ಅನುಭಾವದ ಆಡುಂಬೋಲ ಗೂಗಲ್ಲು / ಡಾ. ಶಶಿಕಾಂತ ಕಾಡ್ಲೂರ, ಲಿಂಗಸೂಗೂರ.
ಈ ಜಗತ್ತು ಪ್ರಾಕೃತಿಕವಾಗಿ ಅಂದರೆ ಭೌಗೋಳಿಕವಾಗಿ ಮತ್ತು ಬುದ್ಧಿವಂತ ಪ್ರಾಣಿ ಎನಿಸಿದ ಮನುಷ್ಯನ ವಿಶೇಷ ಅರಿವಿನ ಕಾರಣವಾಗಿ ಬಹಳಷ್ಟು ಕುತೂಹಲಕಾರಿಯಾದ ಮತ್ತು ವಿಶೇಷವಾದ ಸಂಗತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಹಾಗಾಗಿ ಇದು ನಮ್ಮಂಥವರನ್ನು ನಿರಂತರವಾಗಿ, ನಾನಾ ಕಾರಣವಾಗಿ ತನ್ನೆಡೆಗೆ ಸೆಳೆಯುತ್ತ ಹೊಸಹೊಸ ಸಂಗತಿಗಳನ್ನು ಬಿಚ್ಚಿಕೊಳ್ಳುತ್ತಾ ಲೋಕದ ಬದುಕಿಗೆ ವಿಶೇಷತೆಯನ್ನು, ಹೊಸತನವನ್ನು ಹಾಗೂ ಚೈತನ್ಯವನ್ನು ತುಂಬುತ್ತಲೇ ಇರುತ್ತದೆ. ಹೀಗಾಗಿ ನಾವು ನಿಂತುಕೊಂಡ ಮತ್ತು ನಮ್ಮ ಸುತ್ತಲಿನ ನೆಲವನ್ನು ಆಗಾಗ ಬಗೆ ಬಗೆಯ ದೃಷ್ಟಿಯಿಂದ ಗಮನಿಸುತ್ತಲೇ ಇರಬೇಕೆನಿಸುತ್ತದೆ. ಈ ಕಾರಣಕ್ಕಾಗಿಯೇ ನನಗೆ ನಮ್ಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಿಶೇಷ ನೆಲೆಯಾದ…