ಶ್ರೀ. ಮಲ್ಲಿಕಾರ್ಜುನ ಪಂಡಿತಾರಾಧ್ಯ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಬಸವಣ್ಣ ಎಂಬ ಹೆಸರೇ ಮಂತ್ರಮುಗ್ಧವಾದದ್ದು. ಬಸವಣ್ಣನವರು 12 ನೇ ಶತಮಾನದ ಉತ್ಸಾಹದ ಚಿಲುಮೆ ಎಂತೊ 21 ನೇ ಶತಮಾನದಲ್ಲಿ ಅವರ ಹೆಸರೇ ಚೇತೋಹಾರಿಯಾದದ್ದು. ಯುಗದ ಉತ್ಸಾಹ, ಯುಗ ಪುರುಷ, ವಿಭೂತಿ ಪುರುಷ, ವಿಶ್ವಗುರು, ಜಗಜ್ಯೋತಿ ಎಂಬ ಮಾತುಗಳು ಬಸವಣ್ಣನವರಿಗೆ ಅಲಂಕಾರಿಕವಾಗಿ ತೊಡಿಸುವ ಪದಗಳಲ್ಲ. ಅವುಗಳು ಅತಿಶಯೋಕ್ತಿ ಪದಗಳೂ ಅಲ್ಲ. 12 ನೇ ಶತಮಾನದಲ್ಲಿ ಅವರ ಪ್ರಭಾವಕ್ಕೊಳಗಾಗಿ ಶಿವ-ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡದ್ದನ್ನು ನಾವು ನೋಡಿದರೆ ಒಂದು ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದು ತಿಳಿಯುತ್ತದೆ. ಸುಖವೊಂದು ಕೊಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.ದುಃಖವೊಂದು ಕೊಟ್ಯಾನುಕೋಟಿ ಬಂದಲ್ಲಿ…






Total views : 57460