ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.
ಆಸೆಯೆಂಬುದು ಅರಸಿಂಗಲ್ಲದೆ,ಶಿವಭಕ್ತರಿಗುಂಟೆ ಅಯ್ಯಾ?ರೋಷವೆಂಬುದು ಯಮದೂತರಿಗಲ್ಲದೆ,ಅಜಾತರಿಗುಂಟೆ ಅಯ್ಯಾ?ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆದೂರ ಮಾರಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708) ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ…