ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ / ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯದಲ್ಲಿ ಮಹಿಳೆ ಎಂದರೆ ಪ್ರಪ್ರಥಮವಾಗಿ ಅಕ್ಕಮಹಾದೇವಿ ನೆನಪಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರಥಮ ಕ್ರಾಂತಿಯ ರೂವಾರಿ. ಶರಣೆಯರ ಅಭಿವ್ಯಕ್ತತೆ. ಅಕ್ಷರ ಸಂಸ್ಕೃತಿಯ ಮೇರುತನವನ್ನು ಬಿಂಬಿಸುವಲ್ಲಿ ಅಕ್ಕನ ಪಾತ್ರ ಹಿರಿದಾಗಿದೆ.

ಈ ವಚನದಲ್ಲಿ ಅರಸಿ ಮುಖ್ಯವಾದರೂ ಶರಣರ ಕಾಲದ ನಿಷ್ಠುರತೆಯನ್ನು ವಿಶಿಷ್ಟ ವೈಚಾರಿಕತೆಯ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಅರಸಿಯಾದವಳು ತನ್ನ ಪ್ರಜೆಗಳ ಒಡನಾಟದಲ್ಲಿ ಸಮಾಜದ ಪರವಾಗಿ ಸೇವೆಯನ್ನು ಮಾಡಬೇಕು. ರಾಣಿಯು ಭೋಗ ಜೀವನಕ್ಕೆ ಬದ್ದಳಾಗಾದೆ ಸಮಾಜಮುಖಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಆದರೆ ಭೋಗ ಲಾಲಸೆಯಲ್ಲಿ ಸಾಮಾನ್ಯ ಜನರ ಸುಖ ದುಃಖಗಳಿಗೆ ಸ್ಪಂದಿಸದೆ ಮಹಾರಾಣಿಯ ಗತ್ತಿನಲ್ಲಿ ಪ್ರಜೆಗಳ ಜವಾಬ್ದಾರಿಯನ್ನು ಹೊರದವಳು ಅರಸಿಯಾಗಲು ಹೇಗೆ ಸಾಧ್ಯ.

ಅರಸಿ ತೊಳಲಿದಡಿಲ್ಲ. ಅಂದರೆ ವ್ಯಂಗ್ಯಾರ್ಥತೆಯ ಎಚ್ಚರದ ಪ್ರತೀಕವಾಗಿದೆ. ಏಕೆಂದರೆ ಅಕ್ಕನು ಕೌಶಿಕನ ಅರಮನೆಯಲ್ಲಿ ರಾಣಿಯಾಗಿ ಸಮಾಜದ ಸೂಕ್ಷ್ಮ ಅವಲೋಕನವನ್ನು ಮಾಡಿದ್ದಳು. ರಾಜ-ಪ್ರಜೆ ಎಂಬುದು ಶಾಶ್ವತವಲ್ಲ. ಬಸವ ಧರ್ಮದ ಆಶಯದಂತೆ ದೀನ ದುರ್ಭಲರಿಗೆ ಪ್ರೀತಿಯನ್ನು ನೀಡಿ ಅಂತಃಕರಣದಿಂದ ಗೌರವಿಸಬೇಕು. ಇದಕ್ಕೆಲ್ಲ ಶಿವನೊಲುಮೆ ಇರಬೇಕು.

ಅರಸಿಯ ನಿರ್ಧಾರಗಳನ್ನು ಆಕ್ಷೇಪಿಸುವ ಜನರಿರುತ್ತಾರೆ. ಪ್ರಜೆಗಳ ಒಡನಾಟದಲ್ಲಿ ಜಗವನ್ನು ಗೆಲ್ಲುವ ಉತ್ಸಾಹವಿರಬೇಕು. ಅಂತಃಕರಣದ ತಾಯಿ ಭಾವದ ಒಡನಾಟದಲ್ಲಿ ಅರಸಿ ಸರಿದೂಗಿಸಬೇಕು. ಅರಸಿ ಎಂದರೆ ವೈಚಾರಿಕ ಪ್ರಜ್ಞೆ ಎಂದರ್ಥ. ಬಯಸಿ ಹೊಕ್ಕಡಿಲ್ಲ. ಆತ್ಮೀಯ ನೆಂಟನ್ನು  ನೇರವಾಗಿ ಹೇಳದೆ ಸಮಾಜದ ಅನ್ವೇಷಗಳಾಗಿ. ಪ್ರತಿಕ್ರಿಯೆ ನೀಡುತ್ತಾಳೆ.

