![]()
ಈತನ ಹೆಸರು ಚಂದ್ರಶೇಖರ ಎಚ್. ಎನ್. (AIವಿಜ್ಞಾನಿಗಳು) ಪಂಚಸೂತ್ರ ಅಕಾಡೆಮಿ, ಲಂಡನ್. AIಅಂದರೆ Artificial Intelligence. ಇದನ್ನು ನಾವು ಆಡು ಭಾಷೆಯಲ್ಲಿ Garbage In Garbage Out (GIGO) ಅಂತೀವಿ. ಕಸ ಹಾಕಿದರೆ ಕಸ ಬರುತ್ತದೆ. ಅಂದರೆ ಇಲ್ಲಿ ಯಾವುದೇ ಸೃಜನಶೀಲತೆ ಇರುವುದಿಲ್ಲ. ನಾವು ಏನು Feedಮಾಡತೀವೋ ಅದು ಹೊರಗ ಬರುತ್ತದೆ ಅಷ್ಟೇ. ಉದಾಹರಣೆಗೆ ಒಂದು ವ್ಯಕ್ತಿಯ ಫೋಟೋ ಮಾಡಬೇಕಾದರೆ 4ನೇ ತರಗತಿಯ ಹುಡುಗ ಕೂಡ Voice Commandನೀಡಿದರೆ ಒಂದು ಫೋಟೋ ಅವನ Voice Commandಗೆ ತಕ್ಕ ಹಾಗೆ ಫೋಟೋ Readyಆಗುತ್ತದೆ. ಇದರಲ್ಲಿ ಯಾವ Rocket Scienceಮಣ್ಣಾಂಗಟ್ಟಿಯೂ ಇಲ್ಲ. ಇದು ಒಂದು Just Appಮಾತ್ರ. AIಉಪಯೋಗಿಸುವವರನ್ನು ಕೇವಲ ಕೇವಲ Designer ಅಥವಾ Developperಅನ್ನಬಹುದು. Any Dick, Tom and Harryಕೂಡ ಇದನ್ನು ಮಾಡಬಹುದು. ಇದಕ್ಕೇನೂ Specialಆಗಿ Engineering Backgroundಬೇಕಾಗಿಲ್ಲ. Computer Operateಮಾಡಾಕ ಬಂದರ ಸಾಕು. ಹಾಗಾಗಿ ಈತ ನಾನುAI Scientistಅಂತಾ ಹೇಳತಾನೆ.ಇಂಥ Very Simple & Miniscule Technologyಯನ್ನು “ನಾನು AI Scientist” ಅಂತಾ ಕೊಚ್ಚಿಕೊಳ್ಳುವ ಚಂದ್ರಶೇಖರ ಎಚ್. ಎನ್. ಎನ್ನುವ ಮಹಾನುಭಾವ ಏನು ಬಾರಾ ಭಾನಗಡಿ ಮಾತ ಹೇಳತಾನಂತ ಕೇಳಿ ಅವನ ಮಾತಿನಲ್ಲಿಯೇ ಅಂದರೆ “ಜೋ ಜಿಸ್ ಭಾಷಾ ಮೆ ಸಮಝೆ ಉಸೀ ಭಾಷಾ ಮೆ ಉತ್ತರ ದೇಂಗೆ” ಎನ್ನುವ ಸರಳ ಪರಿಕಲ್ಪನೆಯೊಂದಿಗೆ ಈ ಲೇಖನವನ್ನು ಪ್ರಾರಂಭಿಸೋಣ.
ಕೇವಲ ರೇಣುಕರ ಲಿಂಗೋಧ್ಭವ ಕುರಿತು ಮಾತನಾಡಿದ್ದರೆ ಈ ಲೇಖನವನ್ನು ಬರೆಯುವ ಅವಶ್ಯಕತೆ ಇರಲಿಲ್ಲ. ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು ಪಾತಾಳ ಎಂಬ ಏಳು ಲೋಕಗಳಲ್ಲಿಯೂ ರೇಣುಕರ ವೈಭವವನ್ನು ಮೆರೆಯಿರಿ. ನಿಮ್ಮ ಕಲ್ಲೋದ್ಭವ ರೇಣುಕರನ್ನು ಹೇಗೆ ಬೇಕಾದರೂ ಬೆಳೆಸಿಕೊಳ್ಳಿ. ನಮಗೇನೂ ಅಭ್ಯಂತರ ಇಲ್ಲಾ. ಆದರೆ ವಿಶ್ವಗುರು ಬಸವಣ್ಣ, ವ್ಯೋಮಕಾಯ ಅಲ್ಲಮ ಪ್ರಭು, ವೈರಾಗ್ಯನಿಧಿ ಅಕ್ಕಮಹಾದೇವಿ, ಶಿವಯೋಗಿ ಸಿದ್ಧರಾಮೇಶ್ವರ ಮತ್ತಿತರ ಬಸವಾದಿ ಶರಣರನ್ನು ಕುರಿತು ಇಲ್ಲ ಸಲ್ಲದ ವೈದಿಕ ತತ್ವಗಳನ್ನು ಸಮರ್ಥನೆ ಮಾಡಿಕೊಂಡಾಗ ಇಂಥ ಲೇಖನಗಳ ಮೂಲಕ ಈ ಶನಿ ಸಂತಾನಗಳಿಗೆ ಬುದ್ಧಿ ಹೇಳುವುದು ಮತ್ತು ಎಚ್ಚರಿಸುವುದು ಅನಿವಾರ್ಯ ಮತ್ತು ಆವಶ್ಯಕ.
ಮೊದಲಿಗೆ ಈ ಶನಿ ಸಂತಾನ ಏನು ಮಾತಾಡಿದ್ದಾನೆ ಎನ್ನುವುದನ್ನು ಈ YouTube video ವನ್ನು ಕೇಳಿಸಿಕೊಂಡು ಅದನ್ನೇ ನೇರಾ ನೇರ ಅಕ್ಷರೀಕರಿಸಿ ಉತ್ತರವನ್ನು ನೀಡೋಣ.
ಹೊಸ ದಿಗಂತ YouTube Channel ನ ಸಂದರ್ಶಕ: ಲಿಂಗಾಯತರು ಮೂರ್ತಿಪೂಜೆ ಮಾಡೋದು ತಪ್ಪೇ ಅಂತ ಒಂದು ವಿಡಿಯೋ ಹಾಕಿದ್ವಿ. ಅದರಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದಾರೆ. ಇವರು ಅರಿವಿನ ಪ್ರಭೆ ಅಂತ ಒಂದು ಅಕೌಂಟ್ನಿಂದ. ಕಲ್ಲಿನಿಂದ ರೇಣುಕರು ಹುಟ್ಟಿದ ಸತ್ಯವನ್ನ ತಿಳಿಸಿಕೊಡಿ ಅಂತ. ಸುಮಾರು ಜನ ಅದಕ್ಕೆ Thumbs Up ಮಾಡಿದ್ದಾರೆ. ಅಂದರೆ ಅದು ಜನರ ಮನಸಲ್ಲಿ, ನಮ್ಮ ವೀಕ್ಷಕರ ಮನಸಲ್ಲಿ ಅದೊಂದು ಪ್ರಶ್ನೆ ಇದೆ. ಹೆಂಗೆ ಲಿಂಗದಿಂದ ರೇಣುಕಾಚಾರ್ಯರು ಉದ್ಭವ ಆದರು ಅಂತ ಹೇಳಿ, ನಾವು ಕೇಳ್ತೀವಿ. So, ಅದು ಹೆಂಗ ಸಾಧ್ಯ ಇದು ನಿಜವಾಗಲೂ ಸಾಧ್ಯನಾ. ನೀವು ಒಬ್ಬ AI Scientist ಅಂತ ಹೇಳ್ತೀರಾ. ಈಗ ಒಬ್ಬ ವಿಜ್ಞಾನಿಯಾಗಿ ನೀವು ಇದನ್ನ ಹೆಂಗೆ ನೋಡ್ತೀರಾ. ನಿಮಗೆ ಏನ ಅನ್ಸುತ್ತೆ.
ಚಂದ್ರಶೇಖರ: ಆ ಪ್ರಶ್ನೆಯನ್ನು ಬಹಳ ಉಚಿತವಾಗಿ ಕೇಳಿದ್ದಾರೆ. ಕಲ್ಲಿನಿಂದ ರೇಣುಕರು ಹುಟ್ಟಿದ ಕಥೆಯನ್ನು ಹೇಳಿದಾರೆ. ಈ ಮನಸ್ಸಿನಲ್ಲಿ ಯಾಕೆ ಗೊಂದಲ ಇದೆ ಅಂತ ಹೇಳಿದರೆ, ಈ ಹಿಂದೆ ಒಂದು ರೀತಿಯ ಪ್ರಶ್ನೆಯನ್ನು ಈಗ ಬಹಳಷ್ಟು ಜನ ಕೇಳಿ ಕೇಳಿ ಅವರ ಮನಸ್ಸಿನಲ್ಲಿ ಆ ರೀತಿ ಬಂದಿದೆ. ಒಂದು ಕುಚೋದ್ಯದ ಪ್ರಶ್ನೆಯನ್ನ ಕೇಳ್ತಾರೆ. ಕಲ್ಲಿನಿಂದ ಮನುಷ್ಯರು ಹುಟ್ಟಲಿಕ್ಕೆ ಸಾಧ್ಯನಾ ಅಂತ. ಮೂಲವಾಗಿ ಅದು ಕೇಳುವಂಥಾದ್ದು. ಒಬ್ಬ ವಿಜ್ಞಾನಿಯಾಗಿ ಕಲ್ಲಿನಿಂದ ಮನುಷ್ಯರಾಗಿ ಹುಟ್ಟೋದನ್ನು ಹೇಗೆ ಒಪ್ಪತೀರಾ ಅಂತಾ. ಇದು ವೈಜ್ಞಾನಿಕವಾಗಿ ಅರ್ಥಾ ಮಾಡಕೋಬೇಕು.
ಹೊಸ ದಿಗಂತ YouTube Channel ನ ಸಂದರ್ಶಕ: ಹೌದು ಹೌದು Logically ಒಂದು ಸಹಜವಾಗಿ ಬರುತ್ತೆ.
ಚಂದ್ರಶೇಖರ ಎಚ್. ಎನ್: ಇದೇನು ಇವರು ಅವೈಜ್ಞಾನಿಕರಾ ಇದೊಂದು ಅಂತ ಅನ್ನಿಸಿಬಿಡುತ್ತೆ. ಆದರೆ ಸರಿಯಾಗಿ ನೋಡಿದರೆ, ವಿಜ್ಞಾನಕ್ಕೆ Definition ನಾವು ಏನಂದ್ರೆ ವಿಧಿವತ್ ಜ್ಞಾನ ಅಂತ ವಿಜ್ಞಾನಕ್ಕೆ ವಿಧಿವತ್ ಜ್ಞಾನ ಅಥವಾ ವಿಶೇಷವಾದ ಜ್ಞಾನ ಅಂತ ಹೇಳ್ತಾರೆ. ಸಾಮಾನ್ಯವಾಗಿ ಹಿಂಗ ಕಾಣಿಸಿದರೆ ಒಳಗಡೆ ಬೇರೆ ರೀತಿ ಕಾಣಿಸುತ್ತೆ. ಅದಕ್ಕೆ ವಿಧಿವತ್ ಜ್ಞಾನ ಅಂತ ಹೇಳೋದು. ಕೇಳುವಂಥವರಲ್ಲಿ ಒಂದು ಕುಚೋದ್ಯ ಇದೆ. ಅದಕ್ಕೆ ಆ ಪ್ರಶ್ನೆ ಯಾಕೆ ಕೇಳತಾ ಇದಾರೆ ಅಂತ ಅರ್ಥ ಮಾಡಿಕೊಳ್ಳೋಣ. ಆಮೇಲೆ ಉತ್ತರಾ ಹೇಳತೀನಿ. ಇಲ್ಲಿ ಕುಚೋದ್ಯ ಏನಂದರೆ ಈ ಪ್ರಶ್ನೆಯ ಮೂಲ ಪ್ರಶ್ನೆ ಏನಂದರೆ ಇವರು ಸ್ವಲ್ಪ ಅರ್ಥ ಮಾಡಿಕೊಳ್ಳೋ ರೀತಿಯಲ್ಲಿ ಕೇಳಿದಾರೆ.
ಹೊಸ ದಿಗಂತ YouTube Channel ನ ಸಂದರ್ಶಕ: ಇದು ನಿಜವಾಗಲೂ ಹೆಂಗ್ ಸಾಧ್ಯ ಅನ್ನೋದು Curiosity ಇದೆ.
ಚಂದ್ರಶೇಖರ ಎಚ್. ಎನ್: ಇದರ ಹಿಂದೆ ಕುಚೋದ್ಯದ ಪ್ರಶ್ನೆ ಇದೆ. ಆ ಕುಚೋದ್ಯದ ಪ್ರಶ್ನೆಯಿಂದ ಈ ಥರಾ ಎಲ್ಲರ ಮನಸ್ಸಲ್ಲೂ ಒಂದು ಭಾವನೆ ಉತ್ಪತ್ತಿಯಾಗುತ್ತದೆ.
ಹೊಸ ದಿಗಂತ YouTube Channel ನ ಸಂದರ್ಶಕ: ಹೌದು ಹೌದು ಅವಹೇಳನ ಮಾಡೋದು ಏನಿದು ಸಾಧ್ಯನಾ.
ಚಂದ್ರಶೇಖರ ಎಚ್. ಎನ್: ಪ್ರಶ್ನೇನ ಗಮನಿಸಿದರೆ ನಾವು ಹೇಳೋದು ಲಿಂಗದಿಂದ ರೇಣುಕರು ಉದ್ಭವ ಆದರು ಅಂತಾ. ಅವರು ಹೇಳೋದು ಕಲ್ಲಿನಿಂದ ಮನುಷ್ಯರು ಹುಟ್ಟತಾರಾ ಅಂತಾ. ಅದು ಕಲ್ಲಲ್ಲಾ. ಮೊದಲನೇ Layer ನಲ್ಲಿ ನೋಡಿದರೆ ಅದು ಕಲ್ಲಲ್ಲಾ. ಕಲ್ಲಿಗೂ ಲಿಂಗಕ್ಕೂ ವ್ಯತ್ಯಾಸವಿದೆ. ಲಿಂಗ ಕಲ್ಲು ಒಂದೇ ಅನ್ನುವಂಥವರಿಗೆ ಲಿಂಗಾಯತರು ಅನ್ನಿಸಿಕೊಳ್ಳುವಂಥ ಯಾವ ಹಕ್ಕುಗಳೂ ಇಲ್ಲಾ. ಲಿಂಗ ಗೊತ್ತಿರಬೇಕು. ಇದು ಕಲ್ಲಲ್ಲಾ ನಾವು ಕಟ್ಟಿಕೊಂಡು ಓಡಾಡತಾ ಇರೋದು. ಕಲ್ಲಲ್ಲಾ ಪೂಜೆ ಮಾಡೋದು ಲಿಂಗವನ್ನ. ಅದು ಉದ್ಭವವಾಗೋದು ರೇಣುಕರಲ್ಲಾ. ಅದು ಒಂದು ಶಕ್ತಿ. ಹಂಗೆ ಅದು ಒಂದು ಕುಚೋದ್ಯನೇ ಇದೆ.
ಡಾ. ವಿಜಯಕುಮಾರ ಕಮ್ಮಾರ: Yes, ನಿಮ್ಮ ಎಡಬಿಡಂಗಿತನಕ್ಕೆ ಸರಿಯಾದ ಪ್ರಶ್ನೆ. ಕಲ್ಲಲ್ಲಿ ಹುಟ್ಟುವ ಸಿದ್ಧಾಂತ ತೀರ ತೀರ ಬಾಲಿಶವಾದ ಮತ್ತು ಅವೈಜ್ಞಾನಿಕವಾದದ್ದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರು ಒಪ್ಪದೇ ಇರುವಂಥ ಸಿದ್ಧಾಂತ. ಕೇವಲ ಮೌಢ್ಯತೆಯಿಂದ ಜನರನ್ನು ಹಾದಿ ತಪ್ಪಿಸಿ ಹಣ ಮಾಡುವ ದಂಧೆ ಮತ್ತು ವಾಮಮಾರ್ಗ.
ತಾನು ವಿಜ್ಞಾನಿ ಎಂದು ಸ್ವಯಂ ಹೇಳಿಕೊಳ್ಳುವ ಈ ಚಂದ್ರಶೇಖರ ಹೇಳತಾನೆ ವಿಧಿವತ್ ಜ್ಞಾನಃ ಅಂತಾ. ವಿಧಿವತ್ ಜ್ಞಾನವನ್ನು ಕೇವಲ ಧಾರ್ಮಿಕ ವಿಧಿ-ವಿಧಾನಗಳಿಗೆ ಬಳಸುವ ಸಂಸ್ಕೃತ ಶಬ್ದ. ಮತ್ತೆ ಇಲ್ಲಿ ಮೂಢನಂಬಿಕೆಗಳನ್ನು ಬಿತ್ತುವ ಜ್ಞಾನ ಮಾತ್ರ. ಇದನ್ನೇ ವಿಜ್ಞಾನ ಎನ್ನುವ ಈ ಹುಂಬನ ಮಾತುಗಳು ಹಾಸ್ಯಾಸ್ಪದವಾಗಿದೆ. ಒಬ್ಬ ವಿಜ್ಞಾನಿ ಅಂತ ಹೇಳ್ಕೊಳ್ಳೋ ಈತನಿನಗೆ Mostly ವಿಜ್ಞಾನ ಅಂದರೇನೆ ಗೊತ್ತಿಲ್ಲ ಅಂದ ಮೇಲೆ ಇಂವಾ ಮಾತಾಡೋದೆಲ್ಲವೂ ಕೂಡ ಅಪ್ರಸ್ತುತ.
ವಿಧಿವತ್ ಎಂದರೆ ಸಂಸ್ಕೃತ ಪದವಾಗಿದ್ದು, ಶಾಸ್ತ್ರದ ಪ್ರಕಾರ, ನಿಯಮಾನುಸಾರ ಅಥವಾ ಸರಿಯಾದ ರೀತಿಯಲ್ಲಿ ಎಂದು ಅರ್ಥೈಸಬಹುದು. ಇದು ಧಾರ್ಮಿಕ ಪೂಜೆ, ವಿಧಿಗಳು, ಅಥವಾ ಸಾಂಪ್ರದಾಯಿಕ ಕಾರ್ಯಗಳನ್ನು ಸರಿಯಾದ ಕ್ರಮ ಮತ್ತು ವಿಧಿ ವಿಧಾನಗಳೊಂದಿಗೆ ನಿರ್ವಹಿಸುವುದನ್ನು ಸೂಚಿಸುತ್ತದೆ. ಉದಾಹರಣೆಗೆ, ವಿಧಿವತ್ ಪೂಜೆ ಎಂದರೆ ಶಾಸ್ತ್ರ ಹೇಳುವಂತೆ ಪೂಜೆ ಮಾಡುವುದು ಎಂದರ್ಥ.
- ಅರ್ಥ: ನಿಯಮದ ಪ್ರಕಾರ, ಶಾಸ್ತ್ರೋಕ್ತವಾಗಿ, ಕ್ರಮಬದ್ಧವಾಗಿ, ಸರಿಯಾಗಿ.
- ಉಪಯೋಗ: ಧಾರ್ಮಿಕ ಆಚರಣೆಗಳಲ್ಲಿ, ಹೋಮ, ಪೂಜೆ, ಜಾತಕರ್ಮ ಮುಂತಾದವುಗಳನ್ನು ಸರಿಯಾದ ಪದ್ಧತಿಯಲ್ಲಿ ಮಾಡಲು ಇದನ್ನು ಬಳಸಲಾಗುತ್ತದೆ.
- ಉದಾಹರಣೆ: “ಪಿತೃದೇವಾರ್ಚನಂ ತಥಾ ಕಾರಯಾಮಾಸ ವಿಧಿವತ್” (ಜಾತಕರ್ಮದ ನಂತರ ಪಿತೃದೇವತೆಗಳ ಪೂಜೆಯನ್ನು ವಿಧಿವತ್ತಾಗಿ ಮಾಡಿಸಿದರು).
ಇಂಥ ವೈದಿಕ ಪರಂಪರೆಯ ಶಬ್ದವನ್ನು “ವಿಧಿವತ್ ಜ್ಞಾನಃ ವಿಜ್ಞಾನ” ಅಂದರೆ ಈತ ಕೇವಲ Provoke ಮಾಡುವವನು ಎನ್ನುವುದು ಮೇಲನೋಟಕ್ಕೆ ಕಂಡು ಬರುತ್ತದೆ. ಈ definition ಈತನಿಗೆ ಅರ್ಥವಾದರೆ ಸಾಕು.
ಅಯ್ಯೋ ಚಂದ್ರಶೇಖರ ಮಹಾನುಭಾವನೇ, ನಿನಗೆ ಲಿಂಗಾಯತ ಯಾರು ಅನ್ನೋದೇ ಮೊದಲು ಗೊತ್ತಿಲ್ಲ. ಇನ್ನು ಲಿಂಗದ ಪರಿಕಲ್ಪನೆ ನಿನಗೆ ಅರ್ಥವಾಗೋದಿಲ್ಲ. ಯಾವುದೋ ಛಾನಲ್ಲನಲ್ಲಿ ಕುಳಿತು ಲಿಂಗಾಯತ ಧರ್ಮದ ಬಗ್ಗೆ ಸಾಸಿವೆ ಕಾಳಿನಷ್ಟೂ ಜ್ಞಾನವಿಲ್ಲದ ವೈದಿಕ ಮನಃಸ್ಥಿಯ ಸಂದರ್ಶಕನ ಎದುರು ಇಲ್ಲದೇ ಇರುವ ಸಿದ್ಧಾಂತಗಳನ್ನು Float ಮಾಡಿದರೆ ನಿನ್ನ ಅಜ್ಞಾನವನ್ನು ನೀನೆ ಹೊರಗೆ ಹಾಕಾತಾ ಇದೀಯ. ಇದು ಕೇವಲ ಕಿತಾಪತಿ. ಲಿಂಗ ಎನ್ನುವದನ್ನು ಈ ಚಂದ್ರಶೇಖರನಿಗೆ ತಿಳಿಸುವ ಪ್ರಯತ್ನ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)
ಲಿಂಗದ ಮಹತ್ವವನ್ನ ಸಾರುವದಕ್ಕೆ ಇದಕ್ಕಿಂತ ಒಳ್ಳೆಯ ವಚನ ಇರಲಿಕ್ಕಿಲ್ಲ. ಮೊದಲು ಶೈವರು ಸ್ಥಾವರ ಲಿಂಗವನ್ನು ಪೂಜಿಸುತ್ತಿದ್ದರು. ನಂತರ ಶೈವರಲ್ಲಿನ ಪಾಶುಪತರು ಚರಲಿಂಗವನ್ನು ಪೂಜಿಸುತಿದ್ದರು. ಆದರೆ ಚರಲಿಂಗವನ್ನು ಗದ್ದುಗೆಯ ಮೇಲಿಟ್ಟು ಪೂಜೆ ಮಾಡಿ ಕೊರಳಲ್ಲಿ ಧರಿಸದೆ ಪೂಜಾ ಗ್ರಹದಲ್ಲಿ ಇಡುತ್ತಿದ್ದರು. ಶೈವರು ಸ್ಥಾವರಲಿಂಗ ಮತ್ತು ಚರಲಿಂಗವನ್ನು ಪೂಜಿಸಿದರೆ, 15 ನೇ ಶತಮಾನದ ನಂತರ ಬಂದ ವೀರಶೈವರು ಸ್ಥಾವರಲಿಂಗ ಮತ್ತು ಇಷ್ಟಲಿಂಗ ಎರಡನ್ನೂ ಪೂಜೆ ಮಾಡಲು ಪ್ರಾರಂಭಿಸಿದರು.
ಮೊದಲನೆಯದಾಗಿ ವೈದಿಕರ ಶೋಷಣೆಯ ವಿರುದ್ಧ ಬಹುದೇವತಾ ಪೂಜೆಯ ಪರ್ಯಾಯವಾಗಿ ಒಂದು ಮಾರ್ಗಬೇಕಿತ್ತು. ಇಷ್ಟಲಿಂಗ ಪೂಜೆ ಮಾಡೋದು ಅಂದರೆ ನಮ್ಮೊಳಗಿನ ಅರಿವನ್ನು ಪೂಜೆ ಮಾಡೋದು. ಈ ಅರಿವು ಅನ್ನುವುದು ನಮ್ಮೊಳಗೆ ಇದೆ. ಮೊದಲು ದೇವರುಗಳನ್ನ ಪಂಚಭೂತಗಳಲ್ಲಿ ನೋಡುತ್ತಿದ್ದರು. ಭಯಂಕರ ಮಳೆ ಬಿರುಗಾಳಿ ಕಾಳ್ಗಿಚ್ಚು ಎಲ್ಲವನ್ನೂ ನೋಡಿ ನೀರು, ವಾಯು, ಬೆಂಕಿ ಅಂದರೆ ಶಕ್ತಿಶಾಲಿ ಅಂತ ಅಂದುಕೊಂಡು ಪೂಜೆ ಮಾಡುವುದಕ್ಕೆ ಶುರು ಮಾಡಿದರು. ಆಮೇಲೆ ಇವೆಲ್ಲವನ್ನೂ ನಿಯಂತ್ರಿಸುವ ಶಕ್ತಿ ಬೇರೆ ಏನೋ ಇದೆ ಅಂದುಕೊಂಡು ದೇವರುಗಳನ್ನು ಸೃಷ್ಟಿ ಮಾಡಿದರು. ಕಲ್ಲಲ್ಲಿ ಉದ್ಭವಿಸಿದ ರೇಣುಕರ ಥರಾ. ಅವಕ್ಕೆ ಆಕಾರ ಕೊಟ್ಟರು. ಇದೆ ಮುಂದುವರೆದು ಪೂಜೆ ಮಾಡಲು ಮಧ್ಯವರ್ತಿಗಳು ಅಂದರೆ ದೇವರ ವ್ಯಾಪಾರಿಗಳಾದ ಪೂಜಾರಿಗಳು ಹುಟ್ಟಿಕೊಂಡರು. ಶೋಷಣೆಗೆ ದಾರಿ ಮಾಡಿಕೊಟ್ಟರು. ಮುಂದೆ ದೇವರುಗಳಿಗಿಂತ ಪೂಜಾರಿಗಳದ್ದೇ ಆಟ ಶುರು ಆಯ್ತು. ಆಗ ಬಂದಿದ್ದೆ ಇಷ್ಟಲಿಂಗದ ಪರಿಕಲ್ಪನೆ. ದೇವರು ಯಾವ ಗುಡಿಯೊಳಗೂ ಇಲ್ಲ. ಕಲ್ಲು, ಮಣ್ಣು, ಮರದ ರೂಪದಲ್ಲಿಯೂ ಇಲ್ಲ. ಅದು ನಮ್ಮೊಳಗೆ ಇದೆ. ನಿರಾಕಾರ ರೂಪದಲ್ಲಿದೆ. ಕಲ್ಲನ್ನು ಪೂಜಿಸುವ ಲಿಂಗಾಯತರು ಲಿಂಗಾಯತರೇ ಅಲ್ಲ ಎನ್ನುವುದು ಈ ವಿಜ್ಞಾನಿ ಚಂದ್ರಶೇಖರನ ಜ್ಞಾನಶೂನ್ಯತೆಗೆ ಹಿಡಿದ ಕನ್ನಡಿ. ಅದು ನಮ್ಮ ಒಳಿತು ಕೆಡಕುಗಳನ್ನ ನಿರ್ಧರಿಸಲು ಅರಿವಿನ ರೂಪದಲ್ಲಿ ಇದೆ. ಶರಣ ವೀರ ಗೊಲ್ಲಾಳೇಶ್ವರರ ಈ ವಚನ ನಿನಗೆ ಗೊತ್ತಿರಲಿ.
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ;
ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಪೆರತ: ಬೇರೊಂದು, ಮತ್ತೊಂದು.
ಈ ವಚನವು ಬಹಿರಂಗದ ಸಾಕಾರ ಮೂರ್ತಿಪೂಜೆಗಿಂತ ನಿರಾಕಾರ ಸ್ವರೂಪವಾದ ಅಂತರಂಗದ ಅರಿವೇ ನಿಜವಾದ ದೇವರು ಎನ್ನುವ ತತ್ವ ಸಿದ್ಧಾಂತವನ್ನು ತಿಳಿಸಿಕೊಡುತ್ತದೆ. ಭೌತಿಕ ವಸ್ತುಗಳಾದ ಕಲ್ಲು, ಮರ, ಮಣ್ಣುಗಳಲ್ಲಿ ದೈವತ್ವವನ್ನು ಹುಡುಕುವ ಬದಲು ಕಾಯಕದ ಮೂಲಕ ಸತ್ಯವನ್ನು ಅರಿಯಬೇಕೆಂದು ನಿರೂಪಣೆ ಮಾಡುತ್ತದೆ.
ಲಿಂಗಾಯತರು ಪೂಜಿಸುವ ಇಷ್ಟಲಿಂಗ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದು ಬ್ರಹ್ಮಾಂಡದ ರೂಪ ನಿರಾಕಾರ ಚೈತನ್ಯದ ರೂಪ. ಇಲ್ಲಿ ದ್ವಂದ್ವಗಳು ಇಲ್ಲ. ದೇವರ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ದೇವರಿಲ್ಲ. ಪೂಜೆಗೊಳ್ಳುವುದು ಲಿಂಗವಾದರೆ ಪೂಜೆ ಮಾಡುವವನು ಭಕ್ತ ಎಂಬ ದ್ವೈತ ಭಾವ ಅಳೆಯುತ್ತಾ ಪೂಜಿಸುವವನು ನಾನೇ ಪೂಜೆಗೊಳ್ಳುವವನೂ ಕೂಡ ನಾನೇ. ನನ್ನ ಒಳಗಿನ ಅರಿವೆ ಶಿವ ಎಂಬ ಭಾವ ಬಂದಾಗ, ನಮ್ಮ ಕಣ್ಣ ಮುಂದೆ ಇರುವ ಶಿವನ ರೂಪ ಕರಗಿ, ಅರಿವಿನ ಬೆಳಕು ಮೂಡುತ್ತದೆ. ಇಷ್ಟಲಿಂಗದ ಕಲ್ಪನೆಯನ್ನು ನೀಡಿದ ಬಸವಣ್ಣನವರನ್ನು ಕುರಿತು ಅಲ್ಲಮಪ್ರಭುಗಳು ಈ ರೀತಿ ಹೇಳುತ್ತಾರೆ.
ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
ಅರಿದೆಹೆನೆಂದಡೆ ಕುರುಹಿಂಗೆ ಬಾರದು,
ಕಂಡೆಹೆನೆಂದಡೆ ಮೂರ್ತಿಯಲ್ಲ.
ತನುವಿನೊಳಗಿಲ್ಲದ ಮನದೊಳಗಿಲ್ಲದ ಘನವು,
ನಿಮ್ಮ ಮನಕ್ಕೆ ವೇದ್ಯವಾದ ಪರಿ, ಎಂತಯ್ಯಾ?
ಗುಹೇಶ್ವರನೆಂಬ ಲಿಂಗವು
ಜಗದ ಕಣ್ಣಿಂಗೆ ಕತ್ತಲೆಯ ಕವಿಸಿ,
ತನ್ನ ತಪ್ಪಿಸಿಕೊಂಡಿಪ್ಪ [ಆ] ಭೇದ
ನಿನ್ನೊಳಗಡಗಿದ ಪರಿ ಎಂತು
ಹೇಳಾ ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-488/ವಚನ ಸಂಖ್ಯೆ-1309)
ಈ ಅಗಮ್ಯನಾದ, ಅಗೋಚರನಾದ ದೇವರು ನಮ್ಮಂತಹ ಹುಲುಮಾನವರ ಮನದೊಳಗೆ ಹೊಳೆಯಲಿಲ್ಲ. ಯಾರ ದೃಷ್ಟಿಗೂ ಸಿಗದೇ ಇದ್ದ ದೇವರು ನಿನ್ನಲ್ಲಿ ಇಷ್ಟಲಿಂಗದ ಕುರುಹಾಗಿ ರೂಪಗೊಂಡಿತು ಅಂತ ಬಸವಣ್ಣನವರ ಆಗಾಧ ಶಕ್ತಿಯನ್ನು ವರ್ಣಿಸುತ್ತಾರೆ.
ಇಷ್ಟ ಅಂದರೆ ಪ್ರಿಯವಾದದ್ದು. ಅದರ ಇನ್ನೊಂದು ಅರ್ಥ ಪರಮಾತ್ಮ. ಲಿಂಗ ಅಂದರೆ ಕುರುಹು ಅಥವಾ ಚಿಹ್ನೆ. ಆದರೆ ಇಲ್ಲಿ ಆ ಪರಮಾತ್ಮ ನಾವು ನಿತ್ಯ ನೋಡುವ, ಎಲ್ಲಾ ಕಡೆ ನಂಬುವ ಶಿವ ಅಥವಾ ರುದ್ರನಾಗಿರದೆ, ಆತ್ಮ ಸಾಧನೆಯ ಪ್ರತೀಕ ಆಗಿದ್ದಾನೆ. ಬಹಿರಂಗದ ಆವರಣದ ಇಷ್ಟಲಿಂಗ ಗುರು ದೀಕ್ಷೆ ಕೊಡುವಾಗ ಕರಸ್ಥಳದ ಇಷ್ಟಲಿಂಗ ಆದರೂ ಕೂಡ ಅದು ತನ್ನೊಳಗೆ ಇರುವ ಪ್ರಾಣಲಿಂಗವಾಗಿ ಪರಿವರ್ತನೆ ಆಗುತ್ತದೆ. ಲಿಂಗ ಅಂದರೆ ಹುಚ್ಚುಚ್ಚಾರ ಪ್ರತಿಪಾದನೆ ಮಾಡಿ ಲಿಂಗಾಯತರೇ ಅಲ್ಲಾ ಅನ್ನೋ ನಿನಗೆ ಲಿಂಗ ಅಂದರೆ ಏನು ಅಂತಾ ಅನ್ನೋದು ಅರ್ಥವಾಯಿತೆನಪಾ AI Scientist ಚಂದ್ರಶೇಖರನೇ?
ಮುಂದುವರೆದು ಇನ್ನೊಂದು ಅಜ್ಞಾನದ ತರ್ಕವನ್ನು ಹರಿಬಿಟ್ಟಿದ್ದಾನೆ. ಅವನು ಹೇಳತಾನೆ “ಆದರೆ ಉದ್ಭವ ಆಗೋದು ರೇಣುಕ ಅದು ಒಂದು ಶಕ್ತಿ” ಅಂತಾ. ಹಾಗಾದರೆ ಶಕ್ತಿ ಎಂದರೇನು ಎನ್ನುವುದನ್ನು ಈತನಿಗೆ ತಿಳಿಸೋಣ.
ಭೌತವಿಜ್ಞಾನದಲ್ಲಿ, ಶಕ್ತಿ ಎಂದರೆ ಕೆಲಸ (ಕಾರ್ಯ) ಮಾಡುವ ಸಾಮರ್ಥ್ಯ. ಇದು ವಸ್ತುಗಳನ್ನು ಚಲಿಸಲು, ಬಿಸಿ ಮಾಡಲು, ಬೆಳಗಲು ಅಥವಾ ಬದಲಾಯಿಸಲು ಅಗತ್ಯವಾದ ಮೂಲಭೂತ ಶಕ್ತಿಯಾಗಿದೆ. ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಮಾಡಲು ಸಾಧ್ಯವಿಲ್ಲ, ಆದರೆ ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಬಹುದು.
ಶಕ್ತಿಯ ಪ್ರಮುಖ ಅಂಶಗಳು:
- ವ್ಯಾಖ್ಯೆ: ಯಾವುದೇ ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯವೇ ಶಕ್ತಿ.
- SI ಘಟಕ: ಶಕ್ತಿಯ ಅಂತರರಾಷ್ಟ್ರೀಯ ಮಾಪನ ಘಟಕವು ಜೌಲ್ (J) ಆಗಿದೆ.
- ವಿಧಗಳು: ಮುಖ್ಯವಾಗಿ ಎರಡು ವಿಧ:
- ಚಲನ ಶಕ್ತಿ (Kinetic Energy): ಚಲನೆಯಲ್ಲಿರುವ ವಸ್ತುಗಳಲ್ಲಿನ ಶಕ್ತಿ (ಉದಾ: ಹರಿಯುವ ನೀರು).
- ಸ್ಥಿತಿ ಶಕ್ತಿ (Potential Energy): ವಸ್ತುವಿನ ಸ್ಥಾನ ಅಥವಾ ಸ್ಥಿತಿಯಿಂದ ಸಂಗ್ರಹವಾಗಿರುವ ಶಕ್ತಿ (ಉದಾ: ಎತ್ತರದಲ್ಲಿರುವ ನೀರು).
- ರೂಪಗಳು: ಶಾಖ, ಬೆಳಕು, ವಿದ್ಯುತ್ ಮತ್ತು ಧ್ವನಿ ಶಕ್ತಿ ಮುಂತಾದ ವಿವಿಧ ರೂಪಗಳಲ್ಲಿ ಶಕ್ತಿ ಇರುತ್ತದೆ.
ರೇಣುಕರನ್ನು ಒಂದು ಶಕ್ತಿಯಾಗಿ ಗುರುತಿಸುವ ಈ ವಿಜ್ಞಾನಿ ಮೊದಲು ರೇಣುಕರು ಯಾವ ಶಕ್ತಿ ಅನ್ನೋದನ್ನು ಸ್ಪಷ್ಟಪಡಿಸಲಿ. ಸುಮ್ಮನೆ ಸಂತೆಗೆ ಮೂರು ಮೊಳ ನೇಯುವ ಹಾಗೆ ಅಸಂಬದ್ಧ ತರ್ಕವನ್ನು Float ಮಾಡಿದರೆ ಅದನ್ನು ನಂಬುದಕ್ಕೆ ವಿಜ್ಞಾನ ಸಹಕರಿಸಬೇಕು. ಯಾಕಂದರೆ ಈತ ನಾನು AI Scientist ಅಂತಾ ಹೇಳಿಕೊಳ್ಳುತ್ತಾನೆ.
ಹೊಸ ದಿಗಂತ YouTube Channel ನ ಸಂದರ್ಶಕ: ಸಾಧ್ಯನಾ. ಒಬ್ಬ ಮನುಷ್ಯ ಹುಟ್ಟಕ್ಕೆ ಸಾಧ್ಯಾನಾ.
ಚಂದ್ರಶೇಖರ ಎಚ್. ಎನ್: ಒಂದು ಆತನ ಕುಚೋದ್ಯತನ ಇದೆ. ಅದನ್ನ ನಾವು ನೋಡ್ತಾ ಹೋಗೋಣ. ಮೊದಲನೇ ಅರ್ಥದಲ್ಲಿ ಅವರು ಕುಚ್ಯೋದಕ್ಕೆ ಉತ್ತರ ಕೊಡೋಣ. ಕಲ್ಲಿನಿಂದ ಉದ್ಭವಕ್ಕೆ ಸಾಧ್ಯ ಅಂತ. ಈಗ ಕಲ್ಲಿನಿಂದ ಶಕ್ತಿ ಉದ್ಭವಾಗಿರುವುದು ಅವರು ಮನುಷ್ಯರಲ್ಲ. ಮನುಷ್ಯರಾಗಿ ಶಕ್ತಿ ಪ್ರಕಟ ಆಗಿರೋದು. ಅಲ್ಲಿ ಅದರ ವಿಜ್ಞಾನ ನೋಡಬೇಕಾದರೆ ಹಿಂದೆ ಎರಡು Quartz ಕಲ್ಲು ಇತ್ತು. ಮೊದಲು ಆ Quartz ಗಳು ಒಂದಕ್ಕೊಂದು ತಾಕಿದಾಗ ಅಲ್ಲಿ ಕಿಡಿ ಬರುತ್ತೆ. ಬೆಂಕಿ ಹುಟ್ಟಿದ್ದೆ ಹಂಗೆ.
ಹೊಸ ದಿಗಂತ YouTube Channel ನ ಸಂದರ್ಶಕ: ಹೌದೌದು, ಅಲೆಮಾರಿಗಳು ಕಾಡು ಜನರಲ್ಲಿ ಹಾಗೆ ಕಲ್ಲು ಉಜ್ಜಿ ಬೆಂಕಿ ಹಚ್ಚುವುದು ಎಲ್ಲ ಇದೆ.
ಚಂದ್ರಶೇಖರ ಎಚ್. ಎನ್: ಸಾಮಾನ್ಯ ಜ್ಞಾನ. ಸಾಮಾನ್ಯದಲ್ಲಿ ಕಲ್ಲಿನ ಶಕ್ತಿ ಬರುತ್ತೆ ಬಂದೆ ಬರುತ್ತೆ. ಇನ್ನು ನಾವು Quantum Physics Level. ಇದು ಸತ್ಯ ಅನ್ನೋದನ್ನ ಅತ್ಯಂತ ಸ್ಪಷ್ಟವಾಗಿ ಇವತ್ತು ವಿಜ್ಞಾನದ Prove ಮಾಡಿ ತೋರಿಸಿದೆ Scientific Experiment ಮಾಡಿ ಇದನ್ನ Prove ಮಾಡಿ ತೋರಿಸಿದೆ. ಇಲ್ಲಿಗೆ ಪ್ರಕಟ ಆಗುವಂತದ್ದು ಸತ್ಯ ಅನ್ನೋದನ್ನ ಅಂದ್ರೆ ಏನು ಅದನ್ನ ತೋರಿಸೋಣ.
ಡಾ. ವಿಜಯಕುಮಾರ ಕಮ್ಮಾರ: ಈ ವಿಜ್ಞಾನಿ ತಾನೊಬ್ಬನೇ ವಿಶ್ವ ಮಟ್ಟದ Scientist ಅನ್ನೋದನ್ನು ತನ್ನ ತಲೆಯಲ್ಲಿ ತುಂಬಿಕೊಂಡಿದ್ದಾನೆ. ಅದಕ್ಕಾಗಿ Physics ಎಂದರೇನು? Quantum ಅಂದರೇನು? Quantum Physics ಅಂದರೇನು ಅನ್ನೋದನ್ನು ತಿಳಿಸಿ ಕೊಡುವ ಪ್ರಯತ್ನ ಮಾಡೋಣ.
ಭೌತಶಾಸ್ತ್ರವು ದ್ರವ್ಯ (matter), ಶಕ್ತಿ (energy), ಬಲ (force), ಮತ್ತು ಚಲನೆಯನ್ನು ಅಧ್ಯಯನ ಮಾಡುವ ಮೂಲಭೂತ ವಿಜ್ಞಾನವಾಗಿದೆ. ಇದು ಪ್ರಪಂಚದ ನೈಸರ್ಗಿಕ ವಿದ್ಯಮಾನಗಳನ್ನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಭೌತಶಾಸ್ತ್ರವು ಪರಮಾಣುಗಳಿಂದ ಹಿಡಿದು ನಕ್ಷತ್ರಪುಂಜಗಳವರೆಗಿನ ವಸ್ತುಗಳ ನಡವಳಿಕೆಯನ್ನು ವಿವರಿಸುತ್ತದೆ.
ಭೌತಶಾಸ್ತ್ರದ ಪ್ರಮುಖಾಂಶಗಳು:
- ಮೂಲ ವಿಜ್ಞಾನ: ಇದು ರಸಾಯನಶಾಸ್ತ್ರ ಮತ್ತು ಎಂಜಿನಿಯರಿಂಗ್ ಶಾಸ್ತ್ರದಂತಹ ಇತರ ವಿಜ್ಞಾನಗಳ ಅಡಿಪಾಯವಾಗಿದೆ.
- ಪ್ರಕೃತಿಯ ಅಧ್ಯಯನ: ಭೌತಶಾಸ್ತ್ರ (Physics) ಎಂಬ ಪದವು “Physis” ಎಂಬ ಗ್ರೀಕ್ ಪದದಿಂದ ಬಂದಿದ್ದು, ಇದರರ್ಥ “ಪ್ರಕೃತಿಯ ಜ್ಞಾನ”.
- ಅಧ್ಯಯನದ ವಿಷಯಗಳು: ಬೆಳಕು (Optics), ವಿದ್ಯುತ್ಕಾಂತೀಯತೆ (Electromagnetism), ಉಷ್ಣಗತಿಶಾಸ್ತ್ರ (Thermodynamics), ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ (Quantum Mechanics) ಭೌತಶಾಸ್ತ್ರದ ಪ್ರಮುಖ ಶಾಖೆಗಳಾಗಿವೆ.
- ಪ್ರಮುಖ ಗುರಿ: ಪ್ರಕೃತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿಯಮಗಳು ಮತ್ತು ತತ್ವಗಳ ಮೂಲಕ ವಿವರಿಸುವುದು.
ಸರಳವಾಗಿ ಹೇಳುವುದಾದರೆ, ನಮ್ಮ ಸುತ್ತಮುತ್ತಲಿನ ಜಗತ್ತು ಏಕೆ ಮತ್ತು ಹೇಗೆ ಚಲಿಸುತ್ತದೆ ಎಂಬುದನ್ನು ವಿಜ್ಞಾನದ ಮೂಲಕ ಅರ್ಥಮಾಡಿಕೊಳ್ಳುವುದೇ ಭೌತಶಾಸ್ತ್ರ. ಇದರಲ್ಲಿ Human or Life Science ನ ಉಲ್ಲೇಖ ಎಲ್ಲಿ ಬರುತ್ತದೆ ಎನ್ನುವುದನ್ನು ಈ ವಿಜ್ಞಾನಿ ಚಂದ್ರಶೇಖರನೇ ಹೇಳಬೇಕು. ಇಂಥ ಅಜ್ಞಾನದ ಪ್ರದರ್ಶನ ಯಾಕೆ ಎನ್ನುವುದು Million Dollar ಪ್ರಶ್ನೆ.
ಇನ್ನು Quantum ಅಂದರೇನು ಎನ್ನುವುದನ್ನು ನೋಡೋಣ.
ಕ್ವಾಂಟಮ್ (Quantum) ಎಂದರೆ ಭೌತಶಾಸ್ತ್ರದಲ್ಲಿ ಯಾವುದೇ ಭೌತಿಕ ವಸ್ತುವಿನ (ಶಕ್ತಿ ಅಥವಾ ದ್ರವ್ಯ) ಅತ್ಯಂತ ಚಿಕ್ಕದಾದ, ಪ್ರತ್ಯೇಕವಾದ (discrete) ಪ್ರಮಾಣ. ಇದು ವಿಶ್ವದ ಮೂಲಭೂತ ಕಣಗಳಾದ ಎಲೆಕ್ಟ್ರಾನ್, ಫೋಟಾನ್ಗಳಂತಹವುಗಳ ಗುಣಲಕ್ಷಣಗಳನ್ನು ವಿವರಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ಶಕ್ತಿಯ ಒಂದು ಸಣ್ಣ ಪ್ಯಾಕೆಟ್ ಅಥವಾ ಕಣವಾಗಿದೆ.
ಕ್ವಾಂಟಮ್ ಬಗ್ಗೆ ಪ್ರಮುಖ ಅಂಶಗಳು:
- ಅರ್ಥ: “Quantum” ಎಂಬುದು ಲ್ಯಾಟಿನ್ ಪದವಾಗಿದ್ದು, “ಎಷ್ಟು” (how much) ಅಥವಾ “ಪ್ರಮಾಣ” (amount) ಎಂಬ ಅರ್ಥವನ್ನು ನೀಡುತ್ತದೆ.
- ಪ್ರತ್ಯೇಕ ಮೌಲ್ಯಗಳು (Quantization): ಶಕ್ತಿಯು ನಿರಂತರವಾಗಿರುವುದಿಲ್ಲ, ಬದಲಾಗಿ ಸಣ್ಣ ಸಣ್ಣ ತುಂಡುಗಳಾಗಿ (quantized) ಇರುತ್ತದೆ. ಅಂದರೆ, ಒಂದು ವ್ಯವಸ್ಥೆಯು ನಿರ್ದಿಷ್ಟ, ಪ್ರತ್ಯೇಕ ಮೌಲ್ಯಗಳನ್ನು ಮಾತ್ರ ಹೊಂದಿರಬಹುದು.
- Quantum Physics (ಕ್ವಾಂಟಮ್ ಭೌತಶಾಸ್ತ್ರ): ಇದು ಪರಮಾಣು ಮತ್ತು ಉಪ-ಪರಮಾಣು ಮಟ್ಟದಲ್ಲಿ ವಸ್ತು ಮತ್ತು ಶಕ್ತಿಯ ನಡವಳಿಕೆಯನ್ನು ಅಧ್ಯಯನ ಮಾಡುವ ಶಾಖೆಯಾಗಿದೆ.
- ಉದಾಹರಣೆ: ಬೆಳಕಿನ ಶಕ್ತಿಯ ಕನಿಷ್ಠ ಪ್ರಮಾಣವನ್ನು ‘ಫೋಟಾನ್‘ (photon) ಎಂದು ಕರೆಯಲಾಗುತ್ತದೆ.
ಇನ್ನು Quantum Physics ಎಂದರೇನು ಎನ್ನುವುದನ್ನು ತಿಳಿಯೋಣ.
ಕ್ವಾಂಟಮ್ ಭೌತಶಾಸ್ತ್ರ (Quantum Physics), ಇದನ್ನು ಕ್ವಾಂಟಮ್ ಮೆಕ್ಯಾನಿಕ್ಸ್ (Quantum Mechanics) ಎಂದೂ ಕರೆಯುತ್ತಾರೆ, ಇದು ಪ್ರಪಂಚದ ಅತ್ಯಂತ ಚಿಕ್ಕ ಕಣಗಳಾದ ಅಣುಗಳು, ಪರಮಾಣುಗಳು ಮತ್ತು ಉಪ-ಪರಮಾಣು ಕಣಗಳ (ಎಲೆಕ್ಟ್ರಾನ್, ಪ್ರೋಟಾನ್, ಫೋಟಾನ್ ಇತ್ಯಾದಿ) ನಡವಳಿಕೆಯನ್ನು ಅಧ್ಯಯನ ಮಾಡುವ ಭೌತಶಾಸ್ತ್ರದ ಒಂದು ಶಾಖೆಯಾಗಿದೆ. ಇದು ದೈನಂದಿನ ಜೀವನದಲ್ಲಿ ನಾವು ನೋಡುವ ಕ್ಲಾಸಿಕಲ್ ಭೌತಶಾಸ್ತ್ರದ (Newtonian Physics) ನಿಯಮಗಳಿಗಿಂತ ಸಂಪೂರ್ಣ ಭಿನ್ನವಾಗಿದೆ.
ಕ್ವಾಂಟಮ್ ಭೌತಶಾಸ್ತ್ರದ ಪ್ರಮುಖ ಅಂಶಗಳು:
- ವಸ್ತುವಿನ ಸೂಕ್ಷ್ಮ ಅಧ್ಯಯನ: ಇದು ದ್ರವ್ಯ (matter) ಮತ್ತು ಶಕ್ತಿ (energy) ಅತ್ಯಂತ ಮೂಲಭೂತ ಮಟ್ಟದಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ವಿವರಿಸುತ್ತದೆ.
