ತನು ಕರಗದವರಲ್ಲಿ ಮಜ್ಜನವ ಒಲ್ಲೆಯುಯ್ಯ ನೀನು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ತನು ಕರಗದವರಲ್ಲಿಮಜ್ಜನವನೊಲ್ಲೆಯಯ್ಯಾ ನೀನು.ಮನ ಕರಗದವರಲ್ಲಿಪುಷ್ಪವನೊಲ್ಲೆಯಯ್ಯಾ ನೀನು.ಹದುಳಿಗರಲ್ಲದವರಲ್ಲಿಗಂಧಾಕ್ಷತೆಯನೊಲ್ಲೆಯಯ್ಯಾ ನೀನು.ಅರಿವು ಕಣ್ದೆರೆಯದವರಲ್ಲಿಆರತಿಯನೊಲ್ಲೆಯಯ್ಯಾ ನೀನು.ಭಾವಶುದ್ಧವಿಲ್ಲದವರಲ್ಲಿಧೂಪವನೊಲ್ಲೆಯಯ್ಯಾ ನೀನು.ಪರಿಣಾಮಿಗಳಲ್ಲದವರಲ್ಲಿನೈವೇದ್ಯವನೊಲ್ಲೆಯಯ್ಯಾ ನೀನು.ತ್ರಿಕರಣ ಶುದ್ಧವಿಲ್ಲದವರಲ್ಲಿತಾಂಬೂಲವನೊಲ್ಲೆಯುಯ್ಯಾ ನೀನು.ಹೃದಯ ಕಮಲ ಅರಳದವರಲ್ಲಿಇರಲೊಲ್ಲೆಯಯ್ಯಾ ನೀನು.ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-76/ವಚನ ಸಂಖ್ಯೆ-211) ವೈರಾಗ್ಯನಿಧಿ ಅಕ್ಕಮಹಾದೇವಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಮಹಿಳಾ ವಚನಕಾರ್ತಿ ಎಂದೇ ಗುರುತಿಸಿ ಗೌರವಿಸುತ್ತೇವೆ. ಇಂತಹ ಉಜ್ವಲ ಮತ್ತು ಅಪರೂಪದ ವ್ಯಕ್ತಿತ್ವ ಉಳ್ಳ ಕನ್ನಡದ ಶ್ರೇಷ್ಠ ಕವಿಯತ್ರಿ. ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬ ಗ್ರಾಮದ, ನಿರ್ಮಲ ಶೆಟ್ಟಿ ಮತ್ತು ಸುಮತಿ ದಂಪತಿಗಳ ಮಗಳು. ತಮ್ಮ ಆದರ್ಶಕ್ಕಾಗಿ ಸಾಮಾಜಿಕ ವ್ಯವಸ್ಥೆ ಮತ್ತು ರಾಜಪ್ರಭುತ್ವವನ್ನೇ ಧಿಕ್ಕರಿಸಿ ನಿಂತವರು.…

0 Comments

ಶರಣೆ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರು | ಡಾ. ಎಂ. ಮಕ್ತುಂಬಿ, ಭಾಲ್ಕಿ.

೧೨ ನೇ ಶತಮಾನದಲ್ಲಿ ಅನೇಕ ಶಿವಶರಣರು ಬಾಳಿ ಬದುಕಿದ್ದಾರೆ. ಅವರು ತಮ್ಮ ವಚನಗಳ ಮೂಲಕ ಪರಿಚಯಿಸಿಕೊಂಡವರು. ಸ್ವಂತ ಪರಿಶ್ರಮದಿಂದ ಸಾಹಿತ್ಯವನ್ನು ಕಟ್ಟಿಕೊಟ್ಟವರು. ಭಕ್ತಿ, ಪೂಜೆ, ಕಾಯಕ, ದಾಹೋಸ, ಸಮೂಹ ಪ್ರಾರ್ಥನೆ, ಸಂವಾದ, ಮಾಡುವದರ ಮೂಲಕ ಜೀವ ಮತ್ತು ಜೀವನವನ್ನು ಕಟ್ಟಿಕೊಂಡುವರು. ಅಂತವರಲ್ಲಿ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಹಡಪದ ಲಿಂಗಮ್ಮ ಶರಣೆಯು ಒಬ್ಬರು. ಅವರು ೧೧೪ ವಚನಗಳನ್ನು ಬರೆದಿದ್ದಾರೆ. ಬಸವಣ್ಣನವರಿಗೆ ಈ ದಂಪತಿಗಳು ಆಪ್ತರಾಗಿದ್ದರು. "ಗುರುರಾಜ ಚರಿತ್ರೆ" ಯಲ್ಲಿ ಬರುವ "ಚಾರು ಗುರು ಭಕ್ತಿ ಲಿಂಗಮ್ಮ" ಎಂಬ ಉಲ್ಲೇಖವಿದೆ. ಅವರು ತಮ್ಮ 11 ವಚನಗಳಲ್ಲಿ ಅವರ ಗುರು ಚೆನ್ನಮಲ್ಲೇಶ್ವರನ್ನು ನೆನೆದಿದ್ದಾರೆ.…

