ವಿಶ್ವಶಾಂತಿಗೆ ಶರಣರು ನೀಡಿದ ಶಾಂತಿ ಸೌಹಾರ್ದತೆಯ ಸಂದೇಶಗಳು / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕರಿ ಘನ; ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾಗಿರಿ ಘನ; ವಜ್ರ ಕಿರಿದೆನ್ನಬಹುದೆ? ಬಾರದಯ್ಯಾತಮಂಧ ಘನ; ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-6) ಎಲ್ಲರಿಗೂ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಶರಣು ಶರಣಾರ್ಥಿಗಳು. ಸೌಹಾರ್ದತೆಯ ಬೀಜ ಬಿತ್ತಿ ಧರೆಯ ಮೇಲೆ ಸುಂದರವಾದ ಸಮ ಸಮಾಜವನ್ನು ಕಟ್ಟಬಯಸಿದ ಬಸವಾದಿ ಶಿವಶರಣರು ನಿತ್ಯ ಸ್ಮರಣಿಯರಾಗಿದ್ದಾರೆ. ಲೋಕದಂತೆ ಬಾರರು, ಲೋಕದಂತೆ ಇರರು,ಲೋಕದಂತೆ ಹೋಹರು, ನೋಡಯ್ಯಾ.ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,ಮುಕ್ತಿಯಂತೆ ಹೋಹರು, ನೋಡಯ್ಯಾ.ಉರಿಲಿಂಗದೇವಾ, ನಿಮ್ಮ ಶರಣರುಉಪಮಾತೀತರಾಗಿ ಉಪಮಿಸಬಾರದು.(ಸಮಗ್ರ ವಚನ…

0 Comments

ಬಸವಣ್ಣನವರ ದೃಷ್ಟಿಯಲ್ಲಿ ದೇವರು / ಶ್ರೀಮತಿ. ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ.

ಬಸವಣ್ಣನವರು ವಿಶ್ವದ ಮಹಾನ್‌ ಚಿಂತಕರ ಗುಣ ವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ. ಆರ್ಥರ್ ಮೈಲ್ಸ್ ಹೇಳುವಂತೆ: ಅವರು 'ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ'. ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಾಮಾಜಿಕ ಚಿಂತನೆ, ಮಾರ್ಕ್ಸ್ ನ ಆರ್ಥಿಕ ನೀತಿ - ಈ ಎಲ್ಲವನ್ನೂ ಏಕೀಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ 'ಸಮಾಜ ಪರಿವರ್ತಕರು ' ಅನ್ನುವುದು ಸೂಕ್ತ. ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂತಹ ವಸ್ತುವಿನ ಕುರಿತು…

0 Comments

ಹೌದಪ್ಪಾ ಹೌದೋ ನೀನೇ ದೇವರೋ / ಡಾ. ಬಸವರಾಜ ಸಾದರ, ಬೆಂಗಳೂರು.

ದೇವರನ್ನು ಕುರಿತ ನಮ್ಮ ನಂಬಿಕೆ ಮತ್ತು ಪರಿಕಲ್ಪನೆಗಳು ವೈವಿಧ್ಯಪೂರ್ಣವಾಗಿರುವಂತೆ ವಿಚಿತ್ರತರವೂ ಆಗಿವೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಅಸಂಖ್ಯ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ಮನುಷ್ಯನು ದೇವರನ್ನು ತನಗಿಂತ ಭಿನ್ನವಾದ ಅವತಾರ, ಸ್ವರೂಪ ಮತ್ತು ಸ್ಥಳಗಳಲ್ಲಿ ಕಾಣುವುದೇ ಹೆಚ್ಚು. ಈ ಕಾರಣಗಳಿಂದಾಗಿಯೇ ದೇವರಿಗೆ ತರತರದ ರೂಪಗಳನ್ನು ಆರೋಪಿಸಿ, ಪೋಷಾಕುಗಳನ್ನು ತೊಡಿಸಿ, ಗುಡಿ, ಗುಂಡಾರ, ದೇವಾಲಯ, ಬಸದಿ, ಚರ್ಚುಗಳಂಥ ಇಮಾರತುಗಳನ್ನು ನಿರ್ಮಿಸಿ, ಅದರಲ್ಲಿ ಆತನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇವೆಲ್ಲ ನಂಬಿಕೆಗಳ ಹಿಂದೆ ದೇವರು ನಮ್ಮಿಂದ ಅನ್ಯ ಮತ್ತು…

1 Comment

ಚಿನ್ಮಯಜ್ಞಾನಿ ಚನ್ನಬಸವಣ್ಣನವರು./ಡಾ. ವಿಜಯಕುಮಾರ ಕಮ್ಮಾರ.

