ವಚನ ಸಾಹಿತ್ಯದಲ್ಲಿ ಗುರು/ಡಾ. ಸರ್ವಮಂಗಳ ಸಕ್ರಿ,ರಾಯಚೂರು.
ವಚನ ಸಾಹಿತ್ಯ ಶರಣರ ಬದುಕಿನ ಮೌಲಿಕತೆಯನ್ನು ಬಿಂಬಿಸುವ ಆಂತರಿಕ ಅರಿವಿನ ಧರ್ಮವಾಗಿದೆ. ಪ್ರಗತಿಪರ ಚಿಂತನೆಯ ತತ್ವ ಸಿದ್ಧಾಂತಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಪರಿಶುದ್ಧಗೊಳಿಸುವ ಪರಿಯದು. ಯಾವುದೇ ಧರ್ಮವಾದರೂ ನೀತಿ ಸತ್ಯದ ನಿಷ್ಠೆಯಾಗಿರಬೇಕು. ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು. ಇದು ಮಾನವ ಧರ್ಮ. ಇದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಇದನ್ನು ಹಿಂದುಗಳು ಮುಕ್ತಿ ಎಂದರು. ಜೈನರು ನಿರ್ವಾಣವೆಂದರು. ಬೌದ್ಧರರು ವಿಮಕ್ತಿಗಾಗಿ ಅನ್ವೇಷಣೆ ಎಂದರು. ಸಿಖರು ಧ್ಯಾನದ ಮೂಲಕ ದೇವರಲ್ಲಿ ಒಂದಾಗುವುದೆಂದರು. ಎಲ್ಲಾ ಧರ್ಮದಲ್ಲಿ ಧರ್ಮದ ಮಹತ್ವವನ್ನು ಸಾರಿದ ಮಹಾನ್ ಗುರುಗಳಿದ್ದಾರೆ. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ತಾತ್ವಿಕ…






Total views : 59295