ಮೂಢತ್ವದ ತಲೆಯನ್ನು ವಚನದ ಕತ್ತಿಯಿಂದ ಸ್ವಚ್ಛ ಮಾಡಿದ ಶರಣ ಹಡಪದ ಅಪ್ಪಣ್ಣ | ಶ್ರೀ. ಶರೀಫ ಚಿಗಳ್ಳಿ, ಹುಬ್ಬಳ್ಳಿ.

ಕ್ರಾಂತಿಕಾರಿ ಶರಣ ಹಡಪದ ಅಪ್ರಪಣ್ಣನವರ ಒಂದು ನೆನಪು ... ... ವಚನ ಚಳುವಳಿಯ ಹರಿಕಾರ, ಸಾಮಾಜಿಕ ಕ್ರಾಂತಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣನವರು ಅತ್ಯುತ್ತಮ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಖ್ಯಾತವಾಗಿದ್ದ ಅನುಭವ ಮಂಟಪದಲ್ಲಿ ಇವರು ಸಕ್ರೀಯ ಸದಸ್ಯರಾಗಿದ್ದರು. ಇವರು ಬಸವಣ್ಣನವರ ಬಾಲ್ಯದ ಒಡನಾಡಿಗಳಲ್ಲಿ ಒಬ್ಬರಾಗಿದ್ದರು. ಅಂದು ಹಡಪದ ಅವರ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾಲದಲ್ಲಿ ಮೂಡ ನಂಬಿಕೆ ಹೊಡೆದೋಡಿಸಲು ಸ್ವತಃ ಬಸವಣ್ಣನವರು ಮಂತ್ರಿಯಾಗಿದ್ದಾಗ ನನ್ನನ್ನು ನೋಡಲು ಬರುವವರು ಮೊದಲು ಹಡಪದ ಅಪ್ಪಣ್ಣನವರ ಮುಖ ನೋಡಿ ಬನ್ನಿ…

0 Comments

ಮರ್ತ್ಯಕ್ಕೆ ಗುರುವಾಗಿ ಬಂದ ಬಸವಣ್ಣನವರು | ಡಾ. ಸತೀಶ ಕೆ. ಇಟಗಿ,ಮುದ್ದೇಬಿಹಾಳ.

ನಮಃ ಶಿವಾಯ ಲಿಂಗವು,ಓಂ ನಮಃ ಶಿವಾಯ ಬಸವಣ್ಣನು.ನೀನೆ ಎನ್ನ ಮನಸ್ಥಲದಲ್ಲಿ ನಿಂದುಬೆಳಗಿ ತೋರಿದೆಯಾಗಿ,ಇದು ಕಾರಣ, ಕೂಡಲಚೆನ್ನಸಂಗಯ್ಯಆದಿಯಾಧಾರವಿಲ್ಲದಂದು“ಓಂ ನಮಃ ಶಿವಾಯ” ಎನುತಿರ್ದೆನು.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-16) ಈ ವಚನದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರು, “ನಮಃ ಶಿವಾಯ” ವೇ ಶಿವಲಿಂಗ ಮಂತ್ರದ ಸ್ವರೂಪ, ಬಸವಣ್ಣನವರೂ ಅದೇ “ಓಂ ನಮಃ ಶಿವಾಯ” ತತ್ವದ ಪ್ರತಿರೂಪ. ಮನಸ್ಸಿನೊಳಗಣ ಅಂಧಃಕಾರತ್ವ ಹಾಗೂ ಅಜ್ಞಾನವನ್ನು ಹೋಗಲಾಡಿಸಲು ಇದೇ ಮಂತ್ರ ನೆರವಾಗಿದ್ದು, ಜ್ಞಾನದ ಬೆಳಕನ್ನು ತೋರಿಸುತ್ತದೆ. ಅದಕ್ಕಾಗಿ ನಮಃ ಶಿವಾಯ ಮಂತ್ರದೊಂದಿಗೆ ಬಸವಣ್ಣನವರೂ ಸಹ, ಭಕ್ತನ ಮನದ ಮುಂದನ ಕತ್ತಲು ಹೋಗಲಾಡಿಸಲು ಎರಡೂ ಒಂದೇ ಆಗಿವೆ…

