ವಚನಗಳು ಮತ್ತು ಭಜನೆ/ಡಾ. ಸರ್ವಮಂಗಳ ಸಕ್ರಿ
ಭಕ್ತಿ ಸಾಹಿತ್ಯದಲ್ಲಿ ಭಜನೆಗೆ ತನ್ನದೇ ಆದ ಆಧ್ಯಾತ್ಮಿಕ ಸಂಸ್ಕೃತಿಯ ವರ್ತುಲ ವಿದೆ.ಭಜನೆ ಜನಪದರ ಒಡಲಿನಿಂದ ಹುಟ್ಟಿ ಭಕ್ತಿಯ ಮೂಲಕ ಗುರುತಿಸಿ ಕೊಳ್ಲುವ ಕ್ರಿಯೆಯಾಗಿದೆ.ದಣಿದ ಮನಗಳಿಗೆ ಶಾಂತತೆಯನ್ನು ಏಕಾಗ್ರತೆ ಯನ್ನು ಕೊಡುವುದೆ ಭಜನೆಯಾಗಿದೆ.ಜನಪದರಲ್ಲಿ ಭಜನೆಯಾದರೆ ಶಿಷ್ಟರಲ್ಲಿ ಆತ್ಮ ನಿವೇದನೆ ಎಂಬ ಅರ್ಥ ಬರುತ್ತದೆ. ಭಜ್ ಎಂದರೆ ಸೇವೆ.ನಿ ಎಂದರೆ ಹೊಂದು ಸೇವಿಸು ಭಗವಂತನನ್ನು ಹೊಂದುವ ಭಕ್ತಿಯಾಗುತ್ತದೆ.ಭಜನೆ(ಕನ್ನಡ) ಭಜನ್(ಮರಾಠಿ) ಭಜನ್(ಹಿಂದಿ) ಈ ಪದದ ಅರ್ಥ ದೇವರ ನಾಮವನ್ನು ಸ್ತುತಿಸುವುದು .ಪೂಜಿಸು.ಆರಾಧಿಸು ಪ್ರಾರ್ಥನೆ ಎಂಬುದಾಗಿದೆ.ನಾದದ ಮೂಲಕ ದೇವರನ್ನು ಸಂತೃಪ್ತಿ ಗೊಳಿಸಿ ಬರುವ ಸಂಕಷ್ಟ ಗಳನ್ನು ಬಯಲು ಮಾಡಿಕೊಡುವುದಾಗಿದೆ. ನಮ್ಮ ಮೌಖಿಕ ಪರಂಪರೆಯಲ್ಲಿ…