ವೀರಗಂಟಿ ಶರಣ ಮಡಿವಾಳ ಮಾಚಿದೇವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು. ಅತ್ಯಂತ ಶ್ರೇಷ್ಠ ಕಾಯಕ…






Total views : 57460