ಪಾರ್ಲಿಮೆಂಟ್, ಮ್ಯಾಗ್ನಾ ಕಾರ್ಟಾ ಮತ್ತು ಬಸವೇಶ್ವರ/ಶ್ರೀ.ವಿಜಯಕುಮಾರ ಕಮ್ಮಾರ
ಮ್ಯಾಗ್ನಾ ಕಾರ್ಟಾದ ಉಳಿದಿರುವ ನಾಲ್ಕು ದಾಖಲೆಗಳಲ್ಲಿ ಒಂದರ ಚಿತ್ರ.(ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್ ಭವನ ಒಂದು ಐತಿಹಾಸಿಕ ಕಟ್ಟಡ ಮತ್ತು ಈ ದೇಶದ ಶಕ್ತಿಕೇಂದ್ರ. ಪ್ರಸಿದ್ಧ ಬ್ರಿಟೀಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟೆಯನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರ ವಿನ್ಯಾಸದಲ್ಲಿ ರೂಪುಗೊಂಡ ಕಟ್ಟಡ. ದಿನಾಂಕ 12.02.1921 ರಲ್ಲಿ ಶಂಕುಸ್ಥಾಪನೆಯಾಗಿ ಇದರ ನಿರ್ಮಾಣಕ್ಕೆ ಸುಮಾರು ಆರು ವರ್ಷಗಳ ಕಾಲ ತೆಗೆದುಕೊಂಡಿತು. ಅಂದಿನ ಲೆಕ್ಕದಲ್ಲಿ 83 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಗವರ್ನರ್ ಜನರಲ್ ಆಗಿದ್ದಂಥ ಲಾರ್ಡ್ ಐರ್ವಿನ್ ದಿನಾಂಕ 18.01.1927…