ಅಹಂಕಾರ ರಹಿತ ಹರಕೆ ದೈವತ್ವದ ಪ್ರತೀಕ. ಪ್ರಜೆಗಳನ್ನು ಹರಸುವ ಅರಸಿಯ ಹೃನ್ಮನದಲ್ಲಿ ಸ್ಥಳವಿರಬೇಕು. “ಹರಸಿ ಬಳಲಿದಡಿಲ್ಲ” ಹರಕೆ ನಿರ್ಮಲ ಮನಸ್ಸಿನ ಹಿರಿತನದ ಸಂಕೇತವಾಗಿದೆ. ಅರಸಿ ಪ್ರತಿಷ್ಠೆ ಮೆರೆಸುವ ಸಾಧನವಾಗಬಾರದು. ಈಕೆಯಲ್ಲಿ ತಾಯಿ ಹಾಗು ಗುರು ಭಾವವಿದ್ದಾಗ ಮಾತ್ರ ತನ್ನ ಸ್ಥಾನದ ಸಾರ್ಥಕತೆ ತೋರಿಸಲು ಸಾಧ್ಯವಾಗುತ್ತದೆ. ಹರಸಿಕೊಳ್ಳುವ ವ್ಯಕ್ತಿ ಕುಂದು ಕೊರತೆಗಳನ್ನು ಸಂಕಷ್ಟಗಳನ್ನು ಹೋಗಲಾಡಿಸಬೇಕು. ಹೀಗಾಗಿ ಪ್ರಜೆಗಳಿಗೆ ಹರಕೆ ನೀಡುವ ವ್ಯಕ್ತಿ ಹಿರಿಯನಾಗಿ ಸಮಸ್ತ ಸಮಾಜದ ಅಭ್ಯುದಯವನ್ನು ತನ್ನ ಒಡಲಲ್ಲಿ ಹೊತ್ತವನಾಗಿ ಅಧ್ಯಾತ್ಮವಾಗಿರಬೇಕು

ನೈಜ ನಡತೆ ಮರೆಯಾದರೆ ಬೂಟಾಟಿಕೆಯ ತಪವಾಗುತ್ತದೆ. ಸಮಾಜದಲ್ಲಿ ಇಂತಹ ಅರಸಿಯರು ಅಂದು ಇದ್ದರು. ಇಂಥವರು ಒಳಗೊಂದು ಹೊರಗೊಂದು ಭಾವ ಪ್ರದರ್ಶಿಸುವ ಭೂಟಾಟಿಕೆಯ ನಡತೆಯವರು. ಆದರೆ ಮನುಷ್ಯತ್ವದಿಂದ ನಾವು ಶ್ರೀಮಂತರಿರಬಹುದು. ಸಾಮಾಜಿಕವಾಗಿ ದುರ್ಭಲರು. ಆತ್ಮೀಯ ಪ್ರೀತಿ ವಿಶ್ವಾಸಗಳು ಮಹಾ ಅರಸಿಯಿಂದ ಪ್ರಜೆಗಳು ಬಯಸುವರು. ಹೀಗಾಗಿ ಎನಗೆ ಬಸವಣ್ಣನೇ ದೇವರು. ಸಂಗನ ಬಸವಣ್ಣನ ಶರಣರ  ಚೇತನಗಳಿಗೆ ವಂದಿಸಿದೆ.

ತಾತ್ವಿಕ ಹರಿಕಾರ ಸಂಗನ ಬಸವಣ್ಣನ ಶ್ರೀ ಪಾದಗಳಿಂದ ಚೆನ್ನಮಲ್ಲಿಕಾರ್ಜುನ ಎನಗೆ ಒಲಿದ. ಶ್ರೀ ಪಾದ ಎನ್ನುವುದು ಬಸವಣ್ಣನವರ ಬಗ್ಗೆ ಉಂಟಾಗುವ ಆತ್ಮ ನಿವೇದನೆ ಅಕ್ಕನದಾಗಿದೆ.

Loading

Leave a Reply