ಕಂಗಳ ನೋಟ ಹೃದಯದ ಜ್ಞಾನ,ಮನದೊಳಗೆ ಮಾತನಾಡುತಿರ್ದೆನಯ್ಯಾ!ಜೇನ ಮಳೆಗಳು ಕರೆದವು,ಅಮೃತದ ಬಿಂದುಗಳು ಸುರಿದವು.ಕೂಡಲಚೆನ್ನಸಂಗನೆಂಬರಸಸಾಗರದೊಳಗೋಲಾಡುತಿರ್ದೆನಯ್ಯಾ.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-507/ವಚನ ಸಂಖ್ಯೆ-1111) 12 ನೇಯ ಶತಮಾನದಲ್ಲಿ ಅದ್ಭುತವಾದ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಕ್ರಾಂತಿಯೊಂದು ನಡೆಯಿತು. ಈ ಕ್ರಾಂತಿಯನ್ನು ಹುಟ್ಟುಹಾಕಿದವರು ಬಸವಣ್ಣನವರು. ಬಸವಣ್ಣನವರು ನಡೆ-ನುಡಿ ಸಿದ್ಧಾಂತಕ್ಕೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ಜ್ಞಾನ ವೈರಾಗ್ಯಕ್ಕೆ ಶಕ್ತಿಯಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಅರಿವಿನ ಜ್ಞಾನಕ್ಕೆ ಭಾಷ್ಯವಾಗಿ ಜೀವಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭುಗಳು ಶರಣ ಸಂಸ್ಕೃತಿಯ ಮೂರು ಮುಖ್ಯ ಅಂಗಗಳಾಗಿ ಕೈಂಕರ್ಯಗೊಳ್ಳುತ್ತಾರೆ. ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಚಿಂತನೆಗೆ ಒತ್ತುಕೊಟ್ಟರು. ಚನ್ನಬಸವಣ್ಣನವರು ಲಿಂಗಾಯತ…

0 Comments

ಪ್ರಾಣಲಿಂಗಿ ಸ್ಥಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಂತರಂಗದೊಳಗಿರ್ದ ನಿರವಯಲಿಂಗವನುಸಾವಯವ ಲಿಂಗವ ಮಾಡಿ,ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,ಆ ಇಷ್ಟಲಿಂಗವೆ ಅಂತರಂಗವನಾವರಿಸಿಅಂತರಂಗದ ಕರಣಂಗಳೆ ಕಿರಣಂಗಳಾಗಿಬೆಳಗುವ ಚಿದಂಶವೆ ಪ್ರಾಣಲಿಂಗವು,ಆ ಮೂಲಚೈತನ್ಯವೆ ಭಾವಲಿಂಗವು.ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿಅಖಂಡ ಪರಿಪೂರ್ಣವಪ್ಪ ನಿಜವು ತಾನೆ,ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-280 / ವಚನ ಸಂಖ್ಯೆ-971) ಅಂತರಂಗದೊಳಗೆ ನೆಲೆಗೊಂಡ ನಿರಾಕಾರವಾದ ಲಿಂಗವನ್ನು ಸಾಕಾರ ರೂಪದ ಲಿಂಗವ ಮಾಡಿ ಶ್ರೀಗುರುಸ್ವಾಮಿ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ತಂದು ಕೊಟ್ಟನು. ಸಾಧಕ ಅಥವಾ ಶರಣ ಗುರುಮುಖವಾಗಿ ಬಂದ ಆ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಮತ್ತೆ ಆ ಲಿಂಗವನ್ನು ತನ್ನ ಅಂತರಂಗದೊಳಗೆ ನೆಲೆಗೊಳಿಸುತ್ತಾನೆ. ಹೀಗೆ…

0 Comments

ಹೊರಗಲ್ಲ; ಒಳಗೇ ಇದೆ ಎಲ್ಲ! (ವಿಕಾಸವಾದದ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ, ಬೆಂಗಳೂರು.

ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅದರ ಅಭಿನ್ನ ಅಂಗಗಳಾಗಿದ್ದು, ಅವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ ಗತಿಯಲ್ಲಿಯೇ ನಡೆದಿರುತ್ತವೆ. ಈ ಕಾರಣಕ್ಕಾಗಿ ಅದರ ವೇಗ ಒಂದು ನಿಗದಿತ ನಿಯಂತ್ರಣಾ ಕ್ರಮದಲ್ಲಿರುತ್ತದೆ. ಬದಲಾಗುವುದರ ಮೂಲಕವೇ ಗತಿಶೀಲತೆಯನ್ನು ಸಾಧಿಸುವ ಕಾರಣಕ್ಕೆ ಅದು ತಕ್ಷಣ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಒಂದು ವಸ್ತು ಅಥವಾ ಜೀವಿಯ…

0 Comments

ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ…

0 Comments

ಸ್ತ್ರೀ ಸಮಾನತೆ-ವೈಜ್ಞಾನಿಕ ಪ್ರಯೋಗದ ಪ್ರಾತ್ಯಕ್ಷಿಕೆ / ಡಾ. ಬಸವರಾಜ ಸಾದರ, ಬೆಂಗಳೂರು.

ಸಾಮಾಜಿಕ ಅಸಮಾನತೆಯ ಮಾತು ಬಂದಾಗ ನಮ್ಮ ವ್ಯವಸ್ಥೆ ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು ವರ್ಗ ಮತ್ತು ವರ್ಣ ಅಸಮಾನತೆಗಳ ಬಗ್ಗೆ ಮಾತ್ರ. ಇವುಗಳನ್ನೂ ಒಳಗೊಂಡ ಹಾಗೆ, ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯ ಮತ್ತು ಶೋಷಣೆಗೆ ಸಿಕ್ಕು ನಿರಂತರ ನಲುಗುತ್ತ ಬಂದ ಮಹಿಳೆಯರ ವಿಷಯಕವಾದ ಅಸಮಾನತೆಯ ಬಗ್ಗೆ ಅದು ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಅತ್ಯಂತ ಹೀನ ನಡೆ. “ಮನು” ಕುಲದ ಆರಂಭದಿಂದ ನಡೆದೇ ಇರುವ ಮಹಿಳಾ ಅಸಮಾನತೆಯಾಚರಣೆಯು ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ತಾಳುತ್ತ ಬಂದಿದೆಯಷ್ಟೇ ಅಲ್ಲ, ಈಗಂತೂ ಕ್ರೌರ್ಯದ ಪರಮಾವಧಿಯನ್ನೇ ಪಡೆದು, ಅವಳ…

3 Comments

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ “ತನುವ ತೋಂಟವ ಮಾಡಿ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.ಒಡೆದು ಸಂಸಾರದ ಹೇಂಟೆಯ,ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹರೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲಿ ಜಾಗರವಿದ್ದುಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217) ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ…

0 Comments

ಪರಸ್ಪರಾವಲಂಬನ ಸಿದ್ಧಾಂತದ ವೈಜ್ಞಾನಿಕ ವಚನ / ಡಾ. ಬಸವರಾಜ ಸಾದರ, ಬೆಂಗಳೂರು.

ಸೃಷ್ಟಿಯ ಪ್ರತಿಯೊಂದು ವಸ್ತು ಮತ್ತು ಜೀವಿಯೂ ‘ಪರಸ್ಪರಾವಲಂಬನ’ ಸಿದ್ಧಾಂತದ ಮೂಲಕವೇ ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತವೆ ಮತ್ತು ಆ ಮೂಲಕವೇ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತವೆ. ಇದು ವೈಜ್ಞಾನಿಕ ಸತ್ಯ. ಹೀಗೆ ಪರಸ್ಪರ ಅವಲಂಬಿತವಾಗುವ ವಸ್ತು ಮತ್ತು ಜೀವಿಗಳ ಸಂಬಂಧದಲ್ಲಿ ಮುಖ್ಯವಾಗಿ ಪ್ರವೃತ್ತವಾಗುವುದು ಅವುಗಳಲ್ಲಿನ ಪೂರಕ (Complimentary) ಗುಣ ಮತ್ತು ಪರಸ್ಪರ ಹೊಂದಿಕೊಳ್ಳುವ (Compatibility) ಸ್ವಭಾವ. ಅಂಥ ಸಂಬಂಧ ಕುದುರಿದಾಗ ಮಾತ್ರ ಅಪೇಕ್ಷಿತ ಮತ್ತು ನಿರೀಕ್ಷಿತ ಪರಿಣಾಮ ದೊರೆಯಲು ಸಾಧ್ಯ. ಪರಸ್ಪರಾವಲಂಬನದ ಈ ಸಂಬಂಧವು ಹೊಸ ಸೃಷ್ಟಿಯ ಮೂಲವೂ ಹೌದು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ ಐನ್‌ಸ್ಟಿನ್‌ನ ‘ಸಾಪೇಕ್ಷ…

0 Comments