ಶರಣೆ ಶಿರೋಮಣಿ ಅಕ್ಕ ನಾಗಮ್ಮನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಮನದೊಡೆಯ ಮಹಾದೇವ ಮನವ ನೋಡಿಹೆನೆಂದುಮನುಜರ ಕೈಯಿಂದ ಒಂದೊಂದ ನುಡಿಸುವನು.ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನುಒಂದು ಬೊಟ್ಟಿನಲ್ಲಿ ತೊಡೆವನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798) ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ, ಮನಸ್ಸಿಗೆ ಮಹಾದೇವನೇ ಒಡೆಯ ಅಂತ ಅಕ್ಕನಾಗಮನವರು ಮನಸ್ಸಿನ ಆಗಾಧ ಶಕ್ತಿಯ ಬಗ್ಗೆ ಈ ವಚನದಲ್ಲಿ ಹೇಳಿದ್ದಾರೆ. ಈ ವಚನ ಅವರ ಘನ ವ್ಯಕ್ತಿತ್ವವನ್ನ ಮತ್ತು ಉಚ್ಛ ವಿಚಾರವನ್ನು ತೋರಿಸುವ ಕನ್ನಡಿಯಂತೆ ಇದೆ. ಅಕ್ಕ ನಾಗಮ್ಮನವರದು 12 ನೇ ಶತಮಾನದಲ್ಲಿನ ಶಿವಶರಣೆಯರಲ್ಲಿ ಅಗ್ರಗಣ್ಯ ಹೆಸರು. ಬಸವಾದಿ ಶರಣರ…