ಶ್ರಾವಣ ವಚನ ಚಿಂತನ-11: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮರ್ತ್ಯಲೋಕದಮಾನವರು;ದೇಗುಲದೊಳಗೊಂದು ದೇವರ ಮಾಡಿದಡೆ, ಆನು ಬೆರಗಾದೆನು.ನಿಚ್ಚಕ್ಜೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,ಭೋಗವ ಮಾಡುವವರ ಕಂಡು ನಾನು ಬೆರಗಾದೆನು.ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-152 / ವಚನ ಸಂಖ್ಯೆ-176) ಶರಣರು ಮಾಡಿದ ದೈವ ಚಿಂತನೆ ವಿಶೇಷವಾದುದು. ದೇವರನ್ನು ನಮಗಾಗಿ ನಮ್ಮ ಮನಸಿಗೆ ಬಂದಂತೆ ಸೃಷ್ಟಿಸಿಕೊಳ್ಳುವ ನಮ್ಮ ವ್ಯವಹಾರಿಕ ಬುದ್ದಿಯನ್ನು ಶರಣರು ಒಪ್ಪುವದಿಲ್ಲ. ಅವನು ಅನೂಹ್ಯ ಮತ್ತು ಎಲ್ಲೆಲ್ಲಿಯೂ ಇರುವವನು ಎಂಬುದನ್ನು ಮರೆತ ನಾವು ದೇವರು ಇಲ್ಲಿ ಮಾತ್ರ ಇದ್ದಾನೆ ಎಂದು ಭಾವಿಸಿ ದೇವರಿಗಾಗಿ ದೇವಾಲಯ ನಿರ್ಮಿಸಿ, “ಇದು ದೇವಾಲಯ,…




Total views : 69467