ಶ್ರಾವಣ ಮಾಸದ ಚಿಂತನೆ-01 / ಅವಿರಳಜ್ಞಾನಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

(ಶ್ರಾವಣಮಾಸದ ನಿಮಿತ್ತ ನಾಡಿನಾದ್ಯಂತ ಪುರಾಣ ಪ್ರವಚನ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣ ಮಾಸದ ಪರ್ಯಂತ ಕೆಲವು ಚಿಂತನೆಗಳನ್ನು ಪ್ರಕಟಿಸಬೇಕೆಂಬ ಆಶಯ ನನ್ನದು. ಓದಿ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುವೆ) ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು.ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.ಭಾವವೆಲ್ಲ ಮಹಾಘನದ ಬೆಳಗು.ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನಶ್ರೀಪಾದಕ್ಕೆ ಶರಣೆಂದುಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.(ಸಮಗ್ರ ವಚನ ಸಂಪುಟ: 5-2021 / ಪುಟ…

1 Comment

ಶ್ರಾವಣ ವಚನ ಚಿಂತನ-06: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?ಇಂತೀ‌ ಮೃತ್ಯುವಿನ ಬಾಯ ತುತ್ತಾದ,ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73) ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು…

0 Comments

ಶ್ರಾವಣ ವಚನ ಚಿಂತನ-05: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದ ಕಿಚ್ಚು ಜಲವ ಸುಡದೆಜಲವು ತಾನಾಗಿಯೆ ಇದ್ದಿತ್ತು ನೋಡಾನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆವತಾನಾಗಿರ್ದು - ಮತ್ತೆ ತಲೆದೋರದಿಪ್ಪುದುಗುಹಾಎಶ್ವರಾ ನಿಮ್ಮ‌ಜಿಲುವು ನೋಡಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು‌ ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು‌ ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು‌ ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು‌ ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ.…

0 Comments

ಬೆಳಗಾವಿ ಜಿಲ್ಲೆಯಲ್ಲಿ ಶರಣರ ಹೆಜ್ಜೆ ಗುರುತುಗಳು / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ, ಕಾಯಕ, ದಾಸೋಹ ತತ್ವಗಳ ಮೂಲಕ ಸರ್ವಾಂಗ ಸುಂದರ ಸಮಾಜ ನಿರ್ಮಾಣಕ್ಕಾಗಿ ಮಾಡಿದ ಈ ಕ್ರಾಂತಿ ಮನುಕುಲದ ಏಕತೆಗಾಗಿ ನಡೆದ ಮೊದಲ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತ, ದಮನಿತ ಸಮುದಾಯಕ್ಕೆ ಧ್ವನಿಯನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ಕೀರ್ತಿ, ವಾರ್ತೆಗಳನ್ನು ಕೇಳಿ ಕಾಶ್ಮೀರದಿಂದ, ಗುಜರಾತದಿಂದ, ದೂರದ ಕಂದಹಾರದಿಂದ, ಮಹಾರಾಷ್ಟ್ರದಿಂದ ಹೀಗೆ ದೇಶ-ವಿದೇಶಗಳಿಂದ ಅಭಿಮಾನಿ ಶರಣರು ಕಲ್ಯಾಣಕ್ಕೆ ಬಂದರು. ಕಲ್ಯಾಣ ಪಟ್ಟಣ ಭೂ ಕೈಲಾಸವಾಯಿತು. ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ” ಜಗತ್ತಿನ ಮೊಟ್ಟ…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಅಷ್ಟವಿಧಾರ್ಚನೆಯ ಮಾಡಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯಾ?ನೀನು ಬಹಿರಂಗ ವ್ಯವಹಾರ ದೂರಸ್ಥನು.ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯಾ?ನೀನು ವಾಙ್ಮನಕ್ಕತೀತನು.ಜಪ ಸ್ತೋತ್ರದಿಂದ ಒಲಿಸುವೆನೇ ಅಯ್ಯಾ?ನೀನು ನಾದಾತೀತನು.ಭಾವಜ್ಞಾನದಿಂದ ಒಲಿಸುವೆನೇ ಅಯ್ಯಾ?ನೀನು ಮತಿಗತೀತನು.ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?ನೀನು ಸರ್ವಾಂಗ ಪರಿಪೂರ್ಣನು.ಒಲಿಸಲೆನ್ನಳವಲ್ಲ; ನೀನೊಲಿಯುವುದೇ ಸುಖವಯ್ಯಚೆನ್ನಮಲ್ಲಿಕಾರ್ಜುನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-49) ಅಕ್ಕ ಮಹಾದೇವಿಯವರು ಮಹಿಳಾ ಅನುಭಾವಿಗಳಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಮೊದಲ ಅನುಭಾವಿ ಕವಿಯಿತ್ರಿ. ಇವರ ವಚನಗಳು ಭಾವ ಪ್ರಧಾನತೆಯಿಂದ ಕಂಗೊಳಿಸುತ್ತವೆ. ಅಕ್ಕನವರಲ್ಲಿ ಅನುಭಾವದ ತೀವ್ರತೆ, ಆಧ್ಯಾತ್ಮದ ಹಸಿವು, ಚೆನ್ನಮಲ್ಲಿಕಾರ್ಜುನನ ಮೇಲಿನ ಒಲುಮೆ, ಪ್ರೀತಿ ಅವುಗಳ…

0 Comments

ಶ್ರಾವಣ ವಚನ ಚಿಂತನ-04: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಎಣ್ಣೆ ಬೇರೆ ಬತ್ತಿ ಬೇರೆ; ಎರಡೂ ಸೇರಿ ಸೊಡರಾಯಿತ್ತು.ಪುಣ್ಯ ಬೇರೆ‌ ಪಾಪ ಬೇರೆ; ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು, ಮಿಗದಿರಬಾರದು,ಒಡಲಿಚ್ಛೆಯ ಸಲಿಸದೆ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ‌ ಮುನ್ನ,ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಭಕ್ತಿ ಮಾಡಲು ಸಮಯಾಸಮಯವಿಲ್ಲ. ಸಾಧ್ಯವಿದ್ದಾಗಲೇ ಮಾಡಿ ಮುಗಿಸಬೇಕು. ನಾಳೆ ನಾಡದು ಎಂದರೆ ಅದು ಸಾಧಗುವಾಗುವದಿಲ್ಲ. ಭಕ್ತಿಯನ್ನು ಮಾಡುವ ಅವಕಾಶವನ್ನು ಆದಷ್ಟೂ ಮುಂದೂಡುವ ಸ್ವಭಾವ ನಮ್ಮದು. ಇಂಥಹ ಸ್ವಭಾವವನ್ನು ವಿರೋಧಿಸುವ ಅಲ್ಲಮಪ್ರಭುಗಳು ಭಕ್ತಿ‌ಮಾಡುವಲ್ಕಿ ಹಿಂಜರಿಯಬಾರದು ಎಂಬುದನ್ನು ಹೇಳುತ್ತಾರೆ. ಭಕ್ತಿ ಮಾಡಿದಾಗಲೇ…

0 Comments

ಬಸವಣ್ಣನವರ ವಚನ ವಿಶ್ಲೇಷಣೆ: ಮೊರನ ಗೋಟಿಲಿ ಬಪ್ಪ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಮೊರನ ಗೋಟಿಲಿ ಬಪ್ಪ ಕಿರುಕುಳ ದೈವಕ್ಕೆಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.ಕುರಿ ಸತ್ತು ಕಾವುದೆ ಹರ ಮುಳಿದವರ?ಕುರಿ ಬೇಡ, ಮರಿ ಬೇಡ,ಬರಿಯ ಪತ್ರೆಯ ತಂದು ಮರೆಯದೆ ಪೂಜಿಸುನಮ್ಮ ಕೂಡಲಸಂಗಮದೇವನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-52 / ವಚನ ಸಂಖ್ಯೆ-560) ವಚನ ಸಾಹಿತ್ಯಕ್ಕೆ ಅದರದೇ ಆದ ತಾತ್ವಿಕತೆ ಇದೆ. ವಚನ ಸಾಹಿತ್ಯದ ಬಹು ಮುಖ್ಯವಾದ ಎರಡು ನೆಲೆಗಳು ಎಂದರೆ ಒಂದು "ಸಾಮಾಜಿಕ ಜವಾಬ್ದಾರಿ" ಮತ್ತೊಂದು "ಅಭಿವ್ಯಕ್ತಿ ಸ್ವಾತಂತ್ರ". ಶರಣರ ತಾತ್ವಿಕ ಸಿದ್ದಾಂತಗಳಿಗೆ ಇವೆರಡು ಮೂಲ ತಳಹದಿಯಾಗಿವೆ. ಶರಣರ ಅನುಭವ ಅನುಭಾವವಾಗಿ ಬದುಕಿನ ಸತ್ಯದ ಅನಾವರಣಕ್ಕೆ ನಾಂದಿಯಾಗಿತ್ತು. ಕಾರಣ ಇಷ್ಟೇ ಶರಣರು…

