ಧೀರ ಶರಣ ಅಂಬಿಗರ ಚೌಡಯ್ಯನವರು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರ.

ಅಂಬಿಗರ ಚೌಡಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ಚೌಡಯ್ಯನವರ ಕಾಯಕ ದೋಣಿ ನಡೆಸುವುದು. ಬಸವಾದಿ ಶರಣರ ಲಿಂಗ ತತ್ವವನ್ನು ಶ್ರದ್ಧೆಯಿಂದ ಪಾಲಿಸಿ ಲಿಂಗಾಂಗ ಸಾಮರಸ್ಯ ಸಂಪಾದಿಸಿದ ಚೌಡಯ್ಯನವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ಅಂಬಿಗರ ಚೌಡಯ್ಯನವರ ವಚನಗಳು ನಿರ್ಭೀತಿಯಿಂದ ಕಂಡದ್ದನ್ನು ಕಂಡಂತೆಯೇ, ಮುಚ್ಚುಮರೆ ಇಲ್ಲದೆ ಎಚ್ಚರಿಸುವಂಥವು. ಆಡಂಬರ, ಡಂಭಾಚಾರ, ಮೂಢನಂಬಿಕೆಗಳನ್ನು ಕಂಡರೆ ಕಟು ಮಾತುಗಳಲ್ಲಿ ನಿಂದಿಸಿ ‌ಸರಿ ದಾರಿಗೆ ತರುವ ಹಾಗೂ ದಾರಿ ತಪ್ಪಿದ ಯಾರನ್ನು ಬಿಡದೆ ತಪ್ಪು ದಾರಿಗಳೆವ ಗುರುಗಳನ್ನು ಟೀಕಿಸುತ್ತಿದ್ದರು. ಆದರೆ ಅವರ ಮಾತುಗಳಲ್ಲಿ ದ್ವೇಷ ಅಸೂಯೆಗಳಿರಲಿಲ್ಲ. ತಿದ್ದಿ ಸತ್ಯದ ಆಚರಣೆಗೆ ತರುತ್ತಿದ್ದರು. ತಮ್ಮ ಆಚಾರ ವಿಚಾರ ಮತ್ತು ವಚನ ರಚನೆಯಿಂದ ಬಸವಣ್ಣನವರ ಕಲ್ಯಾಣ ಕ್ರಾಂತಿಗೆ ಭದ್ರವಾದ ಬುನಾದಿ ಹಾಕಿದರು.

ಅಂಬಿಗರ ಚೌಡಯ್ಯನವರ ವಚನಗಳು ಆಳವಾದ ಅನುಭವದ ಸಾಮಾಜಿಕ ಪ್ರಜ್ಞೆಯ ದೇವರು ಒಬ್ಬನೆಂದು ಅಚಲ ನಂಬಿಕೆ ದೇವನನ್ನು ಕೂಡುವ ಬಗೆಯನ್ನು ವಚನಗಳಲ್ಲಿ ಹೃದಯಂಗಮವಾಗಿ ಬಣ್ಣಿಸಿದ್ದಾರೆ.

ಮಣ್ಣ ದೇವರ ಪೂಜಿಸಿ ಮಾನಹೀನರಾದರು
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು
ದೇವರ ಪೂಜಿಸಿ ಸ್ವರ್ಗಕ್ಕೆರದೆ ಹೋದರು!
ಜಗದ್ಬರಿತವಾದ ಪರಶಿವನೊಳಗೆ
ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಚೌಡಯ್ಯ ನಿಜ ಶರಣನು.

“ದೇವನನ್ನು ಅಡವಿಯಲ್ಲಿ ಹುಡುಕುವುದಕ್ಕಿಂತ ದೇವನನ್ನು ಕಾಣಬೇಕಾದರೆ ಮೊದಲು ನಿನ್ನಲ್ಲಿ ನೀ ತಿಳಿದು ನೋಡಾ ಜಗವು ನಿನ್ನೊಳಗೆ” ಎಂದರು. ಗುರು ಕೊಟ್ಟ ಲಿಂಗವ ಕಿರಿದು ಮಾಡಿ ಬೆಟ್ಟದ ಲಿಂಗಕ್ಕೆ ಅಡ್ಡ ಬೀಳುವ ಅನಾಚಾರಿಗಳನ್ನು ಎಡದ ಪಾದರಕ್ಷೆಯಿಂದ ಲಟಲಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ಎಂದು ಎಚ್ಚರಿಸಿದರು. ಕಾಯಕ, ದಾಸೋಹ, ಲಿಂಗಾಂಗ ಸಾಮರಸ್ಯ ಕುರಿತ ಅವರ ವಚನಗಳು ಮಾನವ ಕುಲಕ್ಕೆ ಮಾರ್ಗದರ್ಶವಾಗಿವೆ. ಅವರ ವಚನಗಳು ಚಾಟಿಯೇಟನ್ನ ಕೊಟ್ಟು ಬಡಿದೆಬ್ಬಿಸುತ್ತವೆ. ಅವರ ವಚನಗಳು ಆಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ.

ಸಮಾಜಕ್ಕಂಟಿದ ಅನಾಚಾರ ದುರ್ವತನೆಗಳನ್ನು ನಿರ್ಮೂಲನೆಗೊಳಿಸುವಲ್ಲಿ ಅವರ ಕಾಳಜಿ ಎದ್ದು ಕಾಣುತ್ತದೆ. ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿ ಕೊನೆಯವರೆಗೂ ವಚನ ಸಾಹಿತ್ಯ ಸಂರಕ್ಷಣೆಗೆ ಶ್ರಮಿಸಿ ನಿಜಶರಣ ಅಂಬಿಗರ ಚೌಡಯ್ಯ ಕ್ರಾಂತಿ ಪುರುಷ, ಕಾಯಕದ ಕಲಿ, ಅನುಭಾವದ ಖಣಿ, ಡಂಭಾಚಾರಿಗಳಿಗೆ ಸಿಂಹ ಸ್ವಪ್ನ ಹೀಗೆ ಇವರ ವಚನಗಳು ಮನುಕುಲಕ್ಕೆ ಆದರ್ಶ. ಇಂತಹ ಪೂಜ್ಯ ಶರಣರಿಗೆ ಭಕ್ತಿಯ ನಮನಗಳು

ಶ್ರೀಮತಿ. ಅಮರವಾಣಿ ಐದನಾಳ,
ಲಿಂಗಸುಗೂರು.
ಮೋಬೈಲ್‌ ಸಂ. 99809 58759

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply