ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರ ವಚನ ವಿಶ್ಲೇಷಣೆ / ಪ್ರೊ. ಜಿ. ಎ.ತಿಗಡಿ, ಧಾರವಾಡ.
ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬಬುದ್ಧಿಹೀನರಿರಾ ನೀವು ಕೇಳಿರೋ,ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆಕಾಮ ಕ್ರೋಧವ ನೀಗಿ,ಲೋಭ ಮೋಹ ಮದ ಮತ್ಸರವ ಛೇದಿಸಿ,ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,ಆ ಮರುಗಿಸುವ ಕಾಯವನೆಪ್ರಸಾದಕಾಯವ ಮಾಡಿ ಸಲಹಿದರು.ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ,ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-917 / ವಚನ ಸಂಖ್ಯೆ-1242) ದೇಹವನ್ನು ದಂಡಿಸಿ ಮರುಗಿಸಿ, ನಿದ್ರಾಹೀನರಾಗಿ, ವಿದ್ಯೆ ಕಲಿತು ಮನವನ್ನು ಗೆದ್ದನೆಂಬ ಬುದ್ಧಿಹೀನರೇ, ನೀವು ಕೇಳಿರೋ! ಶರಣರು ಮನವ ಗೆಲುವ ರೀತಿಯನ್ನು. ಕಾಮ…






Total views : 65581