![]()

ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಸಮ ಸಮಾಜ ನಿರ್ಮಾಣವಾಗಿ ದೇವಾಲಯಗಳಿಗೆ ಪ್ರಜೆಗಳು ಹೋಗುವುದನ್ನು ನಿಲ್ಲಿಸುತ್ತಾರೆ. ವೈದಿಕರಿಗೆ ಈ ಸಾಮಾಜಿಕ ಸಮಾನತೆಯ ಚಳುವಳಿಯಿಂದ ತಮ್ಮ ಆದಾಯವು ನಿಂತು ಹೋಗಿ ಅವರ ಜೀವನ ನಡೆಸುವುದು ಕಷ್ಟವಾದಂಥ ಸಂದರ್ಭದಲ್ಲಿ ಬಸವಾದಿ ಶರಣರನ್ನು ಕಗ್ಗೊಲೆ ಮಾಡುವಂಥ ಹೀನ ಕೃತ್ಯಕ್ಕೂ ಇಳಿದಂಥಾ ಇತಿಹಾಸ ನಮಗೆ ವಚನಗಳ ಮೂಲಕ ವೇದ್ಯವಾಗುತ್ತದೆ. ಶರಣ ತುರಗಾಹಿ ರಾಮಣ್ಣನವರ ಈ ವಚನ ಇದನ್ನು ಪುಷ್ಟೀಕರಿಸುತ್ತದೆ.
ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-349/ವಚನ ಸಂಖ್ಯೆ-1026)
ಬಸವಾದಿ ಶರಣರ ಕಗ್ಗೊಲೆಯಂಥ ಹೀನ ಕೃತ್ಯವೆಸಗಿರುವ ವೈದಿಕ ಪರಂಪರೆಯ ದರಿದ್ರ ಮನಃಸ್ಥಿತಿ ಅಂದಿನಿಂದ ಇಂದಿನವರೆಗೂ ಉಳಿದುಕೊಂಡೇ ಬಂದಿದೆ. 12 ನೇ ಶತಮಾನ ವಚನ ಉಗಮ ಯುಗ ಎನಿಸಿದರೆ 15 ನೇ ಶತಮಾನ ವಚನ ಸಂಕಲನ ಯುಗ ಎನಿಸಿತು. ಈ ಸಂದರ್ಭದಲ್ಲಿ ಬಸವಣ್ಣ, ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನವರು ರಚಿಸಿದ ವಚನಗಳನ್ನು ಷಟ್ಸ್ಥಲಗಳಲ್ಲಿ ವಿಂಗಡಿಸಿ ಹಸ್ತಪ್ರತಿಗಳನ್ನು ಸಿದ್ಧಪಡಿಸಿದರು. ಈ ಮೂವರ ವಚನಕಟ್ಟುಗಳು ಮಠಮಾನ್ಯಗಳಲ್ಲಿ, ವಿದ್ವಾಂಸರುಗಳು ಮತ್ತು ಲಿಂಗಾಯತರ ಮನೆಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟವು. ಹಾಗಾಗಿ ಈ ಷಟ್ಸ್ಥಲ ವಚನಕಟ್ಟುಗಳಲ್ಲಿನ ವಚನಗಳನ್ನು ತಮ್ಮ ಇಚ್ಛೆಗನುಸಾರವಾಗಿ ತಿದ್ದುವದು ಈ ವೈದಿಕ ಸಾಹಿತಿಗಳಿಗೆ ಆಗಲಿಲ್ಲ.
ಶರಣರು ಅಂದು ಸ್ಥಾಪಿಸಿದ ಕ್ರಾಂತಿಕಾರಿ ವಚನೋಕ್ತ ಲಿಂಗಾಯತ ಧರ್ಮವನ್ನು ವೀರಶೈವವಾದಿಗಳು ಬದಿಗೊತ್ತಿ ತಮ್ಮದೇ ಆದ ಆಗಮೋಕ್ತ ವೀರಶೈವ ಧರ್ಮವನ್ನು 15 ನೇ ಶತಮಾನದ ಹೊತ್ತಿಗೆ ಚಾಲನೆಗೆ ತಂದರು. ಅದೇ ವೇಳೆ ಅವರ ಧರ್ಮಗ್ರಂಥವಾದ ಸಿದ್ಧಾಂಯ ಶಿಖಾಮಣಿಯೆಂಬ ಸಂಸ್ಕೃತ ಭೂಯಿಷ್ಠ ಗ್ರಂಥ ರಚನೆಯಾಯಿತು. ಅಲ್ಲಿಂದೀಚೆಗೆ ವೀರಶೈವ ಪದ ಹೆಚ್ಚು ಬಳಕೆಯಾಗತೊಡಗಿತು. ಇದಾದ ನಂತರ ಶರಣರ ಹೆಚ್ಚಿನ ವಚನಗಳಲ್ಲಿ ಸಾಧ್ಯವಾದ ಕಡೆಗಳಲ್ಲೆಲ್ಲ ಲಿಂಗಾಯತ ಮತ್ತು ಲಿಂಗವಂತ ಪದಗಳ ಬದಲಿಗೆ ವೀರಶೈವ ಪದಗಳನ್ನು ಸೇರಿಸಿ ವಚನಗಳ ಹಸ್ತಪ್ರತಿಗಳನ್ನು ಸಿದ್ಧಪಡಿಸಿ ಆ ವಚನಗಳನ್ನು ಕುಲಗೆಡಿಸುವಲ್ಲಿ ವೀರಶೈವರು ತಮ್ಮ ಯೋಗದಾನವನ್ನು ನೀಡಿದರು. ಆದರೆ ಅವರಿಗೆ ಬಹು ಪ್ರಚಾರದಲ್ಲಿದ್ದ ಷಟ್ಸ್ಥಲ ವಚನಕಟ್ಟುಗಳಲ್ಲಿ ಒಂದು ಕಡೆಯೂ ವೀರಶೈವ ಪದ ಸೇರಿಸಲಿಕ್ಕಾಗಲಿಲ್ಲ ಎಂಬುದನ್ನು ಗಮನಿಸಬಹುದಾದ ಅತ್ಯಂತ ಗಂಭೀರ ವಿಷಯ.
ವಚನಗಳಲ್ಲಿ ಲಿಂಗಾಯತಕ್ಕಿಂತ ಲಿಂಗವಂತ ಪದವೇ ಹೆಚ್ಚಾಗಿ ಬಳಕೆಯಾಗಿದೆ. ಏಕೆಂದರೆ:
- ಮೊದಲನೇ ಘಟ್ಟವು ಲಿಂಗವು ಅಂಗಕ್ಕೆ ಬರುವಂಥದ್ದು ಲಿಂಗಾಯತ.
- ಎರಡನೇ ಘಟ್ಟದಲ್ಲಿ ಲಿಂಗಸ್ವಾಯತ.
- ಮೂರನೇ ಘಟ್ಟದಲ್ಲಿ ಲಿಂಗಸನ್ನಿಹಿತ.
ಈ ಮೂರೂ ಘಟ್ಟಗಳನ್ನು ತಲುಪಿದಾತ ಲಿಂಗವಂತ. ಲಿಂಗಾಯತದಿಂದ ಆರಂಭವಾಗಿ ಲಿಂಗವಂತದಲ್ಲಿ ಕೊನೆ ಮುಟ್ಟುವುದರಿಂದ ವಚನಗಳಲ್ಲಿ ಲಿಂಗವಂತ ಪದ ಹೆಚ್ಚಾಗಿ ಬಳಕೆಯಾಗಿದೆ. ಲಿಂಗವಂತದ ಮೂಲ ಲಿಂಗಾಯತದಲ್ಲಿದೆ. ಆದ್ದರಿಂದ ಲಿಂಗಾಯತರು ಎಂಬ ಪದವೇ ಜನಮನದಲ್ಲಿ ಅಚ್ಚೊತ್ತಿದೆ.
ಬಸವಣ್ಣನವರು 12 ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡುವ ಪೂರ್ವದಲ್ಲಿ ಸ್ಥಾವರಲಿಂಗಗಳು ಮತ್ತು ಅವುಗಳ ಚಿಕ್ಕ ಚಿಕ್ಕ ಮಾದರಿಗಳಾದ ಚರಲಿಂಗಗಳು ಬಳಕೆಯಲ್ಲಿದ್ದವು. ಬಸವಣ್ಣನವರು ಚಳವಳಿ ರೂಪದ ಜಾತ್ಯತೀತ ಲಿಂಗಾಯತ ಧರ್ಮ ಸ್ಥಾಪನೆಯ ಜೊತೆ ಜೊತೆಗೆ ಇಷ್ಟಲಿಂಗವನ್ನೂ ಪ್ರತಿಪಾದನೆ ಮಾಡಿದರು. ಅಂತೆಯೆ ”ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ” ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ. ”ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ” ಎಂದು ಬಸವಣ್ಣನವರೇ ಇಷ್ಟಲಿಂಗವನ್ನು ಉದ್ದೇಶಿಸಿ ಹೇಳಿದ್ದಾರೆ.
ವೀರಶೈವವು 28 ಆಗಮಗಳ ಮೂಲದಿಂದ ಸೃಷ್ಟಿಯಾದ ಸಪ್ತಶೈವಗಳಲ್ಲಿನ ಒಂದು ಉಪಶಾಖೆಯಾಗಿದೆ.
- ಅನಾದಿಶೈವ.
- ಆದಿಶೈವ.
- ಮಹಾಶೈವ.
- ಅನುಶೈವ.
- ಅಂತರಶೈವ.
- ಪ್ರವರಶೈವ.
- ಅಂತ್ಯಶೈವ
ಎಂಬ ಏಳು ಪ್ರಭೇದಗಳಿವೆ. ಹೀಗೆ ಸಪ್ತಶೈವಗಳ ಮೂಲಕ:
- ಸಾಮಾನ್ಯಶೈವ.
- ಮಿಶ್ರಶೈವ.
- ಶುದ್ಧಶೈವ.
- ವೀರಶೈವ.
ಎಂಬ ನಾಲ್ಕು ಪಂಗಡಗಳು ಹೊರಹೊಮ್ಮಿವೆ. ವೀರಶೈವದಲ್ಲಿ:
- ಸಾಮಾನ್ಯ ವೀರಶೈವ.
- ವಿಶೇಷ ವೀರಶೈವ.
- ನಿರಾಭಾರಿ ವೀರಶೈವ
ಎಂಬ ಮೂರು ಪ್ರಕಾರದ ವೀರಶೈವಗಳಿವೆ. ಆಗಮೋಕ್ತ ಶೈವ ಪಂಗಡಗಳಿಗೂ ಲಿಂಗಾಯತಕ್ಕೂ ಯಾವುದೇ ಎಳ್ಳು ಕಾಳಿನಷ್ಟೂ ಸಂಬಂಧವಿಲ್ಲ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಬಸವಾದಿ ಶರಣರ ವಚನರೂಪಿ ಹೊಸನುಡಿಯ ಧರ್ಮವಾಗಿದೆ. ಲಿಂಗಾಯತವು ಶರಣರ ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳಿಂದ ಮೂಡಿ ಬಂದಿದೆ. ಆದರೆ ಅನೇಕರು ಲಿಂಗಾಯತಕ್ಕೆ ವೀರಶೈವವನ್ನು ಸಮಾನಾರ್ಥದಲ್ಲಿ ಬಳಸಿ ಗೊಂದಲ ಸೃಷ್ಟಿಸಿದ್ದಾರೆ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ,
ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-195/ವಚನ ಸಂಖ್ಯೆ-717)
”ವೇದಕ್ಕೆ ಒರೆಯ ಕಟ್ಟುವೆ” (ವೇದಗಳನ್ನು ಗಂಟುಕಟ್ಟಿ ಇಡುವೆ) ಎಂದು ಹೇಳುವ ಮೂಲಕ ಬಸವಣ್ಣನವರು ವೇದೋಕ್ತ ವೈದಿಕ ಧರ್ಮವನ್ನು ತಿರಸ್ಕರಿಸಿದ್ದಾರೆ. ”ಆಗಮದ ಮೂಗ ಕೊಯಿವೆ” ಎಂದು ಹೇಳುವ ಮೂಲಕ ಆಗಮೋಕ್ತ ಶೈವಧರ್ಮವನ್ನೂ ತಿರಸ್ಕರಿಸಿದ್ದಾರೆ. ವೇದ ಮತ್ತು ಆಗಮಗಳನ್ನು ನಂಬುವ ಕಾಶ್ಮೀರದಿಂದ ಮಧ್ಯಪ್ರದೇಶದ ಮೂಲಕ ತಮಿಳು ನಾಡಿಗೆ ವಲಸೆ ಬಂದು ಅಲ್ಲಿಂದ ಆಂಧ್ರಕ್ಕೆ ಪಲಾಯನ ಮಾಡಿ ಮತ್ತೆ ಆಂಧ್ರದಿಂದ ಕಾಲು ಕಿತ್ತು ಹೊಟ್ಟೇಪಾಡಿಗಾಗಿ ಮತ್ತು ಅರೆಕಾಸಿನ ಮಜ್ಜಿಗೆಗಾಗಿ ಕರ್ನಾಟಕಕ್ಕೆ ಓಡಿ ಬಂದಿರುವ ಆರಾಧ್ಯ ಶೈವ ಬ್ರಾಹ್ಮಣರ ಕುಲ ಸಂಜಾತರಾದ ಜುಟ್ಟು ಜನಿವಾರ ಕಿತ್ತೆಸೆದು ಇಷ್ಟಲಿಂಗಧಾರಿಗಳಾದ ವೀರಶೈವವನ್ನು ಬಸವಣ್ಣನವರು ಹಾಗೂ ಬಸವಾದಿ ಶರಣರು ಇಂದಿಗೂ ಎಂದೆಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಇಲ್ಲ ಸಲ್ಲದ ಪ್ರಚಾರಕ್ಕೆ ಹಾಗೂ ಪಂಚಪೀಠಗಳು ಎಸೆಯುವ ಎಂಜಲು ಕಾಸಿಗಾಗಿ ವಚನಗಳನ್ನು ವಿಕಾರಗೊಳಿಸಿ, ವಿರೂಪಗೊಳಿಸಿ ಬರೆಯುವುದನ್ನು ಹಾಗೂ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾತನಾಡುವ ಖಯಾಲಿ ಮಾಡಿಕೊಂಡಿರುವ ವೀರಶೈವ ಮತ್ತು ವೈದಿಕರ ಶನಿ ಸಂತಾನಗಳಾದ ರವಿ ಹಂಜ್, ಜನಮೇಜಯ ಉಮರ್ಜಿ, ಸವದತ್ತಿಮಠ, ರಾಜಾರಾಮ ಹೆಗಡೆ, ವೀಣಾ ಬನ್ನಂಜೆ ಇನ್ನೂ ಹಲವಾರು ಬುದ್ಧಿಜೀವಿಗಳ ಪಟಾಲಂಗಳು ರೂಢಿಮಾಡಿಕೊಂಡಿವೆ. ಇವರ ಹೊಲಸು ಹಾಗೂ ದರಿದ್ರ ಹುನ್ನಾರಗಳನ್ನು ತಮ್ಮ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವ ವಿಜಯವಾಣಿ, ವಿಶ್ವವಾಣಿಯಂತ ವಿಷಕಾರುವ ಪತ್ರಿಕೆಗಳು ಹಾಗೂ ಹಲವಾರು ವೈದಿಕ ಪರಂಪರೆಯ YouTube Channel ಗಳು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ಪಂಚಪೀಠದ ಓಲೈಕಾಗಿ ಮಾಡುತ್ತಿದ್ದಾವೆ ಎನ್ನುವುದು ಜಗಜ್ಜಾಹೀರ. ಯಾವ ಪಂಚಪೀಠ ಎನ್ನುವುದನ್ನು ಒಡೆದು ಬೇರೆ ಹೇಳಬೇಕಾಗಿಲ್ಲ. ಲಿಂಗಾಯತರು ಇದರಿಂದ ವಿಚಲಿತರಾಗಿದ್ದಾರೆ ಎನ್ನುವ ಹುಂಬತನದಲ್ಲಿಯೇ ಈ ವಚನ ಸಾಹಿತ್ಯ ದ್ರೋಹಿ ಸಂತಾನಗಳು ತಿಳಿದುಕೊಂಡಿದ್ದರೆ ಅದು ಅವರ ಅಜ್ಞಾನತನ.
ಇನ್ನು ವಿಶ್ವವಾಣಿ ಎನ್ನುವ ವಿಷವಾಣಿ ಪತ್ರಿಕೆ ವಿಶ್ವೇಶ್ವರ ಭಟ್ ಎನ್ನುವ ಶರಣ ವಿರೋಧಿ ವಿಷಭಟ್ಟನ ಪತ್ರಿಕೆಯ ಅಂಕಣ “ಬಸವ ಮಂಟಪ” ದಲ್ಲಿ ರವಿ ಹಂಜ್, ಜನಮೇಜಯ ಉಮರ್ಜಿ ಮುಂತಾದ ಅವಿವೇಕಿಗಳು, ಆಷಾಢಭೂತಿಗಳು ಮತ್ತು ಹೀನ ಮನಸ್ಸಿನ ಅಜ್ಞಾನಿಗಳು ಬಸವಾದಿ ಶರಣರ ವಿರುದ್ಧ ವಿಷಕಾರುವ ಪ್ರತಿಜ್ಞೆ ಮಾಡಿದಂತಿದೆ. ಇದೇ ಹುಮ್ಮಸ್ಸಿನಲ್ಲಿ ಮದಿರೆ-ಮಾನಿನಿ-ಮಾಂಸದ ಅಮಲಿನಲ್ಲಿ ತೇಲಾಡುತ್ತಾ ಬರೆಯುವ ಶನಿಗ್ರಹ ಈ ಅಡ್ನಾಡಿ, ಹುಂಬ ಮತ್ತು ಅಜ್ಞಾನಿ ರವಿ ಹಂಜ್ “ಉತ್ಪ್ರೇಕ್ಷಗಳಾಚೆ ಶರಣ ಚಳುವಳಿಯ ಮಹಿಳಾ ಸಮಾನತೆ!” ಎನ್ನುವ ಲೇಖನದಲ್ಲಿ ಶರಣೆಯರ ಕುರಿತು ಅಸಭ್ಯವಾದ ಲೈಂಗಿಕ ಭಾಷಾ ಪ್ರಯೋಗ ಮಾಡಿ ನಿಂದನೆ ಮಾಡಿದ್ದಾನೆ. ಹಲವಾರು ವಚನಗಳನ್ನು ತನ್ನ ಅಸಂಬದ್ಧ ತರ್ಕದಿಂದ ವಚನಗಳನ್ನು ಅಸಹ್ಯಕರ ಲೈಂಗಿಕ ಭಾಷಾ ಪ್ರಯೋಗ ಮಾಡಿ ತಿರುಚಿ ಬರೆದಿದ್ದಾನೆ ಎನ್ನುವುದು ಕಾನೂನುರೀತ್ಯ ಅಪರಾಧವಾಗಿದೆ. ಬಹುಶಃ ಬಾಲ್ಯದಿಂದಲೇ ಇವನು ತನ್ನ ಮನೆತನದ ಹೆಣ್ಣುಮಕ್ಕಳ ಸಂಶಯಾತ್ಮಕ ಅನೈತಿಕ ನಡವಳಿಕೆಯನ್ನು ನೋಡಿ ನೋಡಿ ಈತನಿಗೆ ಶರಣೆಯರನ್ನು ಕುರಿತು ಅಸಹ್ಯವಾಗಿ ಬೆರಯುವ ಉಮ್ಮೇದು ಬಂದಿದೆ ಎಂದು ಮೇಲ್ನೋಟಕ್ಕೆ ಅರ್ಥವಾಗುವ ವಿಚಾರ ಅಂತ ನನ್ನ ತಿಳುವಳಿಕೆ. ಅವನ ಹಿನ್ನೆಲೆ ಏನೇ ಇರಲಿ ಅದು ಅವನ ಹಾಗೂ ಅವನ ಕುಟುಂಬದ ವೈಯಕ್ತಿಕ ವಿಚಾರ.
“ಉತ್ಪ್ರೇಕ್ಷಗಳಾಚೆ ಶರಣ ಚಳುವಳಿಯ ಮಹಿಳಾ ಸಮಾನತೆ!” ಎನ್ನುವ ಈ ಲೇಖನದ ಮೊದಲನೇಯ ಪ್ಯಾರಾದಲ್ಲಿಯೆ ಈತ ಅಸತ್ಯದ ನುಡಿಗಳನ್ನು ತುರುಕಿದ್ದಾನೆ. ಮಹಿಳಾ ಶೋಷಣೆ ಭಾರತದಲ್ಲಿ ಇರಲಿಲ್ಲ ಎನ್ನುವ ಅತಾರ್ಕಿಕ ಮಾತುಗಳಿಂದ ಪ್ರಾರಂಭ ಮಾಡತಾನೆ. ಈ ಶ್ವಾನ ಏನು ಓದಿದ್ದಾನೋ ಗೊತ್ತಿಲ್ಲ. ಮನುಸ್ಮೃತಿಯ 9.3 ಶ್ಲೋಕದ ಸಾಲುಗಳನ್ನು ಈತ ಓದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಪಿತಾ ರಕ್ಷತಿ ಕೌಮಾರ್ಯೆ | ಭರ್ತಾ ರಕ್ಷತಿ ಯೌವನೆ ||
ರಕ್ಷಂತಿ ಸ್ಥಾವೀರೆ ಪುತ್ರಾ | ನ ಸ್ತ್ರೀ ಸ್ವಾತಂತ್ರ್ಯಮ್ ಅರ್ಹತಿ ||
ಈ ಶ್ಲೋಕದ ವಿಶ್ಲೇಷಣೆ ಯಾರು ಏನೇ ಸಮಝಾಯಿಸಿ ನೀಡಿದರೂ ಕೂಡ ಸ್ತ್ರೀಯರಿಗೆ ಯಾವ ಸ್ಥಾನಮಾನವನ್ನು ವೈದಿಕ ಮನಸ್ಸುಗಳು ನೀಡಿದ್ದವು ಎನ್ನುವುದು ಆಕಾಶ ನೋಡಿದಷ್ಟೇ ಸ್ಪಷ್ಟ. ಏನೇ ಇರಲಿ ಇದನ್ನು ಓದಿದ್ದರೆ ಈ ಹಂಜ್ ಎನ್ನುವ ಹಂದಿ ಈ ಲೇಖನವನ್ನು ಬರೆದು ಶರಣೆಯರನ್ನು ಅವಮಾನಿಸುತ್ತಿರಲಿಲ್ಲ. ಇಂದಿಗೂ ವೈದಿಕರ ಮನೆಗಳಲ್ಲಿ ಪ್ರತೀ ತಿಂಗಳೂ ಮುಟ್ಟಾಗುವ ಹೆಣ್ಣುಮಕ್ಕಳನ್ನು ಹೊರಗೆ ಇಟ್ಟು ಪ್ರಾಣಿಗಳಂತೆ ನೋಡುವ ಪದ್ಧತಿ ಇದೆ ಎಂದರೆ ಸ್ತ್ರೀಯರ ಬಗ್ಗೆ ವೈದಿಕರಿಗಿರುವ ಅಸಭ್ಯತನ ಹೇಸಿಗೆ ತರುತ್ತದೆ. ಬಸವಾದಿ ಶರಣರು ಇಂಥಾ ದುರ್ಗತಿಗ್ರಸ್ತವಾದ ಮೂಢ ನಂಬಿಕೆಗಳನ್ನು ತೊಲಗಿಸಿ ಮಹಿಳೆಯರಿಗೆ ಸಂಪೂರ್ಣವಾದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಿದ್ದು ನಾಗರೀಕತೆಯ ಇತಿಹಾಸದಲ್ಲಿ ನಡೆದ ಮೊಟ್ಟ ಮೊದಲನೇಯ ಕ್ರಾಂತಿ.
ಇನ್ನು ಈ ಪ್ಯಾರದಲ್ಲಿ ಉಲ್ಲೇಖಿಸಿರುವ ಜೇಡರ ದಾಸಿಮಯ್ಯನವರ ಕುರಿತಂತೆ ಈ ಶತಮೂರ್ಖ ಮತ್ತು ಧಡ್ಡನಿಗೆ ಮಾಹಿತಿ ಇಲ್ಲವೆಂದು ಸ್ಪಷ್ಟವಾಗುತ್ತದೆ. ಒಂದು ಕಡೆ ಜೇಡರ ದಾಸಿಮಯ್ಯ ಅಂತಾನೆ ಇನ್ನೊಂದು ಕಡೆ ದೇವರ ದಾಸಿಮಯ್ಯ ಅಂತಾನೆ. ಜೇಡರ ದಾಸಿಮಯ್ಯನವರಿಗೂ ದೇವರ ದಾಸಿಮಯ್ಯನವರಿಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲ ಅಂದ ಮೇಲೆ ಈತನ ವ್ಯಾಖ್ಯಾನ ನಿಃಷ್ಪ್ರಯೋಜಕ. ಈ ಹುಚ್ಚ ರವಿ ಹಂಜ್ ಬಸವಣ್ಣನವರಿಗೂ ಜೇಡರ ದಾಸಿಯ್ಯನವರಿಗೂ 100 ವರ್ಷ ಅಂತರ ಅಂತಾ ಬರೀತಾನೆ. ಯಾವ Angle ನಿಂದ ನೋಡಿದರೂ ಈ ಎಡಬಿಡಂಗಿ ನನಗೆ ಮನುಷ್ಯನ ಥರಾ ಕಾಣತಾ ಇಲ್ಲ. ಏನಿವನ ಅನಾಗರೀಕ ಮತ್ತು ಅಸಹ್ಯವಾದ ಭಾಷೆ, ತೀರ ತೀರ ತಳಮಟ್ಟದ್ದು. ಥೂ ಇವನ ಜನ್ಮಕ್ಕೆ ನಾಚಿಕೇನೇ ಇಲ್ಲವಾ.
ಇವನ ಅನಾಗರೀಕತೆಯ ಕುರುಹಾಗಿ ಈತ ತನ್ನ Facebook ನಲ್ಲಿ Post ಮಾಡಿದ ಕೆಲವು ಕೀಳು ಮಟ್ಟದ, ಅಸಭ್ಯ ಮತ್ತು ಅಸಹ್ಯ Photo ಗಳನ್ನು ಗಮನಿಸಿ.

ಇವನ ಅನಾಗರೀಕತೆಯ ದೃಶ್ಯಗಳನ್ನು ಗಮನಿಸಿದರೆ ಯಾವ Range ಗೆ ಶರಣೆಯರನ್ನು ಹೀಯಾಳಿಸಿರಬಹುದೆಂಬ Glance ನಿಮಗಾಗಬಹದು. ಶರಣ ಜೇಡರ ದಾಸಿಮಯ್ಯನವರು ಹೆಣ್ಣುಮಕ್ಕಳಿಗೆ ಅತ್ಯಂತ ಗೌರವಯುತ ಸ್ಥಾನವನ್ನು ನೀಡಿ ಈ ವಚನವನ್ನು ಬರೆದಿದ್ದಾರೆನ್ನುವ ಕನಿಷ್ಠ ಕಲ್ಪನೆಯೂ ಕೂಡ ಈ ರವಿ ಹಂಜ್ ಗೆ ಇಲ್ಲಾ.
ತನ್ನ ಕಲ್ಪನಾವಿಲಾಸ ಲೋಕವನ್ನು ಉದ್ಘರಿಸುತ್ತಾ ದೇವರ ದಾಸಿಮಯ್ಯನವರ ವಚನಗಳ ಜಾಡನ್ನೇ ಹಿಡಿದು ವಚನಕಾರ್ತಿಯ ವಚನಗಳ ಬಗ್ಗೆ ಬರೀತಾನೆ. ನಾನು ಮೊದಲೇ ಹೇಳಿದ ಹಾಗೆ ಈ ಹುಚ್ಚನಿಗೆ ಜೇಡರ ದಾಸಿಮಯ್ಯನವರಿಗೂ ದೇವರ ದಾಸಿಮಯ್ಯನವರಿಗೂ ವ್ಯತ್ಯಾಸವೇ ಗೊತ್ತಿಲ್ಲಾ. ಹಾಗಾಗಿ ಈ ಕುರಿತು ಒಂದಷ್ಟು ಮಾಹಿತಿಯನ್ನು ಇವನಿಗೆ ಕೊಡಬೇಕಾಗಿದೆ.
ವಚನ ಸಾಹಿತ್ಯ, ಶರಣ ಸಿದ್ಧಾಂತ ಮತ್ತು ಶರಣರ ಜೀವನ ಚರಿತ್ರೆಗಳು ಅಧ್ಯಯನ, ಸಂಶೋಧನೆ ಮತ್ತು ವಿಮರ್ಶೆ ಎನ್ನುವುದು ನಿಂತ ನೀರಲ್ಲ. ನಿರಂತರ ಹರಿಯುವ ನದಿಯಂತೆ. ಇವತ್ತು ನಿರೂಪಿಸಲಾದ ಸಂಶೋಧನೆಗಳು ಅಥವಾ ವಕ್ತವ್ಯಗಳು ನಾಳೆ ಸುಳ್ಳಾಗಬಹುದು ಅಥವಾ ಮತ್ತೊಂದು ಹೊಸ ವಿಚಾರ ನಿರೂಪಣೆಗೆ ಸಿಗಬಹುದು. ಹಾಗಂತ ಇದೇ ಸತ್ಯ ಇದೇ ಮಿಥ್ಯ ಎಂದು ಒಪ್ಪಿಕೊಳ್ಳುವದು ಯಾವುದೇ ಅಧ್ಯಯನಶೀಲ ವ್ಯಕ್ತಿಗೆ ಶೋಭೆ ತರುವಂಥದ್ದಲ್ಲ, ಅದು ತಪ್ಪಾಗುತ್ತದೆ. ನನಗೆ ಸಿಕ್ಕಿರುವ ಮತ್ತು ನಾನು ಓದಿರುವ ಸಾಹಿತ್ಯದ ಆಧಾರದ ಮೇಲೆ ಈ ನಿರೂಪಣೆ ಸಿದ್ಧವಾಗಿದೆ.
We cannot touch the same water twice in the flowing river. Because water that has passed will never pass again in the same place.
ಇಂಥದ್ದೇ ಒಂದು ಸತ್ಯ–ಮಿಥ್ಯಗಳ ವೈಚಾರಿಕ ವಿವೇಚನೆ ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯನವರು ಬೇರೆ ಬೇರೆಯೇ ಎನ್ನುವ ಸೂಕ್ಷ್ಮ ವಿಚಾರ.
ಸುಮಾರು 30 ವರ್ಷಗಳ ಹಿಂದೆಯೇ ಡಾ. ಎಮ್. ಎಮ್. ಕಲಬುರ್ಗಿಯವರು, ಡಾ. ಎಚ್. ದೇವೀರಪ್ಪನವರು, ಡಾ. ಎಂ. ಚಿದಾನಂದಮೂರ್ತಿಯವರು, ಡಾ. ಎಚ್. ಚಂದ್ರಶೇಖರರವರು, ಡಾ. ವಿದ್ಯಾಶಂಕರಮೂರ್ತಿಯವರು, ಪ್ರೋ. ಅರ್. ರಾಚಪ್ಪ ಹಾಗೂ ಇನ್ನಿತರರು ತಮ್ಮ ಸಂಶೋಧನೆಗಳಲ್ಲಿ ದೇವರ ದಾಸಿಮಯ್ಯನವರು ಮತ್ತು ಜೇಡರ ದಾಸಿಮಯ್ಯನವರು ಬೇರೆ ಬೇರೆ ಎನ್ನುವುದನ್ನು ಹೇಳಿದ್ದಾರೆ.
ಕ್ರಿ. ಶ. 1928 ರಲ್ಲಿ ವಚನ ಗುಮ್ಮಟವೆಂದೇ ಪ್ರಖ್ಯಾತಿಯನ್ನು ಪಡೆದಂಥ ಡಾ. ಫ. ಗು. ಹಳಕಟ್ಟಿಯವರು “ದೇವರ ದಾಸಿಮಯ್ಯನ ವಚನಗಳು” ಎನ್ನುವ ಪುಸ್ತಕವನ್ನು ಸಂಪಾದಿಸಿ ಪ್ರಕಾಶನ ಮಾಡುತ್ತಾರೆ. ಇದರಲ್ಲಿ “ರಾಮನಾಥ” ಅಂಕಿತವನ್ನು ಬಳಸಿದಂಥ ವಚನಗಳನ್ನು ದಾಖಲಿಸುತ್ತಾರೆ. ಇಂಥದ್ದೇ ಒಂದು ಪ್ರಯತ್ನವನ್ನು “ಜೇಡರ ದಾಸಿಮಯ್ಯನವರ ವಚನಗಳು” ಎನ್ನುವ ಪುಸ್ತಕವನ್ನು ಕ್ರಿ. ಶ. 1988 ರಲ್ಲಿ ಪ್ರೋ. ಅರ್. ರಾಚಪ್ಪನವರು ಬಿಡುಗಡೆ ಮಾಡುತ್ತಾರೆ. ಇದರಲ್ಲಿ “ರಾಮನಾಥ” ಅಂಕಿತವನ್ನೇ ಬಳಸಿದಂಥ ಒಟ್ಟು 170 ವಚನಗಳನ್ನು ಈ ಪುಸ್ತಕ ಒಳಗೊಂಡಿದೆ. ವಚನ ಸಾಹಿತ್ಯದ ದೃಷ್ಟಿಯಿಂದ ಈ ಎರಡೂ ಪುಸ್ತಕಗಳು ಅಮೂಲ್ಯವಾದ ಆಕರಗಳು. ಈ ಎರಡೂ ಪುಸ್ತಕಗಳ ಶೀರ್ಷಿಕೆ ಮಾತ್ರ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎನ್ನುವ ಬೇರೆ ಬೇರೆ ಹೆಸರಿನೊಂದಿಗೆ ಪ್ರಕಟವಾಗಿವೆ.
11 ಮತ್ತು 12 ನೇ ಶತಮಾನದ ಸಾಹಿತ್ಯ ಲೋಕದಲ್ಲಿ ಒಟ್ಟು ಐವರು ದಾಸಯ್ಯರ ಪ್ರಸ್ತಾಪ ಸಿಗುತ್ತದೆ.
- ಶಂಕರ ದಾಸಿಮಯ್ಯ
- ಶಿವ ದಾಸಿಮಯ್ಯ
- ವೀರಶಂಕರ ದಾಸಯ್ಯ
- ದೇವರ ದಾಸಿಮಯ್ಯ
- ಜೇಡರ ದಾಸಿಮಯ್ಯ
- ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ:
ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಹೊಲಿಗೆ ಮತ್ತು ಬಟ್ಟೆಗಳಿಗೆ ಬಣ್ಣ ಹಾಕುವ ಬಣಗಾರ ಕಾಯಕ ಮಾಡುತ್ತಿದ್ದ ಸಹೋದರರು. ಶಿವ ದಾಸಿಮಯ್ಯನವರ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ್ಕಂದಶಿಲೆ (ಕಂದಗಲ್ಲು) ಇವರ ಮೂಲಸ್ಥಳ. ಶರಣೆ “ಶಿವದಾಸಿ (ಉಮ್ಮವ್ವೆ)” ಶಂಕರ ದಾಸಿಮಯ್ಯನವರ ಧರ್ಮಪತ್ನಿ. ಶಂಕರ ದಾಸಿಮಯ್ಯನ ರಗಳೆ, ಶಂಕರ ದಾಸಿಮಯ್ಯನ ಪುರಾಣ, ತೆಲುಗು ಮತ್ತು ಕನ್ನಡದಲ್ಲಿ ರಚನೆಯಾದ ಬಸವ ಪುರಾಣಗಳು, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮುಂತಾದ ಗ್ರಂಥಗಳಲ್ಲಿ ಶಂಕರ ದಾಸಿಮಯ್ಯನವರ ಬಗ್ಗೆ ಉಲ್ಲೇಖ ಸಿಗುತ್ತದೆ. ನವಿಲೆಯ ಜಡೆಯ ಶಂಕರದೇವ ಈತನ ಆರಾಧ್ಯದೈವ.
“ನಿಜಗುಣ ಶಂಕರದೇವ” ವಚನಾಂಕಿತದಿಂದ ಬರೆದಿರುವ 5 ವಚನಗಳು ಇಲ್ಲಿಯವರೆಗೂ ಲಭ್ಯವಾಗಿವೆ. ಒಂದು ವಚನದಲ್ಲಿ ಬಸವಣ್ಣ, ಚನ್ನಬಸವಣ್ಣ, ಮರಳ ಶಂಕರದೇವ ಮತ್ತು ಅಲ್ಲಪ್ರಭುದೇವರನ್ನು ಉಲ್ಲೇಖಿಸಿದ್ದಾನೆ.
ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು
ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು
ಇಂತಿವರ ಕರುಣದಿಂದ ಲಾನು ಬದುಕಿದೆನಯ್ಯಾ
ನಿಜಗುರು ಶಂಕರದೇವಾ
(ಸಮಗ್ರ ವಚನ ಸಂಪುಟ: ಒಂಭತು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-128)
ಮುದೇನೂರಿಗೆ ಹೋಗಿ ಜೇಡರ ದಾಸಿಮಯ್ಯನವರ ಅಹಂಕಾರವನ್ನು ಅಳಿಸಿ ಹಾಕಿದ ಪ್ರಸಂಗದ ಉಲ್ಲೇಖ ಬರುತ್ತದೆ. ಹಾಗಾಗಿ ಶಂಕರ ದಾಸಿಮಯ್ಯನವರು ಈ ಲೇಖನದ ಪ್ರಮುಖ ಆಕರ ಶರಣರಾಗಿ ಕಂಡು ಬರುತ್ತಾರೆ.
- ವೀರ ಶಂಕರ ದಾಸಯ್ಯ:
ಭವಿಯನ್ನು ಮುಟ್ಟುವುದಿಲ್ಲವೆನ್ನುವ ವಿಚಿತ್ರವಾದ ವೃತವನ್ನು ಕೈಗೊಂಡಿದ್ದ ವೀರಶಂಕರ ದಾಸಯ್ಯನವರ ವರ್ಣನೆ ಸೋಮೇಶ್ವರ ಪುರಾಣ, ಶಿವತತ್ವ ಚಿಂತಾಮಣಿ, ಗುರುರಾಜ ಚಾರಿತ್ರ್ಯ ಮುಂತಾದ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ”ಘನಗುರು ಶಿವಲಿಂಗ ರಾಮನಾಥ” ಎನ್ನುವ ವಚನಾಂಕಿತದಿಂದ ಬರೆದ ಸುದೀರ್ಘವಾದ ಒಂದೇ ಒಂದು ವಚನ ಇದೂವರೆಗು ಲಭ್ಯವಾಗಿದೆ. ಪಂಚಾಚಾರಗಳನ್ನು ಬಿಂಬಿಸುವ ಈ ವಚನದಲ್ಲಿ ಕುಲಸೂತಕಗಳ ವಿಮರ್ಶಾತ್ಮಕ ವಿಡಂಬನೆ ಇದೆ.
- ದೇವರ ದಾಸಿಮಯ್ಯ:
“ಜಗದೇಕಮಲ್ಲ” ಮತ್ತು “ಮಲ್ಲಿಕಾಮೋದ” ಎಂದು ಬಿರುದಾಂಕಿತನಾಗಿದ್ದ ಇಮ್ಮಡಿ ಜಯಸಿಂಹ (ಕ್ರಿ. ಶ. 1015 – 1042) ತನ್ನ ಅಣ್ಣ ಐದನೆ ವಿಕ್ರಮಾದಿತ್ಯನ ನಂತರ ಸಿಂಹಾಸನವನ್ನೇರುತ್ತಾನೆ. ಚೋಳರು ಆಕ್ರಮಣ ಮಾಡಿ ಸುಟ್ಟು ಹಾಕಿದ ರಾಜಧಾನಿ ಮಾನ್ಯಖೇಟವನ್ನು ಯೇತಗಿರಿ (ಕಲಬುರ್ಗಿ ಜಿಲ್ಲೆಯ ಇಂದಿನ ಯಾದಗಿರಿ) ಗೆ ಸ್ಥಳಾಂತರಿಸುತ್ತಾನೆ. ಕ್ರಿ. ಶ. 1042 ರಲ್ಲಿ ಮರಣ ಹೊಂದಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಸುಪ್ರಸಿದ್ಧ ಸಂಸ್ಕೃತ ಕವಿ “ವಾದಿರಾಜ” ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿದ್ದನು.
ಶೈವಧರ್ಮ ಪ್ರಚಾರಕರಾಗಿದ್ದ ದೇವರ ದಾಸಿಮಯ್ಯನವರು ಇದ್ದದ್ದು ಇಮ್ಮಡಿ ಜಯಸಿಂಹನ ಕಾಲದಲ್ಲಿ. ಇಮ್ಮಡಿ ಜಯಸಿಂಹ ರಾಜನ ಆಳ್ವಿಕೆ ಸುಮಾರು ಕ್ರಿ. ಶ. 1015 ರಿಂದ ಕ್ರಿ. ಶ. 1042. ಇವನ ಮೂರು ರಾಣಿಯರಲ್ಲಿ ಒಬ್ಬಳಾದ ಸುಗ್ಗಲಾದೇವಿಯವರಿಗೆ ದೀಕ್ಷೆಯನ್ನು ಕೊಟ್ಟ ಪ್ರಸ್ತಾಪ ಕರ್ನಾಟಕದ ಇತಿಹಾಸದ ಪುಸ್ತಕಗಳಲ್ಲಿ ವರ್ಣನೆಯಿದೆ. ಜಯಸಿಂಹ-ಸುಗ್ಗಲಾದೇವಿಯರೊಂದಿಗೆ ಮಾತ್ರ ದೇವರ ದಾಸಿಮಯ್ಯನವರ ಪ್ರಸ್ತಾಪವಿದೆ. ದೇವರ ದಾಸಿಮಯ್ಯನವರ ಪ್ರಸ್ತಾಪ ಯಾವ ವಚನ ಸಾಹಿತ್ಯದಲ್ಲಿಯೂ ಬರುವುದಿಲ್ಲ. ಆದರೆ ಕರ್ನಾಟಕದ ಇತಿಹಾದ ಬಗ್ಗೆ ಬರೆದ ಎಲ್ಲ ಪುಸ್ತಕಗಳಲ್ಲಿ ದೇವರ ದಾಸಿಮಯ್ಯನವರ ಉಲ್ಲೇಖವಿದೆ. ಬಸವಣ್ಣನವರಿಗೂ ದೇವರ ದಾಸಿಮಯ್ಯನವರಿಗೂ ಸುಮಾರು 80/90 ವರ್ಷಗಳ ಅಂತರವಿದೆ.

ಕ್ರಿ. ಶ. 1029 ರ ದೇವೂರಿನ ಶಾಸನದಲ್ಲಿ ಸುಗ್ಗಲಾದೇವಿಯವರ ಸುಮಾರು 17 ಕೃತಿಗಳ ವರ್ಣನೆ ಇದೆ. ಇಲ್ಲಿ ಬರುವ “ಜಗದೇಕಮಲ್ಲ” ಎನ್ನುವ ಹೆಸರು ಇಮ್ಮಡಿ ಜಯಸಿಂಹನಿಗೆ ಇರುವಂಥಾ ಹೆಸರು. ಕೆಲವೊಂದು ಕಡೆ ದಂಡನಾಯಕ ದಾಸಿಮಯ್ಯ ಅಂತ ಪ್ರಸ್ತಾಪ ಬರುತ್ತದೆ. ಇದು ಇಮ್ಮಡಿ ಜಯಸಿಂಹ ತನ್ನ ರಾಜಧಾನಿಯನ್ನು ಮಾಳಖೇಡದಿಂದ ಯೇತಗಿರಿ ಅಂದರೆ ಈಗಿನ ಯಾದಗಿರಿಗೆ ಬದಲಾಯಿಸುವಾಗ ಒಂದು ಸೈನ್ಯದ ತುಕಡಿಗೆ ನಾಯಕನನ್ನಾಗಿ ಮಾಡಿರಬಹುದೇ ಎನ್ನುವ ತರ್ಕವಿದೆ.
ಡಾ. ಎಂ. ಎಂ. ಕಲಬುರ್ಗಿಯವರ “ಶಾಸನಗಳಲ್ಲಿ ಶಿವಶರಣರು” ಪುಸ್ತಕದಲ್ಲಿ ಪುಟ-39 ರಲ್ಲಿ ಉಲ್ಲೇಖವಾಗಿರುವ ಕ್ರಿ. ಶ. 1029 ರ ಶಾಸನವೊಂದರಲ್ಲಿ ದೇವೂರಿನ ಶಾಸನವೊಂದರಲ್ಲಿ ಜಗದೇಕಮಲ್ಲ ಎಂದು ಬಿರುದಾಂಕಿತನಾದ ಇಮ್ಮಡಿ ಜಯಸಿಂಹನ ಹೆಸರು ಪ್ರಸ್ತಾಪವಾಗಿದೆ.

- ಜೇಡರ ದಾಸಿಮಯ್ಯ:
ಜೇಡರ ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನುರಿನವರು ಹಾಗೂ ಆದ್ಯ ವಚನಕಾರರು. ಸುಮಾರು 176 ವಚನಗಳು ಸಿಕ್ಕಿರುತ್ತವೆ. ಅವರನ ಪುಣ್ಯಸ್ತ್ರೀ ದುಗ್ಗಳೆಯವರೂ ಕೂಡ ಎರಡು ವಚನಗಳನ್ನು ಬರೆದಿದ್ದಾರೆ. ಶರಣೆ ದುಗ್ಗಳೆಯ ಎರಡೂ ವಚನಗಳಲ್ಲಿ ಬಸವಣ್ಣವರನ್ನು ಹೆಸರಿಸಿದ್ದಾರೆ.
ಬಸವಣ್ಣನಿಂದ ಗುರುಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.
ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ
ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ
ದಾಸಯ್ಯಪ್ರಿಯ ರಾಮನಾಥ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-784)
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತ ಹಾಗಿರಬೇಕಲ್ಲದೇ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-785)
ಜೇಡರ ದಾಸಿಮಯ್ಯನವರು ಅನುಭವ ಮಂಟಪದ 770 ಅಮರ ಗಣಂಗಳಲ್ಲಿ ಒಬ್ಬರಾಗಿದ್ದರು ಎನ್ನುವುದಕ್ಕೆ ಪುರಾವೆ ಸಿಗುತ್ತದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯನವರನ್ನು ಪ್ರಸ್ತಾಪಿಸಿದ್ದಾರೆ.
ತೊತ್ತಿಂಗೆ ಬಲ್ಲಹನೊಲಿದಡೆ
ಪದವಿಯ ಮಾಡದೆ ಮಾಬನೆ?
ಜೇಡರ ದಾಸಯ್ಯಂಗೊಲಿದಾತ
ಮತ್ತೊಬ್ಬ ದೇವನೆ, ಅಯ್ಯಾ?
ಮಾದಾರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,
ತೆಲುಗು ಬೊಮ್ಮಯ್ಯಂಗೆ ಒಲಿದಾತ
ಮತ್ತೊಬ್ಬ ದೇವನೆ, ಅಯ್ಯಾ?
ಅಯ್ಯ ಎನ್ನ ಮನದ |ಪಂಚೇಂದ್ರಿಯ [ಅವನತ್ತ]ಲಾದಡೆ
ತನ್ನತ್ತ ಮಾಡುವ ಕೂಡಲಸಂಗಮದೇವಯ್ಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-124/ವಚನ ಸಂಖ್ಯೆ-476)
ಹೀಗೆ ಹಲವಾರು ವಚನಗಳಲ್ಲಿ ಬಸವಣ್ಣನವರು ಜೇಡರ ದಾಸಿಯ್ಯನವರನ್ನು ಹೆಸರಿಸಿದ್ದಾರೆ ಮತ್ತು ದಾಸ. ದಾಸಿದೇವ, ದಾಸಯ್ಯ, ದಾಸಿಮಯ್ಯ ಅಂತಾ ಪ್ರಸ್ತಾಪಿಸಿದ್ದನ್ನು ನಾವು ಕಾಣಬಹುದು.
ಕ್ರಿ. ಶ. 1148 ರ ಗೊಬ್ಬೂರು ಶಾಸನ ಮತ್ತು ಅರಸೀಕೆರೆ ತಾಲೂಕಿನ ಹಿರಿಯೂರು ಶಾಸನದಲ್ಲಿ ಜೇಡರ ದಾಸಿಮಯ್ಯನವರ ಹೆಸರಿರುವ ದಾಖಲೆಗಳ ಬಗ್ಗೆ ವಿವರಣೆ ಸಿಗುತ್ತದೆ. ಜೇಡರ ದಾಸಿಮಯ್ಯನವರು ಬಸವಣ್ಣನವರ ಹಿರಿಯ ಸಮಕಾಲೀನರು. ಬಸವಣ್ಣನವರಿಗಿಂತ ಸುಮಾರು 10/15 ವರ್ಷ ದೊಡ್ಡವರಿರಬಹುದು ಅಂತ ಈ ಶಾಸನಗಳಿಂದ ತಿಳಿದುಕೊಳ್ಳಬಹುದು. ಗೊಬ್ಬೂರು ಶಾಸನದಲ್ಲಿ ಬರೆದಿರುವಂತೆ:
ಪಿರಿಯ ಗೊಬ್ಬೂರಶೇಷ ಮಹಾಜನಂಗಳ ದಿವ್ಯ ಶ್ರೀಪಾದ ಪದ್ಮಾಕರಾಧಾಕರು ಶ್ರೀ ರಾಮೇಶ್ವರ ದೇವರ ಗಂಧವಾರಣರ್ ಜಾಡ ಕುಲತಿಲಕ ಜೇಡರ ದಾಸಮಯ್ಯ ಪ್ರಿಯಪುತ್ರ ಸಕಳ ಜಾಡ ಗೊತ್ತಳಿಗಳು ಕುಲದೇವ ದೇವನಪ್ಪ ಗೊಜ್ಜೇಶ್ವರ ದೇವರ ಪೂಜೆ.
ಅರಸೀಕೆರೆ ತಾಲೂಕಿನ ಹಿರಿಯೂರಿನ ಬಳಿ ಇರುವ ಗೀಜಗನಹಳ್ಳಿ ಶಾಸನ (ಕ್ರಿ. ಶ. 1201) ದಲ್ಲಿ ಜೇಡರ ದಾಸಿಮಯ್ಯನವರ ಪ್ರಸ್ತಾಪವಿದೆ. ಅಂದರೆ ಗುಲ್ಬರ್ಗಾ ಜಿಲ್ಲೆಯ ಸುರುಪುರ ತಾಲೂಕಿನ ಮುದೇನೂರಿನಿಂದ ಅರಸೀಕೆರೆಯಷ್ಟು ದೂರ ವ್ಯಾಪಿಸಿದ್ದನ್ನು ಈ ಶಾಸನದಲ್ಲಿ ಕಾಣಬಹುದು. ಇನ್ನು ಬಿದರೆ ಶಾಸನ (ಕ್ರಿ. ಶ. 1165), ಚಿಕ್ಕಮುದೇನೂರು ಶಾಸನ (ಕ್ರಿ. ಶ. 1167), ಕಿರಿಯಿಂಡಿ ಶಾಸನ (ಕ್ರಿ. ಶ. 1197), ಅಬ್ಬಲೂರು ಚಿತ್ರ ಶಾಸನ, ಬನವಾಸಿ ಚಿತ್ರ ಶಾಸನಗಳಲ್ಲಿ ಜೇಡರ ದಾಸಿಮಯ್ಯನವರ ಪ್ರಸ್ತಾಪ ಕಾಣಬಹುದು. ಇವರೇ ಜೇಡರ ದಾಸಿಮಯ್ಯನವರು ಅನ್ನುವುದಕ್ಕೆ ದಾಖಲೆಯಾಗುತ್ತದೆ. ಹರಿಹರನ ಕಾವ್ಯದಲ್ಲಿ “ಮುದೇನೂರೋಳ್ ಜೇಡರ ದಾಸಮಯ್ಯ ರಾಮನಾಥಾ” ಅಂತ ಸ್ಪಷ್ಟ ಉಲ್ಲೇಖ ಇದೆ. ಹಾಗಾಗಿ ಇವರೇ ವಚನಕಾರರಾದ ಜೇಡರ ದಾಸಿಮಯ್ಯನವರು ಅಂತ ಸ್ಪಷ್ಟವಾಗಿ ಹೇಳಬಹುದು. ಇದನ್ನು ಡಾ. ಎಮ್. ಎಮ್. ಕಲಬುರ್ಗಿಯವರು ಬರೆದ “ಶಾಸನಗಳಲ್ಲಿ ಶಿವಶರಣರು” ಪುಸ್ತಕದಲ್ಲಿ ನಿರೂಪಿತವಾಗಿದೆ.
ಕಾಲಮಾನ ಮತ್ತು ಶಾಸನಗಳಲ್ಲಿ ಪ್ರಸ್ತಾಪಿಸಿದ ಹಾಗೇ ದೇವರ ದಾಸಿಮಯ್ಯನವರು ಮತ್ತು ಜೇಡರ ದಾಸಿಮಯ್ಯನವರು ಇಬ್ಬರೂ ಬೇರೆ ಬೇರೆ ಅನ್ನೋದು ಬಹಳ ಸ್ಪಷ್ಟವಾಗಿದೆ. ವಚನಗಳಿಂದ ಜೇಡರ ದಾಸಿಮಯ್ಯನವರನ್ನು ಗುರುತಿಸಬಹುದು. ಕರ್ನಾಟಕದ ಇತಿಹಾಸ ಮತ್ತು ಶಾಸನಗಳ ಆಧಾರದ ಮೇಲೆ ದೇವರ ದಾಸಿಮಯ್ಯನವರನ್ನು ಗುರತಿಸಬಹುದು.
ಬ್ರಿಟೀಷ್ ಲೇಖಕ ಫ್ಲೀಟ್ ಬರೆದ “Dynasties of the Kanarese Districts” ಪುಸ್ತಕದಲ್ಲಿ ಈ ವಿಷಯದ ಉಲ್ಲೇಖವಿದೆ. ದೇವಾಂಗ, ನೇಕಾರ, ಬಣಗಾರರ ಕಾಯಕದ ವಿಭಿನ್ನತೆ ಮತ್ತು ವೈಷ್ಣವ ಮತ್ತು ಶೈವ ಸಂಪ್ರದಾಯದ ವೈವಿಧ್ಯತೆಯ ಬಗ್ಗೆ ಪ್ರಸ್ತಾಪವಿದೆ. ಶರಣೆಯರನ್ನು ಕೀಳು ಮಟ್ಟದಲ್ಲಿ ಕಾಣುವ ರವಿ ಹಂಜ್ ಎನ್ನುವ ಬೇವರ್ಸಿಗೆ ಇಷ್ಟು ವಿವರಣೆ ಸಾಕು ಎನಿಸುತ್ತದೆ.
ಮುಂದಿನ ಸಾಲುಗಳಲ್ಲಿ “ಮೊಲೆ ಮುಡಿ ಮೂಡಿ ಬಂದರೆ ಹೆಣ್ಣೆಂಬರು” ಎನ್ನುವ ವಚನಗಳನ್ನು ಬರೆದಿರುವ ಇಬ್ಬರು ವಚನಕಾರ್ತಿಯರ ಹಾಗೂ ಜೇಡರ ದಾಸಿಮಯ್ಯನವರ ವಚನಗಳನ್ನು Quote ಮಾಡತಾನೆ. ಒಂದು ಶರಣೆ ಸತ್ಯಕ್ಕನವರು ಇನ್ನೊಬ್ಬ ಶರಣೆ ಗೊಗ್ಗವ್ವೆಯವರ ವಚನ.
ಜೇಡರ ದಾಸಿಮಯ್ಯನವರ ವಚನ:
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ
ಕಾಣಾ ರಾಮನಾಥ
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-846)
ಶರಣೆ ಗೊಗ್ಗವ್ವೆಯವರ ವಚನ:
ಮೊಲೆ ಮುಡಿ ಬಂದಡೆ ಹೆಣ್ಣೆಂಬರು,
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ,
ಹೆಣ್ಣೊ ಗಂಡೊ ನಾಸ್ತಿನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-301/ವಚನ ಸಂಖ್ಯೆ-778)
ಶರಣೆ ಸತ್ಯಕ್ಕನವರ ವಚನ:
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ
ಅದು ಜಗದ ಹಾಹೆದ ಬಲ್ಲವರ ನೀತಿಯಲ್ಲ
ಏತರ ಹಣ್ಣಾದಡೂ ಮಧುರವೆ ಕಾರಣ
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ
ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-446/ವಚನ ಸಂಖ್ಯೆ-1226)
ಈ ಮೂರೂ ವಚನಗಳಲ್ಲಿ ಕಂಡು ಬರುವ ಒಂದೇ ಆಶಯ ಸ್ತ್ರೀ ಪುರುಷರು ದೈಹಿಕವಾಗಿ ಬೇರೆ ಬೇರೆ ಅನಿಸಿದರೂ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ವಸ್ತುನಿಷ್ಠ ಚಿಂತನೆಯಲ್ಲಿ ಸರಿ ಸಮಾನರು.
ಪ್ರಪ್ರಥಮ ಸಂವೇದನೆಯ ವಿಷಯವೇ ಲಿಂಗ ಅಸಮಾನತೆ. ಪುರುಷ ಮತ್ತು ಮಹಿಳೆಯರ ದೇಹ ರಚನೆಯ ಅಂತರ ಮತ್ತು ವೈಜ್ಞಾನಿಕವಾಗಿ ಪೂರಕವಾಗಿ ರಚನೆಯಾಗಿರತಕ್ಕಂತ ದೇಹ ರಚನೆ. ಸಂವೇದನೆ ಬಹಳ ಸಂಕೀರ್ಣ ಶಬ್ದ. ಭಾಷಾ ಶಾಸ್ತ್ರದ ಪ್ರಕಾರ ಮೂರು ಶಬ್ದಗಳನ್ನು ಒಳಗೊಂಡಿದೆ. ಮೂರು ಶಬ್ದಗಳ ಸಂಗಮ ಈ “ಸಂವೇದನೆ”
Cognition / Awareness: ಅರಿವು, ಜ್ಞಾನ
Feeling / Sensitivity: ಭಾವನೆ, ಅನುಭಾವ
Conation: ಸಂಕಲ್ಪ, ಇಚ್ಛಾಶಕ್ತಿ.
ಅರಿವು, ಭಾವನೆ, ಸಂಕಲ್ಪಗಳು ಅಥವಾ ಜ್ಞಾನ, ಅನುಭಾವ, ಇಚ್ಛಾಶಕ್ತಿಗಳ ಸಂಗಮ ಈ ಸಂವೇದನೆ ಅನ್ನುವ ಶಬ್ದ. ಮನಸ್ಸಿಗೆ ತಟ್ಟುವುದು, ಅಂತರಾಳದ ಅಭಿವ್ಯಕ್ಕಿ, ಅಂತರಂಗದ ನೋವು ನಲಿವಿನ ಬಾಹ್ಯ ನಿರೂಪಣೆ ಇವು ಕೆಲ ವ್ಯಾಖ್ಯಾನಗಳು. ಸ್ತ್ರೀತನ ಮತ್ತು ಪುರುಷತನವನ್ನು ಕೇವಲ ದೈಹಿಕ ಕಾರಣಗಳಿಂದಾಗಿಯೇ ಬೇರೆ ಬೇರೆ ಮಾಡಿದರು. ಪುರುಷರು ಶಕ್ತಿಗೆ ಉದಾಹರಣೆಯಾದರೆ, ಸ್ತ್ರೀಯರು ಸಹನಶೀಲತೆ ಮತ್ತು ಸಂವೇದನೆಗೆ ಉದಾಹರಣೆಯಾದದ್ದನ್ನು ನಾವು ಎಲ್ಲ ಕಾಲಕ್ಕೂ ಕಾಣಬಹುದು. ಈ ಸಂವೇದನೆಯನ್ನು ಶರಣ ಜೇಡರ ದಾಸಿಮಯ್ಯನವರು, ಶರಣೆ ಸತ್ಯಕ್ಕ ಮತ್ತು ಶರಣೆ ಗೊಗ್ಗವ್ವೆಯರು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ.
ವಚನಕಾರರ ಮತ್ತು ವಚನಕಾರ್ತಿಯರ ಇಂಥ ಅತ್ಯುನ್ನತ ಸುಸಂಸ್ಕೃತ ವಿಚಾರಧಾರೆಯನ್ನು ಕಾಮಸೂತ್ರದ ಎಳೆಗೆ ಹೋಲಿಸಿ ಬರೆಯುವ ಈ ದರಿದ್ರ ಹಂದಿ ರವಿ ಹಂಜ್‌ನಿಗೆ ಏನು ಹೇಳಬೇಕೆಂದು ವೀರಶೈವದ ಪ್ರಕಾಂಡ ಪಂಡಿತ ಮಹಾನುಭಾವರೇ ಹೇಳಬೇಕು.
ಮುಂದಿನ ಪ್ಯಾರಾದಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನವನ್ನು ಲಿಂಗ ಸಮಾನತೆಗೆ ಹೋಲಿಸಿ ಬರೆದಿದ್ದಾನೆ ಈ ರವಿ ಹಂಜ್ ಎನ್ನುವ ದುಷ್ಟ ಮರ್ಕಟ. ಈ ವಚನದ ಹಿನ್ನೆಲೆಯೊಂದಿಗೆ ಈ ಅಜ್ಞಾನಿಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತೇನೆ.
ಅಕ್ಕಮಹಾದೇವಿಯವರ ತಾಯಿ ಲಿಂಗಮ್ಮನವರು ಮದುವೆಯಾಗುವಂತೆ ಒತ್ತಾಯಿಸಿದಾಗ ಅಕ್ಕಮಹಾದೇವಿಯವರಿಗೆ ಬೆಂಕಿಯಂಥಾ ಸಿಟ್ಟು ಬಂದು ಬಿಡತದೆ. ಅದನ್ನ ಹರಿಹರ ಬಹಳ ಸೊಗಸಾಗಿ ಬರೀತಾನೆ.
ಏನೆ ದಿಗಿಲು ಭುಗಿಲೆಂದು ಕೋಪಿಸಿದಳಾ ಭಕ್ತೆ
ಮನದೊಳು ಮಹೇಶ್ವರಗೆ ಮೊರೆಯಿಟ್ಟಳಾ ಭಕ್ತೆ
ನುಡಿದಳೆಲೆ ಭವಿಯೊಡನೆ ಬೆರೆಸಿರಲ್ ಕಾರ್ಪನೇ?
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-25/ಸಾಲು-120)
ಕೋಪಗೊಂಡ ಅಕ್ಕಮಹಾದೇವಿಯವರು ಮಹೇಶ್ವರನನ್ನು ಮನದಲ್ಲಿ ಪ್ರಾರ್ಥನೆ ಮಾಡತಾಳೆ. ಏನಿದೇನಿದು ಭವಿಯೊಡನೆ ನಾನು ಸಂಸರ್ಗ ಮಾಡುವುದೇ? ಭವಿಯೊಡನೆ ಬಾಳುವೆ ಸಾಧ್ಯವೇ ಇಲ್ಲ ಅನ್ನೋದು ಅಕ್ಕಮಹಾದೇವಿಯವರ ನೇರವಾದಂಥ ಮಾತು. ಕೋಪಗೊಂಡ ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನನ್ನು ಮನದಲ್ಲಿ ಪ್ರಾರ್ಥನೆ ಮಾಡತಾಳೆ. ಏನಿದೇನಿದು ಭವಿಯೊಡನೆ ನಾನು ಸಂಸರ್ಗ ಮಾಡುವುದೇ? ಭವಿಯೊಡನೆ ಬಾಳುವೆ ಸಾಧ್ಯವೇ ಇಲ್ಲ ಅನ್ನೋದು ಅಕ್ಕಮಹಾದೇವಿಯವರ ನೇರವಾದಂಥ ಮಾತು ಈ ವಚನದಲ್ಲಿ ಮೂಡಿ ಬಂದಿದೆ.
ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಣುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ
ಮರುಳಾಗಿ ತೋರುವುದು.
ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–98/ವಚನ ಸಂಖ್ಯೆ–278)
ಗಂಡಿಗೆ ಹೆಣ್ಣು ಮಾಯೆಯಾದರೆ ಹೆಣ್ಣಿಗೆ ಗಂಡು ಮಾಯೆ ಯಾಕೆ ಅಲ್ಲ ಎನ್ನುದನ್ನು ಈ ಮೂಲಕ ಪ್ರಶ್ನಿಸುತ್ತಾರೆ. ಹಾಗಾಗಿ ವೈರಾಗ್ಯನಿಧಿ ಅಕ್ಕಮಹಾದೇವಿಯವರು ಮಾಯೆಯನ್ನು ಕುರಿತು ನಿರೂಪಣೆ ಮಾಡಿದ್ದಾರೆ. ಚನ್ನಮಲ್ಲಿಕಾರ್ಜುನನ ಕೃಪೆ ಹೊಂದಿದವರಿಗೆ ಯಾವ ಮಾಯೆ, ಅಜ್ಞಾನ, ಅಭಿಮಾನಗಳು ಇರುವುದಿಲ್ಲ. ಲೌಕಿಕ ವ್ಯಾಮೋಹದಿಂದ ಮರುಳಾಗುವುದನ್ನು ಅಕ್ಕಮಹಾದೇವಿಯವರು ಖಂಡಿಸಿದ್ದಾರೆ. ಇಂಥ ಅದ್ಭುತ ಸುಸಂಸ್ಕೃತಿಯ ವಚನವನ್ನು ತನ್ನ ಮೂಗಿನ ನೇರಕ್ಕೆಳೆದುಕೊಂಡು ಲಿಂಗ ಸಮಾನತೆಯ ತತ್ವ ಸಿದ್ಧಾಂತವನ್ನು ಭೋಧಿಸುವುದಕ್ಕೆ ಈತನಿಗೆ ಇರುವ ಯೋಗ್ಯತೆ ಏನು ಎನ್ನುವುದನ್ನು ಪ್ರಶ್ನಿಸಬೇಕಾಗಿದೆ.
ಇವನ ಎಡಬಿಡಂಗಿತನ ಕಾಯಕ ನಿಷ್ಠೆಯ ಶರಣೆ ಆಯ್ದಕ್ಕಿ ಲಕ್ಕಮ್ಮನವರ ಒಂದು ವಚನದ ಮೂಲಕ ಮುಂದುವರೆಯುತ್ತದೆ. ಮದಿರೆ-ಮಾನಿನಿ-ಮಾಂಸದ ಅಮಲಿನಲ್ಲಿ ಶರಣೆ ಆಯ್ದಕ್ಕಿ ಲಕ್ಕಮ್ಮನವರ ವಚನಾಂಕಿತ “ಮಾರಯ್ಯಪ್ರಿಯ ಅಮರೇಶ್ವರಲಿಂಗ” ವನ್ನೇ ದುರುದ್ದೇಶಪೂರ್ವಕವಾಗಿ “ಮಾರಯ್ಯಪ್ರಿಯ ಅಮಲೇಶ್ವರಲಿಂಗ” ಎಂದು ವಿರೂಪಗೊಳಿಸಿದ್ದಾನೆ. ಇದಕ್ಕೆ ಇವನಿಗೆ ಯಾವ ಎಕ್ಕಡದಲ್ಲಿ ಹೊಡೀಬೇಕೆನ್ನುವುದನ್ನು ವೀರಶೈವಾಮೃತವನ್ನು ಕುಡಿದಿರುವ ಮಹಾನ್ ವೀರಶೈವ ಪಂಡಿತರು ಉತ್ತರಿಸಬೇಕಾಗಿದೆ.
ಶರಣೆ ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ ಮಸಣಮ್ಮನವರ ಅದ್ಭುತವಾದ ವಚನವನ್ನು ಇಲ್ಲಿ ಉಲ್ಲೇಖ ಮಾಡಿದ್ದಾನೆ.
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ
ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು,
ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು
ಮಸಣಯ್ಯಪ್ರಿಯ ಗಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ-298/ವಚನ ಸಂಖ್ಯೆ–270)
ಬರೀ ಸೊಂಟದ ಕೆಳಗಿನ ಅಸಭ್ಯ ವಿಚಾರಗಳನ್ನು ಶರಣೆ ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ ಮಸಣಮ್ಮನವರ ವಿಚಾರದಲ್ಲಿ ಬಳಸಿದ್ದಾನೆ. ಸಾಲದ್ದಕ್ಕೆ ಮಸಣಮ್ಮನವರ ವಿಚಾರಧಾರೆಗಳನ್ನು ರಜನೀಶನ ಲೈಂಗಿಕ ತೃಪ್ತಿಯ ಸಿದ್ಧಾಂತವಾದ “ಸಂಭೋಗದಿಂದ ಸಮಾಧಿ” ತತ್ವಕ್ಕೆ ಹೋಲಿಸಿ ವಿಕೃತಿಯನ್ನು ಮೆರೆದಿದ್ದಾನೆ ಈ ಲೋಫರ್ ರವಿ ಹಂಜ್. ಲೌಕಿಕತೆಯಿಂದ ಅಲೌಕಿಕ ಪಡೆಯುವ ಮಾರ್ಗವೆಂದು ಸಂಭೋಗ ಮಾರ್ಗವನ್ನು ಕುರಿತು ಬಳಸಿದ್ದು ಅಂತ ಬರೆಯುವ Third Rated Vulgar ಭಾಷೆಯನ್ನು How to indulge ಎನ್ನುವುದು ಬಹಳ ನೋವಿನ ವಿಷಯ. ಯಾವ ವಚನಕಾರರು ಮತ್ತು ವಚನಕಾರ್ತಿಯರು ಇಂಥ ವಿಷಪೂರಿತ ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಅಂಥಾದ್ದರಲ್ಲಿ ಈ Vulgar Creature ಇಂಥ ವಿಚಾರಗಳನ್ನು ಎಳೆದು ತರುತ್ತಾನೆಂದರೆ ಇವನ ತಾಯಿ ಇವನಿಗೆ ಎಂಥ ಸಂಸ್ಕಾರ ನೀಡಿರಬಹುದು ಎನ್ನುವುದು ಗಂಭೀರವಾಗಿ ವಿಚಾರ ಮಾಡುವ ಸಂಗತಿ.
ಶರಣೆ ಸೂಳೆ ಸಂಕವ್ವೆಯವರನ್ನು ವೃಥಾ ಎಳೆದು ತಂದಿರುವ ನಿರ್ಲಜ್ಜ ನರಿಬುದ್ಧಿಯ ರವಿ ಹಂಜ್ ಅವರನ್ನು ಯಾವ Low Level ಗೇ ಇಳಿಸಿದ್ದಾನೆಂದರೆ ಸುಸಂಸ್ಕೃತ ಸಮಾಜದವರೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರ.
“ನಿರ್ಲಜ್ಜೇಶ್ವರ” ಎಂಬ ಅಂಕಿತ ಶರಣೆ ಸೂಳೆ ಸಂಕವ್ವೆ ಮತ್ತು ಶರಣೆ ಕೊಟ್ಟಣದ ಸೋಮವ್ವೆ ಈ ಇಬ್ಬರ ವಚನಗಳಲ್ಲಿ ಕಂಡು ಬರುತ್ತದೆ. ಇದುವರೆಗೆ ದೊರೆತ ಒಂದೊಂದೇ ವಚನದಲ್ಲಿ ಕೊನೆಯ ಸಾಲು ಒಂದೇ ಆಗಿದೆ.
ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ,
ಹಿಡಿದೆಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ.
ವ್ರತಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–449/ವಚನ ಸಂಖ್ಯೆ–1232)
ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವೃತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ ಅರಿದು ಬೆರೆದೆನಾದೆಡೆ,
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–289/ವಚನ ಸಂಖ್ಯೆ–750)
ಶರಣೆ ಸೂಳೆ ಸಂಕವ್ವೆಯವರು ಪ್ರತಿ ವೃತ್ತಿಗೂ ಅದರದೇ ಆದ ಗೌರವ, ಮಾನ್ಯತೆ, ಕುರುಹುಗಳಿವೆಯೆಂದು ತನ್ನ ವೃತ್ತಿಯ ರೀತಿ ನೀತಿಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ. ಅವರ ಈ ಬಗೆಯ ದಿಟ್ಟತನದಿಂದ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಾರೆ. ಎಂಥ ಸಂವೇದನಾಶೀಲತೆಯ ಪ್ರತಿಬಿಂಬವನ್ನು ಸಮಾಜಕ್ಕೆ ನೀಡಿದ್ದಾರೆ ಈ ಇಬ್ಬರೂ ವಚನಕಾರ್ತಿಯರು. ಒಂದೇ ವಚನ ಬರೆದರೂ ಸಂವೇದನೆಯನ್ನು ಚನ್ನಾಗಿ ನಿರೂಪಿಸಿದ್ದಾರೆ. ಇಂತಹ ಸಂವೇದನಾಶೀಲ ವಿಚಾರವನ್ನು ವಿಕಾರಗೊಳಿಸಿರುವುದು ಯಾವ Angle ನಿಂದ ಸರಿ ಎನ್ನುವುದನ್ನು ಲೋಫರ್ ರವಿ ಹಂಜ್‌ನೇ ಹೇಳಬೇಕು.
ಯಾವ ಬಸವಾದಿ ಶರಣರು ಮಹಿಳೆಯರನ್ನು ಎರಡನೇ ದರ್ಜೆಗೆ ಇಳಿಸಿದ್ದರು ಎನ್ನುವುದನ್ನು ಈ ಮಹಾನ್ ಪಂಡಿತನೇ ಹೇಳಬೇಕು. ಬಸವಾದಿ ಶರಣರ ಅದ್ವೈತ ಭಕ್ತಿಯನ್ನು ದ್ವೈತ ಭಕ್ತಿಯ ಪ್ರತಿಪಾದಕರಾದ ಲಲ್ಲೇಶ್ವರಿ ಮತ್ತು ಮೀರಾಬಾಯಿಯವರಿಗೆ ಹೋಲಿಸಿದ್ದು ಹಾಸ್ಯಾಸ್ಪದ. ಅಲ್ಲಿಗೆ ಈತನಿಗೆ ಭಕ್ತಿ ಪರಂಪರೆಯ ABCDನೂ ಗೊತ್ತಿಲ್ಲಾ ಎನ್ನುವುದು ಶತಸಿದ್ಧ. ಸಾಲದ್ದಕ್ಕೆ ವೀರಶೈವ ವಚನಕಾರ್ತಿಯರು ಅಂತ ಹೇಳುವ ಮೂಲಕ ಎಂಜಲು ಕಾಸಿಗಾಗಿ ಪಂಚಪೀಠದವರಿಗೆ Sold out ಆಗಿದ್ದಾನೆ ಎನ್ನುವುದು Proveಆಗುತ್ತದೆ.
ಎಂಥ ನಾಚಿಕೆ ಮಾನ-ಮರ್ಯಾದೆಯಿಲ್ಲ ಈತನಿಗೆ ಎನ್ನುವುದನ್ನು “ಹೆಣ್ಣು ಮಾಯೆ” ಎನ್ನುವ ಪರಿಧಿಯಿಂದ ಬಸವಾದಿ ಶರಣರು ಆಚೆ ಬರಲಿಲ್ಲಾ ಎನ್ನುವುದನ್ನು ಬರೆಯುವುದರ ಮೂಲಕ ತೋರಿಸಿ ಕೊಟ್ಟಿದ್ದಾನೆ. ತೀರ ಇತ್ತೀಚೆಗೆ ವಿನಯಾ ವಕ್ಕುಂದ ಎನ್ನುವ ಅಜ್ಞಾನಿ ಹೆಣ್ಣುಮಗಳು “ಬಸವಣ್ಣನವರಿಗೆ ಪುರುಷ ಅಹಂಕಾರವಿತ್ತು” ಎಂದು ಅರ್ಥಹೀನ ಮತ್ತು ದುರಹಂಕಾರದ ಹೇಳಿಕೆ ನೀಡಿದಾಗ ನಾಡಿನ ಎಲ್ಲಾ ಶರಣ ಬಂಧುಗಳು ಮುಖಾ ಮೂತಿ ಉಗಿದಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಬಸವಾದಿ ಶರಣರು ತಮ್ಮ ಬದುಕಿನುದ್ದಕ್ಕೂ ಅಕ್ಕ, ಅವ್ವ ಎಂದು ಮಾತನಾಡಿಸಿದ್ದರೇ ವಿನಹ ಮಹಿಳೆಯರನ್ನು ಎಂದಿಗೂ ಕೀಳಾಗಿ ಕಂಡಂಥ ಉದಾಹರಣೆಗಳಿಲ್ಲ.
ಬಹಳ ಪ್ರಮುಖವಾಗಿ ಶೂನ್ಯ ಸಂಪಾದನೆಗಳಲ್ಲಿ, ಬಸವ ಪುರಾಣಗಳಲ್ಲಿ ಮತ್ತು ರಗಳೆಗಳಲ್ಲಿ ಪ್ರಸ್ತಾಪವಾದ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಶರಣ ಕಿನ್ನರಿ ಬ್ರಹ್ಮಯ್ಯನವರ ಭೆಟ್ಟಿಯ ಸಂದರ್ಭವನ್ನು ಅತ್ಯಂತ ಹೀನಾಯವಾಗಿ ಹಾಗೂ ಅತ್ಯಂತ ಕೊಳಕು ಬುದ್ಧಿಯಿಂದ ಈ ನಾಲಾಯಕ ರವಿ ಹಂಜ್ ಪ್ರಸ್ತಾಪ ಮಾಡಿದ್ದಾನೆ. ಈ ಜ್ಞಾನಶೂನ್ಯ ಅಜ್ಞಾನಿಗೆ ಸ್ವಲ್ಪ ಶೂನ್ಯಸಂಪಾದನೆಗಳು, ಬಸವ ಪರಾಣಗಳು ಹಾಗೂ ರಗಳೆಗಳ ಕುರಿತು ಒಂದಷ್ಟು ಮಾಹಿತಿಯನ್ನು ನೀಡಿ ಮುಂದೆ ಹೋಗೋಣ.
ಬಸವ ಪುರಾಣಗಳು:
ಬಸವ ಪೂರ್ವೋತ್ತರದಲ್ಲಿ ಹಲವಾರು ಸಾಹಿತಿಗಳು ಮತ್ತು ಕವಿಗಳು ತಮ್ಮ ಸಾಹಿತ್ಯದಲ್ಲಿ ಬಸವಣ್ಣನವರ ಪ್ರಸ್ತಾಪ ಮಾಡಿದ್ದಾರೆ. ಅವರಲ್ಲಿ ಪ್ರಮುಖರಾದವರು ತೆಲುಗಿನಲ್ಲಿ ಸಾಹಿತ್ಯ ರಚನೆ ಮಾಡಿದ ಪಾಲ್ಕುರಿಕೆ ಸೋಮನಾಥ, ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿದ ಹರಿಹರ ಮತ್ತು ಭೀಮಕವಿ, ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿದ ಕಂಚಿ ಶಂಕರಾರಾಧ್ಯರು ಪ್ರಮುಖರು.
- ಪಾಲ್ಕುರಿಕೆಯ ಸೋಮನಾಥ (ಸೋಮಾರಾಧ್ಯ) (ಬಸವ ಪುರಾಣಮು):
ಮೂಲತಃ ಆರಾಧ್ಯ ಶೈವ ಬ್ರಾಹ್ಮಣರಾದ, ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯನ್ನು ಬಲ್ಲವರಾಗಿದ್ದ ಆಂಧ್ರದ ನಲಗೊಂಡ ಜಿಲ್ಲೆಯ ಜನಾಗಾಂವ ತಾಲೂಕಿನ ಪಾಲ್ಕುರಿಕೆಯವರಾದ ಪಾಲ್ಕುರಿಕೆ ಸೋಮನಾಥರು “ಬಸವ ಪುರಾಣಮು” ಎನ್ನುವ ಕಾವ್ಯವನ್ನು ರಚಿಸಿದ್ದಾರೆ. ರಚನೆಯ ಕಾಲ ಸುಮಾರು ಕ್ರಿ. ಶ 1190 ಎಂದು ಹೇಳಲಾಗುತ್ತದೆ. ಇದು ಬಸವಣ್ಣನವರ ಕಾಲಘಟ್ಟಕ್ಕೆ ತೀರ ಹತ್ತಿರವಾಗಿದೆ.

ಈ ಕಾವ್ಯ ಶುರುವಾಗುವುದೇ ಬಸವಣ್ಣನವರ ಸ್ಮರಣೆಯಿಂದ. ಈ ಕಾವ್ಯದಲ್ಲಿ ಬಸವಣ್ಣನವರ ಹುಟ್ಟು, ಉಪನಯನ, ವಿದ್ಯಾಭ್ಯಾಸ, ಮದುವೆ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗುವ ಚಾರಿತ್ರಿಕ ವಿಷಯಗಳು ಮಂಡನೆಯಾಗಿರುವುದರಿಂದ ವಿಶೇಷ ಮಹತ್ವವನ್ನು ಪಡೆದಿದೆ.
ಪಾಲ್ಕುರಿಕೆ ಸೋಮನಾಥರು ರಚಿಸಿದ ಇನ್ನೊಂದು ಸಾಹಿತ್ಯ “ಗಣ ಸಹಸ್ರಮು” ಕೂಡ ಪ್ರಸಿದ್ಧವಾಗಿದೆ. ಇದರ ಕಾಲ ಸುಮಾರು ಕ್ರಿ. ಶ. 1200. ಗಣ ಸಹಸ್ರದಲ್ಲಿಯೂ ಬಸವಣ್ಣನವರ ಉಲ್ಲೇಖ ಇದೆ.
ಶಿವತತ್ವ ಸರ್ವ ಚೈತನ್ಯನೀಶ | ಗುರುಬಸವಲಿಂಗ ||
ಪ್ರಥಮಾಚಾರ್ಯರೆಂದು | ವಂದಿಸಿ ನುತಿಸುವೆನು ||
ಅನುಭವ ಸಾರ, ಸೋಮನಾಥ ಸ್ಥವನ, ಪಂಚ ಪ್ರಕಾರ ಗದ್ಯ, ನಮಸ್ಕಾರ ಗದ್ಯ, ಅಕ್ಷರಾಂಕನ ಗದ್ಯ, ಬಸವೋದಾಹರಣ ಯುಗ್ಮ, ಬಸವ ರಗಡ, ಬಸವ ಪುರಾಣ ದ್ವಿಪದಿ, ಅಕ್ಷರಾಂಕ ಪದ್ಯ, ಚತುರ್ವೇದ ಸಾರ, ಸೋಮನಾಥ ಭಾಷ್ಯ, ವೃಷಾಧಿಪ ಶತಕ, ಪಂಡಿತಾರಾಧ್ಯ ಚರಿತ್ರೆ, ಚೆನ್ನಮಲ್ಲನ ಸೀಸ ಪದ್ಯಗಳು, ಆರಾಧ್ಯ ಚಾರಿತ್ರ್ಯ, ಅನ್ಯವಾದ ಕೋಲಾಹಲ, ಬಸವಣ್ಣನ ಪಂಚಗದ್ಯ, ಸದ್ಗುರು ರಗಳೆ, ಚೆನ್ನಬಸವ ರಗಳೆ, ಶರಣು ಬಸವ ರಗಳೆ, ಬಸವೇಶ್ವರ ಸಹಸ್ರ ನಾಮಾವಳಿ ಮೊದಲಾದ 21 ಗ್ರಂಥಗಳನ್ನು ಬರೆದಿರುವುದು ತಿಳಿದು ಬರುತ್ತದೆ. ಇದರಲ್ಲಿ ಕೆಲವು ಕೃತಿಗಳು ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಬಸವ ಪುರಾಣಮು ಕಾವ್ಯವನ್ನು ಕ್ರಿ. ಶ 1369 ರಲ್ಲಿ ಭೀಮಕವಿ ಇದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ನಂತರ ಕ್ರಿ. ಶ 1863 ರಲ್ಲಿ ಬ್ರಿಟೀಷ್ ಆಡಳಿತದ ಕಾಲದಲ್ಲಿದ್ದ ಬೌನ್ ಎನ್ನುವವರಿಂದ ಇಂಗ್ಲೀಷಿಗೆ ಭಾಷಾಂತರ ಮಾಡಿದ್ದನ್ನು ನಾವು ನೆನಪಿಸಿಕೊಳ್ಳಬೇಕು.
- ಹಂಪೆಯ ಹರಿಹರದೇವ (ಬಸವರಾಜದೇವರ ರಗಳೆ):
ಬಸವಣ್ಣನವರ ಕಾಲಘಟ್ಟಕ್ಕೆ ಹತ್ತಿರವಿದ್ದಂಥ ಮತ್ತೊಬ್ಬ ಕವಿ ಹರಿಹರರೂ ಸಹ ಒಬ್ಬ ಆರಾಧ್ಯ ಶೈವ ಬ್ರಾಹ್ಮಣರು. ಹರಿಹರ ಹುಟ್ಟಿ ಬೆಳೆದ ಊರು ಹಂಪೆ, ಕಲ್ಯಾಣಕ್ಕೆ ಸಮೀಪವಿರುವುದರಿಂದ ಇವರು ಬಸವಣ್ಣನವರ ಬಗ್ಗೆ ನಿರೂಪಿಸಿದಂಥ ಕಾವ್ಯಗಳಲ್ಲಿ ಬಹುಪಾಲು ನೇರವಾಗಿ, ವಾಸ್ತವಿಕ ಜೀವನದಿಂದ ಮೂಡಿ ಬಂದವು ಎಂದು ಹೇಳಬಹುದು. ಹಾಗಾಗಿ ಇವರು ಕ್ರಿ. ಶ 1195 ರಲ್ಲಿ ರಚಿಸಿದ “ಬಸವರಾಜದೇವರ ರಗಳೆ” ಬಸವಣ್ಣನವರ ಚರಿತ್ರೆಯನ್ನು ತಿಳಿದುಕೊಳ್ಳಲು ಇರುವ ಪ್ರಮುಖ ಆಕರ. ಇವರು ರಚಿಸಿದ ಗಿರಿಜಾ ಕಲ್ಯಾಣ, ಪಂಪಾಶತಕ, ರಕ್ಷಾಶತಕ, ಶಿವಾಕ್ಷರಮಾಲೆ, 120 ರಗಳೆಗಳು ಇನ್ನಿತರ ಪ್ರಮುಖ ಗ್ರಂಥಗಳು.
ಬಸವರಾಜಾ ನಿನ್ನ | ಗುಣಂಗಳಂ ಬಣ್ಣಿಸಲಳವಲ್ಲ ||
ಈಶನ ಮೀಸಲಿಪ್ಪ | ಭಕ್ತ ನಿನಗೆಣೆಯಿಲ್ಲ ||
ಪಡಿಯಿಲ್ಲ ಪಾಸಟಿಯಾವಂ? | ಪಾಷಂಡಿ ಭೂಮಿಯೋಳ್ ||
ಶಿವಭಕ್ತಿಯನಾರಂಭಿಸಿ | ಸಾಮರ್ಥ್ಯಂ ಬಿತ್ತಿ ||
ಪ್ರತ್ಯಕ್ಷಂಗಳಂ ಬೆಳೆದು | ಗಣಪರ್ವಂಗಳಂ ||
ಸುಫಲಂ ಮಾಡಲೆಂದು | ಬಂದ ಕಾರಣಿಕ ಬಸವಾ ||
ನಿನ್ನ ದೆಸೆಯಿಂದೆಮ್ಮ | ಭಕ್ತಿ ಬಣ್ಣವೇರಿತ್ತು ||
ಭೀಮಕವಿ (ಬಸವ ಪುರಾಣ):
ಕ್ರಿ. ಶ 1369 ರಲ್ಲಿ ಆರಾಧ್ಯ ಶೈವ ಬ್ರಾಹ್ಮಣ ಭೀಮಕವಿಯಿಂದ ರಚನೆಯಾದ ಬಸವಣ್ಣನವರನ್ನು ಕುರಿತಾದ “ಬಸವ ಪುರಾಣ” ಕಾವ್ಯ ಭಾಮಿನಿ ಷಟ್ಪದಿಯಲ್ಲಿ ಮೂಡಿಬಂದ ಕನ್ನಡದ ಮೊತ್ತ ಮೊದಲ ಗ್ರಂಥ. ಇದರಲ್ಲಿ 8 ಕಾಂಡಗಳು, 63 ಸಂಧಿಗಳು, 3,568 ಪದ್ಯಗಳಿರುವ ದೊಡ್ಡ ಗ್ರಂಥ. “ಕವಿ ಸೋಮನಾಥಂ ರಸಮೊಸರೆ ಮುನುಸಿರ್ದುದನೆ ಕನ್ನಡಿಸಿ ಪೇಳ್ವೆಂ” ಎಂದು ಉಲ್ಲೇಖಿಸಿರುವುದರಿಂದ ಪ್ರಸಿದ್ಧ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣಮು ಎಂಬ ತೆಲುಗು ಗ್ರಂಥದ ಅನುವಾದವಾಗಿದೆ ಎನ್ನಬಹುದು. ಬಸವ ಪುರಾಣದಲ್ಲಿ ಬಸವಣ್ಣನವರು ನಡೆಸಿದ ಪವಾಡಗಳನ್ನು ಚಿತ್ರಿಸಿದ್ದಾನೆ.
- ಕಂಚಿ ಶಂಕರಾರಾಧ್ಯ (ವೃಷಭೇಂದ್ರ ವಿಜಯ):
ಸರಿ ಸುಮಾರು 14 ನೇ ಶತಮಾನದ ಉತ್ತರಾರ್ಧದಲ್ಲಿ ಆರಾಧ್ಯ ಶೈವ ಬ್ರಾಹ್ಮಣ ಕಂಚಿ ಶಂಕರಾರಾಧ್ಯರಿಂದ ಚಂಪೂ ಕಾವ್ಯದಲ್ಲಿ ಸಂಸ್ಕೃತದಲ್ಲಿ ರಚನೆಯಾದ “ವೃಷಭೇಂದ್ರ ವಿಜಯ” ಬಸವಣ್ಣನವರನ್ನು ಕುರಿತಾದ ಗ್ರಂಥ.
ದೈವತಂ ಶಿವ ಏವೇತಿ | ತದ್ಭಕ್ತಾಃ ಕುಲಜಾ ಇತಿ ||
ವೀಜಿತಂ ಏನ ನಿರ್ಣೀಯತಂ | ಭಜೇಂ ವೃಷಭೇಶ್ವರಂ ||
ಈ ನಾಲ್ಕೂ ಪುರಾಣಗಳಲ್ಲಿ ಬಸವಣ್ಣನವರನ್ನು ಈಶ್ವರನ ವಾಹನವಾದ ವೃಷಭನ ಅವತಾರವೆಂದು ಚಿತ್ರಿಸಿದ್ದಾರೆ. ಪವಾಡಗಳನ್ನು ಬಸವಣ್ಣನವರು ಮಾಡಿದರು ಎಂದು ಹೇಳುವ ಮೂಲಕ ಐತಿಹಾಸಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಚ್ಚಿ ಹಾಕುವ ಮೂಲಕ ಪವಾಡ ಪುರುಷನನ್ನಾಗಿ ಮಾಡಿದರು. ಬಸವಣ್ಣನವರ ಸಮಗ್ರ ಜೀವನದ ಬೆಳವಣಿಗೆ ಈ ನಾಲ್ಕೂ ಪೌರಾಣಿಕ ಚರಿತ್ರೆಗಳಲ್ಲಿ ಕಂಡು ಬರುವುದಿಲ್ಲ.
ಶೂನ್ಯ ಸಂಪಾದನೆಗಳು:
12 ನೇ ಶತಮಾನ ವಚನಗಳ ಸೃಷ್ಟಿಯ ಯುಗವಾದರೆ 15 ನೇ ಶತಮಾನ ವಚನಗಳ ಸಂಗ್ರಹ, ಸಂಕಲನ, ವ್ಯವಸ್ಥಿತವಾಗಿ ಜೋಡಿಸುವ ಕಾರ್ಯ ಮತ್ತು ವಚನಗಳನ್ನು ವ್ಯಾಖ್ಯಾನಿಸುವ ಯುಗವೆಂದು ಹೇಳಬಹುದು.
ಪ್ರಶ್ನೋತ್ತರ ರೂಪದಲ್ಲಿ ಹಲವಾರು ಪ್ರಸಂಗಗಳನ್ನು ಮತ್ತು ಚರ್ಚೆಗಳನ್ನು ಹಿನ್ನೆಲೆಯಾಗಿ ಬಳಸಿಕೊಂಡು ರಚನೆಯಾದ ಗ್ರಂಥವೇ ಶೂನ್ಯ ಸಂಪಾದನೆ. ವಚನಗಳನ್ನು ಸಂವಾದದ ರೂಪದಲ್ಲಿ ಜೋಡಿಸಿ ಪ್ರತಿಯೊಂದು ವಚನಕ್ಕೂ ಗದ್ಯ ರೂಪದ ಪೀಠಿಕೆಯನ್ನು ನೀಡಲಾಗಿದೆ. ಶಿವನಾಗಿ ಹುಟ್ಟಿಬಂದ ಲಿಂಗವಂತನು ಶಿವತತ್ವವನ್ನು ಮೆರೆದು ಶಿವನಲ್ಲಿ ಸೇರಿ ಶೂನ್ಯತ್ವವನ್ನು ಸಂಪಾದಿಸುವ ಬಗೆಯನ್ನು ತರ್ಕಬದ್ಧವಾಗಿ ಚರ್ಚೆಯ ರೂಪದಲ್ಲಿ ಈ ಶೂನ್ಯಸಂಪಾದನೆಗಳಲ್ಲಿ ಬಂದಿದೆ.
ಇದೂವರೆಗೂ ಲಭ್ಯವಾಗಿರುವ ಶೂನ್ಯ ಸಂಪಾದನೆಗಳು ನಾಲ್ಕು. ಒಟ್ಟು 2037 ವಚನಗಳನ್ನು ಕ್ರೋಢೀಕರಿಸಿ ನಾಲ್ಕು ಶೂನ್ಯ ಸಂಪಾದನೆಗಳನ್ನು ನಿರೂಪಿಸಲಾಗಿದೆ. ಇದು ನಮಗೆ ಈಗ ಲಭ್ಯವಿರುವ ಸುಮಾರು 23,000 ವಚನಗಳಲ್ಲಿ ಕೇವಲ 10% ಮಾತ್ರ.
- ಕ್ರಿ. ಶ 1420: ಶೂನ್ಯ ಸಂಪಾದನೆ – ಶಿವಗಣ ಪ್ರಸಾದಿ ಮಹಾದೇವಯ್ಯ – ಒಟ್ಟು ವಚನಗಳ ಸಂಖ್ಯೆ -1012.
- ಕ್ರಿ. ಶ 1495: ಶೂನ್ಯ ಸಂಪಾದನೆಯ ಪರಿಷ್ಕರಣೆ – ಹಲಗೆ ಆರ್ಯ – ಒಟ್ಟು ವಚನಗಳ ಸಂಖ್ಯೆ -1599.
- ಕ್ರಿ. ಶ 1650: ಗುರುರಾಜ ಚಾರಿತ್ರ್ಯ – ಗುಮ್ಮಳಾಪುರದ ಸಿದ್ಧ ನಂಜೇಶ – ಒಟ್ಟು ವಚನಗಳ ಸಂಖ್ಯೆ –1439.
- ಕ್ರಿ. ಶ 1510: ಶೂನ್ಯ ಸಂಪಾದನೆ – ಗೂಳೂರು ಸಿದ್ಧ ವೀರಣ್ಣನೊಡೆಯರು – ಒಟ್ಟು ವಚನಗಳ ಸಂಖ್ಯೆ –1543.
ಸುಮಾರು ಒಂದು ನೂರು ವರ್ಷದ ಅವಧಿಯಲ್ಲಿ ರಚಿಸಿದ ಈ ನಾಲ್ಕೂ ಶೂನ್ಯ ಸಂಪಾದನೆಗಳ ಕಥಾನಕಗಳು ಒಂದೇ ರೀತಿಯಲ್ಲಿ ಇವೆ. ವಚನಗಳೇ ಇವುಗಳ ಮೂಲ ಆಕರಗಳು. ಕಾಲ್ಪನಿಕ ಸಂದರ್ಭ ಮತ್ತು ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ವಚನಗಳ ಮೂಲಕ ಬಸವಾದಿ ಶರಣರ ಚರಿತ್ರೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲ ಶೂನ್ಯ ಸಂಪಾದನೆಗಳ ಕೇಂದ್ರ ಬಿಂದು ಅಲ್ಲಮ ಪ್ರಭುದೇವರು. ಅಲ್ಲಮ ಪ್ರಭುಗಳು ಒಂದು ಕಡೆ ಇರುತ್ತಿರಲಿಲ್ಲ. ಅಲ್ಲಮ ಪ್ರಭುಗಳ ಈ ವ್ಯಕ್ತಿತ್ವವನ್ನು ನಾವು ನೆನಪಿನಲ್ಲಿಡಬೇಕು.
ಸಾಮಾನ್ಯವಾಗಿ ಶಿಷ್ಯರು ಗುರುಗಳನ್ನು ಹುಡುಕಿಕೊಂಡು ಹೋಗುವುದು ವಾಡಿಕೆ. ಆಧ್ಯಾತ್ಮದಲ್ಲಿ ಹೇಳತಾರೆ ಶಿಷ್ಯನ ಮನಸ್ಸು ಸಿದ್ಧವಾದಾಗ ಗುರು ಪ್ರತ್ಯಕ್ಷ ಆಗತಾನೆ ಅಂತ. ಈ ಮಾತನ್ನು ಶಿವಗಣ ಪ್ರಸಾದಿ ಮಹಾದೇವಯ್ಯನವರು ಎಷ್ಟು ಪ್ರಭುದ್ಧವಾಗಿ ಹೇಳತಾರೆ.
ಇಂತಪ್ಪ ಜಂಗಮ | ಸ್ಥಲವನಿಂಬುಗೊಂಡು ||
ಸಕಲ ಪುರಾತನ | ಗಣಂಗಳ ಕೃತಾರ್ಥಂ ||
ಮಾಡಲೋಸುಗ | ಸುಳಿದಾಡುತಿರ್ದಂ ||
ಅಲ್ಲಮ ಪ್ರಭುಗಳು ಯಾಕೆ ಪ್ರಯಾಣ ಮಾಡುತ್ತಿದ್ದರೆಂದರೆ ಮುಖ್ಯ ಕಾರಣ ಅದು ಜಂಗಮ ಸ್ಥಲ. ಜಂಗಮ ಸ್ಥಲದ ಎರಡು ಜವಾಬ್ದಾರಿಗಳಿವೆ. ಒಂದು ಜ್ಞಾನ ಪ್ರಸಾರ ಮತ್ತೊಂದು ಜ್ಞಾನ ಸೃಷ್ಟಿ. ಸಕಲ ಪುರಾತನ ಗಣಂಗಳನ್ನು ಕೃತಾರ್ಥ ಮಾಡುವುದಕ್ಕೆ. ಜಂಗಮ ಅಡ್ಡಾಡೋದು ತನಗೋಸ್ಕರ ಅಲ್ಲಾ. ಜ್ಞಾನದ ಹಸಿವು ಇರತಕ್ಕಂಥ ವ್ಯಕ್ತಿ ಎಲ್ಲಿ ಇರತಾನೋ ಅವನಿಗೆ ಜ್ಞಾನ ನೀಡಬೇಕು ಅದಕ್ಕೆ ಸುಳಿದಾಡತಾ ಇರಬೇಕು ಎನ್ನುವುದು ಉನ್ನತ ವಿಚಾರ.
ಎಲ್ಲ ಶೂನ್ಯ ಸಂಪಾದನೆಗಳನ್ನು ನೋಡಿದಾಗ ನಮಗೆ ಕಂಡು ಬರುವುದು ಅಲ್ಲಿ ಅಲ್ಲಮ ಪ್ರಭುಗಳು ಅನಾವಣಗೊಳಿಸಿದ ಶರಣರ ಉನ್ನತ ವಿಚಾರಗಳನ್ನು. ಪ್ರಭುದೇವರ ಪೂರ್ವ ಸಾಂಗತ್ಯ. ಇಲ್ಲಿ ಅಲ್ಲಮ ಪ್ರಭುಗಳು ತಮ್ಮ ಗುರುಗಳು ಎನ್ನಲಾದ ಅನಿಮಿಷರನ್ನು ಭೇಟಿಯಾದ ಸಂದರ್ಭ. ಮುಕ್ತಾಯಕ್ಕನ ಸಂಪಾದನೆಗಳು. ಮುಕ್ತಾಯಕ್ಕನಿಗೆ ತೋರಿದ ಅಜಗಣ್ಣನ ಲಿಂಗಾಂಗ ಸಾಮರಸ್ಯ. ಸಿದ್ಧರಾಮೇಶ್ವರರ ಪೂರ್ವಸಾಂಗತ್ಯ. ಸಿದ್ಧರಾಮೇಶ್ವರರಿಗೆ ಅಂತರಂಗದ ಅರಿವಿನ ಬೆಳಕನ್ನು ನೀಡುವುದು. ಬಸವಣ್ಣನವರು ಚೆನ್ನಬಸವಣ್ಣನವರಿಗೆ ದೀಕ್ಷೆಯನ್ನು ನೀಡುವುದು. ಸಿದ್ಧರಾಮೇಶ್ವರರ ಜೊತೆಗೂಡಿ ಕಲ್ಯಾಣಕ್ಕೆ ಬಂದು ಬಸವಣ್ಣನವರಿಗೆ ನೈಜ ಭಕ್ತಿ ಮತ್ತು ಜಂಗಮದ ಅರಿವು ಮೂಡಿಸಿದ್ದು. ಮರುಳ ಶಂಕರದೇವರ ಸಂಪಾದನೆಗಳು. ಮರುಳಶಂಕರದೇವರ ಭಕ್ತಿ ನಿಷ್ಠಯನ್ನು ಬೆಳಕಿಗೆ ತಂದದ್ದು. ಅಕ್ಕ ಮಾಹಾದೇವಿಯವರ ಸಾಂಗತ್ಯ. ಅಕ್ಕ ಮಹಾದೇವಿಯವರ ವ್ಯಕ್ತಿ ಸ್ವಾತಂತ್ರ್ಯದ ಮತ್ತು ವೈರಾಗ್ಯ ಮೂರ್ತಿರೂಪವನ್ನು ಪ್ರಪಂಚಕ್ಕೆ ತಿಳಿಸುವುದು. ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ದಂಪತಿಗಳ ಕಾಯಕ ನಿಷ್ಠೆಯನ್ನು ಬೆಳಕಿಗೆ ತಂದದ್ದು. ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿಯಕ್ಕ ದಂಪತಿಗಳ ಅನುಪಮ ಕಾಯಕ ದಾಸೋಹ ನಿಷ್ಠೆಯನ್ನು ಪ್ರಕಾಶಮಾನವಾಗಿ ಮಾಡಿದ್ದು. ನುಲಿಯ ಚಂದಯ್ಯ, ಘಟ್ಟಿವಾಳಯ್ಯ, ಗೋರಕ್ಷ ಮುಂತಾದವರ ಭಕ್ತಿ, ಕಾಯಕ ಮತ್ತು ಜಂಗಮ ದಾಸೋಹದ ಸಂದರ್ಭಗಳನ್ನು ವಿವರಿಸಿದ್ದು. ಈ ಎಲ್ಲ ವಿವರಗಳನ್ನು ಮೂಲ ಶೂನ್ಯ ಸಂಪಾದನೆಯ ರಚನಾಕಾರರು ನಿರೂಪಿಸಿದ್ದಾರೆ.
ಬಸವೋತ್ತರ ಕಾಲಘಟ್ಟದ ಸಮಕಾಲೀನ ಕವಿಗಳು:
ಬಸವ ಪುರಾಣಗಳ ಮತ್ತು ಶೂನ್ಯ ಸಂಪಾದನೆಗಳ ಸಮಗ್ರ ದೃಷ್ಟಿಯನ್ನಿಟ್ಟುಕೊಂಡು ಆನಂತರ ಬಂದ ಕವಿಗಳು ತಮ್ಮ ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡರು ಎನ್ನುವುದು ಸರ್ವಕಾಲಿಕ ಸತ್ಯ. ಬಸವೋತ್ತರ ಕಾಲಘಟ್ಟದಲ್ಲಿ ಬಸವಣ್ಣನವರ ಚರಿತ್ರೆಯನ್ನು ಚಾಮರಸ ಕವಿಯು ಪ್ರಭುಲಿಂಗ ಲೀಲೆಯಲ್ಲಿ, ಲಕ್ಕಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ, ಷಡಕ್ಷರ ಕವಿಯು ಬಸವರಾಜ ವಿಜಯದಲ್ಲಿ, ಸಿಂಗಿರಾಜರ ಬಸವರಾಜ ಚಾರಿತ್ರ್ಯದಲ್ಲಿ ಉಲ್ಲೇಖಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನ ತೆಲುಗಿನಲ್ಲಿ ಬರೆದ ಬಸವ ಪುರಾಣಮು, ಕನ್ನಡದಲ್ಲಿ ಬರೆದ ಹರಿಹರನ ಬಸವದೇವರಾಜರ ರಗಳೆ ಮತ್ತು ಭೀಮಕವಿಯ ಬಸವ ಪುರಾಣ ಮತ್ತು ಸಂಸ್ಕೃತದಲ್ಲಿ ಕಂಚಿ ಶಂಕರಾರಾಧ್ಯರು ಬರೆದ ವೃಷಭೇಂದ್ರ ವಿಜಯ ಈ ನಾಲ್ಕು ಪುರಾಣಗಳನ್ನು ಮೂಲ ಆಕರವಾಗಿಟ್ಟುಕೊಂಡು ಬಸವೋತ್ತರ ಕವಿಗಳು ರಚಿಸಿದ ಕಾವ್ಯಗಳನ್ನು ಪರಾಮರ್ಶಿಸಿದಾಗ ಮೂರು ವಿಷಯಗಳು ನಮಗೆ ಪ್ರಮುಖವಾಗಿ ತಿಳಿದು ಬರುತ್ತದೆ.
- ಬಸವಣ್ಣನವರನ್ನು ಶಿವನ ವಾಹನ ನಂದಿಯ ಅವತಾರವೆಂದು ಹೇಳುವುದರ ಮೂಲಕ ಪವಾಡ ಪುರುಷನನ್ನಾಗಿ ಚಿತ್ರಿಸಿರುವುದು.
- ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಯನ್ನು ಭಕ್ತಿ ಮಾರ್ಗದ ಮತ್ತು ಪೌರಾಣಿಕ ತಳಹದಿಯ ಮೇಲೆ ಚಿತ್ರಿಸಿರುವುದು.
- ಬಸವಣ್ಣನವರ ಜೀವನವನ್ನು ವೈದಿಕ ಮತ್ತು ಸಾಂಸ್ಕೃತಿಕ ಚೌಕಟ್ಟಿನೊಳಗೆ ಚಿತ್ರಿಸಿರುವುದು.
- ಚಾಮರಸ (ಪ್ರಭುಲಿಂಗ ಲೀಲೆ):
ವಿಜಯನಗರದ ಅರಸ ಇಮ್ಮಡಿ ಪ್ರೌಢದೇವರಾಯನ ಕಾಲದಲ್ಲಿದ ಚಾಮರಸ ಕ್ರಿ. ಶ 15 ನೇ ಶತಮಾನದಲ್ಲಿದ್ದ ಪ್ರಭುದ್ಧ ಶೈವ ಬ್ರಾಹ್ಮಣ ಕವಿ. ಕನ್ನಡ ಭಾರತವನ್ನು ಬರೆದ ಕವಿ ಕುಮಾರ ವ್ಯಾಸನ ಸಂಭಂದಿಯೆಂದು ಹೇಳಲಾಗುತ್ತದೆ. ಗದಗ ಜಿಲ್ಲೆಯ ಗದಗ ತಾಲೂಕಿನ ನಾಗಣಾಪುರ (ನಾರಾಯಣಪುರ) ಚಾಮರಸರು ಹುಟ್ಟಿದ ಗ್ರಾಮ.
ಅಲ್ಲಮ ಪ್ರಭುಗಳ ಜೀವನವನ್ನು ಚಿತ್ರಿಸಿರುವ, ಕ್ರಿ. ಶ 1403 ರಲ್ಲಿ ನಡುಗನ್ನಡದ ಭಾಮಿನಿಷಟ್ಪದಿಯಲ್ಲಿ ಚಾಮರಸರು ರಚಿಸಿದ ಶ್ರೀ ಅಲ್ಲಮ ಪ್ರಭುಲಿಂಗ ಲೀಲೆ ಅಥವಾ ಮಾಯಾ ಕೋಲಾಹಲ ಎಂಬ ಮೇರುಕೃತಿ ಪಂಡಿತ ಪಾಮರರನ್ನು ಬೆರಗುಗೊಳಿಸಿದ ಮಾಹಾನ್ ಕಾವ್ಯ. 25 ಗತಿಗಳು ಮತ್ತು 1,111 ಪದ್ಯಗಳನ್ನೊಳಗೊಂಡ ಕೃತಿ.
ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿ ಅಂಬಾರಿ ಮೇಲೆ ಕನಕ ಧಾರೆಯನ್ನು ಮಾಡಿಸಿಕೊಂಡ ಏಕೈಕ ಕೃತಿ ಪ್ರಭುಲಿಂಗ ಲೀಲೆಯೆಂದು ಬ್ರಿಟೀಷ್ ಆಡಳಿತಗಾರ ಮತ್ತು ಸಾಹಿತಿ ಈ. ಪಿ. ರೈಸ್ ಹೇಳಿದ್ದಾರೆ. ಇದೊಂದು ರಹಸ್ಯಾತ್ಮಕ ಮತ್ತು ಸ್ತ್ರೀಯರನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ ಕಾವ್ಯವೆಂದು ಬ್ರಿಟೀಷ್ ಆಡಳಿತಗಾರ ಸಿ. ಪಿ. ಬ್ರೌನ್ ವ್ಯಾಖ್ಯಾನಿಸುತ್ತಾರೆ. ಯಾವುದೇ ಹಿಂದೂ ಸ್ತ್ರಿಯರು ಕೃತಜ್ಞತಾ ಭಾವನೆಯಿಂದ ಓದುವಷ್ಟು ಪಾಂಡಿತ್ಯಪೂರ್ಣವಾಗಿದೆ ಎಂದು ಅವರು ಹೇಳಿರುವುದು ಸ್ತುತ್ಯಾರ್ಹ.
ಅವರ ಕಾವ್ಯದಲ್ಲಿ ಬಸವಣ್ಣನವರ ವರ್ಣನೆ ಇದೆ.
ಕಾಯಕದೊಳು ಗುರು ಲಿಂಗ ಜಂಗಮ | ದಾಯತನವರಿಯಲ್ಕೆ ||
ಸುಲಭೋಪಾಯದಿಂದಿರಿಟ್ಟು | ಬಾಹ್ಯಸ್ಥಲಕ್ಕೆ ಕುರುಹಾಗಿ ||
ದಾಯದೋರಿ ಸಮಸ್ತ | ಭಕ್ತ ನಿಕಾಯವನು ||
ಪಾವನವ ಮಾಡಿದ | ರಾಯ ಪೂರ್ವಾಚಾರ್ಯ ||
ಸಂಗನ ಬಸವ | ಶರಣಾರ್ಥಿ ||
ಚಾಮರಸರ ಪ್ರಭುಲಿಂಗಲೀಲೆ ಸಂಸ್ಕೃತ, ತಮಿಳು, ತೆಲುಗು ಮತ್ತು ಮರಾಠಿ ಭಾಷೆಗೆ ಅನುವಾದವಾಗಿದೆ.
- ಮಗ್ಗೆಯ ಮಾಯಿದೇವ ಪ್ರಭು (ಶಿವಾನುಭವ ಸೂತ್ರ) :
ಈಗಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಭಾ ದಂಡೆಯ ಮೇಲಿರುವ “ಮಗ್ಗೆ” ಎನ್ನುವ ಗ್ರಾಮದವರಾದ ಮಗ್ಗೆಯ ಮಾಯಿದೇವ ಪ್ರಭುಗಳು ಇಮ್ಮಡಿ ಪ್ರೌಢದೇವರಾಯ ಕಾಲಘಟ್ಟದಲ್ಲಿದ್ದವರು. ಕವಿ ಜಕ್ಕಣ್ಣ ಮತ್ತು ಹರಿಹರರ ಸಮಕಾಲೀನರು. ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದರು ಎಂದು ತಿಳಿದು ಬರುತ್ತದೆ. ಆಗಮ ಗ್ರಂಥವಾದ “ಶಿವಾನುಭವ ಸೂತ್ರ” ವನ್ನು ರಚಿಸಿದವರು. ಷಟ್‌ಸ್ಥಲ ಗದ್ಯ, ಶತಕತ್ರಯ (ಶಿವಾಧವ ಶತಕ, ಶಿವಾವಲ್ಲಭ ಶತಕ, ಮಹದೈಪುರೀಶ್ವರ ಶತಕ), ಏಕೋತ್ತರ ಶತಸ್ಥಲ ಷಟ್ಪದಿ, ವಿಶೇಷಾರ್ಥ ಪ್ರಕಾಶಿಕೆ ಇವರ ಇನ್ನಿತರ ಕೃತಿಗಳು. ಕನ್ನಡದಲ್ಲಿರುವ ವಚನಾನುಭಾವಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿದವರು ಮಗ್ಗೆಯ ಮಾಯಿದೇವ ಪ್ರಭುಗಳು. ಕ್ರಿ. ಶ 1430 ರಲ್ಲಿ ರಚನೆಯಾದ ಅವರ ಶಿವಾಧವ ಶತಕದಲ್ಲಿ ಬಸವಣ್ಣನವರ ಉಲ್ಲೇಖವಿದೆ.
ಜಯ ಬಸವೇಶ | ಭಕ್ತ ಜನ ಭಾಗ್ಯ ||
ಶುಭೋದಯ | ವೀರಶೈವ ನಿರ್ಣಯ ||
ಪರಮಾವತಾರ | ಬಸವ ಪುರಾತನವರ್ಚಿಸಿ ||
ತೋರಿದ ಷಟ್ | ಸ್ಥಲ ಮಾರ್ಗ ||
- ಲಕ್ಕಣ್ಣ ದಂಡೇಶ (ಶಿವತತ್ವ ಚಿಂತಾಮಣಿ):
15 ನೇ ಶತಮಾನದ ಕವಿಗಳಲ್ಲಿ ಉನ್ನತ ಸ್ಥಾನ ಪಡೆದಿರುವಂಥ ಲಕ್ಕಣ್ಣ ದಂಡೇಶ ಈಗಿನ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ “ವಿರುಪಾಕ್ಷಿ” ಗ್ರಾಮದವರು. ಮುಳುಬಾಗಿಲು ಶಾಸನದಲ್ಲಿ ಉಲ್ಲೇಖವಾದಂತೆ ಲಕ್ಕಣ್ಣ ದಂಡೇಶ ವಿಷ್ಣುಗೋತ್ರದ ಬ್ರಾಹ್ಮಣರು. ತಂದೆ ಹೆಗ್ಗಡದೇವ ಮತ್ತು ತಾಯಿ ಒಮ್ಮಾಯಮ್ಮ. ಮಾದಣ್ಣ ದಂಡನಾಯಕ ಎಂಬ ಸಹೋದರನಿದ್ದನೆಂದು ತಿಳಿದು ಬರುತ್ತದೆ.
ಲಕ್ಕಣಾಮಾತ್ಯ, ಲಕ್ಕಣ್ಣ ಒಡೆಯ ಎಂದು ಬಿರುದಾಂಕಿತವಿದ್ದ ಲಕ್ಕಣ್ಣ ದಂಡೇಶ ವಿಜಯನಗರ ಸಾಮ್ರಾಜ್ಯದ ಅರಸು ಇಮ್ಮಡಿ ಪ್ರೌಢದೇವರಾಯನ ಆಡಳಿತದಲ್ಲಿ ನೌಕಾಪಡೆಯ ದಂಡನಾಯಕ ಆಗಿದ್ದನೆಂದು ತಿಳಿದು ಬರುತ್ತದೆ. ಶ್ರೀಲಂಕಾವನ್ನು ಜಯಿಸಿ “ದಕ್ಷಿಣ ಸಮುದ್ರಾಧೀಶ್ವರ” ಎಂಬ ಬಿರುದನ್ನು ಹೊಂದಿದ್ದ ಎಂದು ತಿಳಿದು ಬರುತ್ತದೆ. ಇಮ್ಮಡಿ ಪ್ರೌಢದೇವರಾಯನ ಆಳ್ವಿಕೆಯಲ್ಲಿ ಪ್ರವಾಸ ಮಾಡಿದ್ದ ಅಬ್ದುರ್ ರಝಾಕ್ ಎಂಬ ಪರ್ಷಿಯಾದ ರಾಯಭಾರಿ ಲಕ್ಕಣ್ಣ ದಂಡೇಶನನ್ನು ಶೂರ ಸೇನಾಧಿಪತಿಯೆಂದು ಬಣ್ಣಸಿದ್ದಾನೆ.
ಶೂರ ಸೇನಾಧಿಪತಿ ಆಗಿದ್ದ ಲಕ್ಕಣ್ಣ ದಂಡೇಶ ಉತ್ತಮ ಕವಿಯೂ ಸಹ ಆಗಿದ್ದ. ಕ್ರಿ. ಶ 1428 ರಲ್ಲಿ ರಚಿಸಿದ “ಶಿವತತ್ವ ಚಿಂತಾಮಣಿ” ಒಂದು ಅಗ್ರಮಾನ್ಯ ಕೃತಿ. ಶಿವತತ್ವಚಿಂತಾಮಣಿಯಲ್ಲಿ ಬಸವಣ್ಣನವರ ಮಹಿಮೆ ಮತ್ತು ಶಿವಶರಣರ ಇತಿಹಾಸ, ಕಥೆಗಳು, ಅವರ ಮಹಿಮೆಗಳ ವರ್ಣನೆಯಿದೆ. ಬಸವಣ್ಣನವೆರ ಪ್ರಸ್ತಾಪ ಶಿವತತ್ವ ಚಿಂತಾಮಣಿಯಲ್ಲಿ ಬಂದಿದೆ.
ಶಂಬರಾರಿಯ | ಶರವ ಮುರಿದು ||
ದೇಹೇಂದ್ರಿಯ ಕದಂಬಕದ || ಮಮತೆಯಂ ಜರೆದು ||
ಲಿಂಗದ ನಿರಾಲಂಬ | ತನುವಾಗಿ ||
ಬಸವನ ಮನೆಗೆ ಬರಲು | ಮುಳಿದೆದ್ದು ಜಂಗಮವೆಲ್ಲವು ||
ಶಿವತತ್ವ ಚಿಂತಾಮಣಿಯಂಥ ಕಾವ್ಯವನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರನಾಗಿದ್ದಾರೆ ಲಕ್ಕಣ್ಣ ದಂಡೇಶ.
- ಚತುರ್ಮುಖ ಬೊಮ್ಮರಸ (ರೇವಣಸಿದ್ಧೇಶ್ವರ ಪುರಾಣ):
ಹದಿನಾರನೇ ಶತಮಾನದ ಆದಿ ಭಾಗದಲ್ಲಿದ್ದ ಚತುರ್ಮುಖ ಬೊಮ್ಮರಸರು ರೇವಣ ಸಿದ್ಧೇಶ್ವರ ಪುರಾಣವೆಂಬ ಕೃತಿಯ ಕರ್ತೃ. ತ್ರಿಷಷ್ಟಿ ಪುರಾತನರಲ್ಲಿ ಒಬ್ಬರಾದ ನಂಬಿಯಣ್ಣನವರ ಕುರಿತು ಬರೆದ ಸೌಂದರ ಪುರಾಣವನ್ನು ರಚಿಸಿದ್ದಾರೆ. ವಾರ್ಧಕ ಷಟ್ಪದಿಯಲ್ಲಿ ರಚಿಸಿದ ರೇವಣಸಿದ್ಧೇಶ್ವರ ಪುರಾಣವು 19 ಸಂಧಿಗಳು ಮತ್ತು 1,145 ಪದ್ಯಗಳನ್ನೊಳಗೊಂಡಿದೆ. ಇದರಲ್ಲಿ ಬಸವಣ್ಣನವರನ್ನು ಸ್ಮರಿಸಲಾಗಿದೆ.
