ಬಸವಣ್ಣನವರ ಸ್ವಗತ | ಶ್ರೀ. ಮಹಾಂತೇಶ ನವಲಕಲ್, ಕಲಬುರಗಿ.
ಕಲ್ಯಾಣದಲ್ಲಿ ರಾಜಪ್ರಭುತ್ವ ನಮ್ಮನ್ನು ಉಚ್ಚಾಟನೆಗೊಳಿಸಿತ್ತು. ಬಿಜ್ಜಳ ಮಹಾರಾಜರು ಆರು ತಿಂಗಳ ಕಾಲ ನಾನು ಇಲ್ಲಿ ಇರಬಾರದು ಎಂದು ಆಜ್ಞಾಪಿಸಿದ್ದರು. ಆದರೆ ಅವರ ಮಗ ಸೋವಿದೇವ ನನಗೆ ಜೀವಿತಾವಧಿಯಲ್ಲಿ ಕಲ್ಯಾಣಕೆ ಬರಬಾರದು ಎನ್ನುವ ಸುಗ್ರೀವಾಜ್ಞೆ ಹೊರಡಿಸಿದ್ದ. ನಾನು ಅಪ್ಪಣ್ಣಗಳು, ಮಸಣಯ್ಯನವರು ಗುರುಬಸವ ಮಹಾಂತರಂತಹ ಅನೇಕ ತೊಂಬತೈದು ಶರಣರು ಆರಂಭದಲ್ಲಿ ನಮ್ಮ ಕಲ್ಯಾಣ ನಿರ್ಗಮನದ ಪ್ರಯಾಣದಲ್ಲಿ ಭಾಗವಹಿಸಿದ್ದರೂ ಕೂಡ ಅವರನ್ನು ಶರಣಧರ್ಮಗಳ ಉಪದೇಶಕ್ಕಾಗಿ ಆಯಾ ಆಯಾ ಊರುಗಳಲಿ ಬಿಟ್ಟು ನಾನು ಮತ್ತು ಅಪ್ಪಣ್ಣಗಳು ನಡೆಯುತ್ತ ನಡೆಯುತ್ತ ಬಾಗೇವಾಡಿಗೆ ಬಂದು ನಿಂತಿದ್ದೆವು. ಇಲ್ಲಿಂದ ಸಂಗಮ ಇನ್ನೂ ಐವತ್ತು ಹರಿದಾರಿಗಳ ದೂರವಿತ್ತು. ಆಗ…





Total views : 63657