ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ

ಮೈಸೂರು : ಬಸವಣ್ಣನವರು ಜನಸಾಮಾನ್ಯರ ಧ್ವನಿಯಾದುದರಿಂದ ವಿಶ್ವಗುರುವಾದರು ಎಂದು ನಿವೃತ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಮಾದಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಬಸವಣ್ಣನವರ ತತ್ವವನ್ನು ಪಾಲನೆ ಮಾಡಿದ ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮಿಗಳು ,ಬಸವಣ್ಣನವರ ನಾಟಕವನ್ನು ಒಂದು ಸಾವಿರಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶನ ಮಾಡಿಸಿ ಜೊತೆಗೆ ಮಠದಲ್ಲಿ ಜಾತ್ಯಾತೀತವಾಗಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ೧೧೧ ವರ್ಷಗಳ ಸಾರ್ಥಕ ಬದುಕನ್ನು ಬದುಕಿದರು. ವಚನ ಸಾಹಿತ್ಯ ಮನೆಯಲ್ಲಿ ಮತ್ತು ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸಲು ಸಹಾಯಕವಾಗಿದ್ದು, ರಸಪ್ರಶ್ನೆಯ ಮೂಲಕ ಜನರಲ್ಲಿ ಬಸವತತ್ವದ ಅರಿವು ಮೂಡಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.

ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸ್ವಾಮಿ ಮಾತನಾಡಿ ಸಮಾಜದ ಬಗ್ಗೆ ಕಳಕಳಿಯನ್ನು ಹೊಂದಿದ್ದ ಬಸವಣ್ಣನವರು ಎಲ್ಲಾ ವರ್ಗದ ಜನರಿಗೆ ಆಶಾಕಿರಣವಾದರು. ಅಂತಹ ವ್ಯಕ್ತಿತ್ವವನ್ನು ಗುರುತಿಸಿ ರಾಜ್ಯಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಪ್ರಶಂಸನೀಯ. ಅಂತಹ ಬಸವಣ್ಣನವರ ಚಿತ್ರವನ್ನು ವಿಶ್ವದಲ್ಲಿಯೇ ಪ್ರಥಮಬಾರಿಗೆ ಮೆಟಾಲಿಕ್ ಫ್ರಿಂಟ್‌ನಲ್ಲಿ ಮುದ್ರಿಸಿ ಮನೆಮನೆಗೆ ತಲುಪಿಸುವ ಕೈಂಕರ್ಯ ಎಲ್ಲರಿಗೂ ಮಾದರಿ ಎಂದರು.
ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಕ್ಯಾತನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಬಸವತತ್ವ ಪ್ರತಿಯೊಬ್ಬರಲ್ಲೂ ಸ್ವಾಭಿಮಾನಿಗಳಾಗಿ ಬದುಕುವ ಕಲೆಯನ್ನು ಕರಗತಮಾಡಿಸುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ವೈಚಾರಿಕತೆಯನ್ನು ಮೈಗೂಡಿಸಿ ವೈಜ್ಞಾನಿಕವಾಗಿ ಚಿಂತಿಸುವ ಕೌಶಲವನ್ನು ವೃದ್ಧಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಬಸವಬಳಗ ಒಕ್ಕೂಟದ ಅಧ್ಯಕ್ಷ ಎಂ. ಪ್ರದೀಪ್ ಕುಮಾರ್ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿ ಅಪಾರ ಜ್ಞಾನ ಹೊಂದಿರುವ ಧವನೀ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳ ಮುದ್ದುಮಾದಪ್ಪ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವೀರಭದ್ರಸ್ವಾಮಿ, ಕೊಳ್ಳೇಗಾಲ ಘಟಕದ ಅಧ್ಯಕ್ಷೆ ಜಗದಾಂಬ, ಕೇಂದ್ರೀಯ ಸಂಚಾಲಕರಾದ ವಿ. ಲಿಂಗಣ್ಣ, ಅಕ್ಕಮಹಾದೇವಿ ಮರಮ್ಕಲ್, ಉಪಾಧ್ಯಕ್ಷ ಶಿವಪುರ ಉಮಾಪತಿ, ಎಂ.ವಿ ಶಿವಕುಮಾರ್, ಆನಗಟ್ಟಿ ಶಿವರುದ್ರಪ್ಪ, ಮಲ್ಲಿಕಾರ್ಜುನ್, ಪುರ ಶಿವರಾಜು, ಬೀಚನಹಳ್ಳಿ ನಾಗರತ್ನ, ಪುಟ್ಟವೀರಪ್ಪ, ಅಶೋಕ ಕುಂಬಾರ, ಶಿವಮಂಗಲಾ, ನಾಗೇಶ್, ಪಂಚಾಕ್ಷರಯ್ಯ, ಪರಶಿವಮೂರ್ತಿ, ಕವಯಿತ್ರಿ ನಿಶಾ ಮುಳಗುಂದ, ಸುಮ, ವಾಣಿ, ಮಂಜು, ಶಶಿ, ವಚನ, ದೀಪು, ಗುರುಸಿದ್ದಪ್ಪ ಉಪಸ್ಥಿತರಿದ್ದರು.

Loading

This Post Has One Comment

  1. ಡಾ. ವಚನ ಕುಮಾರಸ್ವಾಮಿ

    ಸುದ್ಧಿ ಪ್ರಕಟಿಸಿದ ತಮಗೆ ಹೃದಯಪೂರಕ ಧನ್ಯವಾದಗಳು

Leave a Reply