ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನಗಳಲ್ಲಿ ಬಸವ ದರ್ಶನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಲೋಕ ಸಂಚಾರ ಮಾಡುತ್ತ ಶಿವಯೋಗಿ ಸಿದ್ಧರಾಮರೊಡಗೂಡಿ ಕಲ್ಯಾಣಕ್ಕೆ ಪುರ ಪ್ರವೇಶ ಮಾಡಿ ಮಹಾಮನೆಯತ್ತ ಬಂದಾಗ, ನೂರಾರು ಶಿವ ಶರಣ-ಶರಣೆಯರು ಹಣೆಯಲ್ಲಿ ಭಸ್ಮ, ಕೊರಳಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಮಾಲೆ, ಶುಭ್ರ ವಸ್ತ್ರ ಧರಿಸಿ ಮಹಾಮನೆಯತ್ತ ಸಾಗುತ್ತಿದ್ದರು. ಈ ದೃಶ್ಯಗಳನ್ನು ನೋಡಿದ ಅಲ್ಲಮರು ಮೇಲಿನಂತೆ ಉದ್ಗರಿಸುತ್ತಾ ಕಲ್ಯಾಣದ ಚಿತ್ರಣವನ್ನು ನೀಡುತ್ತಾರೆ. ಮಹಾಮನೆಯ…