ಭಾಗ-01: ಮುಖಪುಟ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ
ಆಸನ ಬಂಧನರು ಸುಮ್ಮನಿರರು.ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?ಸತ್ಯವನೆ ಮರೆದು, ಅಸತ್ಯವನೆ ಹಿಡಿದು,ಸತ್ತುಹೋದರು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-224) ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಹಣೆಯಲ್ಲಿ ವಿಭೂತಿ ಬಿಟ್ಟು ಕುಂಕುಮ ಶೋಭಿತರು So Called ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ವಿರುದ್ಧವಾಗಿ ಬಸವ ದ್ರೋಹಿ ಕೆಲಸ ಮಾಡುತ್ತಿರುವುದು ಜನ ಜನಿತವಾದ ವಿಷಯ. ಈ ವಿಷಯ ಯಾಕೆ ಬಂತು ಅಂದರೆ ಕಳೆದೆರಡು ತಿಂಗಳಿಂದ “ವಚನ ದರ್ಶನ” ಎನ್ನುವ ಪುಸ್ತಕವನ್ನು ನೂರಾರು ಕಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಡುಗಡೆ…