ವೀಣಾ ಬನ್ನಂಜೆಯವರೆ ಶರಣರು ವೇದ, ಶಾಸ್ತ್ರಗಳನ್ನು ತಿರಸ್ಕರಿಸಲಿಲ್ಲವೆ? / ಡಾ. ಬಸವರಾಜ ಕಡ್ಡಿ, ಜಮಖಂಡಿ.
ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ-ಟ್ಯೂಬ್ ಚಾನಲ್‌ವೊಂದರಲ್ಲಿ “ಶ್ರೀಮದ್ಬಗವದ್ಗೀತೆ ಮತ್ತು ವಚನ” ಎಂಬ ವಿಷಯ ಕುರಿತು ವೀಣಾ ಬನ್ನಂಜೆ ಅವರು ಮಾತನಾಡುವಾಗ ಅಲ್ಲಮಪ್ರಭುದೇವರ ವಚನವೊಂದನ್ನು ವಿಶ್ಲೇಷಿಸಿದ ರೀತಿ ವ್ಯತಿರಿಕ್ತವಾಗಿದೆ. ಅಲ್ಲಮರ ವಚನ: ವೇದವೆಂಬುದು ಓದಿನ ಮಾತು;ಶಾಸ್ತ್ರವೆಂಬುದು ಸಂತೆಯ ಸುದ್ದಿ.ಪುರಾಣವೆಂಬುದು ಪುಂಡರ ಗೋಷ್ಠಿ.ಆಗಮವೆಂಬುದು ಅನೃತದ ನುಡಿ.ತರ್ಕವೆಂಬುದು ತಗರ ಹೋರಟೆ.ಭಕ್ತಿಯೆಂಬುದು ತೋರಿ ಉಂಬ ಲಾಭ.ಗುಹೇಶ್ವರನೆಂಬುದು ಮೀರಿದ ಘನವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465) ಈ ವಚನ ಕುರಿತು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು (ಅಲ್ಲಮಪ್ರಭುದೇವರ ವಚನ ನಿರ್ವಚನ ಸಂಪುಟ-2 ವಚನ ಸಂಖ್ಯೆ 464) ವಿಶ್ಲೇಷಿಸಿದ ರೀತಿ ಈ…