ಅಲ್ಲಮ ಅನುಭಾವದ ಅನರ್ಘ್ಯ ರತ್ನ / ಡಾ. ಸಿದ್ದು ಯಾಪಲಪರವಿ, ಗದಗ.
ಜಾತಿ ಜಾತಿ ಮಧ್ಯೆ ಸಂಘರ್ಷ, ಕಂದಾಚಾರ, ಮೂಢನಂಬಿಕೆ ಅಟ್ಟಹಾಸ, ಅಸಮಾನತೆಯ ತಾಂಡವ ನೃತ್ಯ ಮೇಲು ಕೀಳೆಂಬ ಜಂಜಾಟದ ಮಧ್ಯೆಯ 12 ನೇಯ ಶತಮಾನ ವೈಚಾರಿಕ ವೈಜ್ಞಾನಿಕ ತಳಹದಿ ಹಾಸು ಹೊಕ್ಕಾಗಿಸಿ ಅನುಭವ ಮಂಟಪವೆಂಬ ಶರಣರ ಅನುಭವ ಚಿಂತನ ಮಂಥನಕ್ಕೆ ಗ್ರಾಸ ಒದಗಿಸಿದ್ದು, ಅದರ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅಲ್ಲಮ ಪ್ರಭು ದೇವರು ಅನುಭಾವದ ಅನರ್ಘ್ಯರತ್ನ. ಇಂದಿನ ಪಾರ್ಲಿಮೆಂಟ್ ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸಿದರೆ, ಅಂದಿನ ಅನುಭವ ಮಂಟಪ ಜೀವ ಸಂಕುಲದ ಸರ್ವಾಂಗೀಣ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಪೂರೈಸಿ ಇಂದು ನಮ್ಮ ಗಮನಕ್ಕೂ ಬಾರದ ಸಾವಿರಾರು ಸಂಕಷ್ಟದ ಸಂಕೋಲೆಗಳಿಗೆ…