0 Comments

ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಉಳಿಯುಮೇಶ್ವರ ಚಿಕ್ಕಯ್ಯ, ಉಳಿಯುಮೇಶ್ವರ ಚಿಕ್ಕಣ್ಣ ಎಂಬ ಹೆಸರುಗಳಿಂದ ಗುರುತಿಸಿಕೊಂಡ ಇವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ “ದೇವರಗುಡಿ” ಎಂಬ ಗ್ರಾಮದವರು. ಇಲ್ಲಿ ದೊರೆತಿರುವ ಒಂದು ಶಾಸನದಲ್ಲಿ 5 ದತ್ತಿಗಳ ಮಾಹಿತಿ ಇದ್ದು ಅದರಲ್ಲಿ 3, 4, 5 ದತ್ತಿಗಳಲ್ಲಿ ಈ ಶರಣರ ಕುರಿತು ಉಲ್ಲೇಖವಿದೆ. 1202 ರ ಶಾಸನವು ಇವರ ಕುರಿತು ಉಲ್ಲೇಖಿಸಿದರೆ 1279 ನೇ ಇಸ್ವಿಯ ಕಲ್ಲೇದೇವರಪುರ ಶಾಸನದಲ್ಲಿ ಅನೇಕ ಶರಣರ ಹೆಸರುಗಳ ಮಧ್ಯದಲ್ಲಿ ಇವರ ಹೆಸರು ಇರುವುದು ಕಂಡುಬಂದಿದೆ. ಕಾಳಾಮುಖ ಆಚಾರ್ಯರೂ,…

1 Comment

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಫ. ಗು ಹಳಕಟ್ಟಿ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಡಾ. ಫ. ಗು ಹಳಕಟ್ಟಿ ಅವರು ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂದೆ ಪ್ರಸಿದ್ಧಿ ಪಡೆದವರು. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನಗಳನ್ನ ಶೋಧಿಸಿ, ಅನ್ವೇಶಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದರು. ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೊಲೆಗಳನ್ನು ಹುಡುಕಿ ತಂದು ವಚನಗಳನ್ನ ಮುದ್ರಿಸಿದರು. ಕನ್ನಡದ ಕಣ್ವ ಶ್ರೀ. ಬಿ. ಎಂ. ಶ್ರೀಕಂಠಯ್ಯನವರಿಂದ “ವಚನ ಗುಮ್ಮಟ” ಎಂದು ಕರೆಸಿಕೊಂಡ ರಾವ್‌ ಬಹಾದ್ದೂರ್‌ ಡಾ. ಫ. ಗು ಹಳಕಟ್ಟೆಯವರು ಜನಿಸಿದ್ದು 1880 ರ ಜುಲೈ 2 ರಂದು,…

0 Comments

ನೀರಲಕೇರಿ ಬಸವಲಿಂಗ ಶಿವಯೋಗಿಗಳು | ಡಾ. ಕೆ ಶಶಿಕಾಂತ, ಲಿಂಗಸೂಗೂರು.

