ಮಕರ ಸಂಕ್ರಾಂತಿಯ ಸಂಸ್ಕೃತಿ ಮತ್ತು ವೈಜ್ಞಾನಿಕತೆ / ಶ್ರೀಮತಿ. ಶಾರದಾ ಕೌದಿ, ದಾರವಾಡ.
ಎಳ್ಳು ಬೆಲ್ಲ ಬಿರೋಣ ಒಳ್ಳೆ ಮಾತಾಡೋಣಬೆಳಕು ಹೊಂಗಿರಣ ಪಸರಿಸಿದೆ ಮೂಡಣದಿಕತ್ತಲೆಯ ಮೋಡ ಕರಗಿದೆ ಪಡುವಣದಿತಂದಿದೆ ಸಂಕ್ರಾಂತಿಯ ಸಂಭ್ರಮ ಜಗದಿ ಸೂರ್ಯನು ಮಕರ ರಾಶಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಪಯಣಿಸುವ ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನೇವರಿ 14 ರಂದು ಸಂಭವಿಸುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವದಕ್ಕೆ ಸಂಕ್ರಾಂತಿ ಎನ್ನುವರು. ಉತ್ತರಾಯಣದ ಆರಂಭವಾದ್ದರಿಂದ ಮಕರ ಸಂಕ್ರಾಂತಿ ವಿಶೇಷ. ಜಗತ್ತಿನ ಅಂಧಕಾರ ಅಳಿದು ಬದುಕಿಗೆ ಬೆಳಕು ನೀಡುವ ಸೂರ್ಯನು ಜ್ಞಾನದ ಸಂಕೇತ. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಆತನೇ ಕಾರಣ. ಸೂರ್ಯದೇವನ ಅಪಾರ…