“ವೈರಾಗ್ಯವೆಂಬುದು ಹುಸಿ ಸಿದ್ಧಾಂತ”/ ಡಾ. ಬಸವರಾಜ ಸಾದರ, ಬೆಂಗಳೂರು.
"ವೈರಾಗ್ಯ" ವೆಂಬ, ಪೂರ್ತಿ ಸಾಧಿಸಲಾಗದ ಹುಸಿ ಸಿದ್ಧಾಂತವೊಂದು ಜಗತ್ತಿನಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಿದೆ. ತಮ್ಮ ನಾಮಧ್ಯೇಯಗಳೊಂದಿಗೆ ‘ವೀರ ವಿರಾಗಿ’ ಮತ್ತು ‘ವೈರಾಗ್ಯಮೂರ್ತಿ’ ಎಂಬ ವಿಶೇಷಣ ಹಚ್ಚಿಕೊಂಡವರೂ ಬೇಕಾದಷ್ಟು ಜನರಿದ್ದಾರೆ. ಆದರೆ, ಎಲ್ಲವನ್ನೂ ಸಂಪೂರ್ಣ ತ್ಯಾಗ ಮಾಡಿ, ತನಗೆ ಯಾವುದೂ, ಏನೂ ಬೇಡ ಎಂದು ಜೀವವಿರೋಧಿಗಳಾಗಿ ಬದುಕುವವರು ಬಹುಶಃ ಯಾರೂ ಇಲ್ಲ. ಹೀಗೆ ಹೇಳಿದರೆ ಕೆಲವರಿಗೆ ಅಚ್ಚರಿ, ನೋವು ಎರಡೂ ಆಗಬಹುದು, ಸಿಟ್ಟೂ ಬರಬಹುದು. ಅಷ್ಟೇ ಅಲ್ಲ, ಅಂಥ ಕೆಲವು ವಿರಾಗಿನಾಮಿಗಳ ಬಾಲಂಗೋಚಿಗಳು ಅವರ ಪರ ನಿಂತು ಉಗ್ರಗಾಮಿಗಳಂತೆ ಹೋರಾಡಲೂಬಹುದು. ಕೊನೆಯಪಕ್ಷ ದೇಶ, ಧರ್ಮ, ಜಾತಿ, ಮತ, ತನ್ನ…




Total views : 51415