ಲಿಂಗಾಯತರ ಶಿವ ಅಂದರೆ ಯಾರು? | ಡಾ. ವಿಜಯಕುಮಾರ ಕಮ್ಮಾರ, ತುಮಕೂರು
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.ಕೂಡಲಸಂಗಮದೇವಯ್ಯಾ,ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744) ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ. ಇಷ್ಟಲಿಂಗ ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397) ಬಸವಾದಿ ಶಿವಶರಣರ ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ…





Total views : 67073