ಆದಿಯೊಳು ಶಿವನ ವಾಹನವಾಗಿ | ಮುನಿಪಾತಿ ಶಿಲಾದ ಸಂಭವನಾಗಿ ||
ಪರಮ ಶಿವಧರ್ಮವನು | ಮೇದಿನಿಯ ಮೇಲುಂಟು ಮಾಡಿ ||
ಬಳಿಕಿಳೆಯೊಳಗೆ ಮಂಡಿಗೆಯ | ಮಾದರಸರ ಮಾದಲಾಂಬಿಕೆಯರ ||
ಪವಿತ್ರ ಗರ್ಭ | ದೊಳುದಯವಾದಧಿಕ ||
ವೀರಶೈವಾಚಾರ್ಯ | ಬಸವ ದಂಡಾಧೀಶ ||
- ಗುಬ್ಬಿಯ ಮಲ್ಲಣಾರ್ಯ (ವೀರಶೈವಾಮೃತ ಮಹಾ ಪುರಾಣ):
15 ನೇ ಶತಮಾನದ ಅಂತ್ಯಭಾಗದಲ್ಲಿದ್ದ ಗುಬ್ಬಿ ಮಲ್ಲಣಾರ್ಯರು ಐತಿಹಾಸಿಕವಾಗಿ ಅಮರಗೊಂಡ ಎಂಬ ಹೆಸರಿನ ಮತ್ತು ಈಗಿನ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದವರು. ವೀರಶೈವ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ ಅಮರಗುಂಡಾರ್ಯರು ಗುಬ್ಬಿ ಮಲ್ಲಣಾರ್ಯರ ತಂದೆಯವರು. ಗುಬ್ಬಿಯ ಮಲ್ಲಣಾರ್ಯರು ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯರೆಂದು ತಿಳಿದು ಬರುತ್ತದೆ. ಗುಬ್ಬಿ ಮಲ್ಲಣಾರ್ಯರ ಕೃತಿಗಳು:
- ಕ್ರಿ. ಶ 1475: ವಾತುಲ ತಂತ್ರ ಟೀಕೆ.
- ಕ್ರಿ. ಶ 1475: ಗಣಭಾಷ್ಯ ರತ್ನಮಾಲೆ.
- ಕ್ರಿ. ಶ 1513: ಭಾವ ಚಿಂತಾರತ್ನ.
- ಕ್ರಿ. ಶ 1520: ಪುರಾತನರ ರಗಳೆ.
- ಕ್ರಿ. ಶ 1530: ವೀರಶೈವಾಮೃತ ಮಹಾ ಪುರಾಣ.
ಕ್ರಿ. ಶ 1530 ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿತವಾದ ವೀರಶೈವಾಮೃತ ಮಹಾ ಪುರಾಣ ಕಾವ್ಯದಲ್ಲಿ 8 ಕಾಂಡ, 136 ಸಂಧಿ, 7,099 ಪದ್ಯಗಳಿವೆ. ಈ ಕಾವ್ಯದಲ್ಲಿ ಬಸವಣ್ಣನವರ ಉಲ್ಲೇಖವಿದೆ.
ಈ ಷಟ್‌ಸ್ಥಳ ಬ್ರಹ್ಮಿಗಳ | ಮಾಡಿಯವರ ||
ಸಂತೋಷದರ್ಚನೆಯ | ಕೈಕೊಂಡು ಗುರುವಾಗಿ ||
ಮತ್ತಾ ಷಡುಸ್ಥಲ ಜ್ಞಾನಿಗಳು | ಮುಖ್ಯ ಶರಣರ್ಗೆ ||
ಬಸವನೇ ಭೃತ್ಯನಾಗಿ | ಪೋಹೆಸುತ್ತ ||
ವರ್ಗಳಂ ಸದ್ಭಕ್ತಿಯಿಂ | ನುಡಿದ ಭಾಷೆಯ ||
ಪರಿವರ್ತಿಸುತ್ತೀಗಳ | ಖಿಳರ್ಗೆಯಾ ||
ಷಟ್‌ಸ್ಥಲದ ನಿರ್ಣಯವನಿಟ್ಟವಂ | ಬಸವನಲ್ಲದಿನ್ನಾರು ಮಗನೆ ||
ರವಿ ಹಂಜ್ ಎನ್ನುವ ಕೋಡಂಗಿಗೆ ಶೂನ್ಯಸಂಪಾದನೆ, ಬಸವ ಪುರಾಣ ಮತ್ತು ರಗಳೆಗಳ ಕುರಿತು ಇಷ್ಟು ವಿವರಣೆ ಸಾಕು ಅನಿಸುತ್ತದೆ. ಮುಂದೆ ಈತ ಹಲಗೆ ಆರ್ಯನ ಶೂನ್ಯ ಸಂಪಾದನೆಯಲ್ಲಿ ಬರುವ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಶರಣ ಕಿನ್ನರಿ ಬ್ರಹ್ಮಯ್ಯನವರ ಕಪೋಲ ಕಲ್ಪಿತ ಭೆಟ್ಟಿಯ ಸಂದರ್ಭವನ್ನು ವಿಶ್ಲೇಷಣೆ ಮಾಡೋಣ.
ಇದಕ್ಕೂ ಮೊದಲು ಶರಣ ಕಿನ್ನರಿ ಬ್ರಹ್ಮಯ್ಯನವರ ಕುರಿತು ಸಂಶೋಧನೆ ಮಾಡಿ ಮಹಾಪ್ರಬಂಧವನ್ನು ಸಲ್ಲಿಸಿ Ph. D ಪಡೆದಿರುವ ವೀರಶೈವ ಕುಲಸಂಜಾತರೇ ಆಗಿರುವ ಮತ್ತು “ವಚನ ದರ್ಶನ” ಎನ್ನುವ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿರುವ ಪುಸ್ತಕದಲ್ಲಿ ತಮ್ಮ ಲೇಖನವನ್ನು ಹಂಚಿಕೊಂಡಿರುವ ಕನ್ನಡ ಸಾಹಿತ್ಯ ಮತ್ತು ವಚನ ಸಾಹಿತ್ಯ ವಿದ್ವಾಂಸರಾದ ಡಾ. ಚಿದಾನಂದ ಚಿಕ್ಕಮಠ (ಮೋಬೈಲ್. ನಂ. 90195 91118) ಅವರು “ಹೇಳತೇನ ಕೇಳ” ಎನ್ನುವ ಗೂಗಲ್ ಮೀಟ್ ನಲ್ಲಿ ಮತ್ತು ಬಸವ ಸಮೀತಿಯ ಅಂತರ್ಜಾಲ ಉಪನಾಸ ಮಾಲಿಕೆಯಲ್ಲಿ “ಶರಣ ಕಿನ್ನರಿ ಬ್ರಹ್ಮಯ್ಯ” ನವರ ಕುರಿತು ಉಪನ್ಯಾಸ ಮಂಡಿಸಿರುವ Video ವನ್ನು ಕೇಳಿ.
ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಶರಣ ಕಿನ್ನರಿ ಬ್ರಹ್ಮಯ್ಯನವರ ಭೇಟಿ ಮತ್ತು ಅಸಭ್ಯವಾಗಿ ನಡೆದುಕೊಂಡ ಪ್ರಸಂಗ ನಡೆದಿರುವ ಸಾಧ್ಯತೆ ತೀರ ತೀರ ಕಡಿಮೆ ಎಂದು ಡಾ. ಚಿದಾನಂದ ಚಿಕ್ಕಮಠ ಅಭಿಪ್ರಾಯ ಪಟ್ಟಿದ್ದಾರೆ. ಈ ಪ್ರಸಂಗದ ಕುರಿತು ಅನೇಕಾನೇಕ ಊಹಾಪೋಹಗಳು ಇದ್ದಾವೆಯೇ ಹೊರತು ಕಿನ್ನರಿ ಬ್ರಹ್ಮಯ್ಯನವರು ಅತ್ಯಂತ ಕೆಳಮಟ್ಟದ ಪರೀಕ್ಷೆಯನ್ನು ಮಾಡಿರಲಿಕ್ಕಿಲ್ಲ ಎನ್ನುವುದನ್ನು ಈ ಎರಡೂ ಉಪನ್ಯಾಸಗಳಲ್ಲಿ ಅವರು ನಿರೂಪಣೆ ಮಾಡುತ್ತಾ ಈ ಪ್ರಸಂಗವನ್ನು ಅಲ್ಲಗಳೆಯಲೂ ಇಲ್ಲ ಮತ್ತು ಪುಷ್ಟೀಕರಿಸಲೂ ಇಲ್ಲಾ. ಹಾಗಾಗಿ ಇಂಥ ಪ್ರಸಂಗವನ್ನು ಆಶ್ಲೀಲವಾಗಿ ಚಿತ್ತರಿಸಿರುವ ವಿಕೃತ ಮನಸ್ಸಿನ ಲೋಫರ್ ರವಿ ಹಂಜ್ ಹೇಗೆ ಸಮರ್ಥಿಸಿಕೊಳ್ಳುತ್ತಾನೆ.
ಹಲಗೆ ಆರ್ಯನ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಾ ಮುಂದೆ ನೋಡೋಣ. ಲಭ್ಯವಿರುವ ಶೂನ್ಯ ಸಂಪಾದನೆಗಳಲ್ಲಿ ಎರಡನೇಯದಾಗಿರಬಹುದಾದ ಶೂನ್ಯ ಸಂಪಾದನೆಯನ್ನು ರಚಿಸಿದ ಶಿವಗಂಗೆಯನ್ನು ಕಾರ್ಯಕ್ಷೇತ್ರವನ್ನು ಮಾಡಿಕೊಂಡಿದ್ದವನು ಹಲಗೆ ಆರ್ಯ. ಈತನಿಗೆ ಹಲಗೆಯಾಚಾರ್ಯ, ಹಲಗೆದೇವರು, ವೀರ ಹಲಗೆ ದೇವರು, ಹಲಗೆ ದೇಶಿಕ, ಹಲಗೇಶ್ವರ ಎನ್ನುವ ಉಪನಾಮಗಳೂ ಇದ್ದವು. ಈತನ ಶಿಷ್ಯ ಗುಬ್ಬಿ ಮಲ್ಲಣಾರ್ಯ ತನ್ನ ವೀರಶೈವಾಮೃತ ಮಹಾಪುರಾಣದಲ್ಲಿ
ವೀರಭದ್ರಾಜ್ಞೆಯಿಂದೆಯಿತಂದ ಚಿತ್ಪಿಂಡವೇ ರಸೆಯೊಳಮಳ ಭಕ್ತರ ಗರ್ಭದೋಳು ಸದಾಚಾರದಿಂದುದ್ಭವಿಸಿದ ದಿವ್ಯ ಗುರುಕಮಲ ಸಂಭೂತ. ಚಿತ್ಕಾಂತ ಹಲಗೆಯ ದೇಶಿಕ, ಶ್ರೀ ವಿರಕ್ತಾಧೀಶ್ವರಂ ಹಲಗೆಯಾಚಾರ್ಯನ್, ಷಟ್‌ಸ್ಥಲ ಹಲಗೆಯಾಚಾರ್ಯನ್, ವೀರಶೈವ ಷಟ್‌ಸ್ಥಲ ಮಾರ್ಗಿ, ಸದ್ಭಾವಸದನ, ಸುವಿರಕ್ತವ್ರತಾಚಾರ ಚಿತ್ಕ್ರಿಯಾಪದ ಹಲಗೆಯಾಚಾರ್ಯನ್, ಸರ್ವಾಚಾರ ಸಂಪನ್ನ, ಸಜ್ಜನಸಂಗಿ, ಉನ್ನತ ಜ್ಞಾನಿ, ಶಿವಯೋಗಿ
ಎಂದು ವಿಧ ವಿಧವಾಗಿ ಉಲ್ಲೇಖಿಸಿದ್ದಾನೆ. ಈತ ಶಿವಗಣ ಪ್ರಸಾದಿ ಮಹದೇವಯ್ಯನ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖವಾಗಿರದ ಹಲವಾರು ಶರಣರ ವೃತ್ತಾಂತಗಳನ್ನು ಸೇರಿಸಿ ಪರಿಷ್ಕರಣೆ ಮಾಡಿದ್ದಾನೆ.
ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಶರಣ ಕಿನ್ನರಿ ಬ್ರಹ್ಮಯ್ಯನವರ ಭೇಟಿಯ ಕಥೆಯನ್ನು ಹೆಣೆದಿದ್ದಾನೆ. ವೈರಾಗ್ಯನಿಧಿ ಅಕ್ಕಮಹಾದೇವಿಯವರು ಕಲ್ಯಾಣಕ್ಕೆ ಬರುವಾಗ:
“ಈಕೆ ಲಿಂಗಾನುಭಾವಿ ಸಂಪನ್ನೆಯಾದರೆ ಗುರುತಾಯಿ ಎಂದು ಶರಣೆಂಬೆನು. ಇಲ್ಲಾ ದೇಹಲಜ್ಜಾಭಿಮಾನ ಉಳ್ಳಡೆ ಸ್ತ್ರೀಯಾಗಿ ಕೈಹಿಡಿವೆನು” ಎಂದು ಆಕೆಯನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಅಕ್ಕ ಎಷ್ಟೇ ತಿಳಿ ಹೇಳಿದರೂ ಕೇಳದಿರಲು “ನೀನಿಂತು ಮುಂದುಗೆಡುವರೆ ನನ್ನ ತನುವನೊಪ್ಪಿಸಿಹೆನು. ನಿನ್ನ ಮನಕೆ ಬಂದಂತೆ ಮಾಡಿಕೊಳೆಂದು” ಒಪ್ಪಿಸಲು ಸಂಪೂರ್ಣ ಶಿವತತ್ವಮಯವಾಗಿರುವುದನ್ನು ನೋಡಿ ಆತನಿಗೆ ಜ್ಞಾನೋದಯವಾಯಿತು.
ಹೀಗೆ ಹಲಗೇಯಾರ್ಯ ಸುಮಾರು 13 ವಚನಗಳ ಮೂಲಕ ನಾಟಕೀಯವಾಗಿ ಈ ಪ್ರಸಂಗವನ್ನು ಚಿತ್ರಿಸಿದ್ದಾನೆ. ಈ ಪ್ರಸಂಗದ ಉಲ್ಲೇಖ ಹಲಗೆಯಾರ್ಯನಿಗೆ ಹೇಗೆ ದೊರೆಯಿತು ಎನ್ನುವುದೇ ಸೋಜಿಗ. ಯಾಕಂದರೆ ದೊರೆತಿರುವ 4 ಶೂನ್ಯ ಸಂಪಾದನೆಗಳಲ್ಲಿ ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿ ಮಾತ್ರ ಇಂಥ ಅಶ್ಲೀಲ ಚಿತ್ರಣವಿದೆ. ಮುಂದೆ ಇಂಥದ್ದೇ ಅಪಸವ್ಯವನ್ನು ಚೆನ್ನಬಸವಾಂಕ ತನ್ನ “ಮಹಾದೇವಿಯಕ್ಕನ ಪುರಾಣ” ದಲ್ಲಿ ಮತ್ತೆ ನಿರೂಪಣೆ ಮಾಡತಾನೆ.
ಹಲಗೆ ಆರ್ಯನ ಶೂನ್ಯಸಂಪಾದನೆಯ ಒಂದು ಸಾಲು ಎಷ್ಟು ಹೇಸಿಗೆ ತರುತ್ತದೆ ಎಂದರೆ ಈ ವೀರಶೈವ ಕವಿಗಳೆಲ್ಲಾ ಯಾಕೆ ಹೀಗೆ ವಿಕೃತ ವಿತಂಡವಾದವನ್ನು ಮಾಡತಾರೆ ಅನ್ನೋದೆ ಸಾಹಿತ್ಯಲೋಕದ ದುರಂತ. ಲೋಫರ್ ರವಿ ಹಂಜ್ ಉಲ್ಲೇಖಿಸಿದ ಆ ಸಾಲುಗಳು ಹೀಗಿದೆ:
ಮಹಾದೇವಿಯಕ್ಕಗಳು ಕಲ್ಯಾಣದ ದಾರಿಯಲ್ಲಿದ್ದಾಗ (ಆಕೆಯನ್ನು) ಕಿನ್ನರಯ್ಯನು ಹರುಷಿಸಿ (ಪರುಷಿಸಿ/ಸ್ಪರ್ಷಿಸಿ) ನೋಡಲು ಅಕ್ಕಗಳು ಅಂತರಂಗದ ಜ್ಞಾನಾಗ್ನಿಯೊಳ್ ಕಾಮನ ಭಸ್ಮಮಂ ಮಾಡಿತೋರಿದರೆಂಬ” ಪ್ರಸಂಗವನ್ನು ಹಲಗೆಯಾರ್ಯನು ತನ್ನ ಶೂನ್ಯ ಸಂಪಾದನೆಯಲ್ಲಿ “ಯೋನಿಯೋಳ್ ಅಂಗುಲಿಪ್ರವೇಶಂ” ಮಾಡಿ ಕಿನ್ನರಯ್ಯನು ಮಹಾದೇವಿಯನ್ನು ಪರೀಕ್ಷಿಸಿದ್ದನು ಎಂದಿದ್ದಾನೆ.
I am flabbergasted to read these lines. Very difficult to believe and indulge in it.ಇಂಥ ಅಸಭ್ಯ ಮತ್ತು ಲೈಂಗಿಕ ವಿಕೃತ ಭಾಷೆಯನ್ನು ಹಲಗೆ ಆರ್ಯ ಬಳಸಿದ್ದು ನಿಜವೇ ಎನ್ನುವಷ್ಟು ವಿಕಾರವಾಗಿದೆ. ಇಂಥ ಹೊಲಸು ಮತ್ತು ಹಸಗೆಟ್ಟ ಪದಗಳನ್ನು ಈ ವಿಕೃತ ಮನಸ್ಸಿನ ರವಿ ಹಂಜ್ ಎನ್ನುವ ಹಂದಿ ಹೆಕ್ಕಿ ಹೆಕ್ಕಿ ತಂದು ಬರೆಯುತ್ತಾನೆ. ಯಾವುದೇ ಸುಸಂಸ್ಕೃತರು ಇಂಥ ಅಸಭ್ಯ ಲೈಂಗಿಕ ಪದ ಪ್ರಯೋಗಳನ್ನು ಒಪ್ಪುತ್ತಾರೆಯೇ? ಹೋಗಲಿ ಈ ಹಂದಿಗೆ ಆಶ್ರಯ ನೀಡಿದಂಥ ವಿಷಪ್ರಾಣಿ ವಿಶ್ವೇಶ್ವರ ಭಟ್ಟಾ ಇದಕ್ಕೆ ಸಮ್ಮತಿ ನೀಡಿ ಪ್ರಕಟ ಮಾಡತಾನೆ ಎಂದರೆ ವಿಷಭಟ್ಟನ ಮನಃಸ್ಥಿತಿ ಎಂತಹ ಕೊಳಕು ಮಟ್ಟದ್ದು ಎನ್ನುವುದನ್ನು ಪ್ರಾಜ್ಞರು ಗಮನಿಸಬೇಕು. ಹೋಗಲಿ ಇವರ ಮನೆಯ ಹೆಣ್ಣುಮಕ್ಕಳ ಬಗ್ಗೆ ಹೀಗೆ ಬರೆದರೆ ಈ ವಿಷಭಟ್ಟ ಪ್ರಕಟ ಮಾಡುತ್ತಾನೆಯೇ?
ಮುಂದಿನ ಪ್ಯಾರಾಗಳಲ್ಲಿ ಬಸವಣ್ಣನವರ ವಿಚಾರಪತ್ನಿ ನೀಲಮ್ಮ ತಾಯಿಯವರ ಕುರಿತು ಅತ್ಯಂತ ವಿಕೃತವಾಗಿ ರವಿ ಹಂಜ್ ಬರೆದಿದ್ದಾನೆ. ಈ ಪ್ಯಾರಾಗಳನ್ನು ಓದಿದಾಗ ಈತನನ್ನು ಪೋಷಣೆ ಮಾಡಿದ ತಂದೆ-ತಾಯಿ, ಬಂಧು-ಬಳಗ, ಈತನಿಗೆ ಶಿಕ್ಷಣವನ್ನು ದಯಪಾಲಿಸಿದ ಗುರುಗಳ ನೈತಿಕ ಮಟ್ಟ, ನಡೆ-ನುಡಿಗಳ Low Level ಯಾವ ಮಟ್ಟದಲ್ಲಿತ್ತು ಎನ್ನುವುದು ಸೋಜಿಗ. ಈತ ಬೆಳೆದು ಬಂದ ಪರಿಸರ ಹೇಗಿತ್ತು ಎನ್ನುವುದು ಇನ್ನೂ ಆಶ್ಚರ್ಯಚಕಿತ ಸಂಗತಿ. ಈ ನೀಚ ಬುದ್ಧಿಯ ರವಿ ಹಂಜ್ ತಾಯಿ ನೀಲಮ್ಮನವರನ್ನು ಕುರಿತು “ನಿರೀಕ್ಷೆ, ಸಾಂಸಾರಿಕ ವಾಂಚೆ, ಅಸ್ತಿತ್ವದ ಅಹಂ, ಅತೃಪ್ತ ಆಕಾಂಕ್ಷೆಗಳನ್ನೆಲ್ಲಾ ವಚನವಾಗಿಸಿದ್ದಾಳೆ ಅಂತಾ ಬರೀತಾನೆ. ಕಾಮದ ಕುರಿತೂ ನೀಲಮ್ಮ ಬರೀತಾಳೆ ಅಂತಾ ಹೇಳುವ ಈ ಹರಕಲು ಬಾಯಿಯ ರವಿ ಹಂಜ್‌ನ ನೀಚತನಕ್ಕೆ ಶರಣೆಯರ ವಚನಗಳೇ ಬೇಕಿತ್ತಾ. ಅವನು Quote ಮಾಡಿರುವ ವಚನಗಳನ್ನು ನೋಡೋಣ.
ಸದುವಿನಯದ ತುಂಬಿದ | ಕೊಡ ತಂದಳು ನೀಲಾಂಬಿಕೆ ||
ಕಲ್ಯಾಣದ ಅಂಗಳದಲ್ಲಿ | ತಳಿ ಹೊಡೆದರು ಚೆಂದಕೆ ||
ಸಮಚಿತ್ತದ ರಂಗೋಲಿಯು | ಒಳಹೊರಗೂ ಧೂಪವವು ||
ಹಾದಾಡುವ ಹೊಸ್ತಿಲಲಿ | ಹೊಯ್ದಾಡದ ದೀಪವು ||
(ಎರಡು ದಡ-1976/ಚನ್ನವೀರ ಕಣವಿ/ಪುಟ ಸ. 61/ನೀಲಾಂಬಿಕೆ)
ಬಸವಣ್ಣನವರ ಜೀವನದ ಅವಿಭಾಜ್ಯ ಅಂಗವಾಗಿ ಬಹುದೊಡ್ಡ ಪಾತ್ರ ನಿರ್ವವಹಿಸಿದ ನೀಲಮ್ಮನವರು ‘ಸಂಗಯ್ಯ’ ಎನ್ನುವ ವಚನಾಂಕಿತದಿಂದ 288 ವಚನಗಳನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ವಚನಗಳೂ ಬಸವಣ್ಣನವರನ್ನೇ ಕುರಿತು ಬರೆದ ವಚನಗಳಾಗಿವೆ. “ಬಸವನ ಅನುಭವ ಕಂಡು ವಿಚಾರ ಪತ್ನಿಯಾದೆನಯ್ಯ” ಎಂಬುದು ಬಹಳ ಶ್ರೇಷ್ಠ ಮಾತು. ಹೆಂಡತಿ ಗಂಡನಿಗೆ ವಿಚಾರಪತ್ನಿಯಾಗಬೇಕು ಎಂಬ ಇದು ಜಾಗತಿಕ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಅಭಿಪ್ರಾಯ. ತಮ್ಮ ವಚನಗಳಿಂದ ನೀಲಮ್ಮನವರು ಕರ್ನಾಟಕದ ಸ್ತ್ರೀ ವಚನಕಾರ್ತಿಯರಲ್ಲಿ ಎದ್ದು ಕಾಣುವ ವ್ಯಕ್ತಿ ಎನಿಸಿದ್ದಾರೆ.
ನೀಲಾಂಬಿಕೆಯವರು ಬಸವಣ್ಣನವರಿಗೆ ತಕ್ಕ ಸತಿಯಾಗಿ ಅತ್ಯಂತ ಜವಾಬ್ದಾರಿಯಿಂದ ತನ್ನ “ಸತಿತ್ವ ಧರ್ಮ” ವನ್ನು ನಿಭಾಯಿಸಿರುವುದು ಕಂಡು ಬರುತ್ತದೆ. ಸತಿಯಾಗಿ ಶರಣೆ ನೀಲಾಂಬಿಕೆಯವರು ತಮ್ಮ ಇಡೀ ಬದುಕನ್ನೇ ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಸಮರ್ಪಿಸಿಕೊಂಡವರು. ವಿವಾಹ ಪೂರ್ವದಲ್ಲಿಯೇ ಬಸವಣ್ಣನವರ ಅನುಭಾವ ಗೋಷ್ಠಿಯಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳು ಅವರಿಗೆ ಮನದಟ್ಟಾಗಿತ್ತು. ಸಂಸಾರಕ್ಕಿಂತ “ಧರ್ಮ” ಮತ್ತು “ಸಮಾಜ” ಬಸವಣ್ಣನವರ ಉಸಿರು ಎಂಬುದನ್ನು ನೀಲಾಂಬಿಕೆಯವರು ಅರ್ಥ ಮಾಡಿಕೊಂಡಿದ್ದರು.
ಬಸವಣ್ಣನವರ ಅಗಾಧ ವೈಚಾರಿಕೆತೆಯ ನಿಲುವುಗಳು ಅವರಿಗೆ ಗೋಚರಿಸಿದ್ದವು. ಹೀಗಾಗಿ ನೀಲಾಂಬಿಕೆಯವರು ಬಸವಣ್ಣನವರ ಸತಿಯಾಗಿ ಸುಖ ಅನುಭವಿಸಲು ಬಂದವರಾಗಿರದೇ ಅವರ ಕೈಂಕರ್ಯದಲ್ಲಿ ಕೈಗೂಡಿಸಲು ಬಂದವರಾಗಿದ್ದರು. ಅವರ ವಚನಗಳ ಅಧ್ಯಯನ ಕೈಗೊಂಡಾಗ ನೀಲಾಂಬಿಕೆಯವರ “ಸತಿತ್ವ” ದ ಸುಂದರ ಪರಿಕಲ್ಪನೆಗಳು ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.
ಶರಣೆ ನೀಲಾಂಬಿಕೆಯವರ ಈ ಎಲ್ಲ ನಡೆ-ನುಡಿಗಳು ಅವರ ವಚನಗಳ ಮೂಲಕ ಅನಾವರಣಗೊಳ್ಳುತ್ತಾ ಸಾಗುತ್ತವೆ. ಇಂಥ ಅತ್ಯದ್ಭುತ ನಡೆ-ನುಡಿ ಸಿದ್ಧಾಂತಕ್ಕೆ ಉದಾಹರಣೆಯಾಗಿರುವ ಶರಣೆ ನೀಲಾಂಬಿಕೆಯವ ವ್ಯಕ್ತಿತ್ವವನ್ನು ತನ್ನ ಹರಕು ಬಾಯಯಿಯಂದ ವಿಕೃತಗೊಳಿಸಿರುವ ಶ್ವಾನ ರವಿ ಹಂಜ್ ಯಾವ ದೃಷ್ಟಿಕೋಣದಿಂದ ನೋಡಿದರೂ ಮನುಷ್ಯರೂಪಿ ರಾಕ್ಷಸ ಎನ್ನುವುದು ವೇದ್ಯವಾಗುತ್ತದೆ. ಇನ್ನು ಈತ ಉಲ್ಲೇಖಿಸಿರುವ ಮತ್ತು ವಿರೂಪಗೊಳಿಸಿ ಚಿತ್ರಿಸಿರುವ ಶರಣೆ ನೀಲಾಂಬಿಕೆ ತಾಯಿಯವರ ವಚನಗಳ ವಿಶ್ಲೇಷಣೆ ಒಂದೊಂದಾಗಿ ನೋಡೋಣ.
ಲೋಕದ ಪತಿಯಾದ ಬಸವಣ್ಣನವರನ್ನು ಮತ್ತು ಲೌಕಿಕ ಸಂಸಾರವನ್ನು ಉತ್ಕಟ್ಟವಾಗಿ ಪ್ರೀತಿಸಿ, ಒಪ್ಪಿಕೊಂಡೇ ಸಾಧನೆಗೈದವರು ಶರಣೆ ನೀಲಾಂಬಿಕೆ ತಾಯಿಯವರು. ವೈರಾಗ್ಯನಿಧಿ ಅಕ್ಕಮಹಾದೇವಿಯವರಿಗಿಂತ ಭಿನ್ನ ನೆಲೆಯಲ್ಲಿ ನಿಂತವರು ಶರಣೆ ನೀಲಾಂಬಿಕೆ ತಾಯಿಯವರು. ಅಕ್ಕಮಹಾದೇವಿ ಅಲೌಕಿಕ ಪತಿ ಮತ್ತು ಅಲೌಕಿಕ ಸಂಸಾರದಲ್ಲಿ ಸಾಧನೆ ಮಾಡಿದರೆ ನೀಲಾಂಬಿಕೆಯವರದು ಅವರಿಗಿಂತ ಭಿನ್ನವಾದ ಮಾರ್ಗವಾಗಿತ್ತು.
ಎನಗೆ ಇಲ್ಲಿ ಏನು ಬಸವ ಬಸವಾ?
ಎನಗೆ ಅದರ ಕುರುಹೇನು ಬಸವಾ?
ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,
ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು,
ನಾನು ಬಸವನ ಶ್ರೀಪಾದದಲ್ಲಿ
ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–334/ವಚನ ಸಂಖ್ಯೆ–873)
ಇಂತಹ ಸಮರ್ಪಣಾ ಭಾವವನ್ನು ತಾಯಿ ನೀಲಮ್ಮನವರಲ್ಲಿ ಗುರುತಿಸಬಹುದಾಗಿದೆ. ಬಸವಣ್ಣನವರು ನಡೆದ ಭಕ್ತಿ ಮಾರ್ಗದಲ್ಲಿ ಕ್ರಮಿಸುವ ಹಂಬಲವು ನೀಲಾಂಬಿಕೆಯವರ ಜೀವನದ ಪರಮೋದ್ದೇಶ. ಭಕ್ತಿಯ ಪ್ರತಿರೂಪವೇ ಬಸವಣ್ಣನವರು. ಅದನ್ನೇ ತಾಯಿ ನೀಲಾಂಬಿಕೆ “ಭಕ್ತಿಸ್ಥಲ ಬಸವನಲ್ಲಿ ಕರುಹಳಿದುದು” ಎಂದು ಪ್ರತಿಪಾದಿಸುತ್ತಾರೆ. ಈ ಕಾರಣದಿಂದಲೇ “ನಾನು ಬಸವನ ಭಕ್ತಿಮಾರ್ಗದಲ್ಲಿ ನಡೆದು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತೆ ಅಡಗಿದೆನು” ಎಂದು ತಾನೂ ಕುರುಹಿಲ್ಲದಂತೆ ಬಯಲಾದ ಸ್ಥಿತಿಯನ್ನು ತಿಳಿಸುತ್ತಾರೆ. ಸತಿಯಾಗಿ ಬಸವಣ್ಣನವರ ಅನುಯಾಯಿ ಆದಂತೆ ನೀಲಾಂಬಿಕೆ ನಿಜದ ನೆಲೆಯಲ್ಲಿ ಸತಿತ್ವದ ಪರಿಪಾಕದಲ್ಲಿ ಕರಗಿ ಬಸವಣ್ಣನವರಿಗೆ ನೆರಳಾದವರು. ಇಂಥ ಅದ್ಭುತ ಸಾಂಸಾರಿಕ ಸಾಮರಸ್ಯದ ವಚನವನ್ನು ತಿಳಿಗೇಡಿ ರವಿ ಹಂಜ್ ತಾಯಿ ನೀಲಾಂಬಿಕೆಯವರ ಸ್ವಂತಿಕೆಯ ಪ್ರತಿಷ್ಠೆಗೆ ಹೋಲಿಸಿದ್ದಾನೆ ಎಂದರೆ ಈತನ ತಲೆಯಲ್ಲಿ ಎಂತಹ ಅತೃಪ್ತಿಯ ಸೆಗಣಿ ತುಂಬಿರಬೇಕೆನ್ನುವುದನ್ನು ವಿದ್ವಾಂಸರು ಪರಾಮರ್ಶಿಸಬೇಕು.
ಶರಣೆ ನೀಲಾಂಬಿಕೆ ತಾಯಿಯವರು ಶರಣರ ದಾಸೋಹದಲ್ಲಿ ತಮ್ಮನ್ನು ತಾವೇ ಮರೆತು, ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ಸಮಾಜೋ-ಧಾರ್ಮಿಕ ಕಾರ್ಯದಲ್ಲಿ ಸಮರ್ಪಣಾಭಾವದಿಂದ ಸಹಕರಿಸುತ್ತಾರೆ. ಕಲ್ಯಾಣದ ಕ್ರಾಂತಿಯಾಗಿ ಶಿವಶರಣರು, ಬಸವಣ್ಣನವರು ಚದುರಿದಾಗ ನೀಲಮ್ಮನವರು ತಮ್ಮ ಶುದ್ಧ ನಡೆ, ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರರಾದರು. ನೀಲಮ್ಮನವರ ಭಕ್ತಿ, ತಾಳ್ಮೆ, ಕಾಯಕ ನಿಷ್ಠೆ, ಜ್ಞಾನ, ವೈರಾಗ್ಯಗಳು ಅವರ ವಚನಗಳಲ್ಲಿ ಮೂಡಿಬಂದಿವೆ. ಗುರು ಬಸವಣ್ಣನವರನ್ನು ನೀಲಮ್ಮನವರುವರು ಕೇವಲ ಪತಿ ಎಂದು ಭಾವಿಸದೇ ಗುರು ಎಂದು ಭಾವಿಸಿದ್ದರು ಎನ್ನುವುದನ್ನು ನಾವು ಈ ವಚನದಲ್ಲಿ ಕಾಣಬಹುದು.
ಮಡದಿ ಎನ್ನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾದೆನು,
ಬಸವನೆನ್ನ ಶಿಶುವಾದನು.
ಪ್ರಮಥರು ಪುರಾತನರ ಸಾಕ್ಷಿಯಾಗಿ
ಸಂಗಯ್ಯನಿಕ್ಕದ ದಿಬ್ಬವ ಮೀರದೆ
ಬಸವನೊಳಗಾಡಗಿದೆ
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–372/ವಚನ ಸಂಖ್ಯೆ–1023)
ಶಿಶುವಾದೆನು ಅಂದರೆ ನಿರ್ಮಲತೆಯ ಪ್ರತೀಕ. ಹೆಣ್ಣು-ಗಂಡು, ಪತಿ-ಪತ್ನಿ ಗಂಡು ಹೆಚ್ಚು, ಹೆಣ್ಣು ಕಡಿಮೆ ಇಂತಹ ಎಲ್ಲಾ ಅಸಮಾನತೆಗಳನ್ನು ತೊಡೆದು ಹಾಕಿದಂತಹ ಒಂದು ನಿರ್ಮಲವಾದ ಸಂಬಂಧ ಅದು ಶಿಶು ಸಂಬಂಧ. ಒಬ್ಬರ ಆಶೋತ್ತರಗಳು ಇನ್ನೊಬ್ಬರಿಗೆ ಪೂರಕ ಪ್ರೇರಕ ಇಂತಹ ಒಂದು ನಿಜವಾದಂತಹ ಸಂಬಂಧ ಇಬ್ಬರಲ್ಲಿ ಎಲ್ಲ ಶಿಷ್ಟ ಸಂಪ್ರದಾಯಗಳನ್ನೂ ಮೀರಿದಂತಹ ಒಂದು ಅಪರೂಪದ ಅನುಭಂಧ. ಇದು ಎಲ್ಲ ಆಚಾರ ವಿಚಾರ ಸದಾಚಾರಗಳಾಚೆ ಇರುವ ನಿರ್ಮಲವಾದ ಸಂಬಂಧ. ಇಂಥ ನಿರ್ಮಲವಾದ ಸಂಬಂಧವನ್ನು ವಿರೂಪಗೊಳಿಸಿ ಅದನ್ನು ತನ್ನ ತಲೆಯಲ್ಲಿ ತುಂಬಿಕೊಂಡಿರುವ ಲೈಂಗಿಕ ವಿಕೃತಿಗೆ ಪೂರಕವಾಗಿ ಚಿತ್ತರಿಸಿರುವುದನ್ನು ಯಾವ ಮನುಷ್ಯರೂ ಒಪ್ಪದ ಸಂಗತಿ.
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನಿಂತಪ್ಪ ಮಹಿಮನಯ್ಯಾ ಬಸವಯ್ಯಾ?
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–314/ವಚನ ಸಂಖ್ಯೆ–810)
ಈ ವಚನಕ್ಕೆ ತನ್ನ ದುಷ್ಟಬುದ್ಧಿಯ ನೇರಕ್ಕೆ ಬರೆದು ಅಸಹ್ಯ ವಿಕೃತಿ ಮೆರೆದಿರುವ ರವಿ ಹಂಜ್ ಯಾವ ಶಾಲೆಯಲ್ಲಿ ಅಕ್ಷರ ಕಲಿತಿದ್ದಾನೆಯೋ ಗೊತ್ತಿಲ್ಲಾ. ಹಾವಿಗೆ ಹಲ್ಲಿನಲ್ಲಿ ವಿಷವಿದ್ದರೆ ಈತನ ಇಡೀ ದೇಹವೇ ವಿಷಪೂರಿತವೆಂದು ತಾನೇ ಸಿದ್ಧ ಮಾಡಿದ್ದಾನೆ.
ಕಲ್ಯಾಣಕ್ರಾಂತಿ ಕನ್ನಡ ನಾಡಿನ ಶಿವಶರಣರ ಇತಿಹಾಸದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆ. ವರ್ಣಸಂಕರವನ್ನು ಮುಂದಿಟ್ಟುಕೊಂಡು ಮೂಲಭೂತವಾದಿಗಳು ನಡೆಸಿದ ವಿದ್ರೋಹದ ಕೃತ್ಯವಿದು, ಬಸವಣ್ಣನವರಂತಹ ಮಹಾಮಾನತಾವಾದಿಯ ವಿಚಾರಗಳನ್ನು ಅವಹೇಳನ ಮಾಡಿ, ಅವರ ಸಮಸಮಾಜದ ಕನಸನ್ನು ನುಚ್ಚುನೂರು ಮಾಡಿದ ಘಟನೆಯಿದು.
ಜೇನುಗೂಡಿನಂತಿದ್ದ ಶರಣರ ಸಮೂಹಕ್ಕೆ ಕಲ್ಯಾಣಕ್ರಾಂತಿ ಕಲ್ಲೇಟಿನಂತಾಗುತ್ತದೆ. ಇಡೀ ಶರಣ ಸಮೂಹವೇ ಚದುರಿ ಹೋಗುತ್ತದೆ. ಬಿಜ್ಜಳ ಮಹಾರಾಜ ಕಲ್ಯಾಣದಿಂದ ಬಸವಣ್ಣನವರನ್ನು ಹೊರ ಹೋಗುವಂತೆ ಬಹಿಷ್ಕಾರ ಹಾಕುತ್ತಾನೆ. ಈ ಕಾರಣದಿಂದ ಕಲ್ಯಾಣವನ್ನು ಬಿಡುವ ಮೊದಲು ಬಸವಣ್ಣನವರು ಅಕ್ಕನಾಗಮ್ಮ, ಚನ್ನಬಸವಣ್ಣ, ಅಪ್ಪಣ್ಣ, ಮಡಿವಾಳ ಮಾಚಿದೇವ, ಕಿನ್ನರ ಬೊಮ್ಮಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರನ್ನು ಕರೆಯಿಸಿ ಶಾಂತಿಯನ್ನು ಕಾಪಾಡಲು ಸೂಚಿಸಿ, ವಚನಗಳ ಸಂರಕ್ಷಣೆಗೆ ಮುನ್ಸೂಚನೆ ನೀಡಿ ಕೂಡಲಸಂಗಮಕ್ಕೆ ಹೋಗುತ್ತಾರೆ. ಈ ಘಟನೆಯ ತರುವಾಯ ಕಲ್ಯಾಣದಲ್ಲಿ ದಂಗೆ ಏಳುತ್ತದೆ. ಶರಣವನ್ನು ಕೊಲ್ಲುವ, ವಚನ ಕಟ್ಟುಗಳನ್ನು ಸುಟ್ಟು ಹಾಕುವ ಹುನ್ನಾರಗಳು ಪ್ರಾರಂಭವಾಗುತ್ತವೆ. ಆಗ ಶರಣರೆಲ್ಲರೂ ತಮ್ಮಿಂದ ಸಾಧ್ಯವಾದಷ್ಟು ವಚನಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ರಾತ್ರೋರಾತ್ರಿ ಕಲ್ಯಾಣವನ್ನು ತೊರೆಯುತ್ತಾರೆ.
ಬಸವಣ್ಣನವರಿಲ್ಲದ ಕಲ್ಯಾಣ ಬರಿದಾಗುತ್ತದೆ. ಸಿರಿಯೇ ಹೋದ ಮೇಲೆ ಕಲ್ಯಾಣದ ವೈಭವವೆಲ್ಲ ಹಾಳು ಕೊಂಪೆಯಾಗುತ್ತದೆ. ಶರಣರೆಲ್ಲರೂ ಅನಾಥರಾಗುತ್ತಾರೆ. ನೀಲಾಂಬಿಕೆಯವರಂತೂ ಅತ್ಯಂತ ದುಃಖಭರಿತಳಾಗುತ್ತಾರೆ. ಶರಣರ ಜೊತೆಗಿದ್ದು ಧೈರ್ಯ ತುಂಬುತ್ತಾರೆ. “ಅಟ್ಟಡವಿಯಲ್ಲಿ ಬಿಟ್ಟು ಹೋದಿರಿ ಬಸವಯ್ಯಾ, ನಟ್ಟನಡು ಗ್ರಾಮವ ಕೆಡಿಸಿ ಹೋದಿರಿ ಬಸವಯ್ಯ” ಎಂದು ಪ್ರಲಾಪಿಸುತ್ತಾರೆ. ಇಷ್ಟು ಹೊತ್ತಿಗೆ ಬಸವಣ್ಣನವರ ಅನುಭಾವದಿಂದ ನೀಲಮ್ಮ ಸ್ವತಂತ್ರ ವಿಚಾರವಾದಿಯಾಗಿಯೂ, ದೃಢಮನಸ್ಸಿನವಳಾಗಿ ರೂಪಿತರಾಗಿರುತ್ತಾರೆ.
ತಾತ್ವಿಕವಾಗಿ ಹೀಗೆ ಪ್ರಶ್ನಿಸಿದರೂ ಸತಿ ಸಹಜ ಭಾವ ಕಲ್ಯಾಣದಲ್ಲಿ ಅವರನ್ನು ಇರಗೊಡುವುದಿಲ್ಲ. ಅಪ್ಪಣ್ಣನೊಂದಿಗೆ ಕೂಡಲಸಂಗಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬಸವಣ್ಣನವರು ಲಿಂಗದೊಳೆಗಾದ ಸುದ್ಧಿ ಬರುತ್ತದೆ. ಇಡೀ ಶರಣ ಸಂಕುಲವೇ ಸಿಡಿಲು ಬಡಿದಂತೆ ತತ್ತರಿಸಿ ಹೋಗುತ್ತದೆ. ನೀಲಾಂಬಿಕೆಯವರು ಕುಸಿದು ಬೀಳುತ್ತಾರೆ. ಬಸವಣ್ಣನವರಿರದ ಲೋಕವನ್ನು ನೀಲಾಂಬಿಕೆಯವರು ನಿರೀಕ್ಷಿಸಿರಲಿಲ್ಲ. ಬಸವಣ್ಣನವರು ಬಯಲಪ್ಪಿದಾಗ ತಾನೂ ಆ ಬಯಲಲ್ಲಿ ಬಯಲಾಗುವ ಹಂಬಲ ಅವರಿಗಾಗಿರಬಹುದು. ತಂದೆ-ತಾಯಿ ಇಲ್ಲದ ನೀಲಾಂಬಿಕೆಯವರಿಗೆ ಅಣ್ಣನಾದ ಬಿಜ್ಜಳನೇ ಪತಿಯನ್ನು ಬಹಿಷ್ಕಾರ ಹಾಕಿ ಅವನ ಐಕ್ಯಸ್ಥಿತಿಗೆ ಕಾರಣವಾದಾಗ ನೀಲಾಂಬಿಕೆ ಮತ್ತೆ ಕಲ್ಯಾಣಕ್ಕೆ ತಿರುಗಿ ಹೋಗಲು ಮನಸ್ಸು ಮಾಡಲಿಲ್ಲ. ಮನಸ್ಸಿನ ದೃಢತೆಗೆ ಲಿಂಗವನ್ನು ಪೂಜಿಸುತ್ತಲೆ ದೇಹತ್ಯಾಗ ಮಾಡುತ್ತಾಳೆ. ಹೀಗೆ ತಂಗಿ ಅಡಗಿದ ಸ್ಥಳ ಅದುವೇ “ತಂಗಡಿಗಿ” ಎಂಬ ಊರಾಯಿತು. ಈ ತಂಗಡಿಗಿಯಲ್ಲಿ ನೀಲಮ್ಮನ ಸಮಾಧಿ ಇದೆ. ಈ ತಂಗಡಿಗೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿದೆ. ನೀಲಾಂಬಿಕೆಯ ಕುರಿತು ಅನೇಕ ತ್ರಿಪದಿಗಳೂ, ಸ್ತುತಿಪದ್ಯಗಳೂ ಇವೆ. ಸರ್ವಜ್ಞನೂ ಸಹ “ನೀಲಲೋಚನೆಯಮ್ಮನ ಬಾಲಶಿಶು ನಾನಯ್ಯ ಶೂಲಧರನೊಳಗೆ ಒಡವೆರದು ಕೈಲಾಸದಿ ಬಾಳಿ ಬದುಕೆಂದ ಸರ್ವಜ್ಞ” ಎಂದು ತ್ರಿಪದಿಯನ್ನೂ ಬರೆದಿದ್ದಾನೆ.
ಕಾಮದ ಹಂಗಿಗನಲ್ಲ ಶರಣ,
ಮೋಹದ ಇಚ್ಫೆಯವನಲ್ಲ ಶರಣ,
ಉಭಯದ ಸಂಗದವನಲ್ಲ ಶರಣ,
ಪ್ರಾಣದ ಕುರುಹಿಲ್ಲದ ಶರಣಂಗೆ
ಪ್ರಸಾದದ ನೆಲೆಯಿಲ್ಲವಯ್ಯ.
ಎನಗೇನೂ ತಲೆದೋರದೆ ಮುಸುಕಿಟ್ಟು
ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–350/ವಚನ ಸಂಖ್ಯೆ–938)
ಈ ವಚನವನ್ನು ಎಷ್ಟು ಕ್ರೂರವಾಗಿ ಈ ಹಂದಿ ರವಿ ಹಂಜ್ ಚಿತ್ರಿಸಿದ್ದಾನೆ ಎಂದರೆ ಓದಲೂ ಕೂಡ ಅಸಹ್ಯವಾಗುತ್ತದೆ.
ಕಾಮವನ್ನು ತನ್ನ ವಚನಗಳಲ್ಲಿ ಹೆಣ್ತನದ ನೆಲೆಯಲ್ಲಿ ಕಟ್ಟಿಕೊಡುತ್ತಾಳೆ. ಪತಿಯ ಮಿಲನಕ್ಕೆ ಕಾದು ಕಂಗೆಟ್ಟ ಪತ್ನಿಯ ವಿರಹವನ್ನು ಮತ್ತು ತನ್ನಿಚ್ಛೆಗೆ ಸ್ಪಂದಿಸದ ಪತಿಯನ್ನು “ಪ್ರಾಣದ ಕುರುಹಿಲ್ಲದವ ಎನ್ನುತ್ತಾ ತಾನು ಮುಸುಕಿಟ್ಟು ಬಸವಳಿದೆ” ಎಂದು ನಿಟ್ಟುಸಿರು ಬಿಡುತ್ತಾಳೆ.
ಅರಿಷಡ್ವರ್ಗಗಳನ್ನು ತ್ಯಜಿಸಬೇಕೆಂಬ ಸದಾಚಾರವನ್ನು ಈ ವಚನದಲ್ಲಿ ನಿರೂಪಿಸಲಾಗಿದೆ. ಕಾಮ ಮತ್ತು ಮೋಹವನ್ನು ಅರಿಯದವನಿಗೆ ಪ್ರಸಾದ ಅಂದರೆ ಫಲ ಸಿಗುವುದಿಲ್ಲವೆಂಬ ಸತ್ಯವನ್ನು ಇಲ್ಲಿ ತಿಳಿಸಲಾಗಿದೆ. ಇಂಥ ಶ್ರೇಷ್ಠ ವಚನವನ್ನು ಉಲ್ಲೇಖಿಸುತ್ತಾ ಹೀನಾಯವಾಗಿ ಬರೆದಿರುವ ರವಿ ಹಂಜ್ ಈ ವಚನವನ್ನು ಯಾವ Level ಗೆ ಇಳಿಸಿದ್ದಾನೆ ಎನ್ನುವುದನ್ನು ಪ್ರಾಜ್ಞರು ಅರ್ಥ ಮಾಡಿಕೊಳ್ಳಬೇಕು. ಇಂಥ ಶ್ರೇಷ್ಠ ಶರಣೆ, ವಿಚಾರಪತ್ನಿ ತಾಯಿ ನೀಲಮ್ಮನವರ ಕುರಿತು ಕಾಮದ ಪ್ರತಿರೂಪವೆಂಬಂತೆ ರವಿ ಹಂಜ್ ಎನ್ನುವ ಕಾಮ ಪಿಶಾಚಿ ಬರೆದು ಚಿತ್ರಿಸಿದರೆ ಮೈಯೆಲ್ಲಾ ಉರಿಯೋದಿಲ್ಲವೇ.
ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
ಮುನ್ನಳ ಪಾಪವೆನ್ನ ಹಿಂದುವಿಡಿದು,
ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು,
ಬಸವನನರಿಯದೆ ಕೆಟ್ಟ ಪಾಪಿಯಾನು.
ಶಬ್ದದ ಹಂಗಿಗಳಲ್ಲಯ್ಯ ನಾನು
ಸಂಗಯ್ಯನಲ್ಲಿ ಸ್ವಯಲಿಂಗಸಂಬಂಧವೆನಗೆಂತಯ್ಯ?
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–379/ವಚನ ಸಂಖ್ಯೆ–1048)
ಈ ವಚನವನ್ನು ಕಾಮದ ಹಂಗಿನೆಡೆಗೆ ತಿರುಗಿಸಿರುವ ಪಾಪಿ ರವಿ ಹಂಜ್:
“ಕಡೆಗೆ ಈಡೇರದ ತನ್ನ ಬಯಕೆಗಳನ್ನು ಹೇಗೆ ಆಕೆ ಹತ್ತಿಕ್ಕಿಕೊಂಡು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಳು ಎಂಬ ಚಿತ್ರಣವನ್ನು ಈ ವಚನದಲ್ಲಿ ತೋರುತ್ತಾಳೆ”
ಅಂತ ಬರೀತಾನೆ. ಈತನ ಆಲೋಚನೆ, ಆಚಾರ-ವಿಚಾರಗಳು, ಓದು-ಬರಹಗಳು ಕೇವಲ ಹೆಣ್ಣಿ ಜೊತೆಗಿನ ಲೈಂಗಿಕ ಸಂಪರ್ಕಕ್ಕಷ್ಟೇ ಸೀಮಿತ ಎನಿಸುತ್ತದೆ. ಈತನ ಎಲ್ಲ ಬರಹಗಳನ್ನು, ಚಿಂತನೆಗಳನ್ನು ಅವಲೋಕಿಸಿದರೆ ಮದಿರೆ-ಮಾನಿನಿ-ಮಾಂಸ ಬಿಟ್ಟು ಈತನಿಗೆ ಬೇರೇ ಲೋಕವೇ ಇಲ್ಲ ಎನಿಸುತ್ತದೆ. ಲಿಂಗಾಂಗ ಸಾಮರಸ್ಯದ ಸುಂದರ ಚಿತ್ರಣವನ್ನು ನೀಡುವ ಈ ವಚನವನ್ನು ಅಸಹ್ಯಕರ ರೀತಿಯಲ್ಲಿ ನೋಡುವುದನ್ನು ವಿಕೃತಿ ಅಂತಾರೆ. ಕಾಮಿತ-ನಿಃಕಾಮಿತ ಮತ್ತು ಸ್ವಯಲಿಂಗಸಂಬಂಧವನ್ನು ಸಂಭೋಗಕ್ಕೆ ಸೀಮಿತಗೊಳಿಸಿದ್ದಾನೆ ವಿಷಜಂತು ರವಿ ಹಂಜ್.
ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.
ಕೂಟವಿಲ್ಲದ ಪುರುಷನ ಕಂಡು
ಕಾಮದ ಆತುರಹಿಂಗಿತ್ತೆನಗೆ.
ಏನೆಂದೆನ್ನದ ಮುನ್ನ ತಾನೆಯಾಯಿತ್ತು;
ಸಂಗಯ್ಯನಲ್ಲಿ ಶಬ್ದಮುಗ್ಧವಾಯಿತ್ತು.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–330/ವಚನ ಸಂಖ್ಯೆ–858)
ಈ ವಚನವನ್ನೂ ಸೈತ ತನ್ನ ವಿಕೃತ ಮನಸ್ಸಿನಂತೆ “ಕಡೆಗೆ ಕಾಮವನ್ನು ಕಳೆದು ಕೊಂಡು ಪ್ರಸನ್ನವದನೆಯಾದೆ” ಎನ್ನುವ ಸಾಲುಗಳನ್ನು ಉಲ್ಲೇಖಿಸಿ ಈ ವಚನದಲ್ಲಿ ನೀಲಮ್ಮ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ ಅಂತ ಬರೆದರೆ ಎಂಥ ಅನರ್ಥವಾಗುತ್ತದೆ ಎನ್ನುವುದು ಲೋಫರ್ ರವಿ ಹಂಜ್ ಎನ್ನುವ ಕಾಮಪಿಶಾಚಿಗೆ ಅರ್ಥವಾಗುವುದಿಲ್ಲ. ಮುಂದುವರೆದು “ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು” ಎಂದರೆ ಬರೀ ಲೈಂಗಿಕಾಸಕ್ತಿ ಎನ್ನುವುದು ಈ ಹಂದಿ ರವಿ ಹಂಜ್ ಮಾತ್ರ ವಿಶ್ಲೇಷಿಸಬಲ್ಲ.
ಕರಣಂಗಳ ಹಂಗ ಹರಿದು,
ಕರಣಂಗಳ ಮುಖವನಳಿದು,
ಶರಣರ ಪರಿಣಾಮದಲ್ಲಿ ಮುಕ್ತಿಯನರಿದೆನಯ್ಯಾ.
ಬಸವನ ಕುರುಹು ಕಂಡು ಪ್ರಸನ್ನೆಯಾದನಯ್ಯಾ.
ಪ್ರಸನ್ನ ಪರಿಣಾಮವಿಡಿದು
ಆನು ಬದುಕಿದೆನಯ್ಯಾ ಸಂಗಯ್ಯ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–349/ವಚನ ಸಂಖ್ಯೆ–933)
ಪಂಚಭೂತಗಳ ಅರಿವಿನ ಸುಖದಲ್ಲಿನ ಭವಂಗಳನ್ನು ಪರಿಹರಿಸಿ ಅಂತರಂಗದ ಜ್ಞಾನವನ್ನು ಬೆಳಗಿಸಿದವರು ಬಸವಣ್ಣನವರೆಂದು ಹೇಳುತ್ತಾರೆ ತಾಯಿ ನೀಲಮ್ಮನವರು. ಬಸವಣ್ಣನೆಂಬ ಸಾಕಾರ ಮೂರ್ತಿಯಲ್ಲಿ ಪ್ರಸಾದದ ಆನಂದವನ್ನು ಕಂಡ ತಾಯಿ ನೀಲಮ್ಮನವರು “ಬದುಕಿದೆನು” ಎನ್ನುವ ಧ್ವನಿ ಪ್ರಸ್ತಾನದ ಮೂಲಕ ನಿರೂಪಿಸುತ್ತಾರೆ.
ಈ ವಚನವನ್ನು ಯಾವ ರೀತಿ ಕುಲಗೆಡಿಸಿ ವಿಶ್ಲೇಷಣೆ ಮಾಡಿದ್ದಾನೆಂದರ:
ಪತಿಯಿರದಿದ್ದರೂ ಬಾಳುವ ಛಲ ನನ್ನಲ್ಲುಂಟು ಏಕೆಂದರೆ ಕಾಮವನ್ನು ಕಳೆದುಕೊಂಡವಳಾದುದರಿಂದ ಬಸವನ ಹಂಗು ನನಗಿಲ್ಲ ಎನ್ನುವ ಛಲವನ್ನು ನೀಲಮ್ಮ ತೋರುತ್ತಾಳೆ.ಅಂತಾ ಬರೀತಾನೆಂದರೆ ಈತನ ಯೋಚಿಸುವುದು ಕೇವಲ ಲೈಂಗಿಕತೆ ಅಥವಾ ಕಾಮ ಮಾತ್ರ ಎನ್ನುವುದು ಇದರಿಂದ ತಿಳಿಯುತ್ತದೆ.ವಿಕೃತಿ ಮೆರೆದ ಈ ರವಿ ಹಂಜ್ ಎನ್ನುವ ಶ್ವಾನ ನೀಲಮ್ಮನವರ ಮತ್ತೊಂದು ವಚನವನ್ನು ಉಲ್ಲೇಖಿಸಿದ್ದಾನೆ.
ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು.
ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ.
ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು
ಮನವಿಚಾರವ ಕಂಡೆನಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–386/ವಚನ ಸಂಖ್ಯೆ–1078)
ಈತ ಈ ವಚನವನ್ನು ವಿಶ್ಲೇಷಿಸುತ್ತಾ ಮತ್ತೊಂದು ವಿಕೃತ ವಿತಂಡವಾದವನ್ನು ಮಂಡಿಸಿದ್ದಾನೆ.
ಕೇವಲ ನಿಷ್ಠೆ ಎಂಬ ಒಂದು ಬದ್ಧತೆಯ ಕಾರಣವಾಗಿ ಎಲ್ಲಾ ವಾಂಛೆಗಳನ್ನು ಕಷ್ಟದಿಂದ ಕಳೆದುಕೊಳ್ಳುತ್ತಾ ಯಾವುದೇ ಸುಖವಿಲ್ಲದಿದ್ದರೂ ಕೇವಲ ಪ್ರಸಿದ್ಧ ಪುರುಷನ ಇರುವಿಕೆಯ ಏಕೈಕ ಕಾರಣದಿಂದ ಬದುಕಿದ್ದೆ.
ಏನಿದರ ಅರ್ಥ? ಅಂದರೆ ನೀಲಮ್ಮನವರು ಬಸವಣ್ಣನವರಿಂದ ಲೈಂಗಿಕ ಸುಖ ನೀಡಲಿಲ್ಲ ಅಂತಾ ಈ ಹುಚ್ಚ ರವಿ ಹಂಜ್‌ನ ವಾದ.
“ಹಂದೆಯಲ್ಲ ನಾನು ಹರುಷದ ಧೈರ್ಯವುಳ್ಳ ಹೆಣ್ಣು ನಾನು ಎಂಬ ಮಾತು ಅವಳ ಮನೋಸ್ಥೈರ್ಯಕ್ಕೆ ಹಿಡಿದ ಕನ್ನಡಿ. ನಾನು ಹೇಡಿಯಲ್ಲ, ಎಂದು ಬಂದದ್ದೆಲ್ಲವನ್ನೂ ನಗು ನಗುತ್ತಾ ಎದುರಿಸುತ್ತೇನೆ ಎನ್ನುವ ಎದೆಗಾರಿಕೆ ನೀಲಾಂಬಿಕೆಯದು ಎನ್ನುವುದು ಈ ವಚನದ ನಿಜ ಆಶಯ.
ರವಿ ಹಂಜ್ ಎನ್ನುವ ಹಂದಿಯ ಮತ್ತೊಂದು ವಿತಂಡ ವಾದವನ್ನು ಗಮನಿಸಿ:
ಸಾಮಾಜಿಕವಾಗಿ ಬಸವಣ್ಣನನ್ನು ಜಗಜ್ಯೋತಿ, ಸಮಾನತೆಯ ಹರಿಕಾರ ಎಂದೆ ಗುರುತಿಸಿದ್ದರೂ, ನೀಲಮ್ಮನು ತನ್ನ ಪತಿಯಾದ ಬಸವಣ್ಣನನ್ನು ತೆರೆದಿಡುವ ಪರಿಯೇ ಬೇರೆ. ಇವಳ ವಚನದಲ್ಲಿ ಬಸವಣ್ಣ ಪುರುಷಶಾಹಿಯ ಅಧಿಪತಿಯೆನಿಸುತ್ತಾನೆ, ಅಧ್ಯಾತ್ಮದ ನೆಪದಲ್ಲಿ ಸಾಂಸಾರಿಕ ಬಯಕೆಗಳನ್ನು ಈಡೇರಿಸದ ಶರಣನಿದ್ದಾನೆ. ನಟ್ಟನಡುವೆ ಬಿಟ್ಟು ಹೋದ ಪತಿಯಿದ್ದಾನೆ. ಕಟ್ಟಕಡೆಗೆ ನೀಲಮ್ಮನು ಗತ್ಯಂತರವಾಗಿ ಅಧ್ಯಾತ್ಮವನ್ನು ಹೇರಿಕೊಂಡು ನಾನು ಹಂದೆಯಲ್ಲ (ಅಂಜುಬುರುಕಿಯಲ್ಲ) ಎನ್ನುತ್ತ ಬರುವ ಎಲ್ಲಾ ಸನ್ನಿವೇಶಗಳನ್ನೂ ಛಲದಿಂದ ಎದುರಿಸುತ್ತ ಪುರುಷನನ್ನು ಸಮಗಟ್ಟುವುದಲ್ಲದೆ ಆತನನ್ನು ಮೀರಿದ ಓರ್ವ ಸರ್ವಸ್ವತಂತ್ರ ದಿಟ್ಟ ಮಹಿಳೆಯಾಗಿ ಹೊಮ್ಮಿದ್ದಾಳೆ. ಆದರೆ ಮತ್ತೊಮ್ಮೆ ಬಸವನಿಲ್ಲದ ಮೇಲೆ ನನಗೇನು ಇಲ್ಲಿ ಹಾಗಾಗಿ ನಾನೂ ಅಳಿಯುವೆ ಎಂಬ ವಿಕ್ಷಿಪ್ತತೆಯನ್ನು ತೋರಿದ್ದಾಳೆ. ಇಂಥ ವಿಕ್ಷಿಪ್ತತೆಯನ್ನು ನೀಲಮ್ಮನಲ್ಲದೆ ಅನೇಕ ವಚನಕಾರರೂ ತಮ್ಮ ವಚನಗಳಾದ್ಯಂತ ತೋರಿದ್ದಾರೆ.
ಒಟ್ಟರೆಯಾಗಿ ಈ ರವಿ ಹಂಜ್ ಎನ್ನುವ ಲೈಂಗಿಕ ವಿಕೃತ ನಾಯಿ ತಾಯಿ ನೀಲಮ್ಮನವರನ್ನು ಹಾಗೂ ಇನ್ನಿತರ ವಚನಕಾರ್ತಿಯರನ್ನು Sexually Unsatisfied Woman ಎಂದು ಗುರುತಿಸುವುದನ್ನು ಯಾವ ನಾಗರೀಕತೆಯೂ ಒಪ್ಪುವಂಥ ಮಾತಲ್ಲಾ.
ಬಸವಣ್ಣನವರ ವಚನಗಳಲ್ಲಿ ನೀಲಮ್ಮನವರನ್ನು ಹೊಗಳಿದ್ದನ್ನೂ ಕೂಡ ಈ ಹುಚ್ಚ ರವಿ ಹಂಜ್ ತನ್ನ ಹೊಲಸು ನಾಲಿಗೆಯಿಂದ ವಿಕೃತಗೊಳಿಸಿದ್ದಾನೆ. ಆತನ ವಿಕೃತಿಯನ್ನು ನೋಡಿ:
ನೀಲಮ್ಮನ ಎಲ್ಲಾ ದೂರು, ದುಮ್ಮಾನಗಳು ಸತ್ಯವೆಂಬಂತೆ ಬಸವಣ್ಣನ ಈ ವಚನ ಅನಾವರಣಗೊಳ್ಳುತ್ತದೆ: “…..ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮ ದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮ ದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬ…. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲ ಸಂಗಮದೇವಾ” (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 1111). ಆಧ್ಯಾತ್ಮ, ಚಳವಳಿ, ಮೌಲ್ಯಗಳು ಮಾನವನನ್ನು ಗಾಢವಾಗಿ ಆವರಿಸಿಕೊಂಡಾಗ ಎಂಥ ಒಂದು ಸಮಾಧಿ ಸ್ಥಿತಿಗೆ ಮನಸ್ಸು ಲೀನವಾಗಿರುತ್ತದೆ ಎನ್ನುವುದನ್ನೂ ಬಸವಣ್ಣನ ಈ ವಚನ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸುತ್ತದೆ.
ಯಾವುದೇ ಲೌಕಿಕ ವಿಚಾರಗಳು ನನ್ನ ಭಕ್ತಿಮಾರ್ಗಕ್ಕೆ ತಡೆಯೊಡ್ಡಲಾರವು ಎಂಬುದನ್ನು ನಿಷ್ಠುರವಾಗಿ ಆದರೆ ಭಕ್ತಿಲೋಲುಪ್ತನಾಗಿ ನುಡಿಯುವಾಗ ಬಸವಣ್ಣನು “ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ” ಎನ್ನುತ್ತಾನೆ.
ಅಂದರೆ ಸಂಸಾರದ ಬಗ್ಗೆ ಬಸವಣ್ಣನು ಎಂಥ ದಿವ್ಯ ವಿರಕ್ತಿಯನ್ನು ಹೊಂದಿದ್ದನು ಎಂಬ ವಿಶಾಲಾರ್ಥದೊಂದಿಗೆ ಈ ವಚನವು ಆತನ ಸಂಸಾರದ ಸೂಕ್ಷ್ಮಗಳನ್ನೂ ತೋರುತ್ತದೆ.
ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು,
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
… … … … … … … … … … …
… … … … … … … … … … …
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
… … … … … … … … … … ……
… … … … … … … … … … ……
ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
… … … … … … … … … … ……
… … … … … … … … … … ……
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು–2021/ಪುಟ ಸಂಖ್ಯೆ–325/ವಚನ ಸಂಖ್ಯೆ–1112)
“ಪೃಥ್ವಿಗಗ್ಗಳ ಚೆಲುವೆ” ಎನ್ನುವುದನ್ನು ಎಷ್ಟು ವಿಷಪೂರಿತವಾಗಿ ಈ ಹಂದಿ ರವಿ ಹಂಜ್ ಚಿತ್ರಿಸಿದ್ದಾನೆಂದರೆ ಯಾವುದೇ ಸುಸಂಸ್ಕೃತರು ಒಪ್ಪಲಾರದ ವಿಷಯ. ಇನ್ನು ಬಸವಣ್ಣನವರು ಸಂಸಾರದಲ್ಲಿ ವಿರಕ್ತಿಯನ್ನು ಹೊಂದಿದ್ದರೆಂದು ಬರೆಯುವ ಮೂಲಕ ಇಡೀ ಬಸವಾದಿ ಶರಣರ ಸಂಸಾರದಲ್ಲಿದ್ದ ಭಕ್ತಿ ಚಿತ್ರಣವನ್ನು ವಿರೂಪಗೊಳಿಸಿ ಬರೆದಿದ್ದಾನೆ. A meticulous ಬೇವರ್ಸಿ ಎನ್ನುವುದನ್ನು ತಾನೇ ಚಿತ್ರಿಸಿಕೊಂಡಿದ್ದಾನೆ.
ವಿಷಭಟ್ಟನ ಈ ವಿಷವಾಣಿಯಲ್ಲಿ “ಬಸವ ಮಂಟಪ” ಎನ್ನುವ ಅಂಕಣದಲ್ಲಿ ಈ ಥರಾ ಲೈಂಗಿಕ ಅಸಭ್ಯ ಭಾಷಾ ಪ್ರಯೋಗದ ವಿರುದ್ಧ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮಠಾಧೀಶರು ಮತ್ತು ಬಸವಾಭಿಮಾನಿಗಳು ಯಾಕೆ ಪ್ರಭಟನೆ ಮಾಡತಾ ಇಲ್ಲಾ. ವಿಷಭಟ್ಟನ ಈ ವಿಷವಾಣಿಯನ್ನು ಕೋರ್ಟ್ ಮುಖಾಂತರ ತಡೆ ಹಿಡಿದು ಕಾನೂನಾತ್ಮಕ ಕ್ರಮ ಕೈಗೊಂಡು ಹಂಜ್ & ವಿಶ್ವೇಶ್ವರ ಭಟ್ ಎನ್ನುವ ಬಸವಾದಿ ಶರಣರ ವಿರುದ್ಧ ವಿಷಕಾರುವ ಈ ವಿಷ ಸರ್ಪಗಳಿಗೆ ಪಾಠ ಕಲಿಸಬೇಕಾಗಿದೆ.
ನನಗಂತೂ ಕಾನೂನಿನ ಬಗ್ಗೆ ಮತ್ತು ನ್ಯಾಯಾಲಯದ ಪ್ರಕ್ರಿಯಗಳ ಕುರಿತು ಅಷ್ಟಾಗಿ ಗೊತ್ತಿಲ್ಲಾ. ಕಾನೂನಿನ ಅರಿವು ಇರುವವರು ದಯಮಾಡಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಮನವಿ.
ವೈರಾಗ್ಯನಿಧಿ ಅಕ್ಕಮಹಾದೇವಿ, ಕಾಯಕಯೋಗಿ ಲಕ್ಕಮ್ಮ, ವಿಚಾರಪತ್ನಿ ನೀಲಮ್ಮನವರ ಬಗ್ಗೆ ಇಷ್ಟು ಅಸಹ್ಯಕರ ಪದಬಳಕೆ ಯಾವ ಪುರುಷಾರ್ಥಕ್ಕೆ ಮಾಡತಾ ಇದಾರೆ ಅನ್ನೋದೇ ಗೊತ್ತಾಗತಾ ಇಲ್ಲಾ. ಯಾಕೆ ಕಾಶ್ಮೀರದಿಂದ ಮಧ್ಯಪ್ರದೇಶದ ಮೂಲಕ ತಮಿಳು ನಾಡಿಗೆ ವಲಸೆ ಬಂದು ಅಲ್ಲಿಂದ ಆಂಧ್ರಕ್ಕೆ ಪಲಾಯನ ಮಾಡಿ ಮತ್ತೆ ಆಂಧ್ರದಿಂದ ಕಾಲು ಕಿತ್ತು ಹೊಟ್ಟೇಪಾಡಿಗಾಗಿ ಮತ್ತು ಅರೆಕಾಸಿನ ಮಜ್ಜಿಗೆಗಾಗಿ ಕರ್ನಾಟಕಕ್ಕೆ ಓಡಿ ಬಂದಿರುವ ಆರಾಧ್ಯ ಶೈವ ಬ್ರಾಹ್ಮಣರ ಕುಲ ಸಂಜಾತರಾದ ಜುಟ್ಟು ಜನಿವಾರ ಕಿತ್ತೆಸೆದು ಇಷ್ಟಲಿಂಗಧಾರಿಗಳಾದ ವೀರಶೈವರು ಮಾಡತಾ ಇದಾರೆ ಗೊತ್ತಿಲ್ಲಾ.
ಲಿಂಗಾಯತರು ಇವರ ವಿರುದ್ಧ ಸಿಡಿದೇಳದಿದ್ದರೆ ಮುಂದಿನ ದಿನಮಾನಗಳಲ್ಲಿ ಇವರು ನಮ್ಮ ಹೆಣ್ಣು ಮಕ್ಕಳನ್ನು ಕುರಿತು ಅಸಭ್ಯ ಲೈಂಗಿಕ ಭಾಷೆ ಬಳಸಿ ಬರೆಯೋದು ಗ್ಯಾರಂಟಿ. ಅಲ್ಲಿಯವರೆಗೆ ನಾವು ನವರಂಧ್ರಗಳನ್ನು ಮುಚ್ಚಿಕೊಂಡು ಸುಮ್ಮನಿರಬೇಕಾ …. ಯೋಚನೆ ಮಾಡಿ ಪ್ಲೀಸ್.
ಕೊನೇಯದಾಗಿ ಅಕ್ಕಮಹಾದೇವಿಯವರ ಈ ವಚನದ ಮೂಲಕ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದು ಕೊಂಬಂತೆ.
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದು ಕೊಂಬಂತೆ.
ಚನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯ ನುರಿಯ ಕೊಂಬಂತೆ.
(ಸಮಗ್ರ ವಚನ ಸಂಪುಟ: ಐದು–2021/ಪುಟ ಸಂಖ್ಯೆ–19/ವಚನ ಸಂಖ್ಯೆ–42)
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in





Total views : 62522
ಅಣ್ಣಾ ಚೆನ್ನಾಗಿ ಉಗಿದಿದ್ದಿರಿ ಆ ಲೋಪರ್ ಹಂಜಿಗೆ.