0 Comments

ಶ್ರಾವಣ ವಚನ ಚಿಂತನ-03: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.ಗುರು ಹಿರಿಯರು ತೋರಿದ ಉಪದೇಶದಿಂದ;ವಾಗದ್ವೈತವನೆ ಕಲಿತು ವಾದಿಪರಲ್ಲದೆ, ಆಗು-ಹೋಗೆಂಬುದನರಿಯರು.ಭಕ್ತಿಯನರಿಯರು ಮುಕ್ತಿಯನರಿಯರು,ಮತ್ತೂ ವಾದಕೆಳಸುವರು,ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-69) ಅಕ್ಷರ ಕಲಿಕೆಯ ಮಿತಿಯನ್ನು ಅಲ್ಲಮಪ್ರಭುಗಳು ಹೇಳುವ ರೀತಿ ಅರ್ಥಪೂರ್ಣವಾಗಿದೆ. ವಿದ್ಯೆ ವಿನಯವನ್ನು ಕೊಡಬೇಕು. ನಮ್ಮ ಹಿರಿಯರೇನೋ "ವಿದ್ಯಾ ದದಾತಿ ವಿನಯಂ" ಎಂದಿದ್ದರು. ಆದರೆ ವಿದ್ಯೆ ಪಡೆದ ಕೆಲವರು ವಿದ್ಯೆಗೆ ವಿನಯ ವೇಭೂಷಣ ಎಂಬುದನ್ನರಿಯದೆ ತಾವು ಕಲಿತವರೆಂಬ ಅಹಮ್ಮಿನಲ್ಲಿ ತಿರುಗುತ್ತಿರುವ ಸಂಗತಿಗಳು ಆಗಲೂ ಇದ್ದುವೆಂದು ಕಾಣಿಸುತ್ತದೆ. ಆದ್ದರಿಂದಲೇ ಚಿಂತಕರಾದ ಅಲ್ಲಮಪ್ರಭುಗಳು ವಿದ್ಯೆಯ ಮಿತಿಗಳನ್ನು ಒಂದು…

0 Comments

ಶ್ರಾವಣ ವಚನ ಚಿಂತನ-02: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆಆ ಬೆವಸಾಯದ ಘೋರವೇತಕ್ಕಯ್ಯಾ?ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆಆ ಓಲಗದ ಘೋರವೇತಕ್ಕಯ್ಯಾ?ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯಇವರಿಬ್ಬರ ಮನೆಯಲಿ ಮಾರಿ ಹೊಗಲಿಗುಹೇಶ್ವರನೆಂಬವನತ್ತಲೆ ಹೋಗಲಿ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65) ಶರಣರು ಈ ಬದುಕನ್ನು ಕುರಿತು ಮಾಡಿದ ಚಿಂತನೆ ಸದಾ ಧನಾತ್ಮಕವಾಗಿ ಇರುತ್ತಿತ್ತು. ಇಲ್ಲಿರುವ ಬದುಕನ್ನು ಸುಂದರ ವಾಗಿಸದೆ. ಅಲ್ಲಿನ ಬದುಕನ್ನು ಸುಂದರಗೊಳಿಸುವತ್ತಲೇ ಚಿಂತಿಸುವ ವಿಧಾನವನ್ನು ಅವರು ಒಪ್ಪಲಿಲ್ಲ. ಮೊದಲು ಇಹದ ಬದುಕು ಸುಂದರವಾಗಬೇಕು ಎಂಬುದು…

0 Comments

ಶ್ರಾವಣ ವಚನ ಚಿಂತನ-01: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,ಆ ಮೇರುವಿಂದತ್ತಣ ಹುಲು ಮೊರಡಿಯೆ ಸಾಲದೆ?ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,ಆ ಧಾವತಿಯಿಂದ ಮುನ್ನಿನ ವಿಧಿ [ಯೆ] ಸಾಲದೇ?ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,ನಿಮ್ಮಿಂದ ಹೊರಗಣ ಜವನೆ ಸಾಲದೇ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-66) ಇದು ಶ್ರಾವಣ ಮಾಸದ ಕಾಲ. ಪ್ರತಿ ದಿನ ಒಂದು ಪವಿತ್ರವಾದ ಚಿಂತನೆಯನ್ನು ಮಾಡುವದು ಈ ಮಾಸದ ವೈಶಿಷ್ಟ್ಯ. ಪವಿತ್ರವಾದ ಚಿಂತನೆಯನ್ನು ಮಾಡಲು ಯಾವುದೇ ಮಾಸದ ಅಗತ್ಯವಿಲ್ಲ, ಆದರೂ ಇದೊಂದು ಕಾರಣವಷ್ಟೇ. ಹೀಗೆ ಅಲೋಚಿಸಲು ನಾವು ಹೊರಟಾಗ ನಮಗೆ ಅತ್ಯಂತ ಮಾರ್ಗದರ್ಶಕವಾಗಿ ಸಿಗುವ ಸಾಹಿತ್ಯ…

0 Comments