
ಮಹಾಶಿವರಾತ್ರಿ ಪ್ರಯುಕ್ತ ನಗರದ ಬಸವ ಕೇಂದ್ರದಲ್ಲಿ 13.02.2026 ರಂದು ಸಾಯಂಕಾಲ ಚಿಕ್ಕೋಡಿಯ ವೈದ್ಯ ಶರಣ ಸಾಹಿತ್ಯ ಆರಾಧಕ ಡಾ. ದಯಾನಂದ ನೂಲಿ ಅವರ ನೇತೃತ್ವದಲ್ಲಿ ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ಕುರಿತು ಕಾರ್ಯಗಾರ ಜರುಗಿತು.
ಮೊದಲಿಗೆ ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಸಾಹಿತಿ ಡಾ. ಸರ್ವಮಂಗಳ ಸಕ್ರಿ ಅವರು ಬರೆದ “ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ” ಪುಸ್ತಕವನ್ನು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಶ್ರೀ. ಪಿ. ರುದ್ರಪ್ಪ ಕುರಕುಂದಿ ಸೇರಿ ಲೋಕಾರ್ಪಣೆ ಮಾಡಿದರು. ಜೊತೆಗೆ ಡಾ. ದಯಾನಂದ ನೂಲಿ ಅವರ ಎರಡನೇ ಮುದ್ರಣದ “ಮರುಳ ಶಂಕರದೇವ” ದ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಶರಣ ಶ್ರೀ. ರಾಚನಗೌಡ ಕೋಳೂರ, ಗೌರವಾಧ್ಯಕ್ಷ ಶರಣ ಶ್ರೀ. ನಾಗನಗೌಡ ಹರಿವಿ, ಕೃಷಿ ಕಾಲೇಜ್ ನಿವೃತ್ತ ಡೀನ್ ಶರಣ ಶ್ರೀ. ಸಿ. ಬಿ. ಪಾಟೀಲ, ಶರಣ ಶ್ರೀ .ರುದ್ರಪ್ಪ, ಡಾ.ಸರ್ವಮಂಗಳ ಸಕ್ರಿ ಉಪಸ್ಥಿತರಿದ್ದರು.
ಪುಸ್ತಕ ಪರಿಚಯ ಮಾಡಿದ ಶರಣ ಶ್ರೀ. ಪಿ. ರುದ್ರಪ್ಪ ಕುರಕುಂದಿ ಅವರು ಮಾತನಾಡಿ ಸೋದರಿ ಡಾ. ಸರ್ವಮಂಗಳಕ್ಕ ಬರೆದ ಅಷ್ಟಾವರಣ ಪಂಚಾಚಾರ ಷಟ್‌ಸ್ಥಳಗಳು ಕುರಿತ ಅನುಭವಾಮೃತ, ಅಷ್ಟಾವರಣದಲ್ಲಿ ಗುರುತ್ವದೊಂದಿಗೆ ಆರಂಭಿಸುವ ಅವರ ವ್ಯಾಖ್ಯಾನ ಅಕ್ಕಮಹಾದೇವಿಯ ಗುರುಕಲ್ಪನೆಯೊಂದಿಗೆ ಕರೆದುಕೊಳ್ಳುತ್ತದೆ ಎಂದರು ಷಟಸ್ಥಲ ಸೋಪಾನವನ್ನು ವಚನಗಳ ಮೂಲಕ ನಿರೂಪಿಸುತ್ತಾರೆ. ಒಟ್ಟಿನಲ್ಲಿ ಲಿಂಗವಂತ ಧರ್ಮದ ಸೂತ್ರಗಳನ್ನು ವಚನಗಳ ಮುಖಾಂತರ ಸಾಮಾನ್ಯರಿಗೆ ಬಿತ್ತರಿಸುವಲ್ಲಿ ಲೇಖಕಿ ಸಫಲರಾಗಿದ್ದಾರೆ ಎಂದರು.
ಪುಸ್ತಕದ ಶೀರ್ಷಿಕೆ: ಬಯಲ ಭಿತ್ತಿಯಲ್ಲಿ ಶರಣರ ತತ್ವಶೋಧ.
