ವಚನಸಾಹಿತ್ಯ ಮಂದಾರ ಫೌಂಡೇಶನ್‌ “ಗ್ರಂಥಾಲಯ” ಕ್ಕೆ ಬಂದ ಪುಸ್ತಕಗಳ ದಾಸೋಹ.

“ವಚನಸಾಹಿತ್ಯ ಮಂದಾರ ಫೌಂಡೇಶನ್” ದ ಗ್ರಂಥಾಲಯ ಸ್ಥಾಪನೆ ಪ್ರಯುಕ್ತ ನಾಡಿನ ಹಲವಾರು ವಚನ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ತಮ್ಮಲ್ಲಿರುವ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಅತ್ಯಮೂಲ್ಯ ಗ್ರಂಥಗಳನ್ನು ದಾಸೋಹ ರೂಪದಲ್ಲಿ ಕಳುಹಿಸಿದ್ದಾರೆ. ಪ್ರಪ್ರಥಮವಾಗಿ ತಮ್ಮಲ್ಲಿರುವ ಅತ್ಯಮೂಲ್ಯ ಮತ್ತು ಅಪರೂಪದ ಪುಸ್ತಕಗಳನ್ನು ದಾಸೋಹ ಮಾಡಿದ ಧಾರವಾಡದ ಶ್ರೀ ನಟರಾಜ ಮೂರಶಿಳ್ಳಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮೂರಶಿಳ್ಳಿಯವರಿಗೆ ಕೃತಜ್ಞತೆಗಳು.

ಇಂದಿನವರೆಗೆ ಸುಮಾರು 2,000 ಪುಸ್ತಕಗಳು ಬಂದಿವೆ. ಈಗ ವಚನಸಾಹಿತ್ಯ ಮಂದಾರ ಫೌಂಡೇಶನ್ ಗ್ರಂಥಾಲಯದಲ್ಲಿ 5,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಆಗಿದೆ. ಈ ವರ್ಷ ಒಂದು ಲಕ್ಷ ಪುಸ್ತಕಗಳ ಸಂಗ್ರಹಣೆಯ ಗುರಿ ಇದೆ. ಬಸವಾದಿ ಶರಣರ ಕೃಪೆಯಿಂದ ಈ ಗುರಿ ದೊಡ್ಡದು ಅಂತ ನಮಗೆ ಅನಿಸಿಲ್ಲಾ.

ಗ್ರಂಥ ದಾಸೋಹಕ್ಕೆ ಪುಸ್ತಕಗಳನ್ನು ಕಳಿಸಿದ ನೂರಾರು ದಾಸೋಹಿಗಳಿಗೆ ಈ ಮೂಲಕ ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಎಲ್ಲ ಸದಸ್ಯರುಗಳ ವತಿಯಿಂದ ಕೃತಜ್ಞತೆಗಳು ಹಾಗೂ ಧನ್ಯವಾದಗಳನ್ನು ಸಮರ್ಪಿಸುತ್ತೇವೆ.

ವಚನಸಾಹಿತ್ಯ ಮಂದಾರ ಫೌಂಡೇಶನ್‌ ಪದಾಧಿಕಾರಿಗಳು.

Loading

Leave a Reply