ವಚನ ಸಾಹಿತ್ಯದಲ್ಲಿ ಆರೋಗ್ಯ / ಡಾ ಸುರೇಶ ಸಗರದ, ರಾಯಚೂರು.

ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ನಾವು ಆರೋಗ್ಯದ ಕುರಿತು ಚಿಂತಿಸುತ್ತೇವೆ. ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಂತೆ ಮತ್ತೇ ಆ ಕುರಿತು ಚಿಂತಿಸುವುದಿಲ್ಲ. ಇತ್ತೀಚಿನ ಜೀವನಶೈಲಿ, ಅನೇಕ ಅಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದು ಮಧ್ಯ ವಯಸ್ಸಿನವರಲ್ಲಿ ಮತ್ತು ಯುವಕರಲ್ಲಿಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಈ ಆತಂಕಕಾರಿ ಬೆಳವಣಿಗೆಯನ್ನು ತಡೆಗಟ್ಟಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಜೊತೆ ಜಾಗೃತಿ ಮೂಡಿಸಲು,…

1 Comment

ಚುಟುಕು ಸಾಹಿತ್ಯ, ಲ್ಯಾಕೋನಿಕ್‌ ಮಾಧ್ಯಮ ಮತ್ತು ವಚನಗಳು

ಪ್ರಥಮ ಶೂನ್ಯ ಸಿಂಹಾಸನ ಪೀಠಾಧಿಪತಿ ಅಲ್ಲಮ ಪ್ರಭುದೇವರು ಕನ್ನಡ ಸಾಹಿತ್ಯಕ್ಕೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಾಗಾಗಿ ಇದು ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಂಸ್ಕೃತಿ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಎನ್ನುವ ನದಿಯು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಜೊತೆಗೆ ನವೋದಯ ಕನ್ನಡ ಎನ್ನುವ ವಿವಿಧ ಉಪನದಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾ ಹರಿಯುತ್ತಾ ವಿಶಾಲವಾಗಿ ಸಾಗುತ್ತಾ ಸಮುದ್ರವನ್ನು ಸೇರುತ್ತದೆ. ಇತ್ತೀಚಿನ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹನಿಗವನಗಳು, ಹಾಯ್ಕುಗಳು, ರುಬಾಯಿ, ಮುಕ್ತಕಗಳು, ಇನಿಗವನಗಳು, ಶಾಯರಿಗಳು, ಟಂಕಾಗಳು ಮತ್ತಿತರೇ ಸಾಹಿತ್ಯ ಪ್ರಾಕಾರಗಳ ಜೊತೆಗೆ ಚುಟುಕು…

0 Comments