ಬಸವ ಪುರಾಣ, ಹನ್ನೆರಡು ಜ್ಯೋತಿರ್ಲಿಂಗ ಮತ್ತು ಬಸವತತ್ವ | ಯೋಗಮಯಿ ಸತ್ಯಮೇಧಾವಿ, ಬೆಳಗಾವಿ.
ಅರಿವರತು ಮರಹು ನಷ್ಟವಾದರೆ ಭಕ್ತಆಚಾರವರತು ಅನಾಚಾರ ನಷ್ಟವಾದರೆ ಜಂಗಮಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿಪರಿಣಾಮವರತು ಪರಮಸುಖಿಯಾದರೆಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯ. ಈ ವಚನವನ್ನು ಸಹಸ್ರ ಬಾರಿ ಬರೆದರೂ ನನಗೆ ಬೇಸರವಿಲ್ಲ, ಕಾರಣ ಅದು ಹುದುಗಿರಿಸಿಕೊಂಡ ಅಪಾರವಾದ ಸಿರಿ ಅಂಥದ್ದು. ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿರುವ ಬಸವ ಪುರಾಣದಲ್ಲಿ ಭಾಗಿಯಾಗಿದ್ದೆ. ಬಸವಣ್ಣ ಮತ್ತು ಪುರಾಣ ಇವೆರಡಕ್ಕೂ ಯಾವ ಸಂಬಂಧ? ಭೀಮ ಕವಿ ಬಿಂಬಿಸಿದ ಪವಾಡಗಳ ಸರಮಾಲೆ ಅದೆಷ್ಟು ವರ್ತಮಾನಕ್ಕೆ ಪ್ರಸ್ತುತ? ಮುಂತಾಗಿ ನನ್ನ ಮನಸ್ಸು ಚಿಂತಿಸತೊಡಗಿತ್ತು. ಹಾಗೆಯೇ ನಾವು…