ತೆಲುಗು ಸಾಹಿತ್ಯದಲ್ಲಿ ಬಸವಣ್ಣ / ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ.
ಭಾರತದಲ್ಲಿ ಶೈವಧರ್ಮ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ದಕ್ಷಿಣ ಭಾರತದಲ್ಲಿ ಶೈವದ ಪ್ರಸಾರ ಹಲವು ಕಾರಣಗಳಿಂದ ವೈಶಿಷ್ಠ್ಯತೆಯತೆಯನ್ನು ಪಡೆದುಕೊಂಡಿದೆ. ಅದರಲ್ಲಿಯೂ ಆಂಧ್ರಪ್ರದೇಶ ಬಹು ಮುಖ್ಯವಾದುದು. ಆಂಧ್ರವನ್ನು ಶೈವಧರ್ಮದ ನೆಲೆವೀಡು, ತ್ರಿಲಿಂಗದೇಶ ಎನ್ನುತ್ತಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಾಹಸ್ತಿಗಳಲ್ಲಿರುವ ಮೂರು ಲಿಂಗಗಳ ಕಾರಣವಾಗಿ ತ್ರಿಲಿಂಗ ದೇಶವಾಗಿದೆ. ‘ತೆಲುಗು’ ಎಂಬ ಪರಿಭಾಷೆಯೂ ತ್ರಿಲಿಂಗದಿಂದಲೇ ಬಂದಿದೆ. ತ್ರಿಲಿಂಗವೇ ತೆಲುಂಗು, ತೆಲುಗು ಆಗಿದೆ. ಆಂಧ್ರಪ್ರದೇಶವನ್ನಾಳಿದ ರಾಜರು ಹೆಚ್ಚು ಶೈವರೇ ಆಗಿದ್ದಾರೆ. ಕ್ರಿ.ಶ. ಎರಡನೇ ಶತಮಾನದಿಂದ ೭ನೇ ಶತಮಾನದವರೆಗೆ ಇಕ್ಷ್ವಾಕಃ ಸಾಲಂಕಾಯನ, ವಿಷ್ಣುಕುಂಡಿನ; ಪಲ್ಲವರು ಆಳಿದ್ದಾರೆ. ಇವರ ವಂಶಸ್ಥರಿಗೆ ‘ಪರಮ ಮಹೇಶ್ವರ’ ಎಂಬ ಬಿರುದುಗಳಿವೆ.…




Total views : 69462