ಶರಣ ಮಡಿವಾಳ ಮಾಚಿದೇವರ ವಚನಗಳಲ್ಲಿ ಲಿಂಗಾಚಾರ/ಡಾ. ಸರ್ವಮಂಗಳ ಸಕ್ರಿ.ರಾಯಚೂರು.
ವಚನ ಸಂಸ್ಕತಿಯನ್ನು ಗ್ರಹಿಸುವ ಹಿನ್ನೆಲೆಯಲ್ಲಿ ಧರ್ಮದ ಒಳ ಸೂಕ್ಷ್ಮಗಳು ಮತ್ತು ಭಕ್ತಿ ಸಿದ್ದಾಂತಗಳು ನಮಗೆ ಮುಖಾಮುಖಿಯಾಗುತ್ತವೆ. ನಿಜವಾದ ಅರ್ಥದಲ್ಲಿ ಧರ್ಮವೆಂಬುದು ಆದರ್ಶಗಳ ಮೊತ್ತ. ಮಾನವ ಜನಾಂಗದ ಆದರ್ಶಗಳು ಧರ್ಮ ತತ್ವಗಳ ನೆಲೆಯಲ್ಲಿ ಮಾತನಾಡುತ್ತವೆ. ಉದಾರತೆ, ಸಮತಾ ಭಾವ, ಮಾನವೀಯತೆ ಸಕಲರನ್ನು ಒಂದೇ ಎಂದು ಭಾವಿಸುವ ಗುಣ ಶರಣ ಧರ್ಮಕ್ಕೆ ಇರುವ ವಿಶೇಷತೆ. ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಲಿಂಗಾಚಾರಕ್ಕೆ ಲಿಂಗಾಂಗ ಸಾಮರಸ್ಯವೆಂದು ಕರೆದರು. ಇಷ್ಟಲಿಂಗವೇ ಆಂತರಿಕ ಪರಮ ಸಾಧನೆ ಎಂದರು. ಧಾರ್ಮಿಕ ಸಾಧನೆಯ ಅರಂಭದಿಂದ ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಬಾಜ್ಯ ಅಂಗವಾಯಿತು. ಹೀಗಾಗಿ ಇಷ್ಟಲಿಂಗ…