- ಕ್ವಾಂಟಮ್ (Quantum): ಇದು ಶಕ್ತಿಯ ಚಿಕ್ಕ ಪ್ಯಾಕೆಟ್ ಅಥವಾ ಕನಿಷ್ಠ ಮೊತ್ತವನ್ನು ಸೂಚಿಸುತ್ತದೆ.
- ಸೂಪರ್ಪೊಸಿಷನ್ (Superposition): ಕ್ವಾಂಟಮ್ ಕಣಗಳು ಒಂದೇ ಸಮಯದಲ್ಲಿ ಅನೇಕ ಸ್ಥಿತಿಗಳಲ್ಲಿ ಅಥವಾ ಸ್ಥಳಗಳಲ್ಲಿ ಇರಬಹುದು. ಉದಾಹರಣೆಗೆ ಮಂಜುಗಡ್ಡೆ (Solid-ಘನ), ನೀರು (Liquid-ದ್ರವ) ಮತ್ತು ಆವಿ (Gaseous-ಅನೀಲ) ಯು H2O ದ ಸ್ಥಿತಿಗಳು.
- ತರಂಗ-ಕಣ ದ್ವಂದ್ವತೆ (Wave-Particle Duality): ಬೆಳಕು ಮತ್ತು ಎಲೆಕ್ಟ್ರಾನ್ನಂತಹ ಕಣಗಳು ಕೆಲವೊಮ್ಮೆ ತರಂಗಗಳಂತೆ (waves) ಮತ್ತು ಕೆಲವೊಮ್ಮೆ ಕಣಗಳಂತೆ (particles) ವರ್ತಿಸುತ್ತವೆ. ಉದಾಹರಣೆಗೆ ಕಾಮನ ಬಿಲ್ಲು.
- ಕ್ವಾಂಟಮ್ ಎಂಟ್ಯಾಂಗಲ್ಮೆಂಟ್ (Entanglement): ಎರಡು ಕಣಗಳು ಒಂದಕ್ಕೊಂದು ಸಂಪರ್ಕ ಹೊಂದಿ, ಎಷ್ಟು ದೂರವಿದ್ದರೂ ಒಂದರ ಸ್ಥಿತಿ ಇನ್ನೊಂದನ್ನು ತಕ್ಷಣವೇ ಪ್ರಭಾವಿಸುತ್ತದೆ. ಉದಾಹರಣೆಗೆ ಗುಡುಗು-ಮಿಂಚು.
- ಅನಿಶ್ಚಿತತೆಯ ತತ್ವ (Uncertainty Principle): ಒಂದು ಕಣದ ಸ್ಥಾನ ಮತ್ತು ವೇಗವನ್ನು (position and momentum) ಒಂದೇ ಸಮಯದಲ್ಲಿ ನಿಖರವಾಗಿ ಅಳೆಯಲು ಸಾಧ್ಯವಿಲ್ಲ.
ಕ್ವಾಂಟಮ್ ಭೌತಶಾಸ್ತ್ರದ ಅನ್ವಯಗಳು (Applications): ನಮ್ಮ ದೈನಂದಿನ ಜೀವನದ ಅನೇಕ ತಂತ್ರಜ್ಞಾನಗಳು ಕ್ವಾಂಟಮ್ ಸಿದ್ಧಾಂತದ ಮೇಲೆ ಕಾರ್ಯನಿರ್ವಹಿಸುತ್ತವೆ:
- ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ಗಳಲ್ಲಿನ ಟ್ರಾನ್ಸಿಸ್ಟರ್ಗಳು.
- ಲೇಸರ್ ತಂತ್ರಜ್ಞಾನ.
- MRI ಸ್ಕ್ಯಾನ್ ಮತ್ತು ವೈದ್ಯಕೀಯ ಇಮೇಜಿಂಗ್.
- ಸೌರ ಕೋಶಗಳು (Solar cells).
ಸರಳವಾಗಿ ಹೇಳುವುದಾದರೆ, ಪರಮಾಣು ಮಟ್ಟದಲ್ಲಿ ಪ್ರಕೃತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ವಿಜ್ಞಾನವೇ ಕ್ವಾಂಟಮ್ ಭೌತಶಾಸ್ತ್ರ (Quantum Physics).
ಈ ವಿಜ್ಞನಿ ಚಂದ್ರಶೇಖರ ಹೇಳುವ Science ನಲ್ಲಿ ಅಪ್ಪಿ ತಪ್ಪಿ ಎಲ್ಲಿಯೂ ಜೀವದ ಉಗಮ ಅಥವಾ ಉದ್ಭವದ ಉಲ್ಲೇಖ ಕಂಡು ಬರುವುದಿಲ್ಲ. It only deals with the matter and particles. ಆದ್ದರಿಂದ ಕಲ್ಲಲ್ಲಿ ಮನುಷ್ಯ ಹುಟ್ಟೋದು ಒತ್ತಟ್ಟಿಗಿರಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಯಾದ ಅಮೀಬಾ ಹುಟ್ಟುವ ಸಾಧ್ಯತೆ ಇದೆಯಾ? ಇದನ್ನು ವಿಜ್ಞಾನಿ ಚಂದ್ರಶೇಖರ ಕಲ್ಲಲ್ಲಿ ರೇಣುಕರು ಉದ್ಭವವಾಗಿದ್ದನ್ನು Quantum Physics ಮೂಲಕ ಹರಿಬಿಡುವ ತರ್ಕ ಅಜ್ಞಾನದ ಪರಮಾವಧಿ ಮತ್ತು ಈತನ ಯೋಚನೆಯಲ್ಲಿ Scientist Temparament ಇಲ್ಲವೇ ಅಲ್ಲಾ ಎನ್ನುವುದಕ್ಕೆ ಹಿಡಿದ ಕನ್ನಡಿ. ಇದು ಈತ ಹುಟ್ಟು ಹಾಕುವ Logic ಮಾತ್ರವೇ ಹೊರತು ವಿಜ್ಞಾನವಲ್ಲ.
Yes, ಕಲ್ಲನ್ನು ಕಲ್ಲಿನಿಂದ ಉಜ್ಜಿದರೆ ಬೆಂಕಿ ಹತ್ತುತ್ತದೆ. ಹೌದು, ಕಲ್ಲನ್ನು ಕಲ್ಲಿನಿಂದ (ವಿಶೇಷವಾಗಿ ಚಕಮಕಿ ಕಲ್ಲು ಅಥವಾ Flint stone) ಜೋರಾಗಿ ಉಜ್ಜಿದಾಗ ಅಥವಾ ಬಡಿದಾಗ ಕಿಡಿಗಳು (sparks) ಉತ್ಪತ್ತಿಯಾಗುತ್ತವೆ. ಈ ಕಿಡಿಗಳು ಒಣಹುಲ್ಲು ಅಥವಾ ಹತ್ತಿಯ ಮೇಲೆ ಬಿದ್ದಾಗ ಬೆಂಕಿ ಹತ್ತಿಕೊಳ್ಳುತ್ತದೆ. ಇದು ಮಾನವನು ಬೆಂಕಿಯನ್ನು ಕಂಡುಹಿಡಿದ ಆರಂಭಿಕ ವಿಧಾನಗಳಲ್ಲಿ ಒಂದಾಗಿದೆ.
ಇದರ ಹಿಂದಿನ ವಿಜ್ಞಾನ:
- ಘರ್ಷಣೆ (Friction): ಎರಡು ಕಲ್ಲುಗಳನ್ನು ಉಜ್ಜಿದಾಗ ಉಂಟಾಗುವ ಘರ್ಷಣೆಯು ಶಾಖವನ್ನು ಉತ್ಪಾದಿಸುತ್ತದೆ.
- ಕಿಡಿ: ಚಕಮಕಿ ಕಲ್ಲಿನಲ್ಲಿರುವ ಕಬ್ಬಿಣದ ಅಂಶವು (Iron Particles) ಘರ್ಷಣೆಯಿಂದಾಗಿ ಸಣ್ಣ ಕಣಗಳಾಗಿ ಹೊರಬಂದು, ಗಾಳಿಯಲ್ಲಿನ ಆಮ್ಲಜನಕದೊಂದಿಗೆ ಸೇರಿ ಕಿಡಿಯಾಗಿ ಉರಿಯುತ್ತವೆ.
ಆದರೆ, ಎಲ್ಲಾ ಕಲ್ಲುಗಳಿಂದಲೂ ಬೆಂಕಿ ಹತ್ತಿಸುವುದು ಸಾಧ್ಯವಿಲ್ಲ. ಕೇವಲ ಕಠಿಣವಾದ ಮತ್ತು ಕಬ್ಬಿಣದ ಅಂಶವಿರುವ ಕಲ್ಲುಗಳಿಗೆ ಮಾತ್ರ ಈ ಗುಣವಿರುತ್ತದೆ.
ಇದು ವಿಜ್ಞಾನಿ ಚಂದ್ರಶೇಖರನ ಕುಚೋದ್ಯತನದ Theory. ಹಾಗಾದರೆ ಕಲ್ಲನ್ನು ಯಾವುದರಿಂದ ಉಜ್ಜಿ ರೇಣುಕರು ಉದ್ಭವಿಸಿದರು ಎನ್ನುವುದನ್ನು ಚಂದ್ರಶೇಖರ ವಿಜ್ಞಾನಿಗಳು ಹೇಳಲಿ ಮತ್ತು ಲಿಂಗಾಯತರಾದ ನಾವು ಕುಚೋದ್ಯದ ಪ್ರಶ್ನೆ ಕೇಳತೀವಂತ ಇವನ ವರಾತ ಬೇರೆ. ಇದು ಬೇಕಂತಲೇ ಸಿಡಿಸುವ ಹುಸಿ ವಿಜ್ಞಾನ.
ಚಂದ್ರಶೇಖರ ಎಚ್. ಎನ್: ರೀತಿಯಲ್ಲಿ ನೋಡಿದರೆ ಎರಡು. ಎಲ್ಲ ಒಂದೇ Material ದಿಂದ ಆಗಿರುವಂತದ್ದು. ಹೆಂಗೆ ಅದು ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ಗಳಿಂದ ಎರಡು ಆಗಿರುವಂತದ್ದು. ಅಂದ್ರೆ ಬಹಳ ಮೂಲ Energy Level ಗೆ ಹೋದ್ರೆ ಎಲ್ಲದು ಪ್ರೋಟಾನ್, ನ್ಯೂಟ್ರಾನ್. ಇನ್ನು ಮೂಲ Quantum Physics ಸಿಗೋದಕ್ಕೆ String Theory ಬರುತ್ತೆ. ಅಲ್ಲಲ್ಲಿ ಹೇಳ್ತೀನಿ. ಅದಕ್ಕ ಮುಂಚೆ ಈ ಒಂದು ಪ್ರೋಟಾನ್ ಎಲೆಕ್ಟ್ರಾನ್ ನೋಡಿದ್ರೆ. ಹಂಗಾದ್ರೆ ಹೈಡ್ರೋಜನ್ ಒಂದು Element ಇನ್ನೊಂದು Element ಆಗಬಹುದಾ. ಅದಕ್ಕೂ ವಿಜ್ಞಾನದಲ್ಲಿ ಉತ್ತರ ಇದೆ. Radio Active Elements ಅಂತ ಏನು ಬರುತೆ ಅದು ಒಂದು Radio Active Carbon 14 Radio Active Elements ಅಂತ ಹೇಳ್ತೀವಿ. ಅದು ಅದು ಎಷ್ಟು ವರ್ಷಗಳಾದ ಮೇಲೆ ಅದರ Radio Activity ಬರ್ತ ಬರ್ತ ಬರ್ತ ಬೇರೆ ಬೇರೆ Element ಆಗ್ತಾ ಅಂದ್ರೆ ಶಕ್ತಿಯನ್ನ ತೆಗೆದು ಮೂಲಕ ದೊಡ್ಡ ಒಂದು Element ಇನ್ನೊಂದು Element ಆಗಿ Convert ಆಗುತ್ತೆ ಅನ್ನೋದು ಕೂಡ ಗೊತ್ತಾಗಿದೆ. ಅದರ ಶಕ್ತಿಯನ್ನ ಸರಿಯಾದ ರೂಪ ಉಪಯೋಗ ರೂಪಾಂತರ ಮಾಡಬಹುದು. Element, Proton, Neutron, Electron ರೂಪಾಂತರ ಮಾಡಬಹುದು ಅಂತ ಇದೊಂದು ವೈಜ್ಞಾನಿಕ ಸಾಧ್ಯತೆ. ಈ ಹಂತದಲ್ಲಿ ಕಲ್ಲು ಮನುಷ್ಯ ಅನ್ನಲ್ಲ. ಅದು ಕಲ್ಲು ಅಲ್ಲ. ಮನುಷ್ಯನೂ ಅಲ್ಲ. ಸರಿಯಾದ ಉತ್ತರ ನೋಡಬೇಕು ಅಂದ್ರೆ ಅದೊಂದು ಶಕ್ತಿ ಪ್ರಕಟ ಆಗುವಂತದ್ದು. ಇವರು ಪ್ರಕಟ ಆಗಿದ್ದಂತ ಒಂದು Science ಗೆ ನಮ್ಮಲ್ಲಿ ಇದನ್ನ ನಮಗೆ Quantum ಇದರಲ್ಲಿ Quantum Leap ಅಂತ ಕರೀತೀವಿ. ಮತ್ತೆ Quant Quantum Leap ಅಂತ ಹೇಳಿದ್ರೆ ಈ ಒಂದು ಕಡೆ Off Energy ಒಂದು ಕಡೆಯಿಂದ ಪ್ರಕಟ ಆಗಿ ಅಪ್ರಕಟ ಆಗೋದು ಹೆಂಗೆ Quantum Turning ಅಂತ ಬರುತ್ತೆ ಸ್ವಲ್ಪ Mind Bending Concept.
ಡಾ. ವಿಜಯಕುಮಾರ ಕಮ್ಮಾರ: ಹೌದೌದು ಈ ಚಂದ್ರಶೇಖರ ತನ್ನ ವಿಜ್ಞಾನದ ಅಜ್ಞಾನತೆಯನ್ನು ಕಲ್ಲಲ್ಲಿ ರೇಣುಕರು ಹುಟ್ಟಿದ್ದನ್ನು ಬಹಳ ಗೊಂದಲಮಯವಾಗಿ ಪ್ರತಿಪಾದನೆ ಮಾಡುತ್ತಾನೆ. ಲಿಂಗಾಯತರಲ್ಲಿ ವಿಜ್ಞಾನದ ಗಂಧ ಗಾಳಿಯೇ ಗೊತ್ತಿಲ್ಲ ಎನ್ನುವುದನ್ನು ಈತ Taken for Granted ಅನ್ನುವಂತಿದೆ ಈತನ ಪ್ರತಿಪಾದನೆ. ಹಾಗಾಗಿ ಈತನ ಅವೈಜ್ಞಾನಿಕತೆಯನ್ನು ತೆರೆದಿಡುವುದಕ್ಕೆ ತನ ಮಾತುಗಳಲ್ಲೇ ಉತ್ತರ ನೀಡೋಣ. ಇದಕ್ಕೆ Mind Bending Concept ಅಂತಾನೂ ಹೇಳುತ್ತಾನೆ. ಏನು ನಾವೇನು ಮದ್ದಂಬಲಿ ಕುಡಿದು ಬೆಳೆದಿದೀವಾ? ಇವನೊಬ್ಬನೇ ವಿಜ್ಞಾನ ಓದಿದಾನಾ?
ಮೊದಲನೇಯದಾಗಿ Energy Level ಅಂತಾ ಹೇಳತಾನೆ. Energy ಅಂದರೇನು ಅಂತ ಮೇಲೆ ವಿವರಿಸಿದ್ದೇನೆ. Energy is neither created nor destroyed but it can be transformed ಅನ್ನೋದನ್ನೂ ಕೂಡ ಮೇಲೆ ವಿವರಿಸಲಾಗಿದೆ. ಹಾಗಾದರೆ ರೇಣುಕರು ಯಾವ Energy Level ನಿಂದ ಉದ್ಭವಿಸಿದರು ಅಥವಾ ಯಾವ Energy Transformation ದಿಂದ ಕಲ್ಲಲ್ಲಿ ಹುಟ್ಟಿದರು ಅನ್ನೋದನ್ನು ಈತ ಸ್ಪಷ್ಟಪಡಿಸಲಿ. ಮುಂದುವರೆದು Quantum Leap ಎನ್ನುವ Pure Physics ಶಬ್ದವನ್ನು ಉಪಯೋಗಿಸಿದ್ದಾನೆ. ಸ್ವಲ್ಪ ಇದರ ಬಗ್ಗೆ ಮಾಹಿತಿ ಕೊಟ್ಟು ಮುಂದೆ ಹೋಗತೀನಿ. ಯಾಕಂದರೆ ನನ್ನ ಬದುಕಿನ 32 ವಸಂತಗಳನ್ನು Forging Technology ಗೆ ಸಮರ್ಪಿಸಿದ್ದೇನೆ. Forging Industry ನಲ್ಲಿ ನನ್ನ ಅಧ್ಯಯನವೇ “Empirical Analysis of Metallurgical Aspects in Thixo Forging under Semi Solid State”. ಇದು deals with the transformation of Atom as a whole during Forging Process. ಇದು Pure Quantum Physics ಆಧಾರಿತ ಅಧ್ಯಯನ. ಯಾರೋ LKG ಹುಡುಗರಿಗೆ, ಗೋಲಿ ಆಡೋ ಹುಡುಗರಿಗೆ ಹೇಳುವ ಹಾಗೆ ಹೇಳಿದರೆ ನಾನು ಕೇಳೋದಕ್ಕೆ ತಯಾರಿಲ್ಲ. ಅದಕ್ಕಾಗಿ ಈತನಿಗೆ ವಿಜ್ಞಾನದ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ.
Quantum & Quantum Physics ಬಗ್ಗೆ ಮೇಲೆಯೇ ಉತ್ತರ ನೀಡಿದ್ದೇನೆ. ಈಗ Quantum Leap ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
“ಕ್ವಾಂಟಮ್ ಲೀಪ್” (Quantum Leap) ಎಂದರೆ ಕನ್ನಡದಲ್ಲಿ ಹಠಾತ್ ಪ್ರಗತಿ, ದಿಢೀರ್ ಮುನ್ನಡೆ ಅಥವಾ ಬೃಹತ್ ಬದಲಾವಣೆ ಎಂದರ್ಥ.
ಇದರ ಮುಖ್ಯ ಅರ್ಥಗಳು ಮತ್ತು ಬಳಕೆಗಳು ಇಲ್ಲಿವೆ:
- ಅರ್ಥ: ಇದು ಕೇವಲ ಸಣ್ಣ ಸುಧಾರಣೆಯಲ್ಲ, ಬದಲಾಗಿ ಒಂದೇ ಬಾರಿಗೆ ಆಗುವ ಭಾರಿ ಬೆಳವಣಿಗೆ ಅಥವಾ ಪ್ರಗತಿ.
- ಉದಾಹರಣೆ: ತಂತ್ರಜ್ಞಾನದಲ್ಲಿನ “ಕ್ವಾಂಟಮ್ ಲೀಪ್” ಎಂದರೆ ಹಳೆಯ ತಂತ್ರಜ್ಞಾನದಿಂದ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಏಕಾಏಕಿ ನೆಗೆಯುವುದು (ಉದಾಹರಣೆಗೆ, ಕಂಪ್ಯೂಟಿಂಗ್ನಲ್ಲಿನ ಹೊಸ ಆವಿಷ್ಕಾರಗಳು).
- ಮೂಲ: ಇದು ಕ್ವಾಂಟಮ್ ಭೌತಶಾಸ್ತ್ರದ ಪದವಾಗಿದೆ, ಇಲ್ಲಿ Electron ಒಂದು ಶಕ್ತಿಯ ಮಟ್ಟದಿಂದ ಇನ್ನೊಂದಕ್ಕೆ ಯಾವುದೇ ಮಧ್ಯಂತರ ಹಂತವಿಲ್ಲದೆ ಹಠಾತ್ತಾಗಿ ಜಿಗಿಯುತ್ತದೆ.
ಸಾಮಾನ್ಯವಾಗಿ, ವ್ಯವಹಾರ, ವಿಜ್ಞಾನ ಅಥವಾ ವೈಯಕ್ತಿಕ ಬೆಳವಣಿಗೆಯಲ್ಲಿ ಅತಿ ವೇಗವಾದ ಮತ್ತು ದೊಡ್ಡ ಬದಲಾವಣೆಯನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.
ಮುಂದುವರೆದು ಸ್ಟ್ರಿಂಗ್ ಥಿಯರಿ ಎನ್ನುವ Atomic Theory ಯನ್ನು ಹೇಳಿದ್ದಾನೆ. ಸ್ಟ್ರಿಂಗ್ ಥಿಯರಿ (String Theory) ಎಂದರೆ ಸಮಷ್ಠಿಯ ಮೂಲಭೂತ ಕಣಗಳನ್ನು (Proton, Neutron, Electron, Quartz ಇತ್ಯಾದಿ) ಅತ್ಯಂತ ಸೂಕ್ಷ್ಮವಾದ, ಕಂಪಿಸುವ “ತಂತಿಗಳು” (Strings) ಎಂದು ವಿವರಿಸುವ ಸೈದ್ಧಾಂತಿಕ ಭೌತಶಾಸ್ತ್ರದ ಚೌಕಟ್ಟು. ಇದು ಗುರುತ್ವಾಕರ್ಷಣೆ ಮತ್ತು Quantum Mechanics ಅನ್ನು ಒಂದುಗೂಡಿಸುವ “ಎಲ್ಲದರ ಸಿದ್ಧಾಂತ” (Theory of Everything) ವಾಗಿದೆ. ಸ್ಟ್ರಿಂಗ್ ಥಿಯರಿಯ ಮುಖ್ಯ ಅಂಶಗಳು:
- ಮೂಲ ಘಟಕಗಳು: ಪ್ರತಿಯೊಂದು ಕಣವು ಶಕ್ತಿಯಿಂದ ಕೂಡಿದ, ಕಂಪಿಸುವ ಸೂಕ್ಷ್ಮ ತಂತಿಗಳಾಗಿವೆ. ಈ ತಂತಿಗಳು ಕಂಪಿಸುವ ವಿಭಿನ್ನ ಆವರ್ತನಗಳು (Frequency) ಬೇರೆ ಬೇರೆ ಕಣಗಳನ್ನು (ಉದಾಹರಣೆಗೆ Electron ಅಥವಾ Photon) ಸೃಷ್ಟಿಸುತ್ತವೆ.
- ಆಯಾಮಗಳು (Dimensions): ಈ ಸಿದ್ಧಾಂತದ ಪ್ರಕಾರ, ವಿಶ್ವವು ನಮಗೆ ತಿಳಿದಿರುವ 3 ಆಯಾಮಗಳಲ್ಲದೆ, ಹೆಚ್ಚುವರಿ ಆಯಾಮಗಳನ್ನು (ಹೆಚ್ಚಾಗಿ 10 ಅಥವಾ 11) ಹೊಂದಿದೆ. ಇವು ನಮಗೆ ಅದೃಶ್ಯವಾಗಿರುತ್ತವೆ.
- ಏಕೀಕರಣ (Unification): ಇದು ಪ್ರಕೃತಿಯ ನಾಲ್ಕು ಮೂಲಭೂತ ಬಲಗಳನ್ನು (ಗುರುತ್ವಾಕರ್ಷಣೆ, ವಿದ್ಯುತ್ಕಾಂತೀಯ, ಬಲವಾದ ಮತ್ತು ದುರ್ಬಲ ಪರಮಾಣು ಬಲಗಳು) ಒಂದೇ ಸೂತ್ರದಡಿ ತರಲು ಪ್ರಯತ್ನಿಸುತ್ತದೆ.
- ಸಮಷ್ಠಿಯ ವಿವರಣೆ: ಇದು ಗುರುತ್ವಾಕರ್ಷಣೆಯನ್ನು ಕ್ವಾಂಟಮ್ ಭೌತಶಾಸ್ತ್ರದೊಂದಿಗೆ ಜೋಡಿಸುವ ಮೂಲಕ ಸಮಷ್ಠಿಯ ರಚನೆ ಮತ್ತು ಮೂಲವನ್ನು ವಿವರಿಸಲು ಪ್ರಯತ್ನಿಸುತ್ತದೆ.
ಸರಳವಾಗಿ ಹೇಳುವುದಾದರೆ, String Theory ಯು ಸಮಷ್ಠಿಯು ಒಂದು ದೊಡ್ಡ ಸಂಗೀತ ವಾದ್ಯದಂತೆ ಇನ್ನೂ ಸರಳವಾಗಿ ಹೇಳುವುದಾದರೆ ವಿದ್ಯುತ್ ಅಂತಿಗಳಲ್ಲಿ ಕರೆಂಟ್ ಹರಿಯುವಂತೆ, ಇದರಲ್ಲಿರುವ ತಂತಿಗಳ ಕಂಪನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳುತ್ತದೆ. ಸರಳ ಉದಾಹರಣೆಗೆ ಹೂವುಗಳನ್ನು ಒಂದು ದಾರದ ಮೂಲಕ ಪೋಣಿಸುವುದು. ಎಲ್ಲವನ್ನೂ ಜೋಡಿಸುವ ಒಂದು ವೈಜ್ಞಾನಿಕ ಪ್ರಕ್ರಿಯೆ. Its as simple as unification matter and particle.
ಚಂದ್ರಶೇಖರ ಎಚ್. ಎನ್: Quantum Gap ಅಂತ ಕರೀತೀವಿ ಮಧ್ಯದಲ್ಲಿ ಇರುವಂತ Quantum Field ಅಂತ. ಅದರ ಒಂದು ಈ ಪ್ರಕಟ ಅಪ್ರಕಟ ಆಗುವಂತದ್ದನ್ನ ಅಲ್ಲಿ Prove ಮಾಡಿ ತೋರಿಸ್ತೀವಿ ಅಂದ್ರೆ ಹಿಂಗೆ ಮಾಯ ಆಗಬಹುದು ಪ್ರಕಟ ಆಗಬಹುದು ಅಂತ.
ಡಾ. ವಿಜಯಕುಮಾರ ಕಮ್ಮಾರ: ಈತ ಹೇಳುತ್ತಿರುವ ಅವೈಜ್ಞಾನಿಕ ಅಂಶಗಳ ತರ್ಕಕ್ಕೆ ಅಳಬೇಕೋ ನಗಬೇಕೋ ಒಂದೂ ಗೊತ್ತಾಗತಾ ಇಲ್ಲ. ಎಂಥ ವಿಜ್ಞಾನದ ಧಡ್ಡ ವಿದ್ಯಾರ್ಥಿಯೂ Quantum Physics ಗೂ Cell Bio-Chemistry ಗೂ ವ್ಯತ್ಯಾಸವನ್ನು ತಿಳಿಸಬಲ್ಲ. ಇರಲಿ. ಈತನಿಗೆ ಈ ಶಬ್ದಗಳ ವೈಜ್ಞಾನಿಕ ಅರ್ಥವನ್ನು ತಿಳಿಸೋಣ.
“ಕ್ವಾಂಟಮ್ ಗ್ಯಾಪ್” (Quantum Gap) ಎಂಬುದು ಸಾಮಾನ್ಯವಾಗಿ ಎರಡು ಮುಖ್ಯ ಸನ್ನಿವೇಶಗಳಲ್ಲಿ ಬಳಸಲ್ಪಡುವ ಪದವಾಗಿದೆ:
- ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ (Quantum Computing Gap):
ಇದು ಪ್ರಸ್ತುತ ಕ್ವಾಂಟಮ್ ಕಂಪ್ಯೂಟಿಂಗ್ ಸಾಮರ್ಥ್ಯ ಮತ್ತು ಭವಿಷ್ಯದ, ದೋಷ-ರಹಿತ (fault-tolerant) ದೊಡ್ಡ ಪ್ರಮಾಣದ ಕ್ವಾಂಟಮ್ ಕಂಪ್ಯೂಟರ್ಗಳನ್ನು ಸಾಧಿಸುವ ನಡುವಿನ ಅಂತರವನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಸೈದ್ಧಾಂತಿಕ ಸಾಮರ್ಥ್ಯ ಮತ್ತು ಪ್ರಾಯೋಗಿಕ ಕಾರ್ಯಸಾಧ್ಯತೆಯ ನಡುವಿನ ಅಂತರ. - ಭೌತಶಾಸ್ತ್ರ (Energy/Quantum Gap): Quantum Mechanics ನಲ್ಲಿ, ಇದು ಒಂದು ಕ್ವಾಂಟಮ್ ವ್ಯವಸ್ಥೆಯ (ಉದಾಹರಣೆಗೆ Electron) ನೆಲದ ಸ್ಥಿತಿ (Ground/Neutral State) ಮತ್ತು ಮುಂದಿನ ಉತ್ತೇಜಿತ ಸ್ಥಿತಿ (Excited State) ನಡುವಿನ ಶಕ್ತಿಯ ವ್ಯತ್ಯಾಸವನ್ನು ಸೂಚಿಸುತ್ತದೆ.
ಮುಖ್ಯ ಅಂಶಗಳು:
- ಕ್ವಾಂಟೀಕರಣ (Quantization): ಶಕ್ತಿಯು ನಿರಂತರವಾಗಿರದೆ, ಪ್ರತ್ಯೇಕ ಮೌಲ್ಯಗಳಲ್ಲಿ (Discrete Values) ಇರುತ್ತದೆ.
- ಗ್ಯಾಪ್ ಜಂಕ್ಷನ್ (Gap Junction): ಲೋಹ ವಿಜ್ಞಾನದಲ್ಲಿ, ಇದು ಎರಡು Electron ಗಳ ನಡುವಿನ ಭೌತಿಕ ಸಂಪರ್ಕವಾಗಿದೆ.
ಸಂದರ್ಭಕ್ಕೆ ಅನುಗುಣವಾಗಿ ಇದರ ಅರ್ಥ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ ಇದು ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿನ ಸವಾಲು ಅಥವಾ ಶಕ್ತಿಯ ಮಟ್ಟಗಳ ನಡುವಿನ ಅಂತರ ಎಂದು ಅರ್ಥೈಸಬಹುದು.
ಚಂದ್ರಶೇಖರ ಎಚ್. ಎನ್: ಅಂದ್ರೆ ಹಿಂಗೆ ಮಾಯ ಆಗಬಹುದು ಪ್ರಕಟ ಆಗಬಹುದು ಅಂತ. ಪ್ರಕಟ ಆಗುವುದು ಒಂದು ಸಾಧ್ಯತೆ. Science ಪ್ರಕಾರ ಸಾಧ್ಯತೆ. ಇಲ್ಲಿ ಏನು ಹೇಳ್ತೀವಿ ಆಗಲೇ ನಾವು ಹೇಳಿದಂಗೆ ಇವರು ಹುಟ್ಟಿದ್ದಲ್ಲ. ಪಂಚಾಚಾರ್ಯರು ಹುಟ್ಟಿದ್ದ ಲಿಂಗದಲ್ಲಿ ಹುಟ್ಟದು ಹುಟ್ಟಿದ್ದಲ್ಲ. ಮನುಷ್ಯರು ಅಲ್ಲ. ಅವರು ಉಗಮ. ಪ್ರಪಂಚದ ಆದಿಯಲ್ಲಿ ದೀಪಾವಳಿ ಆದಿಯಲ್ಲಿ ಹೇಳಿದ್ದಾರೆ. ಅಲ್ಲಿ ಪಂಚಮುಖದ ಪರಬ್ರಹ್ಮನಿಂದ ಬಂತು.
ಹೊಸದಿಗಂತ YouTube Channel ನ ಸಂದರ್ಶಕ: ಅಂದರೆ ಪ್ರಪಂಚದ ಹುಟ್ಟಿನಲ್ಲಿ ಅವರು ಹುಟ್ಟಿರೋರು.
ಚಂದ್ರಶೇಖರ ಎಚ್. ಎನ್: ಒಂದು ಬ್ರಹ್ಮಾಂಡ ಅಲ್ಲ. ಅನಂತ ಕೋಟಿ ಬ್ರಹ್ಮಾಂಡಗಳಲ್ಲಿ ಮೂಲ ಒಂದು ಮೊದಲ ಬ್ರಹ್ಮಾಂಡ ಸೃಷ್ಟಿ ಆಯ್ತು. ಆ ಸಮಯದಲ್ಲಿ ಹುಟ್ಟಿದವರು. ಅವಾಗ ಹುಟ್ಟು, ಈಗಲ್ಲ. ಅಲ್ಲಿ ಅಲ್ಲಿ ಅಲ್ಲಿ ಇದ್ದಂತವರು ಅಪ್ರಕಟ ಆಗಿ ಇಲ್ಲಿ ಲಿಂಗದ ಮೂಲಕ ಪ್ರಕಟ ಆಗ್ತಾರೆ.
ಹೊಸ ದಿಗಂತ YouTube Channel ನ ಸಂದರ್ಶಕ: ಓಹೋ ಪ್ರಕಟ ಆಗಿರೋದು.
ಡಾ. ವಿಜಯಕುಮಾರ ಕಮ್ಮಾರ: ರೇಣುಕರು ಭೂಮಿ ಹುಟ್ಟಿದಾಗಲೇ ಹುಟ್ಟಿ ಈಗ ಲಿಂಗದಲ್ಲಿ ಪ್ರಕಟ ಆಗಿರೋದು. ಅದೂ ವಿಜ್ಞಾನದ ಪ್ರಕಾರ Quantum Leap, Quantum Gap, Quantum Energy ಬಳಸಿ ಪ್ರಕಟ ಆಗಿರೋದು. ಅವರು ಹುಟ್ಟಿದ್ದಲ್ಲಾ. ಪ್ರಕಟ ಆಗಿರೋದು ಅಂತ ಹೇಳತಾನೆ. ಇದೇನು ಕಾಗಕ್ಕ-ಗುಬ್ಬಕ್ಕನ ಕಥೆಯೋ? ವಿಜ್ಞಾನವೋ? ವೈಜ್ಞಾನಿಕ ವಿದ್ವಾಂಸರು, ಚಿಂತನೆಯುಳ್ಳವರು Think ಮಾಡಬೇಕು.
ಕೋಶ ಜೀವಶಾಸ್ತ್ರ (Cell Biology) ಎಂದರೆ ಜೀವಿಗಳ ರಚನಾತ್ಮಕ ಮತ್ತು ಕ್ರಿಯಾತ್ಮಕ ಮೂಲಭೂತ ಘಟಕವಾದ ಜೀವಕೋಶಗಳ (Cells) ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆಯಾಗಿದೆ. ಸೆಲ್ ಬಯೋಕೆಮಿಸ್ಟ್ರಿ (Cell Bio-chemistry) ಅಥವಾ ಕೋಶ ಜೈವಿಕ ರಸಾಯನಶಾಸ್ತ್ರ ಎಂದರೆ ಜೀವಕೋಶಗಳ ಒಳಗೆ ನಡೆಯುವ ರಾಸಾಯನಿಕ ಪ್ರಕ್ರಿಯೆಗಳು ಮತ್ತು ಅವುಗಳ ಘಟಕಗಳ ಬಗ್ಗೆ ಅಧ್ಯಯನ ಮಾಡುವ ಶಾಖೆಯಾಗಿದೆ.
ಇದರ ಪ್ರಮುಖ ಅಂಶಗಳು ಇಲ್ಲಿವೆ:
- ವ್ಯಾಖ್ಯಾನ: ಇದು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಸಮ್ಮಿಲನವಾಗಿದ್ದು, ಜೀವಂತ ಕೋಶಗಳ ಒಳಗೆ ಸಂಭವಿಸುವ ಅಣುಗಳ (molecules) ರಚನೆ, ಕಾರ್ಯ ಮತ್ತು ಪರಸ್ಪರ ಕ್ರಿಯೆಗಳನ್ನು ವಿಶ್ಲೇಷಿಸುತ್ತದೆ.
- ಏನನ್ನು ಅಧ್ಯಯನ ಮಾಡುತ್ತದೆ?: ಕೋಶದಲ್ಲಿನ ಪ್ರೋಟೀನ್ಗಳು, ನ್ಯೂಕ್ಲಿಯಿಕ್ ಆಮ್ಲಗಳು (DNA/RNA), Lipids, Carbohydrates ಮತ್ತು ಕಿಣ್ವಗಳ (Enzymes) ಕಾರ್ಯಚಟುವಟಿಕೆಗಳನ್ನು ಇದು ಒಳಗೊಂಡಿದೆ.
- ಪ್ರಮುಖ ಕಾರ್ಯಗಳು: ಕೋಶಗಳ ಶಕ್ತಿ ಉತ್ಪಾದನೆ (Metabolism), ಬೆಳವಣಿಗೆ, ವಿಭಜನೆ ಮತ್ತು ಸಂಕೇತ ಪ್ರಕ್ರಿಯೆಗಳನ್ನು (Signalling) ಇದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಉಪಯೋಗ: ರೋಗಗಳ ಕಾರಣಗಳನ್ನು ತಿಳಿಯಲು ಮತ್ತು ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸಲು Cell Bio-Chemistry ಅತ್ಯಗತ್ಯವಾಗಿದೆ.
ಸರಳವಾಗಿ ಹೇಳುವುದಾದರೆ, ಜೀವಕೋಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ರಾಸಾಯನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವುದೇ Cell Bio-Chemistry.
ಚಂದ್ರಶೇಖರ ಎಚ್. ಎನ್: ಇನ್ನೊಂದು ಅರ್ಥದಲ್ಲಿ Quantum Tunnelling ಅಂತ ಬರ್ತದೆ. ಯಾಕಂದ್ರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರಬೇಕಾದ್ರೆ ಶಕ್ತಿಗಳು ಬೇರೆ ಬೇರೆ ಶಕ್ತಿಗಳು ಅಡ್ಡ ಇರುತ್ತಲ್ಲ ಹೆಂಗೆ ಬರ್ತದೆ ಅಂತ ಕೇಳ್ತೀವಿ. ಆ Quantum Tunnelling ನ ಇವತ್ತು Practical ಆಗಿ Prove ಮಾಡಿ ತೋರಿಸಿದ್ದಾರೆ ಇದನ್ನ ನಾವು Teleportation ಅಂತ. Teli ಅಂದ್ರೆ ದೂರದಿಂದ Portation ಅಂದ್ರೆ ಹೋಗೋದು. ಒಂದು ಕಡೆಯಿಂದ ಇನ್ನೊಂದು ಕಡೆ ಬಂತಲ್ಲ. ಈ Teleportation Recent ಆಗಿ Internet ಅಲ್ಲಿ ಇದನ್ನ ಈ ಒಂದು Electron ಬಳಸಿ Prove ಮಾಡಿದ್ದಾರೆ. ಈ Teleportation ಒಂದು ಕಡೆ ಮಾಯ ಆಗಿ ಮತ್ತೊಂದು ಕಡೆ ಪ್ರಕಟ ಆಗೋದು. ಒಂದು ಕಡೆ ಇನ್ನೊಂದು ಕಡೆ ಬರೋದು.
ಹೊಸ ದಿಗಂತ YouTube Channel ನ ಸಂದರ್ಶಕ: ಅಂದ್ರೆ Information ಅಲ್ಲಿರೋ Information Exact ಆಗಿ ಇಲ್ಲಿ Replicate ಆಗಿ ಮತ್ತೆ ಉದ್ಭವ ಆಗುತ್ತೆ. ಉದ್ಭವ ಆಗೋದು.
ಚಂದ್ರಶೇಖರ ಎಚ್. ಎನ್: ಉದ್ಭವ ಆಗು ರೀತಿ ಇದೆಯಲ್ಲ ಇದನ್ನ Prove ಆಗಿದೆ. Scientific Proven Fact ಇದು. So, Quantum Physics.
ಹೊಸ ದಿಗಂತ YouTube Channel ನ ಸಂದರ್ಶಕ: ಅಂದ್ರೆ ಏನಾದ್ರೂ ಮಾಡಿದ್ದಾರೆ ಸರ್ Physical Objects ಏನಾದರೂ ಮಾಡಿದ್ದಾರಾ?
ಚಂದ್ರಶೇಖರ ಎಚ್. ಎನ್: Electrons ಅಂದರೆ Quantum Level ಅಲ್ಲಿ ಮಾಡಿದ್ದಾರೆ. Quantum Level ನಲ್ಲಿ. It’s a known fact. ಒಂದು ಕಡೆಯಿಂದ Teleportation ಮಾಡಬಹುದು. ಒಂದು ಕಡೆಯಿಂದ ಮಾಯ ಆಗಿ ಇನ್ನೊಂದು Electron ಬರುತ್ತೆ. ಇದೆಲ್ಲ Known Facts. ಈ known Facts. Quantum ಅಂದಾಗ ಅಣು ಅಂತ ಹೇಳ್ತೀವಿ. “ರೇಣು ಅಣು ರೇಣು ತೃಣಕಾಷ್ಟ ರೇಣುಕ” ರೇಣುಕ ರೇಣು ಅಂದ್ರೆ ಕೂಡ ಅದು ಕೂಡ ತೃಣ. ರೇಣುಕ ರೇಣುಕ ಅಂತ ನಾವು ಹೇಳ್ತೀವಿ. ಆ ಸಣ್ಣ Particle Quantum Particle ಆಗುತ್ತಾರೆ. ಅಣಿಮ ಸಿದ್ಧಿಯನ್ನ ಬಳಸುತ್ತಾರೆ. ರೇಣುಕಾಚಾರ್ಯರು ಅಣಿಮಾ ಸಿದ್ಧಿಯನ್ನ ಬಳಸಿ Quantum Particle ಆಗಿ ಅಲ್ಲಿಂದ ಬಂದು ಇಲ್ಲಿ ಪ್ರಕಟ ಆಗಿದ್ದಾರೆ.
ಹೊಸ ದಿಗಂತ YouTube Channel ನ ಸಂದರ್ಶಕ: ಓಹೋ ಪ್ರಕಟ ಆಗಿದಾರೆ.
ಡಾ. ವಿಜಯಕುಮಾರ ಕಮ್ಮಾರ: ನಿನ್ನನ್ನು ಹೀಗೆ ಬಿಟ್ಟರೆ Internet ನಲ್ಲಿಯೇ ಮದುವೆ ಮಾಡಿಸಿ, Internet ನಲ್ಲಿಯೇ First Night ಮಾಡಿಸಿ, Internet ನಲ್ಲೇ ಮಗು ಹುಟ್ಟಿಸುತ್ತೀಯಾ. ಇಂಥ ಅವೈಜ್ಞಾನಿಕ ಚಿಂತನೆಗಳಿಗೆ ನಾವು ಉತ್ತರಾ ಹೇಳಬೇಕಾದ ಪರಿಸ್ಥಿತಿ. ಯಾಕೋ ಇದು ಅತಿಯಾಯ್ತಪಾ ಇವರದು.
ಇನ್ನು Quantum Tunnelling ಮತ್ತು Quantum Teleportation ಕುರಿತು ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳೋಣ.
Quantum Tunnelling ಎಂಬುದು ಒಂದು ಅದ್ಭುತವಾದ Quantum Physics ದ ವಿದ್ಯಮಾನವಾಗಿದೆ.
ಸರಳ ಅರ್ಥ: ಒಂದು ಸಣ್ಣ ಕಣವು (ಉದಾಹರಣೆಗೆ ಎಲೆಕ್ಟ್ರಾನ್) ತನಗಿಂತ ಹೆಚ್ಚಿನ ಶಕ್ತಿಯ ತಡೆಗೋಡೆಯನ್ನು (Potential Barrier) ದಾಟಲು ಸಾಧ್ಯವಾಗದಿದ್ದರೂ ಸಹ, ಆ ತಡೆಗೋಡೆಯ ಮೂಲಕ ಹಾದುಹೋಗುವ ವಿದ್ಯಮಾನವೇ Quantum Tunnelling.
ಮುಖ್ಯ ಅಂಶಗಳು:
- ಶಾಸ್ತ್ರೀಯ ಭೌತಶಾಸ್ತ್ರಕ್ಕೆ ವಿರುದ್ಧ: ಸಾಮಾನ್ಯ ಭೌತಶಾಸ್ತ್ರದ ಪ್ರಕಾರ (Classical Physics), ಒಂದು ಚೆಂಡು ಗೋಡೆಯನ್ನು ದಾಟಬೇಕಾದರೆ ಗೋಡೆಯ ಎತ್ತರಕ್ಕಿಂತ ಹೆಚ್ಚಿನ ಶಕ್ತಿ ಬೇಕು. ಆದರೆ, Quantum State ನಲ್ಲಿ, ಕಣಗಳು ತಡೆಗೋಡೆಯ ಮೇಲಿಂದ ಹೋಗುವ ಬದಲು ಅದರ ಮೂಲಕವೇ ಸುರಂಗ ಕೊರೆದು ಹೋದಂತೆ (Tunnel) ಆಚೆಗೆ ಹೋಗುತ್ತವೆ.
- ತರಂಗ-ಕಣ ದ್ವೈತತ್ವ (Wave-Particle Duality): ಈ ವಿದ್ಯಮಾನಕ್ಕೆ ಕಾರಣ ಕಣಗಳ ತರಂಗದಂತಹ ಗುಣಲಕ್ಷಣಗಳು. ಕಣದ ತರಂಗಾಂತರವು (Wave Function) ತಡೆಗೋಡೆಯ ಆಚೆಗೂ ಸ್ವಲ್ಪ ವಿಸ್ತರಿಸುವುದರಿಂದ, ಕಣವು ಆಚೆ ಬದಿಯಲ್ಲಿ ಇರುವ ಸಂಭವನೀಯತೆ (Probability) ಇರುತ್ತದೆ.
ಅಪ್ಲಿಕೇಶನ್ಗಳು:
- ಸ್ಕ್ಯಾನಿಂಗ್ ಟನಲಿಂಗ್ ಮೈಕ್ರೋಸ್ಕೋಪ್ (STM): ಪರಮಾಣುಗಳನ್ನು ನೋಡಲು ಮತ್ತು ಮೇಲ್ಮೈಗಳನ್ನು ಚಿತ್ರಿಸಲು ಇದನ್ನು ಬಳಸಲಾಗುತ್ತದೆ.
- ನ್ಯೂಕ್ಲಿಯರ್ ಫ್ಯೂಷನ್ (Nuclear Fusion): ಸೂರ್ಯನ ಮತ್ತು ನಕ್ಷತ್ರಗಳ ಶಕ್ತಿ ಉತ್ಪಾದನೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಸೂರ್ಯನ ಸುತ್ತಲೂ ಇರುವ Helium ಅಣುಗಳು ಅಗಾಧವಾದ ಶಾಖದಿಂದ ಸ್ಫೋಟಗೊಂಡಾಗ ಉತ್ಪಾದನೆ ಆಗುವ ಶಾಖ ಅಥವಾ ಉಷ್ಣ. ವೈಜ್ಞಾನಿಕವಾಗಿ ಇದನ್ನು Nuclear Bombardment ಅಂತಾರೆ.
- ಎಲೆಕ್ಟ್ರಾನಿಕ್ಸ್ (Electronics): Modern Transistors ಮತ್ತು Flash Memory ಗಳಲ್ಲಿ Tunnelling ಮುಖ್ಯ ಪಾತ್ರ ವಹಿಸುತ್ತದೆ.
ಸಾರಾಂಶವೆಂದರೆ, Quantum Tunnelling ಎಂದರೆ ಕಣಗಳು ತಮಗೆ ಅಸಾಧ್ಯವಾದಂತಹ ಅಡೆತಡೆ (Barrier) ಗಳನ್ನು ತರಂಗ ಗುಣದ ಮೂಲಕ ದಾಟುವ ಪ್ರಕ್ರಿಯೆ.
Quantum Teleportation ಎನ್ನುವುದು ಒಂದು ಸ್ಥಳದಲ್ಲಿರುವ ಕಣದ (Particle) ಕ್ವಾಂಟಮ್ ಸ್ಥಿತಿಯನ್ನು (Quantum state) ಭೌತಿಕವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸದೆ, ಮತ್ತೊಂದು ಸ್ಥಳದಲ್ಲಿರುವ ಕಣಕ್ಕೆ ವರ್ಗಾಯಿಸುವ ಒಂದು ತಂತ್ರಜ್ಞಾನವಾಗಿದೆ.
ಮುಖ್ಯ ಅಂಶಗಳು:
- ಮಾಹಿತಿ ವರ್ಗಾವಣೆ: ಇದು ಭೌತಿಕ ವಸ್ತುಗಳನ್ನು (ವಸ್ತುಗಳನ್ನು) ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸುವುದಿಲ್ಲ, ಬದಲಾಗಿ ಕೇವಲ “ಮಾಹಿತಿ’ ಯನ್ನು (Information) ವರ್ಗಾಯಿಸುತ್ತದೆ.
- Quantum Entanglement: ಈ ಪ್ರಕ್ರಿಯೆಯು “ಸಿಕ್ಕಿಹಾಕಿಕೊಂಡ” (Entangled) ಕಣಗಳನ್ನು ಬಳಸುತ್ತದೆ. ಅಂದರೆ, ಎರಡು ಕಣಗಳು ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ.
- ವೇಗ: Quantum Teleportation ಬೆಳಕಿನ ವೇಗಕ್ಕಿಂತ ವೇಗವಾಗಿ ಸಂಭವಿಸುವುದಿಲ್ಲ. ಮಾಹಿತಿಯನ್ನು ವರ್ಗಾಯಿಸಲು ಶಾಸ್ತ್ರೀಯ ಸಂವಹನ (Classical Communication)ದ ಅಗತ್ಯವಿರುತ್ತದೆ.
- ಬಳಕೆ: ಇದು ಮುಖ್ಯವಾಗಿ ಭವಿಷ್ಯದ ಕ್ವಾಂಟಮ್ ಸಂವಹನ (Quantum Communication) ಮತ್ತು Quantum Computing ನಲ್ಲಿ ಬಳಸಲ್ಪಡುತ್ತದೆ.
ಸರಳವಾಗಿ ಹೇಳುವುದಾದರೆ, ಇದು ಒಂದು ಸ್ಥಳದಲ್ಲಿರುವ ಮಾಹಿತಿಯನ್ನು ಅಳಿಸಿ, ಅದೇ ಮಾಹಿತಿಯನ್ನು ತಕ್ಷಣವೇ ಮತ್ತೊಂದು ದೂರದ ಸ್ಥಳದಲ್ಲಿ ಪುನಃ ಸೃಷ್ಟಿಸುವ ಪ್ರಕ್ರಿಯೆ.