ಕನ್ನಡವು ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯ ಅನೇಕ ವಿಧಗಳಿಗೆ ಮಾತೃಭೂಮಿಯಾಗಿದೆ. ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಧರ್ಮ, ಸಂಸ್ಕೃತಿಯೇ ಮೊದಲಾದವುಗಳಿಗೆ ತಾಯಿ ಬೇರು ಈ ಕನ್ನಡವೇ ಆಗಿದೆ. ಇಂಥ ವಿವಿಧ ಪರಂಪರೆಯಲ್ಲಿ ವಿಶ್ವಕ್ಕೆ ಶ್ರೇಷ್ಠ ಎನಿಸಿದೆ. 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಆಗಿ ಹೋದ ಬಸವಾದಿ ಶರಣ ಶರಣೆಯರ  ಪ್ರಣೀತವಾದ ವಚನ ಸಾಹಿತ್ಯ ಮಿಗಿಲಾದುದಾಗಿದೆ. ಜಾಗತಿಕವಾದ ತತ್ವಜ್ಞಾನ ಮತ್ತು ಸಾಹಿತ್ಯ ಪರಂಪರೆಯಲ್ಲಿ ಈ 'ವಚನ' ಸಾಹಿತ್ಯವು ಬಹುಮುಖಿ ಕಾರಣವಾಗಿ ಕನ್ನಡದ ಅಸ್ಮಿತೆಯಾಗಿದೆ. 'ವಚನ' ಎಂದರೆ ಸಾಮಾನ್ಯ ಅರ್ಥದಲ್ಲಿ 'ಮಾತು', 'ಪ್ರಮಾಣ' ಎಂದರ್ಥ. ಆದರೆ ಇದನ್ನೊಂದು 'ಸಾಹಿತ್ಯ'…

0 Comments

ಬಸವಣ್ಣನವರ ವಚನಗಳಲ್ಲಿ ಭಾಷೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

 ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನದ ಸೃಜನ ಅನುಭಾವದ ಭಾಷೆಯಾಗಿ ನಮ್ಮನ್ನು ಆಕರ್ಷಿಸುತ್ತದೆ. ಸಂಸ್ಕೃತ ಭಾಷೆಯ ಭೂಯಿಷ್ಟತೆಯನ್ನು ನಿರಾಕರಿಸಿ ಸರಳ ಸುಲಲಿತ ಹೊಸಗನ್ನಡಕ್ಕೆ ಸಮೀಪವಾಗುವ ದೇಸಿ ಅಧ್ಯಾತ್ಮದ ಪಡೆ ನುಡಿಗಳಾಗಿ ಪ್ರತಿಕ್ರಿಸುಯಿಸುತ್ತವೆ. ಅಕ್ಷರ ಸಂಸ್ಕೃತಿಯನ್ನು  ಅಸ್ತ್ರವಾಗಿಸಿಕೊಂಡದ್ದೇ ಒಂದು ರೋಮಾಂಚನ. ಆಸ್ಥಾನದ ಪಂಡಿತರಿಗೆ ಭಾಷೆಯ ಮೂಲಕ ಕ್ರಾಂತಿಯನ್ನು ಸೃಷ್ಟಿಸಿ ಪ್ರತ್ಯುತ್ತರ ನೀಡಿದವರು ವಚನಕಾರರು. ಆಡು ನುಡಿಯ ದೇಸಿ ಭಾಷೆ ಎಂದರೆ ಮೈಲಿಗೆಯಾಗಿ ಕಂಡಂತಹ ಆ ಕಾಲಘಟ್ಟದಲ್ಲಿ  ಬಸವಣ್ಣನವರ ನಾಯಕತ್ವತ್ವದಲ್ಲಿ ಹಲವಾರು ಶರಣರು ವಚನಗಳನ್ನು ರಚಿಸಿ ಯಶಸ್ವಿಯಾದರು.  12ನೇ ಶತಮಾನದ ಅನುಭಾವಿ ಕವಿ ದಾರ್ಶನಿಕ ಶಿಕ್ಷಣ ತಜ್ಞರೆಂದೇ ಚಿರಪರಿಚಿತ ನಮಗೆ. ಬಸವಣ್ಣನವರ ಭಾಷಾ ಸೌಂದರ್ಯವನ್ನು ಚರ್ಚೆಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಅವರ ವಚನಗಳ ಪ್ರವೇಶ…

