“ಬಸವಣ್ಣ”-ಭಾಗ ೨/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ
ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು. ನಮ್ಮವ ನಮ್ಮವರು ಎನ್ನುತಾ ಬಸವಣ್ಣಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರನಾನು ನಿನ್ನೆಂಬ ಬೇಧವ ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು. ಸಾಗಿ ಬಂದಾರ…