ಶರಣರ ದೃಷ್ಟಿಯಲ್ಲಿ ನೇಮ-ಶೀಲ | .ಬಸವರಾಜ ಕಡ್ಡಿ, ಜಮಖಂಡಿ.
ನೇಮವೆಂದರೆ ಕಟ್ಟಾಚರಣೆ. ಕೆಲವರು ದೇವರಿಗೆ ವಿಶೇಷ ಪದಾರ್ಥಗಳನ್ನು ಅರ್ಪಿಸುವ ನೇಮ ಹಿಡಿದರೆ ಮತ್ತೆ ಕೆಲವರು ದೇವರ ಹೆಸರಿನಲ್ಲಿ ಕೆಲವು ಪದಾರ್ಥಗಳ ಬಿಡುವ ನೇಮ ಹಿಡಿದಿರುತ್ತಾರೆ. ಶೀಲವೆಂದರೆ ಮಡಿವಂತಿಕೆ. ಶರಣರು ಅರ್ಥವಿಲ್ಲದ ನೇಮ-ಶೀಲಗಳನ್ನು ನಿರಾಕರಿಸಿ ನಿಜವಾದ ನೇಮ-ಶೀಲಗಳನ್ನು ವಚನಗಳ ಮೂಲಕ ತಿಳಿಸಿದ್ದಾರೆ. ಅನೇಕರು ಅರ್ಥವಿಲ್ಲದ ವ್ರತ, ನೇಮ, ಶೀಲಗಳಲ್ಲಿ ಸಿಲುಕಿ ಅವುಗಳ ಆಚರಣೆಯಲ್ಲಿ ವ್ಯರ್ಥ ಪ್ರಯಾಸ ಪಡುತ್ತಿದ್ದಾರೆ. ಅಂಥವರ ಕುರಿತು ಸತ್ಯಕ್ಕನವರ ವಚನ: ಅರ್ಚನೆ ಪೂಜನೆ ನೇಮವಲ್ಲ;ಮಂತ್ರ ತಂತ್ರ ನೇಮವಲ್ಲ;ಧೂಪ ದೀಪಾರತಿ ನೇಮವಲ್ಲ;ಪರಧನ ಪರಸ್ತ್ರೀ ಪರದೈವಗಳಿಗೆರಗದಿಪ್ಪುದೆ ನೇಮ.ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-438/ವಚನ ಸಂಖ್ಯೆ-1205)…