0 Comments

ಶಾಸನಗಳಲ್ಲಿ ಗುಡ್ಡವ್ವೆ, ಲಿಂಗಮ್ಮ ಮತ್ತು ದಾನಮ್ಮ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಮಹಾರಾಷ್ಟ್ರದ ಅಂದಿನ ಉಮದಿ ಇಂದಿನ ಉಮರಾಣಿಯಲ್ಲಿ ವಿಶ್ವಕರ್ಮ ಸಮುದಾಯದ ಅನಂತರಾಯ ಮತ್ತ ಶಿರಸಮ್ಮ ದಂಪತಿಯ ಏಕೈಕ ಪುತ್ರಿಯೇ ಲಿಂಗಮ್ಮನವರು. ಕ್ರಿ. ಶ. 1146 ರಲ್ಲಿ ಹುಟ್ಟಿದ ಆ ಹೆಣ್ಣು ಶಿಶು ಹಾಲು ಕುಡಿಯತ್ತಿರಲಿಲ್ಲವಂತೆ. ಸ್ಥಳೀಯ ವೀರಮಲ್ಲಯ್ಯ (ಶಾಂತವೀರ) ನವರು ಮಗು ಜನಸಿದ 13 ನೆ ದಿನಕ್ಕೆ ವಿಭೂತಿ ಮತ್ತು ಲಿಂಗಧಾರಣೆಗೈದ ಬಳಿಕ ಹಾಲು ಸೇವಿಸಲಾರಂಭಿಸಿತಂತೆ. ಹೀಗಾಗಿ "ಲಿಂಗಮ್ಮ" ಎಂದು ನಾಮಕರಣ ಮಾಡುತ್ತಾರೆ. ಕ್ರಮೇಣ ಮಾತಾ ಪಿತರು ಲಿಂಗ ಪೂಜೆಯ ನಿಷ್ಠರಾಗಿದ್ದಕ್ಕೆ ಲಿಂಗಭಕ್ತೆಯಾದರು. ಚಿಕ್ಕವಳಿದ್ದಾಗ ಕೆಸರಿನಿಂದ ಶಿವಲಿಂಗ ಮಾಡಿ ಪೂಜಾ ಸಾಮಗ್ರಿಗಳೊಂದಿಗೆ ಆಡುತ್ತಿದ್ದರಂತೆ. ಸೊನ್ನಲಗಿಯಲ್ಲಿ ಶಿವಯೋಗಿ ಸಿದ್ದರಾಮರು ಎಲ್ಲೆಂದರಲ್ಲಿ…

0 Comments

ಶರಣ ಬಹುರೂಪಿ ಚೌಡಯ್ಯನವರ ವಚನ ನಿರ್ವಚನ | ಡಾ. ಶೈಲಜಾ ಬಾಗೇವಾಡಿ, ಕಲಬುರಗಿ.

ವಚನ:ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.ಪ್ರಸಾದವ ಪಡೆಯದವರ ಸಮಪಙ್ಞ್ತಯಲ್ಲಿ ಕುಳಿತುಪ್ರಸಾದ ಭೋಗವ ಮಾಡಲಾಗದು.ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು.ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.ಅದೇನು ಕಾರಣವೆಂದಡೆ;ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವನಂಬುಗೆಯ ಭಕ್ತಿ ಬೆಸುಗೆಯಿಲ್ಲದವರಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-77/ವಚನ ಸಂಖ್ಯೆ-175) ಶರಣ ಬಹುರೂಪಿ ಚೌಡಯ್ಯನವರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಇವರು ಮೂಲತಃ ಆಂಧ್ರಪ್ರದೇಶದ ರೇಕಳಿಕೆ ಗ್ರಾಮದ ಬ್ರಾಹ್ಮಣ ದಂಪತಿಗಳಾದ ಜನವಶ್ಯ ಮತ್ತು ಧರ್ಮವತಿ…

0 Comments

ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯಎಂತೆಂದಡೆ: ವಿಸ್ತರಿಸಿ ಪೇಳುವೆನು;ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳುಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರುಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳುಶಿವಾಚಾರವೇದ್ಯರು ಶಿವಾಗಮ ಸಾಧ್ಯರುಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳುಹೊಗಬಾರದು ಕಲ್ಯಾಣವ.ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆಮುನ್ನೂರರವತ್ತು ಬಾಗಿಲವಾಡ.ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆನಾನೂರ…

0 Comments

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments