿವೆ. ಈಗ ವಚನಸಾಹಿತ್ಯ ಮಂದಾರ ಫೌಂಡೇಶನ್ ಗ್ರಂಥಾಲಯದಲ್ಲಿ 5,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಆಗಿದೆ. ಈ…

0 Comments

ಅನುಭವ ಮಂಟಪ | ಶ್ರೀ. ರಂಜಾನ್ ದರ್ಗಾ, ಧಾರವಾಡ.

ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ಶಿಫಾರಸು ಸಮಿತಿಯ ಮೊದಲ ಸಭೆಯ ಅಜೆಂಡಾದಲ್ಲಿ ಮೊದಲ ಪಾಯಿಂಟ್ "ಅನುಭವ ಮಂಟಪ ಕಾಲ್ಪನಿಕ" ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಗೊ. ರು. ಚನ್ನಬಸಪ್ಪ ಅವರು ಬರೆದಿದ್ದರು. ನಾನು ಕೂಡಲೆ, ನೀಲಮ್ಮನವರ ವಚನವೊಂದರಲ್ಲಿ ಅನುಭವ ಮಂಟಪದ ಕುರಿತು ಹೇಳಿದ್ದನ್ನು ಹೇಳಿ ಆ ಪಾಯಿಂಟ್ ತೆಗೆಸಿದೆ. ಆ ವಚನ ಬಹಳ ದೀರ್ಘವಾಗಿದೆ. ಹಾಗಾಗಿ ಅದರ ಮೊದಲೆರಡು ಸಾಲುಗಳನ್ನು ಹಾಗೂ ಅನುಭವ ಮಂಟಪದ ಎರಡು ಸಾಲುಗಳನ್ನು ಇಲ್ಲಿ ಬರೆದಿದ್ದೇನೆ. ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,ಕಾಮ ನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,… … … … … … … … … ……

0 Comments