ವಿಜ್ಞಾನಿ ಚಂದ್ರಶೇಖರ ಅವರೆ, ಮೇಲೆ ತಿಳಿಸಿದಂತೆ ಯಾವ ರೂಪದಲ್ಲಿ, ಯಾವ ವಿಜ್ಞಾನದ ಅಳತೆಗೋಲಲ್ಲಿ ರೇಣುಕರೆಂಬ Biological Human Being ಉದ್ಭವ ಆದರಂತಾ ಸ್ವಲ್ಪ ವಿವರಣೆ ಕೊಡು ಮಹಾನುನುಭಾವ. ಯಾವ Quantum Leap ನಿಂದ, ಯಾವ Quantum Gap ನಿಂದ ಕಲ್ಲಿನಲ್ಲಿ Human Cells ಉತ್ಪಾದನೆ ಅಥವಾ ಉದ್ಭವ ಆದವು ಅಂತಾ explain ಮಾಡಪಾ ಪ್ರಪಂಚದ ಅತಿ ದೊಡ್ಡ ವಿಜ್ಞಾನಿ ಅನಿಸಿಕೊಂಡಂಥ ನೀನು ಹೇಳಪಾ ದೊರೆ. ಹಾಗಾಗಿ ಮನುಷ್ಯರ ಜೀವಕೋಶಗಳು ಅಥವಾ Human Cells ಯಾವ ವೈಜ್ಞಾನಿಕ ವಿಧಿ-ವಿಧಾನದಿಂದ ಅಲ್ಲೆಲ್ಲೋ ಮಾಯವಾಗಿ ಇನ್ನೆಲ್ಲೋ ಪ್ರಕಟವಾಗುವ ಪ್ರಕ್ರಿಯೆಯನ್ನು ಯಾವ ವೈಜ್ಞಾನಿಕ ಮಾನದಂಡದಿಂದ ಪ್ರತಿಪಾದನೆ ಆಗುತ್ತವೆ ಎಂದು ಸ್ವಲ್ಪ ವಿವರಣೆ ನೀಡು ಮಹಾನುಭಾವ. ನೀನು ಇಲ್ಲಿ Promote ಮಾಡುವ ಎಲ್ಲ Scientific Theory ಗಳು ಕೇವಲ ದ್ರವ್ಯ (Matter), ಶಕ್ತಿ (Energy), ಬಲ (Force), ಮತ್ತು ಚಲನೆ (Velocity) ಯನ್ನು ತಿಳಿಸುತ್ತವೆಯೇ ಹೊರತು ಜೀವಕೋಶಗಳ ಸಾಗಾಣಿಕೆ ನಿನ್ನ ಭಾಷೆಯಲ್ಲಿ ಹೇಳುವುದಾದರೆ Teleportation ದಿಂದ ಇಡೀ ಮನುಷ್ಯನ ದೇಹ ಎಲ್ಲೋ ಮಾಯವಾಗಿ ಮತ್ತಿನ್ನೆಲ್ಲೋ ಇಡೀ ಮಾನವನ ದೇಹ ಪ್ರಕಟವಾಗುವುದಕ್ಕೆ ಸಾಧ್ಯಾನೇ ಇಲ್ಲ.
ಕಲ್ಲಿನಲ್ಲಿ ಕೋಶ (Human Cells) ದಲ್ಲಿನ ಪ್ರೋಟೀನ್ಗಳು, ನ್ಯೂಕ್ಲಿಯಿಕ್ ಆಮ್ಲಗಳು (DNA/RNA), ಲಿಪಿಡ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಕಿಣ್ವಗಳ (enzymes) ಕಾರ್ಯ ಚಟುವಟಿಕೆಗಳು ಕಂಡು ಬರುತ್ತವೆಯೇ? ನೀನೇ ಹೇಳಿದಂಗೆ ಕಲ್ಲಲ್ಲಿ ಇರುವಂತದ್ದು Silicon, Silicon Dioxide. ನಮ್ಮಲ್ಲಿ Carbon, Hydrogen, Nitrogen ಇರಲ್ಲ. ಹಾಗಾದರೆ ಕಲ್ಲಿನಲ್ಲಿ ಕಂಡು ಬರುವ Silicon, Silicon Dioxide ಯಾವ ಸ್ಥಿತಿ ರೂಪಾಂತರ ಹೊಂದಿ ಅಥವಾ ನಿನ್ನ Theory ಯನ್ನೇ ಅವಲಂಬಿಸುವುದಾದರೆ Quantum Physics ನ ಯಾವ Quantum Leap ಆಧರಿಸಿ ಹೇಗೆ Quantum Tunnelling ಮುಖಾಂತರ Electron Teleportation ಆಗಿ ಕೋಶದಲ್ಲಿನ ಪ್ರೋಟೀನ್ಗಳು, ನ್ಯೂಕ್ಲಿಯಿಕ್ ಆಮ್ಲಗಳು (DNA/RNA), ಲಿಪಿಡ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಕಿಣ್ವಗಳು (enzymes) ರೇಣುಕರ ದೇಹದ ರೂಪದಲ್ಲಿ Convert ಅಥವಾ ಪ್ರಕಟವಾದವು ಎನ್ನುವುದನ್ನು ವೈಜ್ಞಾನಿಕವಾಗಿ ನಿರೂಪಣೆ ಮಾಡರಿಪಾ. ಯಾಕಂದರೆ ನೀನು ವೈಜ್ಞಾನಿಕವಾಗಿ ರೇಣುಕರು ಹೇಗೆ ಕಲ್ಲಲ್ಲಿ ಪ್ರಕಟವಾದರು ಎನ್ನುವುದನ್ನು Scientific ಆಗಿ prove ಮಾಡತೀನಿ ಅಂತಾ ಹೇಳತಾ ಇದೀಯಾ. ಮೇಲೆ ತಿಳಿಸಿದ ಅಷ್ಟೂ Cell Biology Science ಕಲ್ಲಲ್ಲಿ ಹೇಗೆ ಒಳಗೊಂಡಿದೆ ಎನ್ನುವುದು ನನ್ನ ಮೆದುಳಿಗೆ ನಿಲುಕತಾ ಇಲ್ಲಾ. Because you talk about So many pure physics theories which common man cannot understand or indulge in it.
ಇನ್ನೂ ಅರ್ಥಾ ಆಗಲಿಲ್ಲಾ ಅಂದರೆ ನಮ್ಮಲ್ಲಿ ಅತ್ಯಂತ ಶ್ರೇಷ್ಠ ಶಸ್ತ್ರ ಚಿಕಿತ್ಸಕರಿಂದ, ಶ್ರೇಷ್ಠ Physicians ಗಳಿಂದ Human Anatomy ಬಗ್ಗೆ ನಿನಗೆ Educate ಮಾಡಿಸುವ ವ್ಯವಸ್ಥೆಯನ್ನೂ ಕೂಡ ಮಾಡುತ್ತೇವೆ. ನಮ್ಮಲ್ಲಿ Galaxy of Doctors ಗಳಿದ್ದಾರೆ. ಇಂಥಾ ಎಡಬಿಡಂಗಿ ವೈಜ್ಞಾನಿಕ ಚಿಂತನೆಗಳನ್ನು ಹರಿಬಿಟ್ಟರೆ ಹೇಗೆ.
AI Scientist ಚಂದ್ರಶೇಖರ ಅವರೆ Quantum Physics ನಲ್ಲಿ 32 ವರ್ಷ ಅಧ್ಯಯನ ಮಾಡಿರೋ ನನ್ನ ತಲೇನೇ ಗಿರ್ರನೆ ತಿರಗತಾ ಇದೆ. ನನಗೇ ಹೀಗೆ ಆಗಬೇಕಾದರೆ ಇನ್ನು ನಿನ್ನೆದುರಿಗೆ ಕುಳಿತಂಥಾ ಸಂದರ್ಶಕನಿಗೆ ಮತ್ತು ಕನ್ನಡ ಪಂಡಿತರಿಗೆ ಏನಾಗಬೇಡಾ? ಯಾವುದಾದರೂ ಜೀವಿ Electron ಗೆ Convert ಆಗಿ ಅಲ್ಲೆಲ್ಲೋ ಮಾಯವಾಗಿ Quantum Tunnelling ಮೂಲಕ ಕಲ್ಲಲ್ಲಿ ಪ್ರಕಟವಾಗೋದಕ್ಕೆ ಅಥವಾ ಹುಟ್ಟೋದಕ್ಕೆ ಸಾಧ್ಯಾನಾ? ಯಾವ ಸೀಮೆ Scientific Theory ಪಾ ಇದು? Physics ನ ಮೂಲಭೂತ ಸಿದ್ಧಾಂತಗಳಿಗೂ Human Biology ಸಿದ್ಧಾಂತಗಳಿಗೂ ಎಲ್ಲಿಯ ಹೋಲಿಕೆ ಎಲ್ಲಿಯ ಸಿದ್ಧಾಂತದ ನಿರೂಪಣೆ. ಬಸವಾ ಬಸವಾ ಇಂಥ ಅವೈಜ್ಞಾನಿಕತೆಯನ್ನು ಕಟ್ಟಿಕೊಂಡು ಅದು ಹೆಂಗೆ ಸಿದ್ಧಾಂತವನ್ನು Promote ಮಾಡತಾರೋ ಗೊತ್ತಿಲ್ಲಾ. ಬಸವಾದಿ ಶರಣರೇ ನಮ್ಮನ್ನು ಕಾಪಾಡಬೇಕು.
Quantum Teleportation ನಲ್ಲಿ ಕೇವಲ Information Transfer ಆಗುತ್ತೆ ಹೊರತು There is no physical movement ಅಥವಾ ಕೇವಲ Communication ಮಾತ್ರ. ಇಂಥ Clear Cut ಸಿದ್ಧಾಂತ ಇರುವಾಗ ಅದ್ಯಾವ ರೂಪದಲ್ಲಿ ರೇಣುಕರು ಕಲ್ಲಿನಲ್ಲಿ ಹುಟ್ಟಿದರೋ ಗೊತ್ತಿಲ್ಲಾ. I have given up my whole lot of my studies and surrender before you for your highly disturbed and unscientific remarks.
ಚಂದ್ರಶೇಖರ ಎಚ್. ಎನ್: ಯೋಗದಲ್ಲೂ ಕೂಡ ನಾವು ಅಣಿಮ ಸಿದ್ದಿ ರೇಣುಕರು ಅಂತ ಹೇಳಬೇಕಾದ್ರೆ ಅಣಿಮ ಅಂತ ಹೇಳಿದ್ರೆ ಅಣು ಆಗೋದು ಅನ್ನೋದೇ ಅಲ್ಲಿ ಇರುವಂತದ್ದು. ಅಣಿಮ ಮಹಿಮ ಗರಿಮ ಲಗಿಮ ಅಂತ ಹೇಳಿ ಎಂಟು ಸಿದ್ಧಿಗಳು ಬರ್ತಾ ಹೋಗುತ್ತೆ. ಅಣಿಮ ಅಂತ ಹೇಳಿದ್ರೆ ಅಣುವಷ್ಟು ಆಗುವಂತದ್ದು. ಇನ್ನು ರೇಣು ಆಗ್ತೀರಾ. Quantum Particle ನಾವು ಹೇಳ್ತಾ ಇರೋದು ಬೇರೆ ಏನಲ್ಲ. Quantum Particle ರೂಪ ತಗೊಂಡು ಆ ಮೂಲದಲ್ಲಿ ಇದ್ದಂತವರು Quantum Particle ರೂಪದಲ್ಲಿ ಲಿಂಗದಿಂದ ಪ್ರಕಟ ಆದ್ರು ಅಂತ ಇರುವಂತದ್ದು.
ಡಾ. ವಿಜಯಕುಮಾರ ಕಮ್ಮಾರ: ಸೂಪರ್ ಗುರು, ನೀನು ಸಾಮಾನ್ಯನಲ್ಲ. ಇಲ್ಲಿ ಮತ್ತೆ ನಮ್ಮನ್ನು ವಿಭಿನ್ನ ದಿಕ್ಕಿನಲ್ಲಿ ಕರೆದುಕೊಂಡು ಹೋಗತಾ ಇದೀಯಾ. ಎಂಟು ಸಿದ್ಧಿಗಳನ್ನು ಉಲ್ಲೇಖಿಸುತ್ತಾ ರೇಣುಕರು ಅಣುವಿನ ರೂಪದಲ್ಲಿ ಅಪ್ರಕಟವಾಗಿ Quantum Tunnelling ಮೂಲಕ Teleportation ಆಗಿ ಮಹಿಮಾ ಅಂದರೆ ಇಡೀ ದೇಹರೂಪದಲ್ಲಿ ಕಲ್ಲಿನಲ್ಲಿ ರೇಣುಕರಾಗಿ ಪ್ರಕಟ ಆಗತಾರೆ ಅಂತಾ ಹೇಳತಾ ಇದೀರಾ. Fine, Fantastic & Beautiful Argument. ಹಾಗಾದರೆ ಈ ಎಂಟು ಸಿದ್ಧಿಗಳು ಯಾವುವು ಅಂತ ಸ್ವಲ್ಪ ತಿಳಿದುಕೊಳ್ಳೋಣ. ಆಮೇಲೆ ರೇಣುಕರ Teleportation ಬಗ್ಗೆ ಮಾತಾಡೋಣ.
ಅಷ್ಟಸಿದ್ಧಿಗಳು (8 ಶಕ್ತಿಗಳು) ಧ್ಯಾನ ಮತ್ತು ಯೋಗಾಭ್ಯಾಸದ ಮೂಲಕ ಸಾಧಕರು ಪಡೆಯುವ ಅಲೌಕಿಕ ಶಕ್ತಿಗಳು. ಇದು ಯೋಗಶಾಸ್ತ್ರದಲ್ಲಿ ಪ್ರತಿಪಾದನೆಯಾದಂಥ ವಿಷಯ.
ಅಷ್ಟಸಿದ್ಧಿಗಳು:
- ಅಣಿಮಾ: ಪರಮಾಣುವಿನಷ್ಟು ಅತಿ ಚಿಕ್ಕದಾಗುವ ಸಾಮರ್ಥ್ಯ.
- ಮಹಿಮಾ: ಅನಂತವಾಗಿ ದೊಡ್ಡದಾಗುವ (ವಿಶ್ವರೂಪ) ಸಾಮರ್ಥ್ಯ.
- ಲಘಿಮಾ: ತೂಕವಿಲ್ಲದಷ್ಟು ಹಗುರವಾಗುವ ಸಾಮರ್ಥ್ಯ.
- ಗರಿಮಾ: ಅತಿಯಾದ ಭಾರವಾಗುವ ಸಾಮರ್ಥ್ಯ.
- ಪ್ರಾಪ್ತಿ: ಎಲ್ಲಿಗೆ ಬೇಕಾದರೂ ತಲುಪುವ ಅಥವಾ ಯಾವುದೇ ವಸ್ತುವನ್ನು ಪಡೆಯುವ ಶಕ್ತಿ.
- ಪ್ರಾಕಾಮ್ಯ: ಬಯಸಿದ್ದನ್ನು ಸಾಧಿಸುವ ಅಥವಾ ಇಚ್ಛೆಯಂತೆ ಬದುಕುವ ಶಕ್ತಿ.
- ಈಶಿತ್ವ: ಪ್ರಕೃತಿಯ ಅಂಶಗಳ ಮೇಲೆ (ನಿಸರ್ಗದ ಮೇಲೆ) ಸಂಪೂರ್ಣ ನಿಯಂತ್ರಣ ಹೊಂದುವ ಶಕ್ತಿ.
- ವಶಿತ್ವ: ಇತರರನ್ನು ಅಥವಾ ಯಾವುದೇ ಜೀವಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಕ್ತಿ.
ಈ ಶಕ್ತಿಗಳನ್ನು ಯೋಗದ ಉನ್ನತ ಸ್ಥಿತಿಯಲ್ಲಿ ಸಾಧಕರು ಗಳಿಸುತ್ತಾರೆ.
ಭಾರತೀಯ ಯೋಗಶಾಸ್ತ್ರವನ್ನು ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಯೋಗಾಸನವನ್ನು ಅಳವಡಿಸಿಕೊಂಡು ನಮಗೆ ಮಾದರಿಯಾದವರು ಹಾಗೂ ತಮ್ಮ ಬದುಕಿನುದ್ದಕ್ಕೂ ಯೋಗಾಭ್ಯಾಸದಿಂದ ಶರೀರವನ್ನು ಚಿನ್ನದಂತೆ ಕಾಪಾಡಿಕೊಂಡು ಬಂದಿರುವ ಮಹನೀಯರ ಪಟ್ಟಿಯೂ ಕೂಡ ಬಹಳ ದೊಡ್ಡದಿದೆ. ಯೋಗಾಭ್ಯಾಸದ ಮಹತ್ವದ ಬಗ್ಗೆ ನಮಗೆಲ್ಲರಿಗೂ ಅರಿವು ಹಾಗೂ ಹೆಮ್ಮೆಯಿದೆ.
ಆದರೆ ಇಂದಿನ ಆಧುನಿಕ ವಿಜ್ಞಾನ ಮತ್ತು ವೈಚಾರಿಕತೆಯ ಕಾಲಘಟ್ಟದಲ್ಲಿ ಮೇಲೆ ಹೇಳಿದ ಅಷ್ಟಸಿದ್ಧಿಗಳನ್ನು ಪ್ರಾಯೋಗಿಕವಾಗಿ ಸಂಶೋಧಿಸದೇ ಒಪ್ಪಿಕೊಳ್ಳುವುದು ಕಷ್ಟ. ಯಾರಾದರೂ Practical ಆಗಿ ಮಾಡಿ ತೋರಿಸಿದರೆ ಒಪ್ಪಿಕೊಳ್ಳಬಹುದು. ವಿಜ್ಞಾನಿ ಚಂದ್ರಶೇಖರ ಅವರೆ ಇಂಥ Theory ಯನ್ನು ಉಲ್ಲೇಖಿಸಿರುವ ತಾವೇ ಈ ಅಷ್ಟಸಿದ್ಧಿಗಳನ್ನು ಪ್ರಾಯೋಗಿಕವಾಗಿ ತೋರಿಸಿಬಿಡಿ. ನಾವೆಲ್ಲರೂ ರೇಣುಕರು ಕಲ್ಲಿನಲ್ಲಿ ಪ್ರಕಟವಾದರು ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲಿ ಅಷ್ಟಸಿದ್ಧಿಗಳು ಮುಖ್ಯವಾದ Subject ಅಲ್ಲಾ, ರೇಣುಕರು ಕಲ್ಲಲ್ಲಿ ಹೇಗೆ ಪ್ರಕಟವಾದರು ಎನ್ನುವುದು ಮುಖ್ಯ. ಯಾಕಂದರೆ ಹೇಳೀ ಕೇಳೀ ನೀವು Scientist. Everything is empirical study ಅಂತಾನೂ ನಿನಗೆ ಗೊತ್ತು. So, without the scientific evidence or proof ನಾವು ಒಪ್ಪಿಕೊಳ್ಳಲು ತಯಾರಿಲ್ಲಾ. Please come with the scientific Physical proof as early as possible before it melts down.
ಇರಲಿ, ಇವರ Scientific Level ಗೆ ಒಂದು ಪ್ರಶ್ನೆ. ಇಂಥ ಅಗಾಧ ಸಿದ್ಧಿಯನ್ನು ಮಕ್ಕಳಿಲ್ಲದವರಿಗೆ ಅಣಿಮಾ ಮಹಿಮಾ ಸಿದ್ಧಿತಂತ್ರದಿಂದ ಕಲ್ಲನ್ನು ಬಳಸಿ Quantum Teleportation ಮೂಲಕ ಮಕ್ಕಳನ್ನು ಕೊಡಬಹುದಲ್ಲವೇ? ಯಾಕೆ ಮದುವೆ, ಮೊದಲನೇ ರಾತ್ರಿ, 9 ತಿಂಗಳು ಗರ್ಭದಲ್ಲಿ ಹೊತ್ತುಕೊಂಡು ತಿರುಗುವ ತೊಂದರೆ, ಹೆರಿಗೆಯಂತಹ ಅಪಾರವಾದ ನೋವಿನ ಅನುಭವ ಯಾಕೆ ಬೇಕು? Simple Quantum Physics ಬಳಸಿ ಪ್ರಬಲ ರಾಷ್ಟ್ರದ ಅಧ್ಯಕ್ಷನನ್ನೋ, Space Scientist ನಂಥ ಮಹಾನ್ ವಿಜ್ಞಾನಿಯನ್ನೋ, Nobel Laurite ನ್ನೋ, Hollywood ನಟನಂತಹ ಸ್ಫುರದ್ರೂಪಿ ಮಗುವನ್ನೋ ಪಡೆಯಬಹುದಲ್ಲವೇ? ಯಾಕೆ ವೀರಶೈವ ಮತ್ತು ವೈದಿಕ ವಿಜ್ಞಾನಿಗಳು ಈ ವಿಜ್ಞಾನವನ್ನು ಬಳಸಬಾರದು? ಎಲ್ಲವೂ ಛಕ್ಕಂತ ಕ್ಷಣಾರ್ಧದಲ್ಲಿ ಮಗುವನ್ನು ಪಡೆಯಬಹುದು ಮತ್ತು ನೇರವಾಗಿ 20 ವಯಸ್ಸಿನ ಮಗುವನ್ನು ಅಯೋನಿ ಮೂಲಕ Direct ಆಗಿ Download ಮಾಡಿಕೊಳ್ಳಬಹುದು. ಎಂಥ ಸಾವ್ ಮಾರಾಯರೇ, ಚಂದ್ರಶೇಖರನಂತಹ ವಿಜ್ಞಾನಿ ಅಂತ ಹೇಳಿಕೊಳ್ಳುವವರಿಗೆ ನಾವು ಉತ್ತರ ಕೊಡಬೇಕಾಗಿ ಬಂದಿರುವುದು ಮಂಡೆ ಬಿಸಿ ಮತ್ತು ವಿಪರ್ಯಾಸ.
ಹೊಸ ದಿಗಂತ YouTube Channel ನ ಸಂದರ್ಶಕ: ಇದು ಲಿಂಗ ಎಲ್ಲಿ ಲಿಂಗ ಹೇಳಿ ಸರ್ ಅದು.
ಚಂದ್ರಶೇಖರ ಎಚ್. ಎನ್: ಇದು ಕೊಲ್ಲಿಪಾಕಿಯಲ್ಲಿ ಸೋಮೇಶ್ವರಲಿಂಗ ಅಂತ ಬರುತ್ತೆ. ಏನು ನಮ್ಮ ಒಂದು ತ್ರಿಲಿಂಗ ದೇಶ ಅಂತ ತೆಲಂಗಾಣ ಅಂತ ಇವತ್ತು ಕರೀತೇವೆ. ಅದರ Actual ತ್ರಿಲಿಂಗ ದೇಶ. ತೆಲಂಗ ಆಗಿದೆ ಅದು. ತ್ರಿಲಿಂಗ ದೇಶ. ಮೂರು ಲಿಂಗಗಳು ಬರುತ್ತವೆ. ಮೂರುಗಳು ಉದ್ಭವ, ಮೂರು ಲಿಂಗಗಳು ಬರುತ್ತೆ. ಅನಾದಿ ಕಾಲದ ಅದು ಮೂರು ಲಿಂಗಕ್ಕೆ Famous. ಹಂಗಾಗಿ ತ್ರಿಲಿಂಗ ದೇಶ ಅಂತ. ತ್ರಿಲಿಂಗ ದೇಶದಲ್ಲಿ ತೆಲಂಗಾಣದ ಇವತ್ತಿನ ತೆಲಂಗಾಣದಲ್ಲಿ ಕೊಲ್ಲಿಪಾಕಿ ಅಂತ. ಆ ಕೊಲ್ಲಿಪಾಕಿಯ ಸೋಮೇಶ್ವರಲಿಂಗ ಅದರಿಂದ ಬರ್ತಾರೆ. ಅಂದ್ರೆ ಅಲ್ಲಿ ನಾವು ಪಂಚಬ್ರಹ್ಮ ಪರಮಾತ್ಮ ಅದರ ಸ್ವರೂಪನೇ ಲಿಂಗ. ಆ ಲಿಂಗದಿಂದ ಪ್ರಕಟ ಆಗಿ ಬರ್ತಾರೆ. ಹಿಂಗೆ ಪಂಚಾಚಾರ್ಯ.
ಡಾ. ವಿಜಯಕುಮಾರ ಕಮ್ಮಾರ: ಕಲಬುರಗಿಯ ಪ್ರಖ್ಯಾತ ವಚನ ಸಾಹಿತ್ಯ ವಿದ್ವಾಂಸರಾದ ಹಾಗೂ ಶರಣ ಸ್ಮಾರಕಗಳನ್ನು ಕುರಿತು ಅಧ್ಯಯನ ಮಾಡಿದ ಡಾ. ವೀರಣ್ಣ ದಂಡೆಯವರು ಕೊಲ್ಲಿಪಾಕಿಯ ಸೋಮೇಶ್ವರಲಿಂಗವನ್ನು ಕುರಿತು ಕ್ಷೇತ್ರಕಾರ್ಯವನ್ನು ಮಾಡಿದ ವಿಡಿಯೋ ತಮ್ಮೆಲ್ಲರ ಗಮನಕ್ಕಾಗಿ ಇಲ್ಲಿ ಲಗತ್ತಿಸಲಾಗಿದೆ ಸಂಪೂರ್ಣವಾದ ವಿಸ್ತೃತ ಮಾಹಿತಿಯನ್ನು ಪರಾಮರ್ಶಿಸಬಹುದು.
ಕೊಲ್ಲಿಪಾಕಿ ರೇವಣಸಿದ್ಧ-ಡಾ. ವೀರಣ್ಣ ದಂಡೆ.
ಹೊಸ ದಿಗಂತ YouTube Channel ನ ಸಂದರ್ಶಕ: ಅದು ಪ್ರಕಟ ಆಗಕ್ಕೆ ಕಾರಣ ಏನಾದರೂ ಹಿನ್ನೆಲೆ ಇದೆ ಸರ್ ಏನಕ್ಕೆ ಅಂತ ಏನಾದರು?
ಚಂದ್ರಶೇಖರ ಎಚ್. ಎನ್: ಅದಕ್ಕೆ ಹಲವಾರು ವಿವರಣೆಗಳಿವೆ. ಇದೊಂದು ನಿಮಿತ್ತ ಕಾರಣ ಅಂತ ಹೇಳ್ತೀವಿ. ಇದು ಒಂದು ಒಂದೊಂದು ಯುಗದಲ್ಲಿ ಒಂದೊಂದು ಸಾರಿ ಅಂತ ಕೇಳಿದ್ರು ಹಲವಾರು 11 ಲಕ್ಷದ 60 ಸಾವಿರ ಬಾರಿ ಪ್ರಕಟ ಆಗಬೇಕು. ನಾವು ಪೌರಾಣಿಕವಾಗಿ ಲೆಕ್ಕ ಹಾಕೊಂಡು ಬಂದರೆ ಒಂದು ಸಾರಿ 11 ಲಕ್ಷಕ್ಕಿಂತ ಹೆಚ್ಚು ಬಾರಿ ಪ್ರಕಟ ಆಗಿದ್ದಾರೆ. ಇದೊಂದು ಪ್ರಕಟ. ಇದೊಂದು ಪ್ರಕಟ. ಒಂದೊಂದು ಸಾರಿ ಪ್ರಕಟ ಆಗಕ್ಕೆ ಒಂದೊಂದು ನಿಮಿತ್ತ ಕಾರಣಗಳು ಏನೋ ಒಂದು ಕಾರಣ ಬೇಕು. ಒಂದೊಂದು ನಿಮಿತ್ತ ಕಾರಣಗಳು ಏನೋ ಒಂದು ಕಾರಣ ಬೇಕು. ಹೌದು, ಅಂದ್ರೆ ಕಾರಣ ಇಲ್ಲದೆ ಬರಲ್ಲ. ಕಾರಣ ಏನೋ ಒಂದೊಂದು ಕಾರಣ. ಈ ಬಾರಿ ಒಂದು ಕಾರಣ ಕೂಡ. ಏನೋ ಲೋಕ ಉದ್ದಾರದ ಏನೋ ಒಂದು ಕಾರಣ. ಲೋಕದ್ಧಾರದ ಕಾರಣ ಇಟ್ಕೊಂಡು ಬರ್ತಾ ಇರ್ತಾರೆ. ಆ ಒಂದು ಇದಷ್ಟೇ ಪ್ರಕ್ರಿಯೆ. ಇದಕ್ಕೆ ಅಷ್ಟು ಮಹತ್ವ ಇಲ್ಲ. ಯಾವ ಕಾರಣದಿಂದ ಬಂದ್ರು ಅದಕ್ಕೆ ಮಹತ್ವ ಇಲ್ಲ. ಮೊದಲು ಉಗಮ ಆಯ್ತು. ಅದು Important.
ಡಾ. ವಿಜಯಕುಮಾರ ಕಮ್ಮಾರ: ನೋಡಿ … ಎಲ್ಲಾ Scientific Theory ಮುಗಿದು ನಿಮಿತ್ತ ಕಾರಣವೆಂಬ ವೈದಿಕ ಮಾತುಗಳು ಬಂದು ಮತ್ತೆ ಮೂಢನಂಬಿಕೆಯ ಕೂಪಕ್ಕೆ ತಳ್ಳುತ್ತಾನೆ ಈ ಚಂದ್ರಶೇಖರ ಮಹಾಶಯ. ಹಾಗಾದರೆ ನಿಮಿತ್ತ ಕಾರಣವೆಂದರೇನು?
ನಿಮಿತ್ತ ಕಾರಣ (Efficient Cause) ಎಂದರೆ ಒಂದು ವಸ್ತುವನ್ನು ಸೃಷ್ಟಿಸಲು ಅಥವಾ ಕಾರ್ಯವನ್ನು ಸಾಧಿಸಲು ಅಗತ್ಯವಿರುವ ಬುದ್ಧಿವಂತ ಅಥವಾ ಸಮರ್ಥ ಕಾರಣ. ಇದು ಕಚ್ಚಾ ವಸ್ತುವಲ್ಲ, ಬದಲಾಗಿ ಆ ವಸ್ತುವಿಗೆ ರೂಪ ನೀಡುವ ಚೇತನ. ಉದಾಹರಣೆಗೆ, ಮಡಕೆ ಮಾಡಲು ಮಣ್ಣು ಉಪಾದಾನ ಕಾರಣವಾದರೆ, ಅದನ್ನು ಮಾಡುವ ಕುಂಬಾರನು “ನಿಮಿತ್ತ ಕಾರಣ”.
ನಿಮಿತ್ತ ಕಾರಣದ ಪ್ರಮುಖ ವಿವರಗಳು:
- ವೇದಾಂತ/ದರ್ಶನ: ಭಾರತೀಯ ದರ್ಶನಗಳಲ್ಲಿ, ಜಗತ್ತಿನ ಸೃಷ್ಟಿಗೆ ಈಶ್ವರನನ್ನು ನಿಮಿತ್ತ ಕಾರಣವೆಂದು ಕರೆಯಲಾಗುತ್ತದೆ.
- ವ್ಯತ್ಯಾಸ: ಉಪಾದಾನ ಕಾರಣ (ವಸ್ತು) ಮತ್ತು ನಿಮಿತ್ತ ಕಾರಣ (ಕರ್ತೃ) ಎಂಬ ಎರಡು ಮುಖ್ಯ ಕಾರಣಗಳಲ್ಲಿ ಇದು ಒಂದು.
ಒಟ್ಟಾರೆಯಾಗಿ, ಒಂದು ಕಾರ್ಯವನ್ನು ನಿರ್ವಹಿಸಲು ಪ್ರೇರೇಪಿಸುವ ಅಥವಾ ರೂಪ ಕೊಡುವ ಸಮರ್ಥ ವ್ಯಕ್ತಿ ಅಥವಾ ಶಕ್ತಿಯೇ ನಿಮಿತ್ತ ಕಾರಣ.
ನಿಮ್ಮಿತ್ತ ಕಾರಣದ ವ್ಯಾಖ್ಯಾನದಲ್ಲಿಯೇ ಇದು “ಕಚ್ಚಾ ವಸ್ತುವಲ್ಲ, ಬದಲಾಗಿ ಆ ವಸ್ತುವಿಗೆ ರೂಪ ನೀಡುವ ಚೇತನ” ಅಂತ ಹೇಳತಾರೆ. ನಿಮಿತ್ತ ಕಾರಣದಲ್ಲಿ ಯಾವ Cell Bio-Chemistry ಸಿದ್ಧಾಂತವೂ ಇಲ್ಲ. ಅದು ಕೇವಲ ವಸ್ತು (Matter) ಮತ್ತು ಚೈತನ್ಯ ಅಂದರೆ ಶಕ್ತಿ (Energy) ಅಂತ ಪ್ರತಿಪಾದನೆ ಮಾಡಿದ್ದಾರೆ. ಇದರ ಜೊತೆಗೆ ವಿಜ್ಞಾನಿ ಚಂದ್ರಶೇಖರ ಹೇಳೋದು “11 ಲಕ್ಷದ 60 ಸಾವಿರ ಬಾರಿ ಪ್ರಕಟ ಆಗಬೇಕು. ನಾವು ಪೌರಾಣಿಕವಾಗಿ ಲೆಕ್ಕ ಹಾಕೊಂಡು ಬಂದರೆ ಒಂದು ಸಾರಿ 11 ಲಕ್ಷಕ್ಕಿಂತ ಹೆಚ್ಚು ಬಾರಿ ಪ್ರಕಟ ಆಗಿದ್ದಾರೆ ಅಂತಾ”. ಎಲ್ಲಿ ಇಷ್ಟು ಸುದೀರ್ಘ ಪ್ರಕಟಗಳ ಸಂಖ್ಯೆಯನ್ನು ದಾಖಲಿಸಲಾಗಿದೆ? ಯಾವ Documentary Evidence ಇದೆ? ಇಷ್ಟೊಂದು ಕರಾರುವಾಕ್ಕಾಗಿರುವ ಸಂಖ್ಯಾ ಪ್ರಮಾಣವನ್ನು ಯಾವ ರೂಪದಲ್ಲಿ ಸಂಗ್ರಹಿಸಿ ಇಡಲಾಗಿದೆ? ಬಸವಾ ಬಸವಾ ಸುಳ್ಳು ಹೇಳೋದಕ್ಕೂ ಒಂದು Level ಬೇಡವಾ ಸರ್.
ಲೋಕೋದ್ಧಾರದ ಕಾರಣ ಅಂತಾನೆ. ನಿಮಿತ್ತ ಕಾರಣ Important ಅಲ್ಲಾ ಅಂತಾನೆ. ಪ್ರಕಟ ಆಗೋದು Important ಅಂತಾನೆ. ಯಾವುದು ಸತ್ಯ ಸ್ವಾಮಿ? ಪ್ರಕಟ ಆಗೋದು ಸತ್ಯಾನಾ? ಲೋಕೋದ್ಧಾರ ಸತ್ಯಾನಾ? ಇವೆರಡೂ yes ಅಂದರೆ ವೈಜ್ಞಾನಿಕವಾಗಿ Cell Bio-Chemistry ಮೂಲಕ Prove ಮಾಡಿ. ಯಾವುದಾದರೂ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳಬೇಕಲ್ಲಾ? ಯಾವುದೂ ಇಲ್ಲವೆಂದರೆ ಯಪ್ಪಾ ಇಂಥವರಿಗೆ ಹೇಗೆ ಉತ್ತರಾ ಕೊಡೋದು ತಿಳಿತಾ ಇಲ್ಲಾ.
ಚಂದ್ರಶೇಖರ ಎಚ್. ಎನ್: ಮತ್ತೆ ಇಲ್ಲಿ ಅಣಿಮಾ ಸಿದ್ಧಿಯನ್ನು ಬಳಸಿ ಅವರು ಬರ್ತಾರೆ. ಇದನ್ನ ವಚನಕಾರರು ಕೂಡ ಹಲವಾರು ಕಡೆ ಸ್ಪಷ್ಟ ಪಡಿಸಿದ್ದಾರೆ.
ಹೊಸ ದಿಗಂತ YouTube Channel ನ ಸಂದರ್ಶಕ: ಏನು, ಅಂದ್ರೆ ಸ್ಪಷ್ಟ ಪಡಿಸಿದ್ದಾರೆ ಅಂದ್ರೆ ಒಪ್ಪಿದ್ದಾರೆ ಅಂತನ ಅಥವಾ.
ಚಂದ್ರಶೇಖರ ಎಚ್. ಎನ್: ನೇರ ನೇರವಾಗಿ ಉಲ್ಲೇಖ ಮಾಡಿದ್ದಾರೆ. ಉಲ್ಲೇಖ ಮಾಡ್ತಾರೆ. ಒಂದು ವಚನದಲ್ಲಿ ಅಕ್ಕಮಹಾದೇವಿ ಉಲ್ಲೇಖ ಮಾಡ್ತಾರೆ. ಹಾಗೆ ನಮ್ಮ ಯಡಿಯೂರ ಸಿದ್ದಲಿಂಗೇಶ್ವರ ನಂತರ ಅಕ್ಕಮಹಾದೇವಿ 12 ನೇ ಶತಮಾನ, 15 ನೇ ಶತಮಾನದವರು ಯಡಿಯೂರ ಸಿದ್ಧಲಿಂಗೇಶ್ವರರು. ಆ ಅಕ್ಕಮಹಾದೇವಿ ಕೂಡ ಇದನ್ನ ಉಲ್ಲೇಖ ಮಾಡ್ತಾರೆ ಏನಂತ ಹೇಳ್ತಾರೆ. ಅಕ್ಕಮಹಾದೇವಿ ಈ ಒಂದು ವಚನನ ಹೇಳ್ತಾ ಬರ್ತಾರೆ ಅದನ್ನ ಸ್ಪಷ್ಟ ಪಡಿಸುತ್ತಾರೆ 12 ನೇ ಶತಮಾನದ ಅಕ್ಕಮಹಾದೇವಿ:

ಅಂತ ಪ್ರಶ್ನೆ ಮಾಡ್ತಾಳೆ ಅಕಮಹಾದೇವಿ. ಅವರ ನಡೆಯೇ ಆಗಮ ನುಡಿಯೇ ವೇದ ಅಂತ ಮಹಾತ್ಮರವರು.
ಹೊಸ ದಿಗಂತ YouTube Channel ನ ಸಂದರ್ಶಕ: ಮಹಾತ್ಮರು ಇವರನ್ನು ಮನುಷ್ಯರು ಅನ್ನಬಹುದಾ ನಾವು.
ಚಂದ್ರಶೇಖರ ಎಚ್. ಎನ್: ಅಂದ್ರಲ್ಲ ಈಗ ಅಂತ ಇದ್ದೀವಲ್ಲ. ಲಿಂಗವನ್ನ ಕಲ್ಲು ಅನ್ನಂಗಿಲ್ಲ. ಮನುಷ್ಯರು ಅನ್ನಂಗಿಲ್ಲ. ಇವರು ಆ ಲೋಕದ ಮಾನವರನ್ನ ಎನ್ನಬಹುದೇ. ಅದೆಂತಂದಡೆ ಅಂತ ಮತ್ತೆ ಸಂಸ್ಕೃತ ಶ್ಲೋಕ ಕೊಡ್ತಾನೆ “ವೃಕ್ಷ ಬೀಜಂ ಬೀಜಂ ಹೀತ ವೃಕ್ಷತೆ ಪುನಃ” ವೃಕ್ಷದಿಂದ ಬೀಜ ಬರ್ತದೆ ಮತ್ತೆ ಅದು ಮತ್ತೆ ಬೀಜವಾಗುತ್ತೆ ಅಂದ್ರೆ ಅಕ್ಕಮಹಾದೇವಿ ಎಲ್ಲೋ ಒಂದು ಕಡೆ ಇವರು ಅಸಾಮಾನ್ಯರು. ಇವರು ನಮ್ಮಂತ ಮನುಷ್ಯರಲ್ಲ. ಅದನ್ನ ನೀವು ಯೋಚನೆ ಮಾಡಿ ಅಂತ ಹೇಳಿ ನಮಗೆ ಪ್ರಶ್ನೆ ಎತ್ತಿದ್ದಾರೆ. ಮತ್ತೆ ಇದನ್ನ ತಿರಚುವಂತವರು ಏನು ಮಾಡ್ತಾರೆ. ಇದನ್ನ ಲಿಂಗದಿಂದ ಉದಯಿಸಿ ಅಂಗವಿಡೆದಪ್ಪ ರೇಣುಕರೆ ಅಂತ ಹೆಂಗೆ ಹೇಳ್ತೀರಾ ಆಂ.
ಡಾ. ವಿಜಯಕುಮಾರ ಕಮ್ಮಾರ: ಲಿಂಗಾಂಗ ಸಾಮರಸ್ಯದ ವಚನವನ್ನು ಲಿಂಗೋದ್ಭವ ರೇಣುಕರು ಎಂದುಕೊಂಡರೆ ಈ ವಚನ ಸಾಹಿತ್ಯದಲ್ಲಿ ಬರುವ ಸಿದ್ಧಾಂತಗಳ ಬಗ್ಗೆ ಅರಿವಿಲ್ಲ ಎನ್ನುವ ಸಂಶಯ ಬರುತ್ತದೆ. ಈ ವಚನದ ಲೌಕಿಕ ವಿಶ್ಲೇಷಣೆಯನ್ನು ಮಾಡುವುದರ ಮೂಲಕ ಈ ವಚನವನ್ನು ತಿರುಚಿ ತನ್ನ ಮೂಗಿನ ನೇರಕ್ಕೆ ಎಳೆದುಕೊಳ್ಳುವ ವಚನಗಳಲ್ಲಿನ ಸಿದ್ಧಾಂತಗಳ ಬಗ್ಗೆ ವಿಜ್ಞಾನಿ ಚಂದ್ರಶೇಖರನಿಗೆ ಉತ್ತರ ಕೊಡೋಣ.
ವಚನದ ಪೂರ್ಣ ಪಠ್ಯ ಹೀಗಿವೆ:
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವನೇನೆಂದು ಬೆಸಗೊಂಬಿರಯ್ಯಾ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ;
ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ?
ಅದೆಂತೆಂದಡೆ, ಸಾಕ್ಷಿ;
“ವೃಕ್ಷಾದ್ಭವತಿ ಬೀಜಾನಿ ಹಿ ತದ್ವೃಕ್ಷೇ ಲೀಯತೇ ಪುನಃ |
ರುದ್ರಲೋಕಂ ಪರಿತ್ಯಜ್ಯ ಶಿವಲೋಕೇ ಭವಿಷ್ಯತಿಃ ||”
ಎಂದುದಾಗಿ,
ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು;
ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು.
ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ,
ಮರಳಿ ಆ ಪುರಾತನರು ಆ ಲಿಂಗದೊಳಗೆ
ಬೆರಸಿದರು ನೋಡಿರಯ್ಯಾ.
ಇಂತಪ್ಪ ಪುರಾತನರಿಗೆ
ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-121/ವಚನ ಸಂಖ್ಯೆ-349)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಪುರಾತನರು: ಹಿಂದಿನ ಕಾಲದ ಶ್ರೇಷ್ಠರು, ಪ್ರಾಚೀನರು, ಮೊದಲೇ ಇದ್ದವರು.
ಅಂಕೋಲೆ: ಕೆಂಪುಕಾಂಡದ, ತಳದಲ್ಲಿ ಮುಳ್ಳುಗಳಿರುವ, ಬಿಳಿಬಣ್ಣದ ಹೂವಿರುವ ವೃಕ್ಷ.
ಹುಟ್ಟುಗೆಟ್ಟೆ: ಅಹಂಕಾರ-ಮಮಕಾರಗಳು ನಾಶ, ದೇಹಭಾವ ಹಿಂಗುವುದು.
ಲಿಂಗದಿಂದುದಯಿಸಿದ ಎನ್ನುವ ಶಬ್ದದಲ್ಲಿ ಲಿಂಗ ಎನ್ನುವ ಶಬ್ದವನ್ನು ತನ್ನ ಮೂಗಿನ ನೇರಕ್ಕೆ ವಿಸ್ತರಿಸುವ ಚಂದ್ರಶೇಖರನಿಗೆ ಮೊದಲು ಅಷ್ಟಾವರಣದ ಎರಡನೇ ತತ್ವವಾದ ಲಿಂಗ ಎಂದರೇನು ಎನ್ನುವುದನ್ನು ತಿಳಿಸಿ ಮುಂದೆ ಹೋಗೋಣ.
ಅಷ್ಟಾವರಣಗಳು:
- ಗುರು.
- ಲಿಂಗ.
- ಜಂಗಮ.
- ವಿಭೂತಿ.
- ರುದ್ರಾಕ್ಷಿ.
- ಮಂತ್ರ.
- ಪಾದೋದಕ.
- ಪ್ರಸಾದ.
ಇವುಗಳು ಶರಣ ಸಿದ್ಧಾಂತದ ಬಹು ಮುಖ್ಯ ತತ್ವಗಳು. ಬಸವಾದಿ ಶರಣರ ದೃಷ್ಟಿಯಲ್ಲಿ ಈ ಒಂದೊಂದು ತತ್ವವೂ ಒಂದೊಂದು ಗುಣಧರ್ಮವನ್ನು ತಿಳಿಸುತ್ತಾ ಭಕ್ತನನ್ನು ಶರಣನನ್ನಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅರಿವೇ ಗುರುವಾಗಿ, ಆತ್ಮವೇ ಲಿಂಗವಾಗಿ, ಸಮಷ್ಠೀ ಸಮ್ಯಕ್ ಜ್ಞಾನ ಅಥವಾ ಸುಜ್ಞಾನವೆಂಬ ಸಮಾಜಮುಖಿ ಚಿಂತನೆಯೇ ಜಂಗಮವಾಗಿ, ದೈವೀ ಸಂಪತ್ತೇ ವಿಭೂತಿಯಾಗಿ, ಜ್ಞಾನ ನೇತ್ರವೇ ರುದ್ರಾಕ್ಷಿಯಾಗಿ, ಪ್ರಣವ ನಾದವೇ ಮಂತ್ರವಾಗಿ, ಅಂತಃಕರಣವೇ ಪಾದೋದಕವಾಗಿ, ಪ್ರಸನ್ನ ಚಿತ್ತವೇ ಪ್ರಸಾದವಾಗಿರುತ್ತದೆ.
ಅಂತರಂಗದ ಅರಿವಿಗೆ ಅಷ್ಟಾವರಣಗಳು ಆವಶ್ಯಕ, ಸಹಾಯಕ ಮತ್ತು ಪೂರಕ. ಭವಿಯಿಂದ ಭಕ್ತ, ಭಕ್ತನಿಂದ ಶರಣನಾಗಲು ಅಷ್ಟಾವರಣಗಳ ಸಂಸ್ಕಾರಗಳು ಅತ್ಯಗತ್ಯ. ನಾನ್ಯಾರು ಎಂಬ ಅರಿವು ಮೂಡಿದಾಗ ಅವನು ಆತ್ಮ ಚಿಂತನೆ ಮಾಡುವ ಅನುಭಾವಿ ಆಗುತ್ತಾನೆ. ಅಷ್ಠಾವರಣಗಳ ಆಚರಣೆಗಳು ಬಹಿರಂಗದ ಆಚರಣೆಗಳು ಅಲ್ಲ. ಸ್ಥಾವರಗಳೂ ಅಲ್ಲ. ಯಾವ ವ್ಯಕ್ತಿಯೂ ಅಲ್ಲ. ಅರಿವು ಮೂಡಿಸುವ ಮತ್ತು ತಾನು ಯಾರು ಎಂದು ತಿಳಿಸುವ ಅಂತರಂಗದ ಆಚರಣೆಗಳು. ಅಷ್ಟಾವರಣಗಳು ಬಾಹ್ಯ ಆಚರಣೆಗಳಾಗದೆ ಅಂತರಂಗದ ಆಚರಣೆ ಆದಾಗ ತಾನಾರೆಂಬ ಅರಿವು ಮೂಡಿ ಆತ್ಮಚಿಂತನೆ ಮಾಡುವವವನು ಅನುಭಾವಿಯಾಗುತ್ತಾನೆ.
ಲಿಂಗ:
“ಲಿಂಗ” ಎಂಬ ಸಂಸ್ಕೃತ ಪದಕ್ಕೆ ಭಾಷಾ ವ್ಯಾಕರಣದ ಪ್ರಕಾರ “ಲೀನಂ ಅರ್ಥ ಗಮಯತಿ” ಎಂಬ ಉತ್ಪತ್ತಿಯನ್ನು ಹೇಳುತ್ತಾರೆ. ಹುದುಗಿಕೊಂಡಿರುವ ಅರ್ಥವನ್ನು ಹೇಳಲೇ ಬೇಕಾಗುವಂತೆ ಮಾಡುವುದೇ ಲಿಂಗ ಎನಿಸುತ್ತದೆ. ಅಂದರೆ ಹೇಳಬೇಕಾದುದನ್ನು ತಿಳಿಸುವ ಶಬ್ದವೇ ಲಿಂಗ. ಲಿಂಗ ಎಂಬುದಕ್ಕೆ ವ್ಯಾವಹಾರಿಕವಾಗಿ ಸ್ತ್ರೀ ಪುರುಷ ವ್ಯತ್ಯಾಸದ ಸಂಜ್ಞೆ ಎಂಬರ್ಥವೂ ಇದೆ.
ಅಷ್ಟಾವರಣಗಳಲ್ಲಿ ಎರಡನೇಯದಾದ ಲಿಂಗಕ್ಕೆ ಮಹತ್ವದ ಸ್ಥಾನವಿದೆ. ಶೈವರು ಸ್ಥಾವರಲಿಂಗವನ್ನು ಪೂಜಿಸುತ್ತಿದ್ದರು. ಬಸವಾದಿ ಶರಣರು ಇಷ್ಟಲಿಂಗದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಆಚರಣೆಗೆ ತಂದರು. ಹಿಂದೆ ಶೈವರಲ್ಲಿ ಅದರಲ್ಲೂ ಪಾಶುಪತರು ಚರಲಿಂಗವನ್ನು ಪೂಜಿಸುತ್ತಿದ್ದರು. ಚರಲಿಂಗವನ್ನು ಪೂಜಾಮನೆಯಲ್ಲಿನ ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಪೂಜೆಯ ನಂತರ ಅದನ್ನು ಸಣ್ಣಪೆಟ್ಟಿಗೆಯೊಳಗಿಡುತ್ತಿದ್ದರು. ಹೀಗೆ ಲಿಂಗವೆಂಬುದು ಶೈವರಲ್ಲಿ ಅದರಲ್ಲೂ ವೈದಿಕರಲ್ಲಿ ಹಾಗೂ ವೀರಶೈವರಲ್ಲಿ ಒಂದೇ ತೆರನಾಗಿರಲಿಲ್ಲ ಮತ್ತು ಪೂಜೆಯ ವಿಧಾನವೂ ಕೂಡ ವಿಭಿನ್ನ ರೀತಿಯಲ್ಲಿದ್ದವು. ಶೈವರು ಸ್ಥಾವರಲಿಂಗ ಮತ್ತು ಚರಲಿಂಗಗಳೆರಡನ್ನು 15 ನೇ ಶತಮಾನದಲ್ಲಿ ಬಂದ ಕಾಶೀರದಿಂದ ವಲಸೆ ಬಂದ ವೀರಶೈವರು ಸ್ಥಾವರಲಿಂಗ, ಚರಲಿಂಗ ಮತ್ತು ಇಷ್ಟಲಿಂಗಗಳೆಲ್ಲವನ್ನೂ ಸೇರಿಸಿ ಸಿಕ್ಕ ಸಿಕ್ಕ ಕಲ್ಲುಗಳ ಪ್ರತಿಮಾ ರೂಪವನ್ನು ಪೂಜಿಸತೊಡಗಿದರು. ಆದರೆ 12 ನೇ ಶತಮಾನದಿಂದೀಚೆಗೆ ಬಸವಾದಿ ಶರಣರು ಮತ್ತು ನಂತರದ ಲಿಂಗಾಯತ ಧರ್ಮದ ಅನುಯಾಯಿಗಳು ಕೇವಲ ಇಷ್ಟಲಿಂಗವನ್ನು ಮಾತ್ರ ಪೂಜಿಸತೊಡಗಿದರು. ಹೀಗಾಗಿ ವೀರಶೈವರ ಸ್ಥಾವರಲಿಂಗ ಪೂಜೆಗೂ ಬಸವಾದಿ ಶರಣರ ಲಿಂಗಪೂಜೆಗೂ ಅಜಗಜಾಂತರ ವ್ಯತ್ಯಾಸವಿದೆ.
ಇನ್ನು ವೈದಿಕರು ಮತ್ತು ವೀರಶೈವರು ಬಡಬಡಿಸುವ ಋಗ್ವೇದದಲ್ಲಿಯೇ ಇಷ್ಟಲಿಂಗದ ಬಗೆಗೆ ಹೇಳಲಾಗಿದೆಯೆಂದು ಆ ಶ್ಲೋಕವನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಆ ಶ್ಲೋಕ ಹೀಗಿದೆ:
ಅಯಂ ಮೇ ಹಸ್ತೋ ಭಗವಾನಯಂ | ಅಯಂ ಮೇ ಭಗವತ್ತರಃ ||
ಅಯಂ ಮೇ ವಿಶ್ವಭೇಷಜೋಯಂ | ಶಿವಾಭಿಮರ್ಶನಃ ||
(ಋಗ್ವೇದ 10-60-12)
ಇಲ್ಲಿ ಇಷ್ಟಲಿಂಗದ ಪ್ರಸ್ತಾಪವೇ ಇಲ್ಲ. ಅಪಾರ ಶಕ್ತಿಯುಳ್ಳ ಪರಶಿವನೇ ನನ್ನ ಹಸ್ತದಲ್ಲಿ ವಿರಾಜಮಾನನಾಗಿರುವನೆಂದರೆ, ಇದು ಹಸ್ತ-ಮಸ್ತಕದ ವಿಚಾರವೇ ಹೊರತು ಇಷ್ಟಲಿಂಗದ ಪ್ರಸ್ತಾಪವಲ್ಲ. ಹೀಗಾಗಿ ಬಸವಾದಿ ಶರಣರು ಬರುವದಕ್ಕಿಂತ ಮೊದಲು ಇಷ್ಟಲಿಂಗದ ಪರಿಕಲ್ಪನೆ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಆದುದರಿಂದ ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆಯನ್ನು ಬಸವಾದಿ ಶರಣರು ಮೊದಲ ಬಾರಿಗೆ ಕಟ್ಟಿಕೊಟ್ಟರು.
“ಇಷ್ಟಲಿಂಗ” ಪದದಲ್ಲಿ ಎರಡು ಪದಗಳು ಕೂಡಿಕೊಂಡಿವೆ. “ಇಷ್ಟ” ವೆಂದರೆ ತನ್ನ ಪ್ರೀತಿಯ ವಸ್ತು ಎಂಬ ಒಂದು ಅರ್ಥವಿದ್ದರೆ, ಪರಮಾತ್ಮ ಎಂಬ ಇನ್ನೊಂದು ಅರ್ಥವಿದೆ. ಲಿಂಗ ಎಂದರೆ ಚಿಹ್ನೆ, ಗುರುತು ಎಂಬರ್ಥಗಳಿವೆ. ಹೀಗಾಗಿ ಇಲ್ಲಿ ಇಷ್ಟಲಿಂಗವೆಂದರೆ ಪರಮಾತ್ಮನ ಚಿಹ್ನೆಯೇ ಆಗಿದೆ. ಆ ಪರಮಾತ್ಮನು, ಶಿವ ಅಥವಾ ರುದ್ರನಾಗಿರದೆ, ಆ ಪರಮಾತ್ಮನು, ಆತ್ಮನ ಸಾಧನೆಯ ಪ್ರತೀಕವಾಗಿದ್ದಾನೆ.
ಲಿಂಗಾಯತ ಧರ್ಮದಲ್ಲಿ ಕಾಣಿಸಿಕೊಳ್ಳುವ ಇಷ್ಟಲಿಂಗವು, ದೀಕ್ಷಾ ಸಂದರ್ಭದಲ್ಲಿ ಗುರುವು ಕೊಡುವ ಕರಸ್ಥಲ ಲಿಂಗವಾಗಿದ್ದರೂ, ಸಾಧಕ ಬೆಳೆದಂತೆಲ್ಲ ಇದು ತನ್ನೊಳಗಡೆಯೇ ಇರುವ ಪ್ರಾಣಲಿಂಗವಾಗಿ ಪರಿವರ್ತನೆಯಾಗುತ್ತದೆ. ಅದೇ ಮುಂದೆ ಜ್ಞಾನಲಿಂಗವಾಗಿ ಬೆಳೆಯುತ್ತದೆ. ಹೀಗೆ ಕರಸ್ಥಲಲಿಂಗವು, ಪ್ರಾಣಲಿಂಗವಾಗಿ-ಜ್ಞಾನಲಿಂಗವಾಗಿ ಬೆಳೆದುನಿಂತಿರುವುದು ಕೇವಲ ಲಿಂಗಾಯತ ಧರ್ಮದಲ್ಲಿ ಮಾತ್ರವೆಂಬುವದನ್ನು ಗಮನಿಸಬೇಕು.
“ಶಿವಾನುಭವ ಸೂತ್ರ” ಎನ್ನುವ ಗ್ರಂಥದಲ್ಲಿ “ಮಗ್ಗೆಯ ಮಾಯಿದೇವರು” ಹೀಗೆ ಬರೆದಿದ್ದಾರೆ:
ಲೀಯತೆ ಗಮ್ಯತೇ ಯತ್ರ | ಯೇನ ಸರ್ವಂ ಚರಾಚರಂ ||
ತದೇ ತಲ್ಲಿಂಗ ಮಿತ್ಯುಕ್ತಂ | ಲಿಂಗತತ್ವ ಪರಾಯಣಿ: ||
ಎಲ್ಲ ಚರಾಚರ ಸಮಸ್ಠಿ ಎಲ್ಲವೂ ಪ್ರಾರಂಭವಾಗಿ, ಸಂಚಲನ ಸೃಷ್ಟಿಸಿ ಅಂತ್ಯವಾಗುವುದೋ ಅದು ಲಿಂಗ ಎನ್ನುವ ಕಲ್ಪನೆಯನ್ನು ಮಗ್ಗೆಯ ಮಾಯಿದೇವರು ಹೇಳುತ್ತಾರೆ.
ಲಿಂಗಾಯತ ಧರ್ಮದ ಮೂಲ ಸ್ತಂಭಗಳಾದ ಗುರು, ಲಿಂಗ ಮತ್ತು ಜಂಗಮ ಅಷ್ಟಾವರಣಗಳಲ್ಲಿ ಪ್ರಮುಖವಾದವು. ಗುರು ಜ್ಞಾನದ ದೀಕ್ಷೆ ನೀಡಿದರೆ, ಲಿಂಗವು ಆತ್ಮಸಾಕ್ಷಾತ್ಕಾರದ ಸಂಕೇತವಾಗಿದೆ (ಇಷ್ಟಲಿಂಗ), ಮತ್ತು ಜಂಗಮವು ಜ್ಞಾನವನ್ನು ಪ್ರಚಾರ ಮಾಡುವ ಚೈತನ್ಯದಾಯಕ ವ್ಯಕ್ತಿ. ಈ ಮೂರು ತತ್ವಗಳು ಪರಸ್ಪರ ಅವಲಂಬಿತವಾಗಿದ್ದು, ಭಕ್ತಿಯ ಮೂಲಕ ಐಕ್ಯಸ್ಥಲವನ್ನು ಸಾಧಿಸಲು ಸಹಾಯ ಮಾಡುತ್ತವೆ.
- ಗುರು: ಅರಿವಿನ ಜ್ಞಾನಿ, ದೀಕ್ಷೆ ನೀಡಿ ಶಿವತತ್ವವನ್ನು ಬೋಧಿಸುವವರು. ಅರಿವೇ ಗುರುವೆಂಬುದು ಶರಣರ ನಿಲುವು.
- ಲಿಂಗ: ಇಷ್ಟಲಿಂಗ – ಆಂತರಿಕ ಆತ್ಮ, ಶುದ್ಧತೆಯ ಸಂಕೇತ, ದೇಹದಲ್ಲಿ ಧರಿಸುವ ನಿರಾಕಾರ ಶಿವನ ಸಾಕ್ಷಾತ್ಕಾರದ ರೂಪ.
- ಜಂಗಮ: ಸಮಷ್ಠೀ ಸಮ್ಯಕ್ ಜ್ಞಾನ ಅಥವಾ ಸುಜ್ಞಾನವೆಂಬ ಸಮಾಜಮುಖಿ ಚಿಂತನೆಯ ಚೈತನ್ಯದಾಯಕ ಶಕ್ತಿಯೇ ಜಂಗಮ.
ಮೂಲತಃ ಸ್ಥಾವರ ಸ್ವರೂಪದ ಲಿಂಗ, ಗುಡಿ ಗುಂಡಾರಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ವೈದಿಕಶಾಹಿ ಪುರೋಹಿತರಿಂದ ಮಾತ್ರ ಪೂಜೆಗೊಳುತ್ತಿತ್ತು. ಶ್ರೇಣೀಕೃತ ಸಮಾಜದಲ್ಲಿ ಭೇದವನ್ನುಂಟು ಮಾಡಿ ಶೋಷಣೆ ಮಾಡುವ ಸಾಧನವಾಗಿದ್ದ ಸ್ಥಾವರ ಲಿಂಗಕ್ಕೆ ಇಷ್ಟಲಿಂಗದ ಪರಿಕಲ್ಪನೆ ಕೊಟ್ಟು ಅಷ್ಟಾವರಣಗಳಲ್ಲಿ ಅತ್ಯುನ್ನತ ಸ್ಥಾನ ನೀಡಿದವರು ಶರಣರು.
ಇಷ್ಟಲಿಂಗ ಪ್ರಾಣಲಿಂಗವೆಂದು
ಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು.
ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397)
ತನು-ಮನ-ಲಿಂಗ ಮೂರನ್ನು ಮೇಳೈಸಿದಾಗ ಲಿಂಗಾಂಗ ಅಂದರೆ ಆತ್ಮ ಹೋಗಿ ಪರಮಾತ್ಮನಲ್ಲಿ ಬೆರೆತು ಒಂದಾಗಿ ಸರ್ವಾಂಗಲಿಂಗಿ ಆಗತಾನ ಶರಣ ಅಂತ ಅರಿವಿನ ಮಾರಿತಂದೆಯವರು ಉಪಮೆಗಳ ಮೂಲಕ ಈ ವಚನದಲ್ಲಿ ನಿರೂಪಿಸುತ್ತಾರೆ. ಬೀಜವೂಡೆದು ಮೊಳೆ ತಲೆದೋರುವಂತೆ, ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ.? ಬೀಜದಲ್ಲಿ ಅಡಗಿದ ಅಂಕುರದಿಂದ ಜೈವಿಕ ಕ್ರಿಯೆಯ ಸಂಘರ್ಷ ಏರ್ಪಟ್ಟಾಗ ಮೊಳಕೆಯೊಡೆಯುವಂತೆ ಲಿಂಗ ಮತ್ತು ಅಂಗದ ಸಂಘರ್ಷ ಏರ್ಪಟ್ಟಾಗ ಶರಣರ ಅಂತರಂಗದಲ್ಲಿ ಸಾಧನೆ ಎನ್ನುವ ಮೊಳಕೆಯೊಡೆಯುತ್ತದೆ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಿಳಿಸಿದ್ದಾರೆ.
ಲಿಂಗಪೂಜೆ ಮಾಡುವುದೆಂದರೆ ವೀರಶೈವ ಪಂಚಾಚಾರ್ಯರು ಸಾವಿರಾರು ಬಿಲ್ವಪತ್ರೆಯನ್ನು ಲಿಂಗದ ಮೇಲಿಟ್ಟು ಲಿಂಗವು ಕಾಣದಂತೆ ಮಾಡಿ ತಾಸುಗಟ್ಟಲೆ ಡಂಬಾಚಾರದ ಪೂಜೆ ಮಾಡುವುದಲ್ಲ. ಇದು ಕೇವಲ ರೇಣುಕರು ಉದ್ಭವವಾದ ಕಲ್ಲು ಎಂಬ ವೈಜ್ಞಾನಿಕತೆಯಿಂದ ಮಾಡುವ ಪೂಜೆಯೂ ಅಲ್ಲ. ಶೃದ್ಧಾ ಭಕ್ತಿಯಿಂದ ಲಿಂಗನಿರೀಕ್ಷಣೆಯ ಮೂಲಕ ಮಾಡುವ ಪೂಜೆ ಸ್ವಲ್ಪ ಹೊತ್ತೇ ಆದರೂ ಶಿವಪಥವನ್ನರಿಯಲು ಇರುವ ಸಾಧನಾ ಮಾರ್ಗ.
ವೈರಾಗ್ಯನಿಧಿ ಅಕ್ಕಮಹಾದೇವಿಯವರ ಈ ವಚನದ ಮೊದಲನೇಯ ಸಾಲುಗಳು ಪ್ರಶ್ನೆಯನ್ನು ಕೇಳುತ್ತವೆ. “ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ?” ಇಲ್ಲಿ ಪುರಾತನರು ಅಂದರೆ ನಮ್ಮ ಹಿರಿಯರು ಆತ್ಮನೆಂಬ ಅರಿವಿನ ಪ್ರಜ್ಞೆಯಿಂದ ಜನಿಸಿ ದೈಹಿಕ ರೂಪವನ್ನು ತಳೆದಿದ್ದರೂ ಕೂಡ ಅವರು ಕೇವಲ ಅಲೌಕಿಕ ತತ್ವಗಳಿಗೆ ಮಾರು ಹೋಗದೇ ಪರಮಾತ್ಮ ಮತ್ತು ಜೀವಾತ್ಮವೆಂಬ ಲಿಂಗಾಂಗ ಸಾಮರಸ್ಯ ಸಂಬಂಧವನ್ನು ಹೊಂದಿರುವವರು. ಆದ್ದರಿಂದ ಅವರ ಜೀವನದ ಪ್ರತಿ ಹೆಜ್ಜೆಯೂ ದೈವಿಕವಾದುದು. ಲಿಂಗಾಂಗ ಸಾಮರಸ್ಯವನ್ನೇ ವೀರಗಂಟೆ ಶರಣ ಮಡಿವಾಳ ಮಾಚಿದೇವರ ವಚನವು ಅತ್ಯಂತ ಸರಳವಾಗಿ ನಿರೂಪಣೆ ಮಾಡುತ್ತದೆ.
ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು,
ಸ್ಥೂಲ ಸೂಕ್ಷ್ಮವೆಂಬ ಮೂರ್ತಿಗಳಿಲ್ಲದಂದು,
ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು,
ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು.
ಸರ್ವವಿಸ್ತೀರ್ಣವ ನೀಕರಿಸಿ ಶಿವಲಿಂಗಾರ್ಚನೆಯ ತೋರಿದ.
ನಿತ್ಯಲಿಂರ್ಗಾಚನೆಯಲ್ಲಿ ಪ್ರಸಾದಧ್ಯಾನ,
ಜಂಗಮಾರ್ಚನೆಯಲ್ಲಿ ಪ್ರಸಾದಭೋಗ
ಎಂಬುದನು ಸಂಗನಬಸವಣ್ಣನಲ್ಲದೆ ಮತ್ತಾರೂ ಅರಿಯರು.
ಭಕ್ತಿಯ ಕುಳಸ್ಥಳವನೂ ಭಕ್ತಿಯ ಸಾರಾಯವನೂ
ಮುನ್ನವೆ ಅತಿರಥ ಸಮರಥರೆಲ್ಲರೂ ಅರಿಯರು.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-205/ವಚನ ಸಂಖ್ಯೆ-496)
ಆದಿಯೆಂದರೆ ದೇಹ. ಅನಾದಿಯೆಂದರೆ ಆತ್ಮ. ಮಹಾಶೂನ್ಯವೆಂದರೆ ಪರಮಾತ್ಮ. ಜೀವಾತ್ಮ ಮತ್ತು ಪರಮಾತ್ಮರ ಸಮ್ಮಿಲನವೇ ಲಿಂಗಾಂಗ ಸಾಮರಸ್ಯ ಎನ್ನುವುದು ಈ ವಚನದ ಸ್ಥೂಲ ಅರ್ಥ. ಹಾಗಾಗಿ “ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ?” ಎನ್ನುವುದು ನಮ್ಮ ಹಿರಿಯರು ಅನುಭವಿಸಿದ ಅನುಭಾವಿಕ ನೆಲೆ ಎನ್ನುವುದುನ್ನು ವಚನಗಳನ್ನು ತುಚ್ಛೀಕರಿಸಿ ಮಾತನಾಡುವ ವೀರಶೈವರು ಅರ್ಥ ಮಾಡಿಕೊಳ್ಳಬೇಕು.
ಇನ್ನು ವೇದ, ಆಗಮಗಳನ್ನು ಬಸವಾದಿ ಶರಣರು ಒಪ್ಪಿಕೊಂಡಿದ್ದರು ಎನ್ನುವುದನ್ನು ಈ ವಚನದ ಸಾಲುಗಳಾದ “ಅವರ ನಡೆಯೇ ಆಗಮ, ಅವರ ನುಡಿಯೇ ವೇದ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ?” ಎಂದು ಈತ Quote ಮಾಡುತ್ತಾನೆ. ಈತ ಈ ಸಾಲುಗಳಲ್ಲಿರುವ ಪ್ರಶ್ನಾರ್ಥಕ ಚಿಹ್ನೆಯನ್ನೇ ಮರೆಮಾಚಿ ತನ್ನ ಮೂಗಿನ ನೇರಕ್ಕೆ ಎಳೆದುಕೊಂಡು ವಿಶ್ಲೇಷಣೆ ಮಾಡುತ್ತಾನೆ. ಈ ಸಾಲುಗಳ ನಿಜ ಅರ್ಥ ಹೀಗಿದೆ.
- ಶರಣರ ದೈನಂದಿನ ನಡೆ-ನುಡಿ ಸಿದ್ಧಾಂತ, ನಡವಳಿಕೆಯೇ ಅಥವಾ ಜೀವನ ಕ್ರಮವೇ ಒಂದು ಶಾಸ್ತ್ರದಂತೆ ಅಥವಾ ವೈಜ್ಞಾನಿಕ ಮತ್ತು ವೈಚಾರಿಕವೆಂದು ಪರಿಗಣಿತವಾಗುತ್ತದೆ. ಅಂದರೆ, ಅವರು ಶಾಸ್ತ್ರಗಳನ್ನು ಓದಿ ನಡೆಯುವವರಲ್ಲ, ಅವರ ನಡೆಯೇ ಶಾಸ್ತ್ರಗಳಿಗೆ ಮೂಲವಾಗುತ್ತದೆ.
- ನುಡಿಯೇ ವೇದ: ನಡೆಯಷ್ಟೇ ಅಲ್ಲದೆ, ಶರಣರ ನುಡಿಗಳು ವೇದಗಳಷ್ಟೇ ಸತ್ಯ ಮತ್ತು ಪ್ರಮಾಣಿಕ ಎಂಬುದು ಇದರ ಅರ್ಥ. ಅವರು ಆಡುವ ಪ್ರತಿ ನುಡಿಯೂ ಪರಮ ಸತ್ಯದ ಅಭಿವ್ಯಕ್ತಿಯಾಗಿರುತ್ತದೆ.
ಹಾಗಾಗಿ ಬಸವಾದಿ ಶರಣರ ಲಿಂಗದ ಪರಿಕಲ್ಪನೆಯೆಂದರೆ ತನ್ನ ಆತ್ಮದ ಅರಿವು, ಸಂಸ್ಕಾರಗಳು. ವೀರಶೈವರ ಮತ್ತು ವೈದಿಕರ ಆಚರಣೆಯಂತೆ ಸ್ಥಾವರ ಲಿಂಗ ಅಲ್ಲಾ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಲಿಂಗೋಧ್ಭವ ಎನ್ನುವ ಕಲ್ಲಿನಲ್ಲಿ ಹುಟ್ಟುವ ರೇಣುಕಾಚಾರ್ಯರ ಕಲ್ಲು ಎನ್ನುವ ಸ್ಥಾವರ ಲಿಂಗದ ಪರಿಕಲ್ಪನೆಯಲ್ಲ. ವಚನಗಳ ಜ್ಞಾನದ ಪರಿಕಲ್ಪನೆಯೇ ಇಲ್ಲದ ಹಾಗೂ ಬಸವಾದಿ ಶರಣರನ್ನು ಬಲವಂತವಾಗಿ ತನ್ನ ಮೂಗಿನ ನೇರಕ್ಕೆ ಎಳೆದುಕೊಂಡು ಮಾತನಾಡುತ್ತಿರುವ ಚಂದ್ರಶೇಖರನಿಗೆ ಇಷ್ಟು ಅರ್ಥ ಆದರೆ ಸಾಕು ಅಂತಾ ನನ್ನ ಭಾವನೆ.
ಚಂದ್ರಶೇಖರ ಎಚ್. ಎನ್: ನೇರ ನೇರವಾಗಿ ಉಲ್ಲೇಖ ಮಾಡಿದ್ದಾರೆ. ಉಲ್ಲೇಖ ಮಾಡ್ತಾರೆ. ಒಂದು ವಚನದಲ್ಲಿ ಅಕ್ಕಮಹಾದೇವಿ ಉಲ್ಲೇಖ ಮಾಡ್ತಾರೆ. ಹಾಗೆ ನಮ್ಮ ಯಡಿಯೂರ ಸಿದ್ದಲಿಂಗೇಶ್ವರ ನಂತರ ಅಕ್ಕಮಹಾದೇವಿ 12 ನೇ ಶತಮಾನ, 15 ನೇ ಶತಮಾನದವರು ಯಡಿಯೂರ ಸಿದ್ಧಲಿಂಗೇಶ್ವರರು.
ಡಾ. ವಿಜಯಕುಮಾರ ಕಮ್ಮಾರ: ಇನ್ನು ಈ ವಿಜ್ಞಾನಿ ಚಂದ್ರಶೇಖರ ಯಡಿಯೂರು ಸಿದ್ಧಲಿಂಗೇಶ್ವರರ ವಚನವನ್ನು Quote ಮಾಡತಾನೆ. ಅದರ ಪೂರ್ಣ ವಚನ ಹೀಗಿದೆ.
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ,
ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ?
ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು,
ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ
ನಾಯಕನರಕ ತಪ್ಪದು.
ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು
ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು
ಪರಮೇಶ್ವರನ ನಿಜಚಿನ್ಮಯಮಪ್ಪ ಊಧ್ರ್ವಮುಖದಲ್ಲಿ
ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡಾ.
ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ
ಮರ್ತ್ಯದಲ್ಲಿ ಅವತರಿಸಿದಡೆ,
ಅದೇನು ಕಾರಣ ಉದಯವಾದರು
ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ
ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ?
ಇವರಿಂಗೆ ನಾಯಕನರಕ ತಪ್ಪದು ಕಾಣಾ,
ಎಲೆ ಶಿವನೆ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-28/ವಚನ ಸಂಖ್ಯೆ-61)
ಈ ವಚನದ ಸಾರಾಂಶವನ್ನು ಬೆಳಗಾವಿಯ ಶ್ರೀ ಪ್ರಕಾಶ ಗಿರಿಮಲ್ಲನವರ ಅತ್ಯಂತ ಸರಳವಾಗಿವಿಶ್ಲೇಷಣೆ ಮಾಡಿದ್ದಾರೆ. ಇದನ್ನು ನಮ್ಮ www.vachanamandara.in web site ನಲ್ಲಿ ಪ್ರಕಟ ಮಾಡಿದ್ದೇವೆ. https://vachanamandara.in/ಎಡೆಯೂರು-ಸಿದ್ಧಲಿಂಗೇಶ್ವರ-ಯ/ ಇಲ್ಲಿ ಈ ಲೇಖನವನ್ನು ತಾವು ಓದಬಹುದು. ಅದರ ಒಂದಷ್ಟು ಪ್ಯಾರಾಗಳು ತಮಗಾಗಿ.
ಬಹಳಷ್ಟು ಜನರು ಶ್ರೀ ಸಿದ್ಧಲಿಂಗೇಶ್ವರರ ಒಂದು ವಚನದಲ್ಲಿ “ರೇಣುಕ” ಎಂಬ ಪದ ಉಲ್ಲೇಖ ಮಾಡಿರುವುದನ್ನು ಗಮನಿಸಿ, ಸಿದ್ಧಲಿಂಗೇಶ್ವರರು ರೇಣುಕರನ್ನು ಸ್ಮರಿಸಿಕೊಂಡಿರುವುದರಿಂದ ತಮ್ಮ ಧರ್ಮವು ಅತ್ಯಂತ ಪ್ರಾಚೀನ ಎಂದು ಹೇಳುತ್ತಾರೆ. ಆದರೆ ಈ ವಚನ ಕುರಿತು ನಮ್ಮ ನಾಡಿನ ದಾರ್ಶನಿಕ ವಿದ್ವಾಂಸರಾದ ಡಾ. ಎನ್. ಜಿ. ಮಹಾದೇವಪ್ಪನವರು ನೀಡುವ ವಿವರಣೆ ತುಂಬ ಮಾರ್ಮಿಕವಾಗಿದೆ:
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ,
ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೊ?
ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು,
ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ
ನಾಯಕನರಕ ತಪ್ಪದು.
ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು
ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು
ಪರಮೇಶ್ವರನ ನಿಜಚಿನ್ಮಯಮಪ್ಪ ಊರ್ಧ್ವಮುಖದಲ್ಲಿ
ಚಿತ್ಕಲಾಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡಾ.
ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ
ಮರ್ತ್ಯದಲ್ಲಿ ಅವತರಿಸಿದಡೆ,
ಅದೇನು ಕಾರಣ ಉದಯವಾದರು
ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ
ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ?
ಇವರಿಂಗೆ ನಾಯಕನರಕ ತಪ್ಪದು ಕಾಣಾ,
ಎಲೆ ಶಿವನೆ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-28/ವಚನ ಸಂಖ್ಯೆ-61)
“ಆದಿಯಲ್ಲಿ ಶಿವತತ್ವದಲ್ಲಿ ರೇಣುಕರುದಯವಾಗದಿರ್ದಡೆ ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೊ? ಶಿವನಲ್ಲಿಯೇ ಹುಟ್ಟಿ, ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು ಅನಾದಿ ಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ, ಈ ವಚನವನ್ನು ಉದ್ಧರಿಸುವ ಪಂಡಿತರ ಪ್ರಕಾರ ರೇಣುಕ ಅಥವಾ ರೇವಣಸಿದ್ಧ ಲಿಂಗೋದ್ಭವ, ಉಳಿದವರಲ್ಲ. ಈ ವಚನವನ್ನು ಪೂರ್ತಿ ಓದಿದಾಗ:
- ರೇಣುಕರ ವೀರಶೈವ ಧರ್ಮದ ಸ್ಥಾಪಕರು ಎಂದಾಗಲಿ,
- ರೇಣುಕರು ಮಾತ್ರ ಲಿಂಗದಿಂದ ಉದಯವಾದವರು ಉಳಿದವರಲ್ಲ ಎಂದಾಗಲಿ,
- ಶ್ರೀ ಸಿದ್ಧಲಿಂಗ ಯತಿಗಳು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಮುಂತಾದ ಶರಣರಿಗೆ ಕೊಡುವುದಕ್ಕಿಂತ ಹೆಚ್ಚಿನ ಗೌರವವನ್ನು ರೇಣುಕರಿಗೆ ಕೊಡುತ್ತಾರೆ ಎಂದಾಗಲಿ,
ಅರ್ಥವಾಗುವುದಿಲ್ಲ.
ಮಾತೆಯಿಲ್ಲದ ಅಜಾತನು; ತಂದೆಯಿಲ್ಲದ ಇಂದುಧರನು,
ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು.
ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು.
ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ
ಮಹಾಮಹಿಮನು ನೋಡಾ, ಭಕ್ತನು.
ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ
ಜಗಭರಿತನು, ಅದ್ವಯನು ನೋಡಾ ಭಕ್ತನು.
ಇಂತಪ್ಪ ನಿರುಪಾಧಿಕ ಭಕ್ತನ, ನಿರ್ಗುಣ ಚರಿತ್ರವನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-228/ವಚನ ಸಂಖ್ಯೆ-510)
ಒಂದು ವಚನದ ಒಂದು ಶಬ್ದದ ಹೊರ ರೂಪವನ್ನು ನೋಡಿ, ಅದರ ಒಳ ಅರ್ಥವನ್ನು ಬೇಕೆಂದೇ ಕಾಣದಿರುವ ಈ ಜಾಣಕುರುಡರ ಬಗ್ಗೆ ಓದುಗರು ಎಚ್ಚರಿಕೆಯಿಂದಿರಬೇಕು. (ಡಾ. ಎನ್. ಜಿ. ಮಹಾದೇವಪ್ಪ: ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳಲ್ಲಿ ರೇಣುಕ ಮತ್ತು ಬಸವಾದಿ ಶರಣರು | ಸಂಪಾದಕೀಯ: ಲಿಂಗಾಯತ ಪತ್ರಿಕೆ ಸಂಪುಟ 3 ಸಂಚಿಕೆ. 08.11.2008, ಪುಟ. ಸಂ. 2)
ಇದಕ್ಕಿಂತ ಹೆಚ್ಚಿನ ವಿವರಣೆ ಅಗತ್ಯವಿಲ್ಲವೆನಿಸುತ್ತದೆ. ಇಲ್ಲಿ ರೇಣುಕ ಎಂಬ ಪದವನ್ನು ಕೈಲಾಸದಲ್ಲಿರುವ ಒಬ್ಬ ಗಣ ಎಂಬ ಅರ್ಥದಲ್ಲಿ ಶ್ರೀ ಸಿದ್ಧಲಿಂಗ ಯತಿಗಳು ಬಳಸಿದ್ದಾರೆ. ರೇವಣಸಿದ್ಧರು ಭೂಲೋಕದಲ್ಲಿ ಹುಟ್ಟಿದವರೆಂಬ ಕಾರಣಕ್ಕೆ ಅವರ ಮುಕ್ತ ನಿಲುವನ್ನು ಕುರಿತು ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಶ್ರೀ ಜ. ಚ. ನಿ. ಅವರು ವಿಭೂತಿ ಕೃತಿಯಲ್ಲಿ ಒಂದು ಲೇಖನ ಬರೆಯುತ್ತ:
“ಸಿದ್ಧಲಿಂಗ ಯತಿಗಳ ರೇಣುಕರೇ ಬೇರೆ, ರೇವಣಸಿದ್ಧರೇ ಬೇರೆ”
ಎಂದು ಹೇಳಿದ್ದಾರೆ. ಈ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರೇಣುಕ ಎನ್ನುವುದು ಕೈಲಾಸದಲ್ಲಿರುವ ಒಬ್ಬ ಗಣವರನ ಹೆಸರು, ರೇವಣಸಿದ್ಧ ಎನ್ನುವುದು ಬಸವ ಸಮಕಾಲೀನ ಶರಣನ ಹೆಸರು ಎಂಬುದು ಸ್ಪಷ್ಟವಾಗುತ್ತದೆ.
ಸಿದ್ಧಲಿಂಗ ಯತಿಗಳಿಗೆ ರೇಣುಕರ ಮೇಲೆ ಅಷ್ಟೊಂದು ಭಕ್ತಿ ಇದ್ದಿದ್ದರೆ, ಇನ್ನೂ ಹತ್ತಾರು ವಚನಗಳಲ್ಲಿ ಬಸವಣ್ಣನವರಂತೆ ಅವರನ್ನೂ ಸ್ತುತಿಸುತ್ತಿದ್ದರು. ಇನ್ನೂ ಮಹತ್ವದ ಸಂಗತಿಯೆಂದರೆ ಬಸವಣ್ಣನವರನ್ನು ಅನೇಕ ವಿಧದಲ್ಲಿ ಸ್ತುತಿಸಿದ್ದಾರೆ, ರೇಣುಕರನ್ನು ಯಾವುದೋ ವಿಚಾರದ ಸ್ಪಷ್ಟೀಕರಣಕ್ಕಾಗಿ ಕ್ವಚಿತ್ತಾಗಿ ಒಂದು ಬಾರಿ ನೆನಪಿಸಿಕೊಂಡಿದ್ದಾರೆ ಎನ್ನುವುದನ್ನು ಗಮನಿಸಿದರೆ, ಅವರಿಗೆ ರೇಣುಕ ಎಂಬ ಗಣವರನಕ್ಕಿಂತ, ಬಸವಣ್ಣನವರ ಮೇಲೆ ಅಪಾರ ಪ್ರೀತಿ ಗೌರವ ಭಕ್ತಿ ಇತ್ತು ಎಂಬುದು ಸ್ಪಷ್ಟವಾಗುತ್ತದೆ.
ಸದ್ರೂಪವೇ ಸಂಗನಬಸವಣ್ಣ ನೋಡಾ.
ಚಿದ್ರೂಪವೇ ಚೆನ್ನಬಸವಣ್ಣ ನೋಡಾ.
ಆನಂದ ಸ್ವರೂಪವೇ ಪ್ರಭುದೇವರು ನೋಡಾ.
ಇದು ಕಾರಣ,
ಸದ್ರೂಪವಾದ ಸಂಗನ ಬಸವಣ್ಣನೇ ಗುರು;
ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ;
ಆನಂದಸ್ವರೂಪವಾದ ಪ್ರಭುದೇವರೇ ಜಂಗಮವು ನೋಡಾ.
ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-41)
12 ನೇ ಶತಮಾನದಲ್ಲಿ ಜರುಗಿದ ಕಲ್ಯಾಣ ಕ್ರಾಂತಿಯ ಪೂರ್ಣ ನೇತೃತ್ವ ವಹಿಸಿದವರು ಬಸವಣ್ಣನವರು, ಚನ್ನಬಸವಣ್ಣನವರು ಮತ್ತು ಪ್ರಭುದೇವರು. ಈ ಮೂವರು ಗುರು-ಲಿಂಗ-ಜಂಗಮ ಸ್ವರೂಪರಾಗಿ ನಿರಂಜನ ಪರತತ್ವಕ್ಕೆ ಪರ್ಯಾಯ ನಾಮವಾಗಿದ್ದಾರೆ ಎಂಬುದನ್ನು ಶ್ರೀ ಸಿದ್ಧಲಿಂಗ ಯತಿಗಳು ಇಲ್ಲಿ ಹೇಳುತ್ತಿದ್ದಾರೆ. ಸತ್ ಸ್ವರೂಪ ಬಸವಣ್ಣನವರಾದರೆ, ಚಿತ್ ಸ್ವರೂಪ ಚೆನ್ನಬಸವಣ್ಣನವರು, ಇನ್ನು ಆನಂದ ಸ್ವರೂಪರಾಗಿ ಪ್ರಭುದೇವರು. ಹೀಗಾಗಿ ಬಸವಣ್ಣನವರೇ ಗುರುವಾಗಿ, ಚೆನ್ನಬಸವಣ್ಣನವರೇ ಲಿಂಗವಾಗಿ, ಪ್ರಭುದೇವರೇ ಜಂಗಮವಾಗಿ ಶ್ರೀ ಸಿದ್ಧಲಿಂಗ ಯತಿಗಳಿಗೆ ಕಂಡಿದ್ದಾರೆ. ಈ ಮೂವರು ನಿತ್ಯ ನಿರಂಜನ ಪರತತ್ವದ ಸ್ವರೂಪವೇ ಆಗಿದ್ದಾರೆ ಎಂಬುದು ಅವರ ಬಲವಾದ ನಂಬಿಕೆ.
ವಚನಗಳನ್ನು ತನ್ನ ಮೂಗಿನ ನೇರಕ್ಕೆ ಎಳೆದುಕೊಂಡು ಕಲ್ಲಿನಲ್ಲಿ ಹುಟ್ಟಿದ ರೇಣುಕರನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಮತ್ತು ತೋಂಟದ ಸಿದ್ಧಲಿಂಗ ಯತಿಗಳು ಸಮರ್ಥಿಸಿಕೊಂಡರು ಎನ್ನುವುದನ್ನು ಬಿಂಬಿಸುತ್ತಿರುವ ವಿಜ್ಞಾನಿ ಚಂದ್ರಶೇಖರನಿಗೆ ವಚನ ಸಾಹಿತ್ಯ ಕುರಿತು ಜ್ಞಾನವಿಲ್ಲದಿರುವುದು ಸ್ಪಷ್ಟವಾಗುತ್ತದೆ. ಇಂಥವರು ನಮ್ಮ ಲಿಂಗಾಯತರಿಗೆ, ಬಸವತತ್ವಕ್ಕೆ, ಶರಣ ಸಿದ್ಧಾಂತಗಳಿಗೆ, ವಚನ ಸಾಹಿತ್ಯಕ್ಕೆ ಗಂಟು ಬಿದ್ದು ಶತಾಯಗತಾಯ ಹಾಳುಗೆಡುವಬೇಕೆನ್ನುವ ನಿರ್ಧಾರ ಮಾಡಿದಂತಿದೆ.
ಚಂದ್ರಶೇಖರ ಎಚ್. ಎನ್: ಇವತ್ತು ಎಲ್ಲ ಬೇಡ ನನಗೆ ಸಾಕ್ಷಿ ಬೇಕು. ಇವತ್ತು ಹೋಗಿ, ಎಷ್ಟೋ ಸಾವಿರ ವರ್ಷಗಳದ್ದು, ಅಲ್ಲಿ ಜಾಫ್ನ ಹತ್ರ ಹೋದರೆ, ಜಾಫ್ನಾದಿಂದ ಸ್ವಲ್ಪ ಮುಂದಕ್ಕೆ ಹೋದ್ರೆ ಅಲ್ಲಿ ಕೀರುಮಲೈ ಅಂತ ಒಂದು ಜಾಗ ಇದೆ. ಅಲ್ಲಿ ರೇಣುಕರು ಇಲ್ಲಿಂದ ಹೋಗಿ ಹೇಳಿದಂತ ಜಾಗ ಇದೆ. ಇದನ್ನ ನಮಗೆ ಒಬ್ಬ ಪರಿಚಯದವರು ನಮ್ಮೊಬ್ಬರು ದೊಡ್ಡ ಋಷಿಗಳು ಇದ್ರು ಸಾಧಕರು ವೀರಯ್ಯ ಸ್ವಾಮಿ ಅಂತ ಹೇಳಿ ಸುಮಾರು ನೂರು ವರ್ಷ ಬದುಕಿದಂಥತವರು. ಸಾಧಕರು. ಅವರು ಶ್ರಾವಣ ಮಾಸದ ಅನುಷ್ಠಾನ ಮಾಡಬೇಕಾದ್ರೆ ಅವರಿಗೆ ರೇಣುಕರು ಕನಸಿನಲ್ಲಿ ಅವರ ಒಂದು ಧ್ಯಾನದಲ್ಲಿ ಬಂದು ಇಲ್ಲಿಂದ ಅಲ್ಲಿಗೆ ಕರ್ಕೊಂಡು ಹೋಗ್ತಾರೆ. ಕರ್ಕೊಂಡು ಹೋಗಿ ಆ ಜಾಗ ತೋರಿಸಿದ್ದಾರೆ. ಆ ಜಾಗ ಅವರೇ ಮೊದಲು ಪ್ರಕಟ ಮಾಡಿದ್ದು.
ಹೊಸ ದಿಗಂತ YouTube Channel ನ ಸಂದರ್ಶಕ: ಹೌದಾ, ಅಂದ್ರೆ ರೇಣುಕರು ಇಲ್ಲಿ ಅಂದ್ರೆ ಇಲ್ಲಿಂದ ಅಲ್ಲಿ ಜಾಫ್ನಾದಲ್ಲಿ ಇಳಿದಿರೋ ಜಾಗ ಫಸ್ಟ್ ಇವರೇ ತೋರಿಸಿದ್ರಾ.
ಚಂದ್ರಶೇಖರ ಎಚ್. ಎನ್: ಅಲ್ಲಿ ಹೋದರೆ ಅಲ್ಲಿ ಆಶ್ರಮ ಇದೆ ರೇಣುಕ ಆಶ್ರಮ ಅಂತಾನೇ ಅದರ ಹೆಸರು. ಸಾವಿರಾರು ವರ್ಷಗಳ ಮೇಲೆ ಅಲ್ಲಿ ತಮಿಳ ಬರುವಂತದ್ದು. ಅಲ್ಲೂ ಕೂಡ. ಅಲ್ಲ ಬಟ್ ಅವರಿಗೆ ಗೊತ್ತಿರಲಿಲ್ಲ. ಅಲ್ಲಿರೋ ಆಶ್ರಮದವರಿಗೆಲ್ಲ ಈ ತರ ಪ್ರಕಟ ಆಗಿದ್ದು ಅಂತ ಹೇಳಿ ಇತಿಹಾಸ. ಇತಿಹಾಸ ಎಲ್ಲ ಗೊತ್ತಿದೆ ಅಲ್ಲಿರುವವರಿಗೆ ಗೊತ್ತಿದೆ. ಅವರು ಇದ್ದಾರೆ ಅಂತ ಇವರಿಗೆ ಗೊತ್ತಿಲ್ಲ. ಇವರು ಇದ್ದಾರೆ ಅಂತ ಅವರಿಗೆ ಗೊತ್ತಿಲ್ಲ. ಇತಿಹಾಸ ಮಾತ್ರ ಇದೆ.
ಡಾ. ವಿಜಯಕುಮಾರ ಕಮ್ಮಾರ: ಕನಸಲ್ಲಿ ಬಂದು ರೇಣುಕರು ಕರಕೊಂಡು ಹೋಗೋದಂದರೆ ಏನೂ ತಮಾಷೆನಾ. ಮಾಯಾಬಝಾರ ಸಿನಿಮಾ ಕಥೆಯಿದು. ಮಾಯಾ ಆಗೋದು ಅಂತಾನೆ. ಪ್ರಕಟ ಆಗೋದು ಅಂತಾನೆ. ಕನಸ್ಸಿನಲ್ಲಿ ಬಂದು ಕರಕೊಂಡು ಹೋದರು ಅಂತಾನೆ. ಬಸವಾ ಬಸವಾ ನಾನು ವಿಜ್ಞಾನಿ ಅಂತಾನೆ. ಈಗ ಪೌರಾಣಿಕ ಕಥೆ ಹೇಳತಾನೆ. ಚಂದ್ರನ ಮೇಲೆ ಮಾನವ ಇಳಿದಂಥಾ ಕಾಲಘಟ್ಟದಲ್ಲಿ ಈ ಥರಹದ ಅಜ್ಞಾನತನದ ಕಥೆಗಳನ್ನು ನಂಬಬಹುದಾ. ಏನೋಪಾ ಜಗದ್ಗುರು ಪಂಚಾಚಾರ್ಯರೇ ನಂಬಬೇಕಷ್ಟೇ. ಯಾಕೆ ಸಂದರ್ಶಕ ಭಾರತದಲ್ಲಿ ಹಾಗೂ ಈತ ಲಂಡನ್ನಿನಲ್ಲೇ ಕುಳಿತು Quantum Gap ನಲ್ಲಿ ಅವತರಿಸಿ ಈ Video ಮಾಡಬಹುದಿತ್ತಲ್ಲವೇ. ಯಾಕ ಎದುರು ಬದುರು ಕುಳಿತು ಮಾತಾಡಬೇಕಿತ್ತು.
ಚಂದ್ರಶೇಖರ ಎಚ್. ಎನ್: ಮತ್ತೆ ಅಲ್ಲಿ ಇವರು ಹೋದಾಗ ಕರ್ಕೊಂಡು ಬರಲಿಕ್ಕೆ ಐದು ಜನ ಜಗಗಳ ಐದು ರೀತಿ ಧ್ವಜಗಳು ಹಿಡ್ಕೊಂಡು ಬರ್ತಾರೆ. ಆ ರೀತಿ ಒಂದು ಇತಿಹಾಸ ಇರುವಂತದ್ದು.
ಹೊಸ ದಿಗಂತ YouTube Channel ನ ಸಂದರ್ಶಕ: ಸೋ ಇದು Scientifically ಸಾಧ್ಯ ಇದೆ.
ಚಂದ್ರಶೇಖರ ಎಚ್. ಎನ್: ಅದೇ ರೇಣುಕರು. It is scientific proven fact. Teleportation is proven scientific proven fact at quantum level. ಅದು ಆಗ್ತಾ ಇರೋದು quantum level ಇದು. ಇದಕ್ಕೆ doubt ಇಲ್ಲ. Doubt create ಮಾಡ್ತಾ ಇದ್ದಾರೆ. But doubt ಇಲ್ಲ. ಬೇಡ ಅಷ್ಟು scientific ನಿಮಗೆ quantum ಅರ್ಥ ಆಗ್ಲಿಲ್ಲ ಅಂದ್ರೆ Proton, Neutron, Electron Level ಅಲ್ಲೇನೆ ಇದು ಸಾಧ್ಯತೆ. ಇದು ವೈಜ್ಞಾನಿಕವಾಗಿ ಸಾಧ್ಯತೆ ಇರುವಂತದ್ದು. ಹಂಗಾಗಿ ಇದು ಶಕ್ತಿಯ Level ಅಲ್ಲಿ ಪ್ರಕಟ ಆಗಿರೋದು. ಹುಟ್ಟಿರೋದಲ್ಲ. ಯಾರದೋ ಗರ್ಭದಿಂದ ಹುಟ್ಟಿರೋದಲ್ಲ. ಇದು ಶಕ್ತಿಯ Level ಅಲ್ಲಿ ಅವರು ಪ್ರಕಟ ಆಗಿದ್ದಾರೆ. ಸಂದರ್ಭ ಬಂದರೆ ಇವಾಗ ಇಲ್ಲ ಎಲ್ಲ ಪ್ರಕಟ ಆಗ ಆಗ್ತಾರೆ ಅಷ್ಟೇ ಅಷ್ಟೇ ಅದೇ ಸತ್ಯ. ನಮಸ್ಕಾರ.
ಡಾ. ವಿಜಯಕುಮಾರ ಕಮ್ಮಾರ: ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿದ್ದದ್ದು ರೇಣುಕಾಚಾರ್ಯರ ಉದ್ಭವ ಹೇಗೆ ವೈಜ್ಞನಿಕವಾಗಿ ವಿಶ್ಲೇಷಣೆ ಮಾಡತಾರೆ ಅನ್ನೋದು ಕುತೂಹಲವಿತ್ತು. ಆದರೆ ಇದು ಅದಲು ಬದಲು ಕಂಚೀ ಬದಲು ಎನ್ನುವ ಹುಡುಗಾಟದ ಹುಡುಗರ ತಮಾಷೆಯ ಆಟ ಎನ್ನುವುದನ್ನು Scientifically ವಿವರಿಸಿ ಹೇಳಿದ್ದೇನೆ. ವಿಜ್ಞಾನಕ್ಕೆ ಸವಾಲೊಡ್ಡುವ ಅನೇಕ Theory ಗಳನ್ನು ಕೇಳಿದ್ದೇವೆ. ಆದರೆ ಇಂಥ ಬುರುಡೆ ಅಂತೆ-ಕಂತೆಗಳ ಪುರಾಣಗಳು ಒಬ್ಬ AI Scientist ಎಂದು ಹೇಳಿಕೊಳ್ಳುವ ವಿಜ್ಞಾನಿ ಚಂದ್ರಶೇಖರನ ಪುರಾಣ ಪುಣ್ಯಕಥೆ ಅಷ್ಟೆ. ಇದನ್ನೇ ವಚನಕಾರರು ಹೇಳಿದ್ದಾರೆ ಎನ್ನುವುದು ಸುಳ್ಳು ಎನ್ನುವುದನ್ನೂ ಕೂಡ ವಿವರಿಸಿದ್ದೇನೆ. ರೇಣುಕರನ್ನು ಹೇಗಾದರೂ ಹುಟ್ಟಿಸಲಿ, ಹೇಗಾದರೂ Promote ಮಾಡಿಕೊಳ್ಳಲಿ. ಅದು ಅವರ ವೈಯಕ್ತಿಕ ಧಾರ್ಮಿಕ ವಿಷಯ. ನಮಗೇನೂ ಅಭ್ಯಂತರವಿಲ್ಲಾ. ಆದರೆ ದ್ವೈತ ಸಿದ್ಧಾಂತಕ್ಕೆ ಮಣೆ ಹಾಕಿರುವ ವೀರಶೈವರು ಅದ್ವೈತ ಪ್ರತಿಪಾದಕರಾದ ಬಸವಾದಿ ಶರಣರ ಜೊತೆಗೆ ಸಮೀಕರಿಸಬೇಡಿ ಎನ್ನುವುದನ್ನು ವಿನಂತಿಸಿಕೊಳ್ಳುತ್ತೇವೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಸಿದ್ಧಾಂತಗಳನ್ನು ಬಸವಾದಿ ಶರಣರ ಜೊತೆಗೆ ಹೋಲಿಸಬೇಡಿ ಅಂತಾ ಮತ್ತೊಮ್ಮೆ ಮಗದೊಮ್ಮೆ ವಿನಂತಿ.
ಉಳಿದದ್ದು ಎಲ್ಲಾ ವಿದ್ವಾಂಸರುಗಳ ಮತಿಗೆ ಬಿಟ್ಟಿದ್ದು.
ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
ತುಮಕೂರು – 572 104
ಮೋಬೈಲ್ ನಂ: 97413 57132.
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in




Total views : 62450
ಲಿಂಗದ ಜೊತೆ ರೇಣುಕರ ಕಂಡವರಾರು? ಅವರಿಗೆ ಅದು
ಲಿಂಗ ದ ಶಕ್ತಿ ಅಥವಾ ಅಂತಃಶಕ್ತಿ ಯ ರೂಪಕ .
ಕರದಿಷ್ಟಲಿಂಗದ ಕುರುಹು ಹಿಡಿದು ಕುರುಹುಗೆಡುವ ಕ್ಷಣದಲ್ಲಿ ಕಂತೆ ಕರಗಿ ಆತ್ಮ ಲಿಂಗ ಮತ್ತು ಭೈರವ ರೂಪ ಕಾಣಿಸಿಕೊಳ್ಳುವುದರ ಪ್ರತೀಕ.
ನೀವು ನಿಮ್ಮ ಅಂತಃಶಕ್ತಿಯನ್ನು ಪ್ರಕಟಗೊಳಿಸಿಕೊಂಡರೆ ನಿಮಗೂ ಅನುಭವಕ್ಕೆ ಬರುತ್ತದೆ. ಇಲ್ಲಾಂದ್ರೆ ಅದು ಕಲ್ಲು
ಮಣ್ಣು ಮಾನವ ದಾನವ ಅಂತ. ಚರ್ಚೆಗೆ ಗ್ರಾಸವಾಗುತ್ತದೆ.