ಪ್ರಕೃತಿಯೊಂದಿಗೆ ಲೀನವಾದ ಶರಣರು | ಡಾ. ಕಾವ್ಯಶ್ರೀ ಮಹಾಗಾಂವಕರ, ಕಲಬುರಗಿ

ಆಧುನಿಕ ಜೀವನ ಶೈಲಿಯನ್ನು ಮೆಲುಕು ಹಾಕುತ್ತ, ಅಂತರಂಗಕ್ಕೆ ಪ್ರಶ್ನೆಗಳ ರವಾನಿಸುತ್ತ ಸಾಗಿದರೆ, ಮನುಷ್ಯ ಮತ್ತು ಪ್ರಕೃತಿ ಎರಡು ಭಿನ್ನ ಆಯಾಮಗಳಾಗಿ ಕಾಣುತ್ತವೆ. ಇದು ಅವಾಸ್ತವ ಎನಿಸಬಹುದು, ಆದರೂ ಪ್ರಸ್ತುತ ಬದುಕಿನ ವಾಸ್ತವ ನೆಲೆಯಾಗಿದೆ. ವಿಜ್ಞಾನ, ತಂತ್ರಜ್ಞಾನಗಳಿಂದ ಅತ್ಯಂತ ಮುಂದುವರಿದ ಮಾನವನ ಅಭಿವೃದ್ಧಿಗೊಂಡ ಜೀವನದ ವ್ಯಂಗ್ಯವೂ ಹೌದು. ಪ್ರಕೃತಿ ಒಳಗೊಂಡ ಅನೇಕ ತತ್ವಗಳಿಂದಲೇ ಮನುಷ್ಯನ ನಿರ್ಮಾಣವಾಗಿರುವ ಸತ್ಯವು ಮರೆವಿನಂಚಿಗೆ ಹೋದ ಭ್ರಮೆಗೊಳಗಾಗಿದೆ. ಆ ಮರೆವು ಭವಿಷ್ಯದಲ್ಲಿ ಇಡೀ ಮನುಕುಲವನ್ನೇ ಅಳಿವಿನಂಚಿಗೆ ತಳ್ಳುವ ಅಪಾಯದಲ್ಲಿದೆ. ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ತುರ್ತು ಇಂದಿನದಾಗಿದೆ. ಪ್ರಸ್ತುತದಲ್ಲಿ ಬಳಸುತ್ತಿರುವ ವೈಜ್ಞಾನಿಕ, ತಾಂತ್ರಿಕ…

0 Comments

ಶರಣ ಶರಣೆಯರ ವಚನಗಳಲ್ಲಿ ಪದ ಬಳಕೆಯ ವೈಶಿಷ್ಟ್ಯ | ಪ್ರಕಾಶ ರಾಜಗೋಳಿ, ಬೆಂಗಳೂರು.

12 ನೆಯ ಶತಮಾನದ ಕಾಲಘಟ್ಟದಲ್ಲಿನ ಶರಣ ಶರಣೆಯರು ಒಂದೆಡೆ ಸೇರಿ ವಿಶ್ವಮಾನ್ಯವಾದ ವಚನಗಳನ್ನು ಮನುಕುಲಕ್ಕೆ ನೀಡಿದ್ದು ಅದ್ಭುತ ಸಾಧನೆಯೇ ಸರಿ. ವಿಶ್ವಗುರು ಬಸವಣ್ಣನವರ Out of the box thinking ವಿಚಾರಧಾರೆಯ ಫಲಶ್ರುತಿಯಾಗಿ ವಿಶಿಷ್ಟ ರೀತಿಯ ವಚನ ಕ್ರಾಂತಿ ನಡೆಯಿತು. ಆಗಿನ ಕಾಲದ ಸಮಾಜದ ಮೇಲ್ವರ್ಗದವರಿಗಷ್ಟೇ ಮೀಸಲಾಗಿದ್ದ ದೇವಸ್ಥಾನದ ಪ್ರವೇಶವನ್ನು ಅವರು ವಿರೋಧಿಸಿ ಪ್ರತಿಭಟನೆ, ಸತ್ಯಾಗ್ರಹ, ಬಲವಂತ ಮಾಡದೆ ದೇವರನ್ನೇ ಜನರ ಹತ್ತಿರ ಕೊಂಡೊಯ್ದರು. ಇಷ್ಟಲಿಂಗವನ್ನು ದಯಪಾಲಿಸಿ ದೇಹವನ್ನೇ ದೇಗುಲವಾಗಿಸಿದರು.  ಅನುಭವ ಮಂಟಪದಂತಹ ಉದಾತ್ತ ಪರಿಕಲ್ಪನೆಯಿಂದ ಸಮಾಜದ ಎಲ್ಲ ವರ್ಗದ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿದರು. ಇವರ…

0 Comments

ಸಾಮಾಜಿಕ ವಿಘಟನೆಗೆ ಶರಣರ ಪರಿಹಾರ ಸೂತ್ರ | ಡಾ. ಪಂಚಾಕ್ಷರಿ ವೀ ಹಳೇಬೀಡು, ಬೆಂಗಳೂರು.

ಈ ಅಖಂಡ ವಿಶ್ವದೊಳಗಿರುವ ನಮ್ಮ ಭೂಮಿ ಈ ಹೊತ್ತಿಗೆ ಸುಮಾರು 810 ಕೋಟಿ ಮಾನವ ಜೀವಗಳಿಗೆ ಆಶ್ರಯ ಕೊಟ್ಟಿದೆ. ಎಲ್ಲ ಮಾನವರ, ಪ್ರಾಣಿಗಳ, ಸಸ್ಯ, ಚರ ಮತ್ತು ಅಚರಗಳಲ್ಲಿರುವ ಮೂಲ ಚೈತನ್ಯ ಒಂದೇ. ಆ ಒಂದೇ ಚೈತನ್ಯ ಹಲವು ಬಗೆಯಲ್ಲಿ ವಿಕಾಸ ಹೊಂದಿ ಅನಂತತೆಯ ಸ್ವರೂಪ ಪಡೆದಿದೆ. ಈ ಅನಂತತೆಯಲ್ಲಿ ಮಾನವ ಜೀವಿ ಮಾತ್ರ ಬಹು ವಿಭಿನ್ನ. ಸೃಷ್ಟಿಯಲ್ಲಿ ಮಾನವ ಅದೆಷ್ಟು ಬುದ್ಧಿವಂತನೋ ಅಷ್ಟೇ ಮೂರ್ಖ ಕೂಡ! ಮಾನವ ಬುದ್ಧಿವಂತ ಮತ್ತು ಮೂರ್ಖನಾಗಲು ಕಾರಣ ಆತನ ವಿಪರೀತ ಕಲ್ಪನಾಶಕ್ತಿ. ತನ್ನ ಕಲ್ಪನಾ ಶಕ್ತಿಯಿಂದ ಇಲ್ಲದುದನ್ನು ಇದೆ ಎಂದೂ,…

0 Comments

ಉರಿ ಚಮ್ಮಾಳಿಗೆ | ಡಾ. ವಡ್ಡಗೆರೆ ನಾಗರಾಜ, ಬೆಂಗಳೂರು.

ಕರಸ್ಥಲ ಲಿಂಗಸಹಿತ ಬಸವಣ್ಣನವರ ಈ ಶಿಲ್ಪದಲ್ಲಿರುವ ಚಮ್ಮಾಳಿಗೆ, ಗಲ್ಲೆಬಾನಿ, ತಮಟೆ, ಉಳಿ, ಕಬ್ಬಿಣಗೊಡತಿ, ಚಿಂಪರಿಕೆ, ರಂಪಿಗೆ ಇವೆಲ್ಲವೂ ಚರ್ಮಕಾರರ ಕಾಯಕದ ಸಾಮಾನ್ಯ ಸಲಕರಣೆಗಳಾಗಿ ಉಳಿಯದೆ ಬಸವಣ್ಣನವರು ತಲುಪಿದ ಸಾಮಾಜಿಕ- ಸಾಂಸ್ಕೃತಿಕ ನೆಲೆ ಹಾಗೂ ಅವರ ಅನುಭಾವದ ಹುಡುಕಾಟದ ಅಸ್ಮಿತೆಗಳಾಗಿ ಶಿಲ್ಪಿಯ ಕಲೆಯಲ್ಲಿ ಒಡಮೂಡಿವೆ. ಸಮಗಾರರು ಬಳಸುವ ಕೆಲವು ಉಪಕರಣಗಳ ಸಂಕ್ಷಿಪ್ತ ಚಿತ್ರಣ: ಗಲ್ಲೆಬಾನಿ: ಸಾಂಪ್ರದಾಯಿಕವಾಗಿ ಇದು ಚಮ್ಮಾರರು (ಚರ್ಮದ ಕೆಲಸ ಮಾಡುವವರು) ಹದ ಮಾಡಲು ಅಥವಾ ಚರ್ಮವನ್ನು ನೆನೆಸಿಡಲು ನೆಲದಲ್ಲಿ ಮಾಡಿಕೊಳ್ಳುವ ನೀರಿನ ತೊಟ್ಟಿ ಅಥವಾ ಕಸುಬಿಗೆ ಸಂಬಂಧಿಸಿದ ಪರಿಭಾಷೆಯಾಗಿದೆ. ನೆಲದಲ್ಲಿ ಹೂತು ಜಗಲಿ ಕಟ್ಟಿ ಬಳಸುವ,…

0 Comments

ವಚನ – ಸಾಂಸ್ಕೃತಿಕ ತಲ್ಲಣಗಳು | ಡಾ. ನಟರಾಜ ಬೂದಾಳು, ತುಮಕೂರು.

ಲೇಖನ ಕೃಪೆ: https://bayalu.co.in/ವಚನ-ಸಾಂಸ್ಕೃತಿಕ-ತಲ್ಲಣಗಳು/ ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು…

0 Comments

ಬಸವಸಿದ್ಧಾಂತ ಮತ್ತು ಆಧುನಿಕ ರಿ-ಎಂಜಿನಿಯರಿಂಗ್ ತತ್ವಗಳು: ಒಂದು ತೌಲನಿಕ ವಿಶ್ಲೇಷಣೆ | ಪ್ರೊ. ಎಸ್.‌ ಜಿ. ಶಿವಶಂಕರ, ಬೆಂಗಳೂರು.

ಪೀಠಿಕೆ: ಬದಲಾವಣೆಯ ಅನಿವಾರ್ಯತೆ ಮತ್ತು ಎರಡು ಯುಗಗಳುಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಮಹಾತ್ಮ ಬಸವೇಶ್ವರರ ಸಾಮಾಜೋಧಾರ್ಮಿಕ ಕ್ರಾಂತಿಕಾರಕ ತತ್ವಗಳು ಮತ್ತು ಆಧುನಿಕ ಜಗತ್ತಿನ ನಿರ್ವಹಣಾ ತಜ್ಞರಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರ 'ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್' (BPR) ಸಿದ್ಧಾಂತವನ್ನು ತೌಲನಿಕವಾಗಿ ವಿಶ್ಲೇಷಿಸುವ ಲೇಖನ. ಲೇಖನ:ವ್ಯವಸ್ಥೆಯೊಂದು ಜಡ್ಡುಗಟ್ಟಿದಾಗ, ಆಚರಣೆಗಳು ಕರಾಳ ಎನ್ನಿಸಿ, ಸಮಾಜದ ಕೆಳವರ್ಗದ ಜನರ ಶೋಷಣೆ ತಾರಕಕ್ಕೇರಿದಾಗ ಅವುಗಳನ್ನು ಮರುರೂಪಿಸುವ ಕ್ರಾಂತಿಕಾರಿ ನಾಯಕರು ಉದಯಿಸುತ್ತಾರೆ. ಇಂತಹ ಮಹತ್ತರ ಕ್ರಾಂತಿಕಾರಕ ಬದಲಾವಣೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ತರಗಳಲ್ಲಿ ತಂದವರು ಹನ್ನೆರಡನೇ ಶತಮಾನದ ಕ್ರಾಂತಿಕಾರಿ…