0 Comments

ಶರಣ ಕರುಳ ಕೇತಯ್ಯನವರ ವಚನ ನಿರ್ವಚನ | ಡಾ. ಎಂ. ಮಕ್ತುಂಬಿ, ಭಾಲ್ಕಿ.

ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂಓಸರಿಸಿದಲ್ಲಿ ಭಾಷೆ ಹೋಯಿತ್ತು.ಕಳ್ಳನ ತಾಯ ಕಣಿಯ ಕೇಳ ಹೋದಂತೆ.ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲಮನಕ್ಕೆ ಮನೋಹರ ಶಂಕೇಶ್ವರ ಲಿಂಗವಮುಟ್ಟದೆ ಹೋಯಿುತ್ತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-15/ವಚನ ಸಂಖ್ಯೆ-33) ದ್ರವ್ಯ ಅಂದರೆ ಸಂಪತ್ತು.  ಧನ ಅಂದರೆ ಹಣ. ತನು ಅಂದರೆ ಶರೀರ. ಆತ್ಮ ಅಂದರೆ ಅಂತರಂಗ. ಶೀಲ ಅಂದರೆ ನಡವಳಿಕೆ. ಹೀಗೆ ನಾನಾ ರೀತಿಯ ಶೀಲಗಳಿವೆ. ಮನುಷ್ಯರು ಶೀಲಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಒಂದು ಶೀಲವನ್ನು ನಿಯಮ ಬದ್ಧವಾಗಿ ಪಾಲಿಸಬೇಕು. ನಿಯಮ ಮೀರಿದರೆ ಶೀಲ ಹೋಯಿತು. ಕಳ್ಳನ ತಾಯಿ…

0 Comments

ವಚನಗಳಲ್ಲಿ ವೈಚಾರಿಕತೆ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಸೂತಕ ಎಂದರೆ ಹಿಂದೂ ಸಂಪ್ರದಾಯದಲ್ಲಿ ಜನನ ಮತ್ತು ಮರಣ ಸಂಭವಿಸಿದ ನಂತರ ಕುಟುಂಬದವರಿಗೆ ಒಂದು ನಿರ್ದಿಷ್ಠ ಅವಧಿಯವರೆಗೆ ಆಚರಿಸುವ ಶೌಚ (ಅಶೌಚ) ಸ್ಥಿತಿ ಎಂದು ಹೇಳಲಾಗುತ್ತದೆ. ಕೆಲವು ಧಾರ್ಮಿಕ ಆಚರಣೆಗಳು, ದೇವಾಲಯ ಪ್ರವೇಶ, ಪೂಜೆ ಇತ್ಯಾದಿಗಳನ್ನು ಸಂಪ್ರದಾಯದ ಪ್ರಕಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಬಸವಾದಿ ಶರಣರು ಜನನ ಮತ್ತು ಮರಣಗಳು ಪ್ರಕೃತಿಯ ಸಹಜ ಪ್ರಕ್ರಿಯೆಗಳು. ಆದ್ದರಿಂದ ಜಾತಿ, ಸೂತಕ, ಅಶೌಚ ಇಂತಹ ಬಾಹ್ಯ ಆಚರಣೆಗಳ ಬದಲು ಶುದ್ಧ ಕಾಯಕ, ದಾಸೋಹ ಮತ್ತು ಇಷ್ಟಲಿಂಗದ ಆರಾಧನೆಗೆ ಹೆಚ್ಚು ಮಹತ್ವ ನೀಡೀದ್ದರು. ಸಮಾಜದ ಹಿತಕ್ಕೆ ವಿರುದ್ಧವಾದ, ಮಾನವೀಯ ಮೌಲ್ಯಗಳನ್ನು ಕಲೂಷಿತಗೊಳಿಸುವ…

0 Comments

ವೇದಮೂರ್ತಿ ಸಂಗಣ್ಣ ಶರಣರ ವಚನ-ನಿರ್ವಚನ | ಡಾ. ಗೀತಾ. ಎಸ್. ಡಿಗ್ಗೆ (ಏಳಂಗಡಿ), ಸೊಲ್ಲಾಪುರ.

ವೇದಮೂರ್ತಿ ಸಂಗಣ್ಣ ಶರಣರು ಹನ್ನೆರಡನೆಯ ಶತಮಾನದ ಬಸವಣ್ಣನವರ ಸಮಕಾಲೀನರು. ಹಾಗೂ ಕಲ್ಯಾಣ ಕ್ರಾಂತಿಯ ಕಾಲ ಘಟ್ಟದ ಒಬ್ಬ ಪ್ರಮುಖ ಶರಣರಾಗಿದ್ದಾರೆ. ಅಲ್ಲದೆ ವಚನಗಳನ್ನು ಬರೆದು ವಚನಕಾರರೆನಿಕೊಂಡಿದ್ದಾರೆ. ವೇದ, ಆಗಮ ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಬಸವಣ್ಣನವರ ತತ್ವಗಳಿಂದ ಆಕರ್ಷಿತರಾಗಿ ಶರಣ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡವರು. ಇವರ ಕಾಲ ಸುಮಾರು ಕ್ರಿ. ಶ. 1160 ರಲ್ಲಿ ಬದುಕಿದ್ದರು ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಇವರ ಕಾಯಕ – ಇವರು ಮೂಲತಃ ವೇದಾಗಮ ಪಂಡಿತರಾಗಿದ್ದರು. ವೇದ, ಶಾಸ್ತ್ರ ಹಾಗೂ ಪುರಾಣಗಳ ಆಳವಾದ ಅಧ್ಯಯನಗೈದ ಜ್ಞಾನಿಗಳು. ವೇದಗಳ ಆಳವಾದ ಅಧ್ಯಯನ ಜ್ಞಾನವಿದ್ದ…

0 Comments

ಮರನ ಹೂ ನುಂಗಿ | ಶರಣ ಬಿಬ್ಬಿ ಬಾಚರಸರ ವಚನ ವಿಶ್ಲೇಷಣೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಪ್ರಕೃತಿ ಮತ್ತು ಮನುಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯನ್ನು ಅವಲಂಬಿಸಿದ ಮನುಷ್ಯ ಆಹಾರ ನೀರು ಗಾಳಿಯನ್ನು ದೇವರೆಂದೇ ಅರಿತವನಾಗಿದ್ದ. 12 ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಪ್ರಕೃತಿಯ ವಿಶಾಲ ಸೂಕ್ಷ್ಮತೆಯನ್ನು ಮನಗಂಡಿದ್ದರು. ಬ್ರಾಹ್ಮಣರಾದ ಬಿಬ್ಬಿ ಬಾಚರಸರು ಮರ ಹೂ ಗಿಡ ಹಣ್ಣು ಕಾಯಿಗಳನ್ನು ತತ್ವದ ಆಧಾರದಲ್ಲಿ ಗ್ರಹಿಸುತ್ತಾರೆ. ಮರನ ಹೂ ನುಂಗಿ, ಅಡಿಯೊಡಗಿ ಹಣ್ಣಾಯಿತ್ತು.ಹಣ್ಣು ಎಳಗಾಯಿ ನುಂಗಿ, ಹೂ ಮರನ ಉಗುಳಿತ್ತು.ಮರ ಮರಣಕ್ಕೆ ತೆರಹಿಲ್ಲ,ಏಣಾಂಕಧರ ಸೋಮೇಶ್ವರಲಿಂಗವನರಿತಿಹೆನೆಂದು.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-135/ವಚನ ಸಂಖ್ಯೆ-321) ಶರಣರು ಪ್ರಕೃತಿಯ ಹೊರ ರೂಪಕ್ಕಿಂತ ಅದರೊಳಗಿನ ತತ್ವವೇ ಮುಖ್ಯವೆಂದು ಅದ್ವೈತ…

0 Comments

ಪ್ರಕೃತಿಯೊಂದಿಗೆ ಲೀನವಾದ ಶರಣರು | ಡಾ. ಕಾವ್ಯಶ್ರೀ ಮಹಾಗಾಂವಕರ, ಕಲಬುರಗಿ

ಆಧುನಿಕ ಜೀವನ ಶೈಲಿಯನ್ನು ಮೆಲುಕು ಹಾಕುತ್ತ, ಅಂತರಂಗಕ್ಕೆ ಪ್ರಶ್ನೆಗಳ ರವಾನಿಸುತ್ತ ಸಾಗಿದರೆ, ಮನುಷ್ಯ ಮತ್ತು ಪ್ರಕೃತಿ ಎರಡು ಭಿನ್ನ ಆಯಾಮಗಳಾಗಿ ಕಾಣುತ್ತವೆ. ಇದು ಅವಾಸ್ತವ ಎನಿಸಬಹುದು, ಆದರೂ ಪ್ರಸ್ತುತ ಬದುಕಿನ ವಾಸ್ತವ ನೆಲೆಯಾಗಿದೆ. ವಿಜ್ಞಾನ, ತಂತ್ರಜ್ಞಾನಗಳಿಂದ ಅತ್ಯಂತ ಮುಂದುವರಿದ ಮಾನವನ ಅಭಿವೃದ್ಧಿಗೊಂಡ ಜೀವನದ ವ್ಯಂಗ್ಯವೂ ಹೌದು. ಪ್ರಕೃತಿ ಒಳಗೊಂಡ ಅನೇಕ ತತ್ವಗಳಿಂದಲೇ ಮನುಷ್ಯನ ನಿರ್ಮಾಣವಾಗಿರುವ ಸತ್ಯವು ಮರೆವಿನಂಚಿಗೆ ಹೋದ ಭ್ರಮೆಗೊಳಗಾಗಿದೆ. ಆ ಮರೆವು ಭವಿಷ್ಯದಲ್ಲಿ ಇಡೀ ಮನುಕುಲವನ್ನೇ ಅಳಿವಿನಂಚಿಗೆ ತಳ್ಳುವ ಅಪಾಯದಲ್ಲಿದೆ. ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ತುರ್ತು ಇಂದಿನದಾಗಿದೆ. ಪ್ರಸ್ತುತದಲ್ಲಿ ಬಳಸುತ್ತಿರುವ ವೈಜ್ಞಾನಿಕ, ತಾಂತ್ರಿಕ…

0 Comments

ಶರಣ ಶರಣೆಯರ ವಚನಗಳಲ್ಲಿ ಪದ ಬಳಕೆಯ ವೈಶಿಷ್ಟ್ಯ | ಪ್ರಕಾಶ ರಾಜಗೋಳಿ, ಬೆಂಗಳೂರು.

12 ನೆಯ ಶತಮಾನದ ಕಾಲಘಟ್ಟದಲ್ಲಿನ ಶರಣ ಶರಣೆಯರು ಒಂದೆಡೆ ಸೇರಿ ವಿಶ್ವಮಾನ್ಯವಾದ ವಚನಗಳನ್ನು ಮನುಕುಲಕ್ಕೆ ನೀಡಿದ್ದು ಅದ್ಭುತ ಸಾಧನೆಯೇ ಸರಿ. ವಿಶ್ವಗುರು ಬಸವಣ್ಣನವರ Out of the box thinking ವಿಚಾರಧಾರೆಯ ಫಲಶ್ರುತಿಯಾಗಿ ವಿಶಿಷ್ಟ ರೀತಿಯ ವಚನ ಕ್ರಾಂತಿ ನಡೆಯಿತು. ಆಗಿನ ಕಾಲದ ಸಮಾಜದ ಮೇಲ್ವರ್ಗದವರಿಗಷ್ಟೇ ಮೀಸಲಾಗಿದ್ದ ದೇವಸ್ಥಾನದ ಪ್ರವೇಶವನ್ನು ಅವರು ವಿರೋಧಿಸಿ ಪ್ರತಿಭಟನೆ, ಸತ್ಯಾಗ್ರಹ, ಬಲವಂತ ಮಾಡದೆ ದೇವರನ್ನೇ ಜನರ ಹತ್ತಿರ ಕೊಂಡೊಯ್ದರು. ಇಷ್ಟಲಿಂಗವನ್ನು ದಯಪಾಲಿಸಿ ದೇಹವನ್ನೇ ದೇಗುಲವಾಗಿಸಿದರು.  ಅನುಭವ ಮಂಟಪದಂತಹ ಉದಾತ್ತ ಪರಿಕಲ್ಪನೆಯಿಂದ ಸಮಾಜದ ಎಲ್ಲ ವರ್ಗದ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿದರು. ಇವರ…

0 Comments

ಸಾಮಾಜಿಕ ವಿಘಟನೆಗೆ ಶರಣರ ಪರಿಹಾರ ಸೂತ್ರ | ಡಾ. ಪಂಚಾಕ್ಷರಿ ವೀ ಹಳೇಬೀಡು, ಬೆಂಗಳೂರು.

ಈ ಅಖಂಡ ವಿಶ್ವದೊಳಗಿರುವ ನಮ್ಮ ಭೂಮಿ ಈ ಹೊತ್ತಿಗೆ ಸುಮಾರು 810 ಕೋಟಿ ಮಾನವ ಜೀವಗಳಿಗೆ ಆಶ್ರಯ ಕೊಟ್ಟಿದೆ. ಎಲ್ಲ ಮಾನವರ, ಪ್ರಾಣಿಗಳ, ಸಸ್ಯ, ಚರ ಮತ್ತು ಅಚರಗಳಲ್ಲಿರುವ ಮೂಲ ಚೈತನ್ಯ ಒಂದೇ. ಆ ಒಂದೇ ಚೈತನ್ಯ ಹಲವು ಬಗೆಯಲ್ಲಿ ವಿಕಾಸ ಹೊಂದಿ ಅನಂತತೆಯ ಸ್ವರೂಪ ಪಡೆದಿದೆ. ಈ ಅನಂತತೆಯಲ್ಲಿ ಮಾನವ ಜೀವಿ ಮಾತ್ರ ಬಹು ವಿಭಿನ್ನ. ಸೃಷ್ಟಿಯಲ್ಲಿ ಮಾನವ ಅದೆಷ್ಟು ಬುದ್ಧಿವಂತನೋ ಅಷ್ಟೇ ಮೂರ್ಖ ಕೂಡ! ಮಾನವ ಬುದ್ಧಿವಂತ ಮತ್ತು ಮೂರ್ಖನಾಗಲು ಕಾರಣ ಆತನ ವಿಪರೀತ ಕಲ್ಪನಾಶಕ್ತಿ. ತನ್ನ ಕಲ್ಪನಾ ಶಕ್ತಿಯಿಂದ ಇಲ್ಲದುದನ್ನು ಇದೆ ಎಂದೂ,…

0 Comments

ಉರಿ ಚಮ್ಮಾಳಿಗೆ | ಡಾ. ವಡ್ಡಗೆರೆ ನಾಗರಾಜ, ಬೆಂಗಳೂರು.

ಕರಸ್ಥಲ ಲಿಂಗಸಹಿತ ಬಸವಣ್ಣನವರ ಈ ಶಿಲ್ಪದಲ್ಲಿರುವ ಚಮ್ಮಾಳಿಗೆ, ಗಲ್ಲೆಬಾನಿ, ತಮಟೆ, ಉಳಿ, ಕಬ್ಬಿಣಗೊಡತಿ, ಚಿಂಪರಿಕೆ, ರಂಪಿಗೆ ಇವೆಲ್ಲವೂ ಚರ್ಮಕಾರರ ಕಾಯಕದ ಸಾಮಾನ್ಯ ಸಲಕರಣೆಗಳಾಗಿ ಉಳಿಯದೆ ಬಸವಣ್ಣನವರು ತಲುಪಿದ ಸಾಮಾಜಿಕ- ಸಾಂಸ್ಕೃತಿಕ ನೆಲೆ ಹಾಗೂ ಅವರ ಅನುಭಾವದ ಹುಡುಕಾಟದ ಅಸ್ಮಿತೆಗಳಾಗಿ ಶಿಲ್ಪಿಯ ಕಲೆಯಲ್ಲಿ ಒಡಮೂಡಿವೆ. ಸಮಗಾರರು ಬಳಸುವ ಕೆಲವು ಉಪಕರಣಗಳ ಸಂಕ್ಷಿಪ್ತ ಚಿತ್ರಣ: ಗಲ್ಲೆಬಾನಿ: ಸಾಂಪ್ರದಾಯಿಕವಾಗಿ ಇದು ಚಮ್ಮಾರರು (ಚರ್ಮದ ಕೆಲಸ ಮಾಡುವವರು) ಹದ ಮಾಡಲು ಅಥವಾ ಚರ್ಮವನ್ನು ನೆನೆಸಿಡಲು ನೆಲದಲ್ಲಿ ಮಾಡಿಕೊಳ್ಳುವ ನೀರಿನ ತೊಟ್ಟಿ ಅಥವಾ ಕಸುಬಿಗೆ ಸಂಬಂಧಿಸಿದ ಪರಿಭಾಷೆಯಾಗಿದೆ. ನೆಲದಲ್ಲಿ ಹೂತು ಜಗಲಿ ಕಟ್ಟಿ ಬಳಸುವ,…

0 Comments