ಕಾಯಕವೇ ಪ್ರಾಣವಾದ ಶರಣ ಮೇದಾರ ಕೇತಯ್ಯನವರು | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.
ಪತ್ನಿ: ಸಾತವ್ವೆ.ಕಾಯಕ: ಗವರಿಗೆ / ಬಿದಿರು ಹೆಣೆಯುವ ಕಾಯಕಸ್ಥಳ: ಉಳವಿ ಬೆಟ್ಟ, ಬೇಲೂರು ತಾಲ್ಲೂಕುಜಯಂತಿ: ಬನದ ಹುಣ್ಣಿಮೆಯಂದು. ಲಭ್ಯವಿರುವ ವಚನಗಳ ಸಂಖ್ಯೆ: 18ಅಂಕಿತ: ಗವರೇಶ್ವರಲಿಂಗ. ಬಸವಯುಗದ ಧೃವತಾರೆ ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ ಬಸವಣ್ಣನವರ ಜೀವಪರ ಸಾಮಾಜಿಕ ಶೈಕ್ಷಣಿಕ ಹೋರಾಟಕ್ಕೆ ಮನಸೋತು ಬಂದ ಮೇರು ವ್ಯಕ್ತಿತ್ವವೇ ಶಿವಶರಣ ಮೇದಾರ ಕೇತಯ್ಯನವರು. ಇವರು ಬಸವಣ್ಣನವರಿಂದ ಪ್ರಭಾವಿತರಾಗಿ ಅತ್ಯಂತ ಉತ್ಸಾಹಿಗಳಾಗಿ ಶರಣರ ಚಳುವಳಿಯಲ್ಲಿ ಪಾಲ್ಗೊಂಡವರು ಕೇತಯ್ಯ ಶರಣರು. ಇವರು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದವರು. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮದಲ್ಲೇ ನಿಜಸುಖವನ್ನು ಕಂಡವರು. ಭಕ್ತರಾಗಿ, ಶರಣರಾಗಿ ಕಾಯಕದಲ್ಲೇ ಕೈಲಾಸವನ್ನು ಕಂಡವರು.…





Total views : 67055