ಡಾ. ವಿಜಯಲಕ್ಷ್ಮಿ ದೇಶಮಾನೆ ತಾಯಿಯ ಸೇವಾ ಭಾವಕ್ಕೆ ಒಲಿದ ಪದ್ಮಶ್ರೀ ಪ್ರಶಸ್ತಿ | ಶ್ರೀಮತಿ. ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ.
ಒಂದು ಖಾಸಗಿ ಟೀ. ವಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ “ತರಕಾರಿ ಮಾರೋದು ಇರಲಿ ಅಥವಾ ಸರ್ಜರಿ ಮಾಡೋದೇ ಇರಲಿ ಶ್ರದ್ಧೆ ಮತ್ತು ಕೆಲಸದ ಕುರಿತು ನಮಗಿರುವ ಪ್ರೀತಿ ಎಲ್ಲ ಗೌರವ ಹಾಗೂ ಖ್ಯಾತಿಯನ್ನು ತಂದು ಕೊಡುತ್ತದೆ” ಎಂದು ಹೇಳಿದವರು 2025 ರ ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು. ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣು ಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ…