ವಚನಕಾರರ ದೃಷ್ಟಿಯಲ್ಲಿ ಆತ್ಮ ಸೌಂದರ್ಯ | ಡಾ. ಎಂ. ಮಕ್ತುಂಬಿ, ಭಾಲ್ಕಿ.
ಅಧ್ಯಾತ್ಮ ಸಾಧಕರಾಗಿದ್ದ ವಚನಕಾರರಿಗೆ ಆತ್ಮಸಾಕ್ಷಾತ್ಕಾರವು ಉಳಿದ ಸಾಧನೆಗಳಂತೆ ಮಹತ್ವದ್ದಾಗಿತ್ತು. ಅವರು ಪುರವನ್ನು ಗೆದ್ದಂತೆ; ಪರವನ್ನು ಗೆದ್ದವರು. ಮನೆಯನ್ನು ಗೆದ್ದಂತೆ ಮಾರೂ ಗೆದ್ದವರು; ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಎಲ್ಲವೂ ಶಿವಮಯವಾಗಿಯೇ ಕಾಣುತ್ತದೆ; ಸಮಾನವಾಗಯೇ ಕಾಣುತ್ತದೆ. ಈ ದರ್ಶನದ ಹಿನ್ನೆಲೆಯಲ್ಲಿಯೇ ವಚನಕಾರರು ಎಲ್ಲ ತಾರತಮ್ಯಗಳನ್ನು ಮೀರಿ ನಿಂತರು. ತಾವು ಬದುಕಿದ್ದ ಯುಗಮಾನವನ್ನು ಎಲ್ಲ ಭೇದಗಳಿಂದ ಬಿಡುಗಡೆ ಮಾಡುವ ಚಳಿವಳಿಯೊಂದನ್ನು ರೂಪಿಸಿದರು. ಅದು ಆತ್ಮಸಾಕ್ಷಾತ್ಕಾರದ ಸಾಧನೆಯಾಗಿದ್ದಂತೆ; ಸಮಾಜದಲ್ಲಿದ್ದ ಪರಮಾತ್ಮನ ಶ್ರೇಯ ಸಾಧನೆಯ ಚಳುವಳಿಯೂ ಆಗಿದ್ದಿತು. ಅವರು ಆತ್ಮದ ಆಧಾರದ ಮೇಲೆ ಸಮಾನತೆಯನ್ನು ಸ್ಥಾಪಿಸಲು ಬಯಸಿದರು. ಎಲ್ಲ ಮನುಷ್ಯರಲ್ಲಿಯೂ ಆತ್ಮವಿದೆ. ಅದು ಒಂದೇ…





Total views : 63657