0 Comments

ವಚನಸಾಹಿತ್ಯದಲ್ಲಿ ಕೃಷಿ ವಿಜ್ಞಾನ | ಡಾ. ಮೌನೇಶ್ವರಿ ಕಮ್ಮಾರ, ಧಾರವಾಡ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಚನಗಳು ಕೇವಲ ಭಕ್ತಿಯ ಕಾವ್ಯಗಳಲ್ಲ; ಅವು ಸಮಾಜದ ಬದುಕು, ಶ್ರಮ, ಸಮಾನತೆ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಪ್ರತಿಬಿಂಬಿಸುವ ಜೀವಂತ ಸಾಹಿತ್ಯವಾಗಿವೆ. ಈ ಸಾಹಿತ್ಯದಲ್ಲಿ ಕೃಷಿಗೆ ವಿಶೇಷ ಮಹತ್ವ ನೀಡಲಾಗಿದೆ, ಏಕೆಂದರೆ ಕೃಷಿ ಮಾನವನ ಜೀವನಾಧಾರ ಮತ್ತು ಶ್ರಮದ ಪ್ರತೀಕವೆಂದು ಶರಣರು ಕಂಡಿದ್ದರು. ಶರಣರು “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಪ್ರತಿಯೊಂದು ಶ್ರಮವನ್ನೂ ಪವಿತ್ರವೆಂದು ಸಾರಿದರು. ರೈತನ ಬೆವರು, ಹೊಲದ ಮಣ್ಣು, ಬಿತ್ತನೆಯ ಪರಿಶ್ರಮ ಮತ್ತು ಬೆಳೆಯ ಸಂತೋಷವನ್ನು…

0 Comments

ಡಾ. ಎಂ. ಎಂ. ಕಲಬುರ್ಗಿಯವರನ್ನೇ ಹೀಯಾಳಿಸುತ್ತಿರುವ ವಚನ ಸಾಹಿತ್ಯದ ಪ್ರಕಾಂಡ ಪಂಡಿತ ಸೋಮೇಶ ಕುಲಕರ್ಣಿ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

https://youtu.be/PqBEOo1m7RA(ಸೋಮೇಶ ಕುಲಕರ್ಣಿ) ತನ್ನನ್ನು ತಾನು ವಚನ ಸಾಹಿತ್ಯದ ಜಗತ್ಪ್ರಸಿದ್ಧ ವಿದ್ವಾಂಸನೆಂದು TV Camera ಎದುರು ಕುಳಿತು ಬಿಂಬಿಸಿಕೊಳ್ಳುತ್ತಿರುವ ಸೋಮೇಶ ಕುಲರ್ಣಿ ಅವರು ಮಾತನಾಡಿರುವ YouTube Channel ನಲ್ಲಿ ಹರಿದಾಡುತ್ತಿರುವ ಸಂದರ್ಶನದ Video ವನ್ನು ಒಂದು ಸಾರಿ ಗಮನಿಸಿ ಇದರಲ್ಲಿ ಪ್ರತಿಪಾದಿತವಾಗಿರುವ ಸುಳ್ಳುಗಳ ಸರಮಾಲೆಗಳಿಗೆ ಸೋಮೇಶ ಕುಲಕರ್ಣಿ ಅವರ ಭಾಷೆಯಲ್ಲಿಯೇ ಉತ್ತರವನ್ನು ಕೊಡುವ ಸಣ್ಣ ಪ್ರಯತ್ನ. ಹಾಗೆಂದ ಮಾತ್ರಕ್ಕೆ ನಾನೇನು ಜಗತ್ಪ್ರಸಿದ್ಧ ವಚನ ಸಾಹಿತ್ಯ ವಿದ್ವಾಂಸನೂ ಅಲ್ಲಾ, ನೋಬೆಲ್‌ ಪ್ರಶಸ್ತಿ ಪಡೆದ ಸೃಜನಶೀಲ ಸಾಹಿತಿಯೂ ಅಲ್ಲ. ನನ್ನ ತಂದೆ ಲಿಂ. ಶ್ರೀ. ಈಶ್ವರ ಕಮ್ಮಾರ ಅವರು ನನಗೆ ಬಾಲ್ಯದಿಂದಲೂ…

0 Comments

ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯಎಂತೆಂದಡೆ: ವಿಸ್ತರಿಸಿ ಪೇಳುವೆನು;ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳುಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರುಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳುಶಿವಾಚಾರವೇದ್ಯರು ಶಿವಾಗಮ ಸಾಧ್ಯರುಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳುಹೊಗಬಾರದು ಕಲ್ಯಾಣವ.ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆಮುನ್ನೂರರವತ್ತು ಬಾಗಿಲವಾಡ.ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆನಾನೂರ…

0 Comments

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments