ಪರ್ಯಾಯ ವ್ಯವಸ್ಥೆಯ ಪ್ರತಿಸೂರ್ಯ/ಡಾ. ಸುಜಾತಾ ಅಕ್ಕಿ,ಮೈಸೂರು.
ಜಾನಪದ ಸಾಹಿತ್ಯವನ್ನು ಸೃಜನಶೀಲ ಮನಸ್ಸುಗಳು ಮೌಖಿಕ ಪರಂಪರೆಯನ್ನು ಸೃಷ್ಟಿಸಿ ಆ ಮೂಲಕ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯವನ್ನು ಹುಲುಸಾಗಿ ಬೆಳೆಸಿವೆ. ಜನಪದ ಸಾಹಿತ್ಯ ಒಬ್ಬ ಸೃಜನಶೀಲರಲ್ಲಿ ಹುಟ್ಟಿ ಅದು ಗುಂಪಿನಲ್ಲಿ ಬೆಳೆದು ಸಾಮುದಾಯಿಕ ಮನ್ನಣೆಯನ್ನು ಪಡೆದಿದೆ. ಆಯಾಯ ಕಾಲಘಟ್ಟದಲ್ಲಿ ಸೃಷ್ಟಿಯಾಗಿ ಮೌಖಿಕವಾಗಿ ಪರಂಪರೆಯಲ್ಲಿ ಹರಿದು ಬಂದ ಜ್ಞಾನಧಾರೆ ಜಾನಪದ ಸಾಹಿತ್ಯ. ಆ ಕಾಲದಲ್ಲಿ ಏನೇ ಘಟನೆ ಸಂಭವಿಸಿದರೂ ಅದನ್ನು ಮೌಖಿಕ ದಾಖಲೆ ಮಾಡಿದವರು ನಮ್ಮ ಜನಪದರು. ಏಕೆಂದರೆ ಸೃಜನಶೀಲ ಮನಸ್ಸು ಯಾವಾಗಲೂ ಹುಡುಕಾಟದಲ್ಲಿರುತ್ತದೆ. ಆ ಶೋಧನಾ ಆಸಕ್ತಿ ಇಂಥ ಜನಪದ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ಅಂದರೆ ಜನಪದರು…





Total views : 67057