ಚಂದಿಮರಸ ಮತ್ತು ಅವನ ಕುರಿತಾದ ಶಾಸನಗಳು | ಡಾ. ಸದಾನಂದ ಪಾಟೀಲ ಧಾರವಾಡ.
ಕರ್ನಾಟಕದ ಲಿಂಗವಂತ ಸಂಪ್ರದಾಯದ ನಾಲ್ವರು ಪ್ರಭಾವಶಾಲಿ ಅದ್ಭುತ ವ್ಯಕ್ತಿಗಳು ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ಬಸವಣ್ಣ ಮತ್ತು ಹರಿಹರ. ಇವರನ್ನು ಸಮಾನ ಮನಸ್ಕರೆಂದು ಗುರುತಿಸಿದರೆ ಇತಿಹಾಸ ಪುನರಾವರ್ತಿಸುತ್ತದೆ ಎಂಬ ಮಾತು ನಿಜವಾಗುತ್ತದೆ. 11 ನೇ ಶತಮಾನದ ಕೇಶಿರಾಜ, 6 ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ದಂಡನಾಯಕನೂ ಕವಿಯೂ ಆಗಿದ್ದರೆ ಈ ಅವಧಿಯಲ್ಲಿ ಬರುವ ಕೆಂಭಾವಿ ಭೋಗಣ್ಣ ಹಂಡೆ ಚಂದಿಮರಸನ ಊರಲ್ಲಿ ಸಾಮಾನ್ಯ ಭಕ್ತನೂ ವಚನಕಾರನೂ ಆಗಿದ್ದ. ಇನ್ನು 12 ನೇ ಶತಮಾನದದ ಬಸವಣ್ಣ ಬಿಜ್ಜಳ ಅರಸನಲ್ಲಿ ದಂಡನಾಯಕನೂ ಭಂಡಾರಿಯೂ ವಚನಕಾರನೂ ಆಗಿದ್ದ. 13 ನೇ ಶತಮಾನದ ಹರಿಹರ ನರಸಿಂಹ…