ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ / ಡಾ. ಎಮ್. ಎ. ಜ್ಯೋತಿ ಶಂಕರ, ಮೈಸೂರು.
ಕನ್ನಡ ಸಾಹಿತ್ಯ ಲೋಕದಲ್ಲಿ 12 ನೇಯ ಶತಮಾನ, ಆ ಸಂದರ್ಭದಲ್ಲಿ ಬಂದಂತಹ ವಚನ ಸಾಹಿತ್ಯ, ಇತಿಹಾಸದಲ್ಲಿ ಒಂದು ಅಪೂರ್ವವಾದ ದಾಖಲೆಯನ್ನು ನಿರ್ಮಿಸಿತು. ಅದು ಸಾಹಿತ್ಯದ ರೀತಿಯನ್ನು, ಭಾಷೆಯನ್ನು, ಛಂದಸ್ಸನ್ನು ಮಾತ್ರ ಗಮನಿಸಲಿಲ್ಲ, ಬದಲಿಗೆ ಸಮಾಜವನ್ನೇ ಹೊಸ ದಿಕ್ಕಿನೆಡೆಗೆ ನೋಡುವಂತೆ ಮಾಡಿತು. ಆ ಹೊಸ ದಿಕ್ಕು ತನ್ನ ದಿಕ್ಸೂಚಿಯನ್ನು ರಚಿಸಿದ್ದು, ಸತ್ಯದ ಶುದ್ಧ ಬದುಕಿಗಾಗಿ ಎನ್ನುವಂತಹದು ಅಚ್ಚರಿಯನ್ನು ಮೂಡಿಸಿದರೂ, ಅದು ಇಂದಿನ ಜೀವನಕ್ಕೂ ಸರಿ ಹೊಂದಬಲ್ಲ ತಾತ್ವಿಕ ಮಾತೃಕೆಯನ್ನು ರಚಿಸಿದೆ ಎನ್ನುವುದು ಸದಾ ಸಂಸ್ಮರಣೀಯವಾದ ಸಂಗತಿಯಾಗಿದೆ. ಅನೇಕ ಶರಣರು ಬಸವಣ್ಣನವರ ನೇತೃತ್ವದಲ್ಲಿ, ನವ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿದರು.…




Total views : 69467