ಪ್ರಕಾಶಕರು: ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ), ತುಮಕೂರು.
“ಬಯಲ ಭಿತ್ತಿಯಲ್ಲಿ ಶರಣರ ತತ್ವಶೋಧ” ಕೃತಿಯು ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ 10 ನೇ ಕೃತಿ.

ಶಿವಶರಣರ ಅನುಭಾವ ಸಾಹಿತ್ಯ ಎಂದೂ ಬತ್ತದ ಗಂಗೆ. ಬಸವಾದಿ ಶರಣ-ಶರಣೆಯರ “ನಡೆ-ನುಡಿ” ಸಿದ್ಧಾಂತ ಮತ್ತು ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಜಾಗತಿಕ ಶಾಂತಿಗೆ ಬೀಜ ಮಂತ್ರಗಳಾಗಿವೆ. ಬಸವಾದಿ ಶರಣರ ತತ್ವಗಳಲ್ಲಿ ಅಪಾರ ನಂಬಿಕೆ ಹಾಗೂ ಭಕ್ತಿಭಾವವನ್ನಿಟ್ಟುಕೊಂಡು ಅನೇಕ ಪ್ರೌಢ ಕೃತಿಗಳನ್ನು ಡಾ. ಸರ್ವಮಂಗಳ ಸಕ್ರಿ ಚಿಸಿದ್ದಾರೆ. ಯಾವ ಪ್ರಚಾರಕ್ಕಾಗಿ ಮಾಡದೆ ಮನತೃಪ್ತಿಗಾಗಿ ಈ ಕಾರ್ಯ ಕೈಗೊಳ್ಳುವ ಮುಖಾಂತರ ಬಸವಾದಿ ಶರಣರ ಆಧ್ಯಾತ್ಮಿಕ ತತ್ವಗಳಾದ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ಕುರಿತು ಕೃತಿಯು ಲೋಕಾರ್ಪಣೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಶರಣರ ಸಾಮಾಜಿಕ, ಆರ್ಥಿಕ, ವೈಚಾರಿಕತೆಯನ್ನು ಕುರಿತಂತೆ ಮೌಲಿಕ ಕೃತಿಯಾಗಿದೆ.
ಇಂತಹ ವಿನೂತನವಾದ, ಸಾರ್ವಕಾಲಿಕ ಮೌಲ್ಯಗಳನ್ನು ಹಾಗೂ ಬಸವಾದಿ ಶಿವಶರಣ-ಶರಣೆಯರ ವಿಚಾರ ಧಾರೆಗಳನ್ನು ಒಂದೆಡೆ ಸಂಗ್ರಹಿಸಿ “ಬಯಲ ಭಿತ್ತಿಯಲ್ಲಿ ಶರಣರ ತತ್ವಶೋಧ” ಎಂಬ ಶಿರೋನಾಮೆಯ ಕೃತಿಯಲ್ಲಿ ಲೇಖಕಿ ಡಾ.ಸರ್ವಮಂಗಳ ಸಕ್ರಿ ಅವರು ಸುಂದರವಾಗಿ, ಸಮರ್ಥವಾಗಿ ಕಟ್ಟಿ ಕೊಟ್ಟಿದ್ದಾರೆ. ವಚನಾಸಕ್ತರ ಗಮನ ಸೆಳೆಯುವ ಈ ಕೃತಿಯ 16 ಲೇಖನಗಳು 136 ಪುಟಗಳಲ್ಲಿ ಲಿಂಗಾಯತ ಧರ್ಮದ ಕೈಪಿಡಿಯ ರೂಪದಲ್ಲಿ ಮೂಡಿಬಂದಿವೆ.
ಲೇಖಕಿ ಡಾ. ಸರ್ವಮಂಗಳಾ ಸಕ್ರಿ ಮಾತನಾಡುತ್ತ, ನಾನೊಬ್ಬ ಸಾಹಿತ್ಯಿಕ ವಿದ್ಯಾರ್ಥಿ ಈ ತತ್ವ ಮಾತನಾಡುವುದು ಸುಲಭ, ಅನುಭವಿಸಿ ಬರೆಯುವುದು ಬಹಳ ಕಷ್ಟ. ಅದನ್ನು ಬರವಣಿಗೆಗೆ ಕೈಗೆತ್ತಿಕೊಂಡಾಗ ಅರಿವಾಗುತ್ತದೆ. ಜನಪದರ ತತ್ವಪದ ಹಾಡುಗಳ ತಾತ್ವಿಕತೆಯೇ ಬೇರೆ, ಶರಣರ ವಚನಗಳ ತಾತ್ವಿಕತೆ ಬೇರೆ. ನನ್ನ ಬರವಣಿಗೆಯಲ್ಲಿ ತಾತ್ವಿಕತೆಯ ಗಟ್ಟಿತನ ಬರಲು ತತ್ವಪದಗಳೇ ಕಾರಣ ಎಂದು ಹೇಳಿದರು.
ಡಾ. ದಯಾನಂದ ನೂಲಿ ಅವರು ತಮ್ಮದೇ ಸ್ಕ್ರೀನ್ ಪರದೆ ಮೂಲಕ ಮಾನವನಲ್ಲಿ ಅಂತರ್ಗತವಾಗಿ ಇರುವ ಕುಂಡಲಿನಿ ಶಕ್ತಿ ಷಟ್‌ಚಕ್ರಗಳ ಮೂಲಕ ಹೇಗೆ ಊರ್ಧಮುಖವಾಗಿ ಹರಿಸುವುದು. ಯಾವ ಸ್ಥಲದಲ್ಲಿ ಲಿಂಗಪೂಜೆ ಹೇಗೆ ಮಾಡುವುದು ಎಂಬುದನ್ನು ಅದರ ವೈಜ್ಞಾನಿಕ ಕಾರಣ ಅದಕ್ಕೆ ಸಂಬಂಧಿಸಿದ ಶರಣರ ವಚನಗಳ ವಿಶ್ಲೇಷಣೆಯೊಂದಿಗೆ ವಿವರಿಸಿದರು.

ಕಾರ್ಯಕ್ರಮವನ್ನು ಶರಣ ಶ್ರೀ. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಶರಣೆ ಶ್ರೀಮತಿ. ಜಯಶ್ರೀ ಮಹಾಜನಶೆಟ್ಟಿ ಅವರು ಡಾ. ದಯಾನಂದ ನೂಲಿ ಅವರ ಪರಿಚಯ ಮಾಡಿಕೊಟ್ಟರು. ಶರಣೆ ಶ್ರೀಮತಿ. ಪಾರ್ವತಿ ಪಾಟೀಲ್ ವಚನ ಪ್ರಾರ್ಥನೆ ಮಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣ ಶ್ರೀ. ಜೆ. ಬಸವರಾಜ, ಶರಣ ಶ್ರೀ. ಚನ್ನಬಸವ ಇಂಜನಿಯರ್, ಶರಣ ಶ್ರೀ. ಶಿವಯೋಗಿ ಪಾಟೀಲ, ಶರಣ ಶ್ರೀ. ಶರಣಬಸವ ಜಾಡಲದಿನ್ನಿ, ಶರಣ ಶ್ರೀ. ಮಲ್ಲಿಕಾರ್ಜುನ ಗುಡಿಮನಿ, ಶರಣ ಶ್ರೀ. ಯಂಕಣ್ಣ ಆಶಾಪೂರ, ಅಕ್ಕನ ಬಳಗದ ಶರಣೆ ಶ್ರೀಮತಿ. ಜಗದೇವಿ ಅಕ್ಕ, ಶರಣೆ ಶ್ರೀಮತಿ. ಪಾರ್ವತಿ ಪಾಟೀಲ, ಶರಣೆ ಶ್ರೀಮತಿ. ಪೂರ್ಣಿಮಾ, ಶರಣೆ ಡಾ. ಪ್ರಿಯಾಂಕ ಗದ್ವಾಲ ಮತ್ತಿತರ ನೂರಾರು ಜನ ಭಾಗವಹಿಸಿದ್ದರು.
ಶ್ರೀ ಬಸವರಾಜ ಕುರುಗೋಡ,
ರಾಯಚೂರು.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()




Total views : 55935