ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.
ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ…