ವಿಚಾರಪತ್ನಿಯರಾದ ಶಿವಶರಣೆಯರು / ಡಾ. ರಾಜೇಶ್ವರಿ ಶೀಲವಂತ, ಬೀಳಗಿ.
ಪಾರಂಪರಿಕ ಸಮಾಜ ವ್ಯವಸ್ಥೆಯು ಆಚರಣೆ, ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಶತ ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಿಂದ ಮಹಿಳೆ ಶೋಷಣೆಗೆ ಒಳಗಾಗುತ್ತಲೆ ಬಂದಿದ್ದಳು. ಮಹಿಳೆಯರನ್ನು ಆ ಶೋಷಣೆಗಳಿಂದ ಮುಕ್ತಗೊಳಿಸಿ, ಅವರನ್ನು ಗೌರವಿಸಿ, ಅವಳಿಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನ ಕಲ್ಪಿಸಿ, ಅವರ ವಿಚಾರಗಳಿಗೆ ಮನ್ನಣೆಯನ್ನಿತ್ತು, ಅವರನ್ನು ಮನುಷ್ಯರಂತೆ ಕಂಡದ್ದು ಶರಣ ಪರಂಪರೆ. ಶರಣರು ಮಹಿಳೆಯರಿಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಅವಕಾಶವನ್ನು ನೀಡಿ ಅವರು ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟರು. ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿದರು. ಶರಣರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ…